ಕಿತ್ತಳೆ ಹಣ್ಣಿನ ಸಿಪ್ಪೆಯ ಪ್ರಯೋಜನ

Team Udayavani, Dec 3, 2019, 4:04 AM IST

ಪ್ರತಿದಿನ ಕಿತ್ತಳೆ ಹಣ್ಣಿನ ಸಿಪ್ಪೆಯ ರಸವನ್ನು ಒಂದು ಚಮಚ ಸೇವಿಸುವುದರಿಂದ ವಿಟಮಿನ್‌ ಸಿ ಅಧಿಕವಾಗಿ ಲಭಿಸುತ್ತದೆ. ಕಿತ್ತಳೆ ಹಣ್ಣಿಗಿಂತಲೂ ಅಧಿಕ ವಿಟಮಿನ್‌ ಇದರಲ್ಲಿದೆ. ಇದರಲ್ಲಿ ವಿಟಮಿನ್‌ ಎ ಅಂಶಗಳು ಅಧಿಕವಾಗಿವೆ . ಇದರಲ್ಲಿ ರುವ ಫೈಬರ್‌ ಅಂಶಗಳು ಕ್ಯಾನ್ಸರ್‌ ರೋಗವನ್ನು ತಡೆಗಟ್ಟಲು ಸಹಕಾರಿ. ಡಯಾಬಿಟೀಸ್‌ ನಿಯಂತ್ರಣದಲ್ಲಿಡಲು ಕೂಡ ಇದು ಸಹಕಾರಿ.

ಕಿತ್ತಳೆ ಹಣ್ಣಿನಲ್ಲಿ ಅತಿ ಹೆಚ್ಚು ವಿಟಮಿನ್‌ಗಳು ಹಾಗೂ ಶರೀರಕ್ಕೆ ಬೇಕಾಗುವಂತಹ ಪ್ರೊಟೀನ್‌ ಅಂಶಗಳಿವೆ. ಹೆಚ್ಚಿನವರು ಕೇವಲ ಕಿತ್ತಳೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನವಿದೆ ಎಂದು ನಂಬಿಕೊಂಡಿದ್ದಾರೆ. ಆದರೆ ಕಿತ್ತಳೆ ಸಿಪ್ಪೆಯಿಂದಲೂ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಅದರಲ್ಲಿರುವ ಹುಳಿಯ ಅಂಶಗಳು ಶರೀರಕ್ಕೆ ಹೆಚ್ಚು ಅಗತ್ಯವಾಗಿ ಬೇಕಾಗುತ್ತವೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಅಧಿಕವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯಗಳೇ. ಆದರೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕೂಡ ವಿಟಮಿನ್‌ ಸಿ ಇದೆ. ಕೇವಲ ಈ ವಿಟಮಿನ್‌ ಮಾತ್ರವಲ್ಲದೆ ಪ್ರೋಟಿನ್‌ ಅಂಶಗಳೂ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿವೆ.

ಕಿತ್ತಳೆಹಣ್ಣಿನ ಸಿಪ್ಪೆಯ ರಸವನ್ನು ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಹಾಗೂ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿ.

ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಹಿಸ್ಟಮೈನ್‌ಗಳು ಇರುವುದರಿಂದ ಇವು ಅಲರ್ಜಿಯನ್ನು ನಿಯಂತ್ರಿಸಲು ಸಹಕಾರಿ. ಇವುಗಳನ್ನು ಚರ್ಮಕ್ಕೆ ಹಚ್ಚುವುದರಿಂದ ವೈರಸ್‌ಗಳು ನಾಶವಾಗುತ್ತವೆ. ತೂಕ ಇಳಿಕೆಗೂ ಕಿತ್ತಳೆ ಹಣ್ಣಿನ ಸಿಪ್ಪೆಗಳು ಸಹಕಾರಿ. ಪ್ರತಿನಿತ್ಯ ಇದರ ರಸವನ್ನು ಸೇವಿಸುವುದರಿಂದ ಅನಗತ್ಯ ಕೊಬ್ಬು ಕರಗಿ ತೂಕ ಇಳಿಕೆಯಾಗುತ್ತದೆ.

ಉಸಿರಿನ ದುರ್ವಾಸನೆ ಹೊಂದಿರುವವರು ಕಿತ್ತಳೆಹಣ್ಣಿನ ಸಿಪ್ಪೆಯನ್ನು ಜಗಿದು ಸೇವಿಸಬೇಕು. ಇದರಿಂದ ಉಸಿರಿನ ದುರ್ಗಂಧ ನಿವಾರಣೆಯಾಗುತ್ತದೆ. ಸೌಂದರ್ಯ ವರ್ಧನೆಯಲ್ಲೂ ಕಿತ್ತಳೆಹಣ್ಣಿನ ಸಿಪ್ಪೆ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ನಿರಂತರವಾಗಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು


ಈ ವಿಭಾಗದಿಂದ ಇನ್ನಷ್ಟು

  • ವ್ಯಾಯಾಮ ಮಾಡುವುದರಿಂದ ಬೊಜ್ಜು ಕರಗುತ್ತದೆ. ಆದರೆ ಸ್ಟ್ರೆಚ್‌ ಮಾರ್ಕ್‌ ಮೂಡುತ್ತದೆ ಎನ್ನುವುದು ಬಹುತೇಕ‌ರ ಅಳಲು. ಮಾತ್ರವಲ್ಲ ಪ್ರಸವದ ನಂತರ ಹೊಟ್ಟೆಯಲ್ಲಿ...

  • ವ್ಯಾಯಾಮಗಳಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತಾ ಇರುತ್ತಿವೆ. ಹಾಗೇ ಸೌಂದರ್ಯಪ್ರಿಯರು ಕೂಡ ದೇಹವನ್ನು ಕಟ್ಟುಮಸ್ತಾಗಿ ಇಡಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಲ್ಲೇ...

  • ಸೌಂದರ್ಯದ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ? ಹುಡುಗಿರೇ ಇರಲಿ, ಹುಡುಗರೇ ಇರಲಿ ಎಲ್ಲರಲ್ಲಿಯೂ ಸೌಂದರ್ಯ ಪ್ರಜ್ಞೆ ಇದ್ದೇ ಇರುತ್ತದೆ. ದಿನದಿಂದ ದಿನಕ್ಕೆ ಸೌಂದರ್ಯ...

  • ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಸ್ತ್ರೀ ಮತ್ತು ಪುರುಷರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಕೂದಲು ಉದುರಲು ಅನೇಕ ಕಾರಣಗಳಿವೆ....

  • ಇತರೆ ದಿನಗಳಿಗಿಂತ ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಹಿಳೆಯರು ವಿವಿಧ ಟಿಪ್ಸ್‌ ಬಳಸಿಕೊಂಡು ತಮ್ಮ ತ್ವಚೆಯನ್ನು...

ಹೊಸ ಸೇರ್ಪಡೆ