ಶಕ್ತಿವರ್ಧಕ ಅಶ್ವಗಂಧ

Team Udayavani, Jan 21, 2020, 5:57 AM IST

ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಂಡಿರುವ ಅಶ್ವಗಂಧ ಮನೆ ಮುಂದೆ, ಹಿತ್ತಲಲ್ಲಿ ಬೆಳೆಯಬಹುದಾದ ಮನೆಮದ್ದು. ಇದು ಕುದುರೆಯ ಮೂತ್ರದ ವಾಸನೆ ಹೊಂದಿರುವ ಕಾರಣ ಇದನ್ನು ಅಶ್ವಗಂಧ ಎಂದು ಕರೆಯಲಾಗಿದೆ. ಅಲ್ಲದೆ ಇದನ್ನು ವಾಜೀಗಂಧಾ, ಹಯಗಂಧಾ ಎಂದೂ ಕರೆಯಲಾಗುತ್ತದೆ. ಅಶ್ವಗಂಧದ ಎಲೆಗಳು ಹಂದಿಯ ಕಿವಿಯ ರೀತಿ ಇರುವುದರಿಂದ ವರಾಹಕರ್ಣಿ ಎಂದೂ ಹೆಸರಿದೆ. ಕಣ್ಮರೆಯಾ ಗುತ್ತಿರುವ ಗಿಡಮೂಲಿಕೆಯಲ್ಲಿ ಒಂದಾಗಿರುವ ಅಶ್ವಗಂಧದ ಔಷಧೀಯ ಸಣ್ತೀ ಹಿರಿದಾದದ್ದು.

ಗುಜರಾತ್‌, ಕರ್ನಾಟಕ, ಹಿಮಾಚಲ, ಮಧ್ಯಪ್ರದೇಶ, ಪಂಜಾಬ್‌ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುವ ಅಶ್ವಗಂಧದ ವೈಜ್ಞಾ ನಿಕ ಹೆಸರು ಮಿತಾನಿಯ ಸಾಮ್ನಿಫೆರಾ. ಇದರಲ್ಲಿ ಅಲ್ಕಾಲಾಯಿಡ್‌ ಮಿಥಾನಿನ್‌ ಮತ್ತು ಸಾಮ್ನಿಫೆರಿರಾ ಔಷಧೀಯ ಅಂಶಗಳಿ ರುವುದರಿಂದ ಇದು ಸರ್ವರೋಗಕ್ಕೆ ಮನೆ ಮದ್ದು. ಇದರ ಬೇರು, ತೊಗಟೆ, ಬೀಜ ಹಾಗೂ ಹಣ್ಣುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಫ‌, ಕೆಮ್ಮು, ನಿತ್ರಾಣ ಹಾಗೂ ಸ್ತ್ರೀಯರ ದೈಹಿಕ ಸಮಸ್ಯೆಗಳಿಗೆ ಅಶ್ವಗಂಧ ತತ್‌ಕ್ಷಣಕ್ಕೆ ಸಿಗುವ ಮನೆಮದ್ದು. ಇದರ ಎಲೆಗಳಲ್ಲಿ ಖನಿಜಾಂಶ ಹಾಗೂ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳಲ್ಲಿ ಟೂಳ್ಳು ಉಂಟಾಗದಂತೆ ತಡೆಯುತ್ತದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿಯಾಗಿರುವ ಅಶ್ವಗಂಧ,
ಉರಿಯೂತ ನಿವಾರಕ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ನಿದ್ರಾ ಹೀನತೆ, ಕ್ಯಾನ್ಸರ್‌, ಸಂಧಿವಾತ, ಮಧುಮೇಹ ವನ್ನು ಹತೋಟಿಗೆ ತರಲು ಅಶ್ವಗಂಧದ ಬೇರಿನಿಂದ ತಯಾರಿಸಿದ ಚೂರ್ಣವನ್ನು ನಿರಂತರವಾಗಿ ಸೇವಿಸುವುದು ಒಳಿತು. ಇದು ಮಾನಸಿಕ ಖನ್ನತೆಯನ್ನು ದೂರ ಮಾಡಿ ನಮ್ಮ ನರಮಂಡಲವನ್ನು ಸದೃಢವಾಗಿರುವಂತೆ ಮಾಡುತ್ತದೆ.

ದೃಷ್ಟಿದೋಷ ನಿವಾರಣೆ
ಅಶ್ವಗಂಧದ ಬೇರನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ದೃಷ್ಟಿ ದೋಷವನ್ನು ನಿವಾರಣೆ ಮಾಡಬಹುದು ಎನ್ನುತ್ತಾರೆ ಆಯುರ್ವೇದ ಪಂಡಿತರು. ಅಶ್ವಗಂಧದ ಚೂರ್ಣ, ಲೋದ್ರದ ಚಕ್ಕೆ ಮತ್ತು ನೆಲಗುಂಬಳದ ಗಡ್ಡೆಯನ್ನು ಸಮಭಾಗದಲ್ಲಿ ಸೇರಿಸಿ, ದಿನಕ್ಕೆ 2.50 ಗ್ರಾಂ ಅನ್ನು ಪ್ರತಿ ನಿತ್ಯ ಒಂದು ಲೋಟ ಹಾಲಿನೊಂದಿಗೆ ಸ್ತ್ರೀಯರು ಸೇವಿಸಿದರೆ ಅವರಿಗೆ ಕಾಡುವ ಮಾನಸಿಕ ವೈಕಲ್ಯ ಮತ್ತು ಖನ್ನತೆಯನ್ನು ದೂರ ಮಾಡಬಹುದು. ಪುರುಷರಲ್ಲಿ ಕಾಡುವ ಲೈಂಗಿಕ ಸಮಸ್ಯೆಗಳಿಗೆ ಅಶ್ವಗಂಧವು ರಾಮಬಾಣವಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ಅನೇಕ ಸಮಸ್ಯೆಗಳಿಗೆ ನೈಸರ್ಗಿಕವಾದ ಪರಿಹಾರವನ್ನು ನೀಡುತ್ತವೆ.

ಮಕ್ಕಳ ನಿಶ್ಶಕ್ತಿ ತಡೆ
ಅಶ್ವಗಂಧ ಉಷ್ಣಕಾರಕ
ಶಕ್ತಿಯನ್ನು ಹೊಂದಿರುವುದರಿಂದ ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ಸೇವಿಸುತ್ತಾರೆ. ಇದು ಶರೀರಕ್ಕೆ ಬಲ ನೀಡುತ್ತದೆ. ಮಕ್ಕಳು ಮತ್ತು ಯುವಕರಿಗೆ ಹೆಚ್ಚು ಅಶ್ವಗಂಧವನ್ನು ನೀಡಲಾಗುತ್ತದೆ. 100 ಗ್ರಾಂ ಅಶ್ವಗಂಧ ಬೇರನ್ನು ಶುದ್ಧ ಮಾಡಿ ಹಾಲಿನಲ್ಲಿ ಬೇಯಿಸಿ, ಒಣಗಿಸಿ, ಚೂರ್ಣವನ್ನು ಮಾಡಿ ಗಾಜಿನ ಭರಣಿಯಲ್ಲಿಡಬೇಕು. ಅನಂತರ ದಿನದಲ್ಲಿ ಮೂರು ಬಾರಿ ಐದು ಗ್ರಾಂ ನಷ್ಟು ಸೇವಿಸಿದರೆ ನಿಶ್ಶಕ್ತಿ ನಿವಾರಣೆಯಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆಧುನಿಕ ಜೀವನಶೈಲಿ ಕೆಲಸಗಳನ್ನು ಕಡಿಮೆ ಮಾಡಿದೆ. ಆದರೆ, ರೋಗಗಳನ್ನು ಜಾಸ್ತಿ ಮಾಡಿದೆ. ಹೌದು. ಕಂಪ್ಯೂಟರ್‌ ಯುಗಾರಂಭವಾದ ಮೇಲೆ ಮನುಷ್ಯನ ಕೆಲಸಗಳು ಶೇ. 50ರಷ್ಟು...

  • ಇತರರ ಮುಂದೆ ಸುಂದರವಾಗಿ ಕಾಣಬೇಕೆನ್ನುವುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಹೀಗಿದ್ದಾಗಲೇ ಸಹಜ ಅಂದಕ್ಕಿಂತ ಮಾರುಕಟ್ಟೆಯ ಕೃತಕ ಅಂದಕ್ಕೆ ಮೊರೆಹೋಗುತ್ತೇವೆ....

  • ಕರಿಬೇವಿನ ಎಲೆಗಳನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಅದು ಆಹಾರಕ್ಕೆ ಪರಿಮಳದೊಂದಿಗೆ ರುಚಿಯನ್ನು ನೀಡುತ್ತದೆ. ಆಯುರ್ವೇದದ ಪ್ರಕಾರ ಇದನ್ನು...

  • ಬಿಲ್ವಪತ್ರೆ ಶಿವನಿಗೆ ಅಚ್ಚುಮೆಚ್ಚು ಎಂಬುದು ತಿಳಿದೇ ಇರುವ ವಿಚಾರ. ಅಷ್ಟು ಮಾತ್ರವಲ್ಲದೇ ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧೀಯ ಗುಣಗಳಿಂದ ಕೂಡಿದೆ. ಬಿಲ್ವಪತ್ರೆ...

  • ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸೈಕ್ಲಿಂಗ್‌ ಅತ್ಯುತ್ತಮ ಮಾರ್ಗ. ಅಧ್ಯಯನದ ಪ್ರಕಾರ ಸೈಕ್ಲಿಂಗ್‌ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸುವ ಜತೆಗೆ ಮನಸ್ಥಿತಿ,ವಿಲ್‌...

ಹೊಸ ಸೇರ್ಪಡೆ