ಲಿಪ್‌ಸ್ಟಿಕ್‌ ಆಯ್ಕೆಯಲ್ಲಿರಲಿ ಸಾಮಾನ್ಯ ಜ್ಞಾನ

Team Udayavani, Jan 14, 2020, 4:24 AM IST

ಸಾಮಾನ್ಯವಾಗಿ ಹುಡುಗಿಯರು ಸೌಂದರ್ಯಪ್ರಿಯರೇ. ಯಾವಾಗಲೂ ತಾವು ಬ್ಯೂಟಿಯಾಗಿ ಕಾಣಬೇಕು ಎಂದು ಬಯಸುವುದು ಸಹಜ. ಬಟ್ಟೆಗೆ ತಕ್ಕಂತೆ ಸ್ಯಾಂಡಲ್ಸ್‌ಗಳು, ಹೇರ್‌ಸ್ಟೈಲ್‌ ಎಲ್ಲ ಪಫೆìಕ್ಟ್ ಆಗಿರಬೇಕು. ಆದರೆ ಕೆಲವೊಮ್ಮೆ ಕೆಲವೊಂದು ವಿಷಯದಲ್ಲಿ ನಮ್ಮ ಆಯ್ಕೆ ತಪ್ಪಾಗುವ ಸಾಧ್ಯತೆಗಳಿರುತ್ತದೆ. ಅದರಲ್ಲಿ ಲಿಪ್‌ಸ್ಟಿಕ್‌. ನಾವು ನಮ್ಮ ತುಟಿಗಳಿಗೆ, ಧರಿಸುವ ಬಟ್ಟೆಗಳಿಗೆ ಸರಿಯಾದ ಬಣ್ಣದ ಲಿಪ್‌ಸ್ಟಿಕ್‌ ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವುತ್ತೇವೆ. ನಾವು ಯಾವ ಬಟ್ಟೆಯನ್ನು ಧರಿಸುತ್ತೇವೆಯೋ ಆ ಬಣ್ಣಕ್ಕೆ ಯಾವ ತರದ ಲಿಪ್‌ಸ್ಟಿಕ್‌ ಹಾಕಿಕೊಳ್ಳಬೇಕು ಎಂಬುವುದರ ಕುರಿತು ಸ್ವಲ್ಪವಾದರೂ ಜ್ಞಾನ ಇರುವುದು ಉತ್ತಮ.

ಕೆಂಪು ಲಿಪ್‌ಸ್ಟಿಕ್‌
ಸಾಮಾನ್ಯವಾಗಿ ಕೆಂಪು ಬಣ್ಣವು ನಮ್ಮ ಭಾರತೀಯ ಸ್ಕಿನ್‌ ಟೋನ್‌ನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದು ನಮ್ಮ ನೈಸರ್ಗಿಕ ತುಟಿ ಬಣ್ಣಕ್ಕಿಂತ ಸ್ವಲ್ಪ ಹೆಚ್ಚಿನ ಲುಕ್‌ ನೀಡುತ್ತದೆ. ನೀವು ಸೀರೆ ಅಥವಾ ಲೆಹೆಂಗಾದಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದಾಗ ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಧರಿಸಲು ಸೂಕ್ತವಾದ ಬಣ್ಣವಾಗಿದೆ. ಕೆಂಪು ಲಿಪ್‌ಸ್ಟಿಕ್‌ ಸೌಂದರ್ಯವೆಂದರೆ ಅದು ಯಾವುದೇ ಬಣ್ಣದ ಉಡುಪಿನೊಂದಿಗೆ ಚೆನ್ನಾಗಿ ಕಾಣುತ್ತದೆ. ಕೆಂಪು ಲಿಪ್‌ಸ್ಟಿಕ್‌ ಯಾವುದೇ ಸಮಯದಲ್ಲಿ ಯಾವುದೇ ಉಡುಪಿನೊಂದಿಗೆ ಕೂಡ ಹಚ್ಚಿಕೊಳ್ಳಬಹುದು.

ಡಾರ್ಕ್‌ ಲಿಪ್‌ಸ್ಟಿಕ್‌
ಮರೂನ್‌, ಕೆಂಪು, ನೇರಳೆ, ಚಾಕೊಲೇಟ್‌ ಮತ್ತು ನೇರಳೆ ಬಣ್ಣಗಳಂತಹ ಗಾಢ ಬಣ್ಣದ ಲಿಪ್‌ಸ್ಟಿಕ್‌ಗಳನ್ನು ಕೆಲವೊಂದು ಹೊಂದಾಣಿಕೆಯಾಗುವ ಬಟ್ಟೆಗಳೊಂದಿಗೆ ಮಾತ್ರ ಧರಿಸಬೇಕು. ಆದರೆ ಕೆಂಪು ಬಣ½ದ ಲಿಪ್‌ಸ್ಟಿಕ್‌ ಯಾವುದೇ ಬಣ್ಣದೊಂದಿಗೆ ಚೆನ್ನಾಗಿ ಹೊಂದುತ್ತದೆ. ಕಣ್ಣಿನ ಮೇಕಪ್‌ ಕಡಿಮೆ ಇರುವಾಗ ತುಟಿಗಳಿಗೆ ಸುಂದರವಾಗಿ ಕಾಣುವಂತೆ ಈ ಬಣ್ಣಗಳನ್ನು ಬಳಸಲಾಗುತ್ತದೆ. ಈ ಗಾಢ ಬಣ್ಣದ ಲಿಪ್‌ಸ್ಟಿಕ್‌ ಹಾಕಿದರೆ ನಿಮಗೆ ಉತ್ತಮ ಲುಕ್‌ ನೀಡುವುದರಲ್ಲಿ ಸಂಶಯವಿಲ್ಲ.

ಬ್ರೌನ್‌ ಲಿಪ್‌ಸ್ಟಿಕ್‌
ಪ್ರತಿದಿನ ಮೇಕಪ್‌ ಮಾಡುವವರಿಗೆ ಕಂದು ಬಣ್ಣದ ಲಿಪ್‌ಸ್ಟಿಕ್‌ ಸೂಟ್‌ ಆಗುವುದಿಲ್ಲ. ನಮ್ಮ ಸ್ಕಿನ್‌ಟೋನ್‌ಗಳಿಗೆ ಈ ಬಣ್ಣ ಹೊಂದಿಕೆಯಾಗದಿದ್ದರೂ, ಜೀನ್ಸ್‌, ಕುರ್ತಿಸ್‌, ಟ್ಯೂನಿಕ್ಸ್‌, ಟಾಪ್ಸ್‌ ಮತ್ತು ನಿಲುವಂಗಿಗಳಂತಹ ಕ್ಯಾಶುವಲ್‌ ಬಟ್ಟೆಗಳನ್ನು ಧರಿಸಿದಾಗ ಚಾಕೊಲೇಟ್‌ ಬಣ್ಣದ ಲಿಪ್‌ ಶೇಡ್‌  ಒಳ್ಳೆಯದು. ನಿಮ್ಮ ತುಟಿಗಳನ್ನು ಹೈಲೈಟ್‌ ಮಾಡಲು ನೀವು ಬಯಸಿದಾಗ, ನೀವು ಗ್ಲೋಸ್‌ ಲಿಪ್‌ಸ್ಟಿಕ್‌ ಅನ್ವಯಿಸಬಹುದು. ಇದು ನಿಮ್ಮ ತುಟಿಗಳನ್ನು ಹೊಳೆಯುವಂತೆ ಮಾಡುತ್ತದೆ.

ಮ್ಯಾಟ್‌ ಲಿಪ್‌ಸ್ಟಿಕ್‌
ಲಿಪ್‌ಸ್ಟಿಕ್‌ ಫ್ಯಾಷನ್‌ ಜಗತ್ತಿನಲ್ಲಿ ಹೊಸ ಪ್ರವೃತ್ತಿ ಮ್ಯಾಟ್‌ ತುಟಿ ಗಳು. ಇದು ಕಳೆದ ಕೆಲವು ವರ್ಷ ಗಳಿಂದ ಪ್ರವೃತ್ತಿಯಾಗಿದೆ. ಇಂದಿನ ಯುವತಿಯರು ಮ್ಯಾಟ್‌ ತುಟಿಯನ್ನು ಪ್ರೀತಿಸು ತ್ತಾರೆ. ಮ್ಯಾಟ್‌ ತುಟಿಗಳು ಸರಳವಾಗಿ, ಹೊಳಪು ಅಥವಾ ಆಡಂಬರ ವಿಲ್ಲದೆ ಕಾಣುತ್ತದೆ. ಮ್ಯಾಟ್‌ ತುಟಿ ಗಳು ಆಕರ್ಷಕವಾಗಿ ಕಾಣುತ್ತದೆ. ಹಾಗಾಗಿ ಕನಿಷ್ಠ ಮೇಕಪ್‌ನೊಂದಿಗೆ ಮ್ಯಾಟ್‌ ಲಿಪ್‌ಸ್ಟಿಕ್‌ಗೆ ಆದ್ಯತೆ ಕೊಡುವುದು ಉತ್ತಮ.

-ಪೂರ್ಣಿಮಾ ಪೆರ್ಣಂಕಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ

  • ಕೊರೊನಾ ವೈರಸ್‌ ಭಯಕ್ಕೆ ಇಡೀ ಜಗತ್ತು ತತ್ತರಿಸಿದೆ. ಕೆಮ್ಮು/ ಸೀನಿನಿಂದ ಈ ವೈರಸ್‌ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ ಎಂಬುದು ಈ ಆತಂಕಕ್ಕೆ ಕಾರಣ. ಜನರ...

  • ವಿಜ್ಞಾನಿಗಳು, ವಿಜ್ಞಾನದ ವಿದ್ಯಾರ್ಥಿಗಳು ಎಂದಾಗ ಲ್ಯಾಬ್‌ ಕೋಟ್‌, ದಪ್ಪ ಪ್ರೇಮ್‌ನ ಕನ್ನಡಕ, ಏಪ್ರನ್‌, ಕೈಗೆ ಗ್ಲೌಸ್‌ ನೆನಪಿಗೆ ಬರುತ್ತದೆ. ಸಿನಿಮಾಗಳಲ್ಲಿ,...

  • ನೂರು ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ಅಥವಾ ಶಿಲ್ಪದ ಮೂಲಕ ಹೇಳಿ ಬಿಡಬಹುದು. ಅದು ಕಲೆಗೆ ಇರುವ ತಾಕತ್ತು. ಕಲಾವಿದನಿಗೆ ಇರುವ ಜವಾಬ್ದಾರಿ ಕೂಡಾ ಹೌದು. ಆ ಬಗೆಯ...

  • ವಿದೇಶದಲ್ಲಿ ಕಲಿಯುವ ಆಲೋಚನೆ ನಿಮ್ಮದೇ? ಹಾಗಿದ್ದರೆ ನೀವು ಟೋಫೆಲ್‌ (Test of English as a Foreign Language or TOEFL) ತೇರ್ಗಡೆಯಾಗಬೇಕು. ಇದು ಇಂಗ್ಲಿಷ್‌ ಭಾಷೆಯಲ್ಲಿ ನಿಮಗಿರುವ ಜ್ಞಾನವನ್ನು...

  • ಸೀರೆ ಸಿಂಪಲ್‌ ಆಗಿದ್ದರೂ, ಬ್ಲೌಸ್‌ ಗ್ರ್ಯಾಂಡ್‌ ಆಗಿ ಹೊಲಿಸಬೇಕು- ಇದು ಈಗಿನವರು ಹೇಳುವ ಮಾತು. ಅದಕ್ಕಾಗಿಯೇ ಇರಬೇಕು, ಬ್ಲೌಸ್‌ನ ಹೊಲಿಗೆಯಲ್ಲಿ ಥರಹೇವಾರಿ ಡಿಸೈನ್‌ಗಳು...