ಫಿಟ್‌ ದೇಹಕ್ಕೆ ಏರಿಯಲ್‌ ಯೋಗ

Team Udayavani, Oct 1, 2019, 5:00 AM IST

ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿದಂತೆಲ್ಲಾ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಲಾಗುತ್ತಿದೆ. ಇತಂಹ ವಿಶಿಷ್ಟ ವ್ಯಾಯಾಮಗಳ ಪೈಕಿ ಏರಿಯಲ್‌ ಯೋಗವು ಒಂದು. ಪ್ರಸ್ತುತ ಏರಿಯಲ್‌ ಯೋಗ ಎಂಬ ವಿಶಿಷ್ಟ ಮತ್ತು ಉಪಯುಕ್ತ ವ್ಯಾಯಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಇನ್ಸಾಗ್ರಾಂನಲ್ಲಿ ಏರಿಯಲ್‌ ಯೋಗದ ಚಿತ್ರಗಳು ಹೆಚ್ಚು ಹರಿದಾಡುತ್ತಿವೆ. ದೇಶದ ಪ್ರಮುಖ ನಗರಗಳಲ್ಲಿ ಏರಿಯಲ್‌ ಯೋಗ ತರಬೇತಿ ಕೇಂದ್ರಗಳು ಕೂಡ ಆರಂಭವಾಗಿವೆ.

ಮಾಡುವುದು ಹೇಗೆ?
ಇತರ ಯೋಗಾಭ್ಯಾಸಗಳಿಗೆ ಹೋಲಿಸಿದರೆ ಏರಿಯಲ್‌ ಯೋಗ ಅಭ್ಯಾಸ ಮಾಡುವುದು ತ್ರಾಸದಾಯಕ, ವಿಚಿತ್ರ ಎನಿಸುತ್ತದೆ. ಇದನ್ನು ಆರಂಭಿಸುವ ಮುನ್ನ ಸೂಕ್ತ ತರಬೇತಿ ಪಡೆದು, ದೇಹವನ್ನು ಆ ವ್ಯಾಯಾಮ ಮಾಡುವುದಕ್ಕೆ ಅನುಕೂಲವಾಗುವಂತೆ ಬದಲಿಸಿಕೊಳ್ಳಬೇಕು. ಯೋಗಾಭ್ಯಾಸಕ್ಕೆ ದೃಢವಾದ ಬಟ್ಟೆ ಬೇಕಾಗುತ್ತದೆ. ಇದನ್ನು ವ್ಯಾಯಾಮ ಮಾಡುವುದಕ್ಕೆ ನೆರವಾಗುವಂತೆ ತಯಾರಿಸಲಾಗಿರುತ್ತದೆ. ಇದನ್ನು ಸ್ವಿಂಗ್‌ ಅಥವಾ ಹ್ಯಾಮಾಕ್‌ ಎನ್ನುತ್ತಾರೆ. ಇದರಲ್ಲಿ ಹಲವು ವಿಧಗಳಿದ್ದು, ವ್ಯಾಯಾಮಕ್ಕೆ ತಕ್ಕಂತೆ ವಿವಿಧ ವಿಧಗಳಲ್ಲಿ ದೊರೆಯುತ್ತದೆ.

ಇದನ್ನು ಮೇಲ್ಛಾವಣಿಗೆ ನೇತು ಹಾಕಿ ಅದರ ಸಹಾಯದಿಂದ ಯೋಗದ ವಿವಿಧ ಆಸನಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ದೇಹವನ್ನು ನೆಲಕ್ಕೆ ತಾಕಿಸದಂತೆ ಅಭ್ಯಾಸ ಮಾಡುವ ಆಸನಗಳೂ ಇದ್ದು, ಸ್ವಿಂಗ್‌ ಸಹಾಯದಿಂದ ಮಾಡಬೇಕಾಗುತ್ತದೆ. ಇದಕ್ಕೆ ನೆರವಾಗುವಂತೆ ತರಬೇತುದಾರರ ಸಲಹೆ ಪಡೆದು ಸೂಕ್ತ ಉಡುಗೆ ಧರಿಸುವುದು ಕೂಡ ಕಡ್ಡಾಯ.

ಯೋಗಕ್ಕೆ ಹೋಲಿಸಿದರೆ, ಏರಿಯಲ್‌ ಯೋಗ ಅಭ್ಯಾಸ ಮಾಡುವಾಗ ದೇಹ ಹೆಚ್ಚು ಒತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ಈ ಯೋಗಾಭ್ಯಾಸಕ್ಕೆ ನೆರವಾಗುವಂತೆ ಸೂಕ್ತ ಆಹಾರವನ್ನೂ ಸೇವಿಸಬೇಕು.ಆರಂಭದಲ್ಲಿ ಸುಲಭ ಆಸನಗಳನ್ನು ಅಭ್ಯಸಿಸಿ ಹಂತ ಹಂತವಾಗಿ ವಿವಿಧ ಆಸನಗಳನ್ನು ಅಭ್ಯಸಿಸುತ್ತಾ ಹೋದರೆ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬಹುದು.

ಈ ಯೋಗಾಭ್ಯಾಸದಿಂದ ದೇಹದ ಎಲ್ಲ ಅಂಗಾಂಗಗಳಿಗೆ ಕಸರತ್ತು ದೊರೆಯುತ್ತದೆ. ಎಲ್ಲ ಮಾಂಸಖಂಡಗಳು, ನರಗಳು ದೃಢವಾಗುತ್ತವೆ. ಮುಖ್ಯವಾಗಿ ಕೀಲುಗಳ ಸಮಸ್ಯೆಗೆ ಇದು ಹೆಚ್ಚು ಪರಿಣಾಮಕಾರಿ. ನಿತ್ಯ ಚಟುವಟಿಕೆ ಗಳಿಂದ ಮೂಳೆಗಳು ಮತ್ತು ಮಾಂಸಖಂಡಗಳ ಮೇಲೆ ಬೀಳುವ ಒತ್ತಡವನ್ನು ದೂರ ಮಾಡುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ