ನೀಳವಾದ ಕೇಶರಾಶಿಗೆ ತೆಂಗಿನಕಾಯಿ ಹಾಲು

Team Udayavani, Nov 12, 2019, 5:34 AM IST

ಪ್ರತಿಯೊಬ್ಬ ಹೆಣ್ಣಿನ ಸೌಂದರ್ಯ ಅಡಗಿರುವುದು ಆಕೆಯ ಕೂದಲಿನಲ್ಲಿ. ಆಗಾಗಿ ಮಹಿಳೆಯರು ತುಸು ಹೆಚ್ಚಾಗಿಯೇ ತಮ್ಮ ಕೇಶರಾಶಿಯ ಮೇಲೆ ಎಕ್ಸ್‌ಟ್ರಾ ಕೇರ್‌ ತೆಗೆದುಕೊಳ್ಳುತ್ತಾರೆ. ನೀಳವಾದ ಕೂದಲನ್ನು ಪಡೆಯಬೇಕೆಂಬ ಹಂಬಲದಿಂದ ಏನೆಲ್ಲ ಸಾಹಸ ಮಾಡುತ್ತಾರೆ. ವಿವಿಧ ನಮೂನೆಯ ಎಣ್ಣೆ -ಶ್ಯಾಂಪೂ ಎಲ್ಲ ಪ್ರಯೋಗ ಮಾಡಿ ನೋಡುತ್ತಾರೆ. ಆದರೆ ಈ ಎಲ್ಲ ದುಬಾರಿ ಸೌಂದರ್ಯ ವರ್ಧಕಗಳು ಪ್ರಯೋಜನಕ್ಕೆ ಬಾರದಿದ್ದಾಗ ಕೈ ಚೆಲ್ಲಿ ಕುರುತ್ತಾರೆ. ಆದರೆ ಹೆಂಗಳೆಯರ ಅಸಹಾಯಕತೆಗೆ ಒಂದು ಸರಳ ಉಪಾಯವಿದ್ದು, ನೈಸರ್ಗಿಕ ಕೂದಲ ಬೆಳವಣಿಗೆಗೆ ಉಪಯುಕ್ತವಾಗುವ ಮಾಹಿತಿ ಇಲ್ಲಿದೆ.

ನೀಳ ಕೇಶರಾಶಿಗೆ
ತೆಂಗಿನ ಹಾಲು
ನಿಮ್ಮ ಕೂದಲು ಒಣಗಿದಂತಾಗಿ ಉದುರುತ್ತಿದೆಯೇ ? ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸೌಂದರ್ಯ ವರ್ಧಕಗಳು ಉಪಯೋಗ ಆಗಲಿಲ್ಲವೇ. ಯೋಚಿಸಬೇಡಿ ಈ ನಿಮ್ಮ ಸಮಸ್ಯೆಗೆ ತೆಂಗಿನ ಕಾಯಿ ಹಾಲು ಪರಿಹಾರವಾಗಲಿದ್ದು, ನೈಸರ್ಗಿಕವಾದ ಕೂದಲನ್ನು ಪಡೆಯಲು ಸಹಾಯಮಾಡುತ್ತದೆ. ಇದರ ಹಾಲಿನಲ್ಲಿ ಪ್ರೊಟೀನ್‌ಮತ್ತು ಕೊಬ್ಬಿನಾಂಶವಿದ್ದು, ಕೂದಲಿನ ಬೆಳವಣಿಗೆಗೆ ಉಪಯುಕ್ತವಾಗಿದೆ. ಜತೆಗೆ ತೆಂಗಿನ ಕಾಯಿ ಹಾಲಿಗೆ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವ ಶಕ್ತಿ ಇದ್ದು, ತೆಂಗಿನ ಹಾಲನ್ನು ಉಪಯೋಗಿಸಿದ್ದರೆ ಸಮೃದ್ಧ ಹಾಗೂ ದಟ್ಟವಾದ ಕೂದಲನ್ನು ಪಡೆಯಬಹುದು.

ಪ್ರೊಟೀನ್‌ ಚಿಕಿತ್ಸೆ
· ತೆಂಗಿನಕಾಯಿ ಹಾಲು, ಮೊಟ್ಟೆ, ಎಕ್ಸ್‌ಟ್ರಾ ವರ್ಜಿನ್‌ ಆಲಿವ್‌ ತೈಲ, ಆರ್ಗನ್‌ ತೈಲ ತೆಂಗಿನ ಎಣ್ಣೆ ಈ ಎಲ್ಲ ಸಾಮಗ್ರಿಗಳ ಮಿಶ್ರಣವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕೂದಲಿಗೆ ಲೇಪನ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ.
· ಕೂದಲು ಸದೃಢವಾಗಿ ಬೆಳೆಯುವುದಕ್ಕೆ ಪ್ರೊಟೀನ್‌ಮಿಶ್ರಣ ಉಪಯುಕ್ತವಾಗಿದೆ.
· ತೆಂಗಿನಕಾಯಿ ಹಾಲಿನಲ್ಲಿರುವ ಕಬ್ಬಿಣ ಮತ್ತು ಮ್ಯಾಂಗನೀಸ್‌ ಅಂಶ ಕೂದಲಿನ ಪೋಷಣೆಗೆ ಸಹಾಯಕವಾಗುತ್ತದೆ.
· ಆರೋಗ್ಯಕರ ಕೂದಲು ಬೆಳೆವಣಿಗೆಗೆ ಈ ಪ್ರೊಟೀನ್‌ಮಿಶ್ರಣ ಕೂದಲಿಗೆ ಹೊಳಪು ನೀಡುತ್ತದೆ.


ಈ ವಿಭಾಗದಿಂದ ಇನ್ನಷ್ಟು

  • ಫಿಟ್ನೆಸ್‌ ವ್ಯಾಯಾಮದಲ್ಲಿ ಈಗ ಟ್ರೆಡ್ಮಿಲ್, ಸೈಕ್ಲಿಂಗ್‌, ವೇಟ್‌ ಲಿಫ್ಟಿಂಗ್‌ ಮಾತ್ರವಲ್ಲದೇ ಹೊಸ ಹೊಸ ವಿಧಗಳು ಸೇರ್ಪಡೆಗೊಳ್ಳುತ್ತಿವೆ. ಸೈನಿಕರು ಹಾಗೂ...

  • ಕೊಟ್ಟರೂ ಗಳಿಸಲಾಗದ, ತನ್ನಿಂದ ತಾನೆ ಒಲಿಯಬೇಕಾದ ನಿದ್ರೆ ಸುಲಭಕ್ಕೆ ಒಲಿಯಲಾರದು ಬಿಡಿ. ಹಾಗಾದರೆ ನಿದ್ರಾದೇವಿ ಒಲಿಯುವ ಮಾರ್ಗಗಳಿಲ್ಲವೆ? ಖಂಡಿತಾ ಇದೆ. ಅದಕ್ಕೇನು...

  • ವಾತಾವರಣದಲ್ಲಿ ಮಲಿನ ಗಾಳಿಯ ಪ್ರಮಾಣ ಹೆಚ್ಚುತ್ತಲೇ ಇದೆ. ಮನುಷ್ಯನ ಜೀವನಶೈಲಿಯೂ ಆಧುನಿಕತೆಗೆ ತೆರೆದುಕೊಂಡಂತೆ ಬದಲಾಗುತ್ತಿದೆ. ವಿಷಾನಿಲ ಉಸಿರಾಟ, ನಾಲಿಗೆಗೆ...

  • ಪ್ರತಿದಿನ ಕಿತ್ತಳೆ ಹಣ್ಣಿನ ಸಿಪ್ಪೆಯ ರಸವನ್ನು ಒಂದು ಚಮಚ ಸೇವಿಸುವುದರಿಂದ ವಿಟಮಿನ್‌ ಸಿ ಅಧಿಕವಾಗಿ ಲಭಿಸುತ್ತದೆ. ಕಿತ್ತಳೆ ಹಣ್ಣಿಗಿಂತಲೂ ಅಧಿಕ ವಿಟಮಿನ್‌...

  • ನಾವು ಸೇವಿಸುವ ಆಹಾರ ವಿಧಾನ, ರೀತಿ, ಸಮಯ, ಸೇವಿಸುವಾಗಿನ ಸ್ಥಿತಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಕ್ರಮಬದ್ಧತೆಯಿಲ್ಲದ ಆಹಾರ ಪದ್ಧತಿ ಹಲವು ರೋಗಗಳಿಗೆ ಕಾರಣವಾಗಬಹುದು....

ಹೊಸ ಸೇರ್ಪಡೆ