ಉಗುರಿನ ಆರೋಗ್ಯಕ್ಕೆ ತೆಂಗಿನೆಣ್ಣೆ

Team Udayavani, Aug 20, 2019, 5:00 AM IST

ವಿಷಯಗಳಿಗೆ ತೆಂಗಿನ ಎಣ್ಣೆ ನಮಗೆ ಅತೀ ಮುಖ್ಯ. ಆಹಾರ ಮತ್ತು ಆರೋಗ್ಯದ ವಿಷಯದಲ್ಲಿ ನಮ್ಮ ದೇಹಕ್ಕೆ ಹೆಚ್ಚು ಸಹಾಯ ಮಾಡಬಲ್ಲ ಗುಣವನ್ನು ಹೊಂದಿದೆ. ಬಹುಪಯೋಗಿ ತೆಂಗಿನೆಣ್ಣೆಯನ್ನು ಬಳಕೆ ಮಾಡುವುದರಿಂದ ನಮ್ಮ ಉಗುರುಗಳ ಸಂರಕ್ಷಣೆ ಹೇಗೆ ಸಾಧ್ಯ ಎಂಬುದಕ್ಕೆ ಇಲ್ಲಿದೆ ಕೆಲವು ಮಾಹಿತಿ.

ಕಾಲು, ಕೈಗಳ ಸೌಂದರ್ಯ ವನ್ನು ಹೆಚ್ಚಿಸುವಲ್ಲಿ ಉಗುರುಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾಲು ಮತ್ತು ಕೈ ಬೆರಳುಗಳು ಮತ್ತು ಉಗುರುಗಳನ್ನು ನಾವು ಎಷ್ಟು ಸ್ವತ್ಛವಾಗಿ ಕಾಪಾಡಿಕೊಳ್ಳುತ್ತೇವೆಯೋ ನಮ್ಮ ಆರೋಗ್ಯ ಅಷ್ಟು ಸ್ವಸ್ಥವಾಗಿದೆ ಎಂದು ಹೇಳಬಹುದು. ಹೀಗಿರುವ ಉಗುರುಗಳನ್ನು ಸ್ವತ್ಛವಾಗಿಟ್ಟುಕೊಳ್ಳುವಲ್ಲಿ ತೆಂಗಿನೆಣ್ಣೆ ಹೇಗೆಲ್ಲಾ ಉಪಯೋಗವಾಗುತ್ತದೆ ಎಂದು ತಿಳಿದುಕೊಳ್ಳೋಣ.

ಬಲವರ್ಧನೆ
ನಮ್ಮ ಉಗುರುಗಳಿಗೆ ದಿನನಿತ್ಯ ತೆಂಗಿನೆಣ್ಣೆಯನ್ನು ಹಚ್ಚುತ್ತಿದ್ದರೆ ಉಗುರುಗಳ ಬಲವೃದ್ಧಿಗೆ ಸಹಾಯವಾಗುವುದರ ಜತೆಗೆ, ಕಾಂತಿ ಯುತವಾಗಿ ಕಂಗೊಳಿಸುತ್ತದೆ. ಅದರೊಂದಿಗೆ ಉಗುರುಗಳು ತೇವಾಂಶ ಕಾಪಾಡಿಕೊಳ್ಳುವ ದೃಷ್ಟಿಯಿಂದಲೂ ಕೊಬ್ಬರಿ ಎಣ್ಣೆ ಬಳಕೆ ತೀರಾ ಉಪಯುಕ್ತವೇ ಸರಿ. ಜತೆಗೆ ಉಗುರಿನ ಸುತ್ತಲೂ ಬೆಸೆದುಕೊಂಡಿರುವ ಚರ್ಮದ ಆರೋಗ್ಯ ಹೆಚ್ಚಿಸುವಲ್ಲಿಯೂ ಇದು ಸಹಕಾರಿ.

ಥೆರಪಿಯಲ್ಲಿ ಬಳಕೆ
ಪರಿಶುದ್ಧವಾದ ನೈಸರ್ಗಿಕ ತೆಂಗಿನೆಣ್ಣೆಯನ್ನು ನೈಲ್‌ ಥೆೆರಪಿಗಳಲ್ಲಿಯೂ ಬಳಕೆ ಮಾಡಲಾಗುತ್ತದೆ. ಏಕೆಂದರೆ ತೆಂಗಿನೆಣ್ಣೆ ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ಪೂರೈಕೆ ಮಾಡುವಲ್ಲಿಯೂ ಪೂರಕ. ನಮ್ಮ ಕೈ ಬೆರಳುಗಳ ಮೂಲಕವೇ ಆಹಾರ ವಸ್ತುಗಳು ಹೊಟ್ಟೆ ಸೇರುವುದರಿಂದ ಕೈಗಳಲ್ಲಿನ ರೋಗಾಣುಗಳು ದೇಹದೊಳಕ್ಕೆ ಪ್ರವೆಶಿಸದಂತೆ ರಕ್ಷಕವಾಗಿ ಕಾಯ ನಿರ್ವಹಿಸುತ್ತದೆ. ಇದರಿಂದಾಗಿ ಕೀಟಾಣುಗಳಿಂದ ಉಂಟಾಗುವ ಅನಾರೋಗ್ಯವನ್ನು ಕೊಂಚ ಮಟ್ಟಿಗೆ ತಡೆಗಟ್ಟುವುದೂ ಸಾಧ್ಯವಾಗುತ್ತದೆ.

ಶಿಲೀಂಧ್ರ ಸೋಂಕು ದೂರ
ಇನ್ನು ರಾತ್ರಿ ಮಲಗುವುದಕ್ಕೆ ಮುನ್ನ ತೆಂಗಿನ ಎಣ್ಣೆಯನ್ನು ಉಗುರಿಗೆ ಹಚ್ಚಿ ಕೊಂಚ ಸಮಯ ಮಸಾಜ್‌ ಮಾಡಿಕೊಳ್ಳುವುದರಿಂದ ಫ‌ಂಗಲ್‌ ಇನೆ#ಕ್ಷನ್‌ ಅನ್ನು ತಡೆಯುವುದೂ ಸಾಧ್ಯ. ಜತೆಗೆ ಕೈಯಲ್ಲಿರುವ ವೈರಸ್‌ಗಳ ಮೇಲೆಯೂ ಪರಿಣಾಮ ಬೀರುವ ಮೂಲಕ ದೇಹಕ್ಕೆ ರೋಗ ಬಾಧೆಯನ್ನು ಗಣನೀಯ ಮಟ್ಟದಲ್ಲಿ ಕಡಿಮೆ ಮಾಡುವು ದಕ್ಕೂ ಇದು ಸಹಾಯ ಮಾಡುತ್ತದೆ.

   ಭುವನ ಬಾಬು, ಪುತ್ತೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಂಡಿರುವ ಅಶ್ವಗಂಧ ಮನೆ ಮುಂದೆ, ಹಿತ್ತಲಲ್ಲಿ ಬೆಳೆಯಬಹುದಾದ ಮನೆಮದ್ದು. ಇದು ಕುದುರೆಯ ಮೂತ್ರದ ವಾಸನೆ ಹೊಂದಿರುವ ಕಾರಣ...

  • ಅರಿಶಿನವು ಹಲವು ಕಾಯಿಲೆಗಳಿಗೆ ಮದ್ದು. ಹೀಗಾಗಿ ಆಯುರ್ವೇದದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ನಾವು ಸಾಮಾನ್ಯವಾಗಿ ಲೆಮನ್‌ ಟೀ, ಪುದೀನಾ ಟೀ ಸಹಿತ ಇನ್ನಿತರ ಮಾದರಿಯ...

  • ಕಂಪ್ಯೂಟರ್‌ನಲ್ಲಿ ಗ್ರಾಫಿಕ್ಸ್‌ ವಿನ್ಯಾಸ ಮಾಡುವವರು ಕಂಪ್ಯೂಟರ್‌ ಮೌಸ್‌ ಹಿಡಿಯುವ ಕೈಯತ್ತ ತಮ್ಮ ದೇಹವನ್ನು ಕೂಡ ಸ್ವಲ್ಪ ವಾಲಿಸುತ್ತಾ ಇರುತ್ತಾರೆ. ಈ ರೀತಿ...

  • ಒತ್ತಡದ ಬದುಕಿನ ಶೈಲಿಯಿಂದ ಕೆಲವು ನೋವುಗಳು ಮಹಿಳೆಯರನ್ನೇ ಹೆಚ್ಚಾಗಿ ಕಾಡುವುದಿದೆ. ಅದೂ ವಯಸ್ಸು 28 ದಾಟಿದರೆ ಸಾಕು, ಒಂದಲ್ಲ ಒಂದು ರೀತಿಯ ನೋವು.ನೋವು ನಿವಾರಕ...

  • ಆರೋಗ್ಯಕರವಾಗಿದ್ದ ದೇಹವಿದ್ದರೆ ಮಾತ್ರ ಏನೇ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಇಂದು ಜಿಮ್‌ ಮೊದಲಾದ ಫಿಟ್ನೆಸ್‌ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದೆ. ಫಿಟ್ನೆಸ್‌...

ಹೊಸ ಸೇರ್ಪಡೆ