ಕಪ್ಪು ವರ್ತುಲ ನಿವಾರಿಸಿ ಸುಂದರ ತ್ವಚೆ ನಿಮ್ಮದಾಗಿಸಿ

Team Udayavani, Aug 6, 2019, 6:05 AM IST

ಮಹಿಳೆಯರಿಗೆ ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆಯೆಂದರೆ ಕಣ್ಣಿನ ಸುತ್ತ ಕಪ್ಪುಕಲೆ ಉಂಟಾಗುವುದು. ಇದಕ್ಕಾಗಿ ಹಲವು ರೀತಿಯ ಸುರಕ್ಷತೆ ಮಾಡಿಕೊಂಡರು ಡಾರ್ಕ್‌ ಸರ್ಕಲ್ಸ್‌ ಹೋಗಲಾಡಿಸುವುದು ಕಷ್ಟದ ಮಾತಾಗಿದೆ.

ಸಾಮಾನ್ಯವಾಗಿ ಕೆಲಸದ ಒತ್ತಡ, ಮಾನಸಿಕ ಒತ್ತಡ, ನಿದ್ದೆ ಸರಿಯಾಗಿ ಆಗದೇ ಇದ್ದಲ್ಲಿ ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಬೀಳುತ್ತವೆ ಎಂದು ಅಧ್ಯಯನಗಳ ಮೂಲಕ ಸಾಬೀತಾಗಿದೆ. ಆದ್ದರಿಂದ ಇವುಗಳನ್ನು ಹೋಗಲಾಡಿಸಲು ಕೆಲವು ಕ್ರಮ ಕೈಗೊಳ್ಳುವುದು ಆವಶ್ಯಕವಾಗಿರುತ್ತದೆ.

ಅಂಡರ್‌ ಐ ಕ್ರೀಮ್‌ ಬಳಸಿ
ನಿಮ್ಮ ಬಿಡುವಿನ ವೇಳೆಯಲ್ಲಿ ಅಂಡರ್‌ ಐ ಕ್ರೀಮ್‌ಗಳನ್ನು ಬಳಸಿ ನೋಡಿ. ಇದರಲ್ಲಿ ಹೆಚ್ಚು ಮಾಯಿಶ್ಚರೈಸರ್‌ ಇರುವುದರಿಂದ ಇದು ಕಣ್ಣಿನ ಆರೈಕೆ ಮಾಡುತ್ತದೆ. ಅದಲ್ಲದಿದ್ದರೆ ಅಮೈನೋ ಮತ್ತು ಮಿನರಲ್ಸ್‌ ಇರುವ ಕ್ರೀಮ್‌ಗಳನ್ನು ಬಳಸುವುದು ಉತ್ತಮ. ಇಲ್ಲವಾದಲ್ಲಿ ಅಂಡರ್‌ ಐ ಪ್ಯಾಚ್‌ಗಳನ್ನು ಬಳಸುವುದರಿಂದ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು. ಇದನ್ನು ಹಚ್ಚಿ 20 ಅಥವಾ 25 ನಿಮಿಷಗಳ ಅನಂತರ ಮುಖವನ್ನು ಉಗುರು ಬಿಸಿ ನೀರಿನಲ್ಲಿ ತೊಳೆಯುವುದರಿಂದ ಶೀಘ್ರದಲ್ಲೇ ಫ‌ಲಿತಾಂಶ ಕಂಡು ಬರುತ್ತದೆ.

ಮನೆ ಮದ್ದು ಉತ್ತಮ
ಮನೆಗಳಲ್ಲಿ ಸಿಗುವ ಲೋಳೆರಸ ಅಥವಾ ಅರಿಶಿನವನ್ನು ಬಳಸುವುದರಿಂದ ಕಪ್ಪುವರ್ತುಲಗಳನ್ನು ನಿವಾರಿಸಿ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಸೌತೆ ಕಾಯಿ ರಸ ಹಚ್ಚಿ
ಸೌತೆಕಾಯಿ ರಸವನ್ನು ಹಚ್ಚಿ 15 ರಿಂದ 20 ನಿಮಿಷಗಳ ಬಳಿಕ ತೊಳೆಯುವುದರಿಂದ ಪರಿಣಾಮಕಾರಿಯಾಗಿ ಕಂಡುಬರುತ್ತದೆ. ಸಾಧ್ಯವಾದಷ್ಟು ಇದನ್ನು ವಾರದಲ್ಲಿ ಮೂರು ಬಾರಿಯಾದರೂ ಹಚ್ಚುವುದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.

ಬಾದಾಮಿ ಎಣ್ಣೆ 
ರಾತ್ರಿ ಮಲಗುವ ಮೊದಲು ಸ್ವಲ್ಪ ಬಾದಾಮಿ ಎಣ್ಣೆಯಿಂದ ಮಸಾಜ್‌ ಮಾಡಿಕೊಂಡರೆ ಕಪ್ಪು ಕಲೆ ಮಾಯವಾಗುವುದಲ್ಲದೆ ಸುಂದರ ತ್ವಚೆ ನಿಮ್ಮದಾಗುತ್ತದೆ. ಇದನ್ನು ಆದಷ್ಟು ಮೃದುವಾಗಿ ಹಚ್ಚಿ ಅನಂತರ ನಿದ್ರೆ ಮಾಡಬೇಕು.

ಡಾರ್ಕ್‌ ಸರ್ಕಲ್ಸ್‌ ಹೋಗಲಾಡಿಸಲು ಕೆಲವು ರೀತಿಯ ಕ್ರೀಮ್‌ಗಳು ಲಭ್ಯವಿದ್ದು ಅವುಗಳನ್ನು ಬಳಸಬಹುದು. ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ