ಮಳೆಗಾಲದ ಆಹಾರದಲ್ಲಿ ಈ ಹಣ್ಣುಗಳಿರಲಿ

Team Udayavani, Jul 16, 2019, 5:13 AM IST

ಮಳೆಗಾಲದಲ್ಲಿ ಆಹಾರ ಸೇವನೆಯ ಕುರಿತು ಜಾಗೃತಿ ಅತ್ಯಗತ್ಯ. ಹೊರಗಿನ ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿನ ತಿಂಡಿ ಬೇಕೆನಿಸಿದರೂ ಅವು ಆರೋಗ್ಯಕಾರಿಯಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳು ಬಾರದಂತೆ ಆರೋಗ್ಯಕರ ಆಹಾರ ಸೇವನೆಯನ್ನು ಅನುಸರಿಸಬೇಕು. ಮಳೆಗಾಲದಲ್ಲಿ ಹಣ್ಣುಗಳ ಸೇವೆನೆಗೂ ಪ್ರಾಮುಖ್ಯತೆ ನೀಡಬೇಕು. ಮಳೆಗಾಲದಲ್ಲಿ ಸೇವಿಸುವ ಆಹಾರದಲ್ಲಿ ಈ ಹಣ್ಣುಗಳಿಗೆ ಜಾಗವಿರಲಿ·

ಚೆರ್ರಿ: ಮಳೆಗಾಲದಲ್ಲಿ ಚೆರ್ರಿ ಹಣ್ಣು ಹೇರಳವಾಗಿರುತ್ತದೆ. ಚೆರ್ರಿ ಹಣ್ಣು ಮಳೆಗಾಲದಲ್ಲಿ ತಿನ್ನಬಹುದಾದ ಹಣ್ಣಾಗಿದ್ದು, ಇದು ಕಡಿಮೆ ಕ್ಯಾಲರಿ ಹೊಂದಿದೆ. ಇದು ಯಥೇತ್ಛ ಪೌಷ್ಟಿಕಾಂಶ, ಜೀವಸತ್ವ ಗಳು ಮತ್ತು ಖನಿಜಾಂಶಗಳಿಂದ ಕೂಡಿದೆ. ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಹಣ್ಣು ಇದಾಗಿದೆ.

ನೇರಳೆ ಹಣ್ಣು: ಹೆಚ್ಚು ವಿಟಮಿನ್‌, ಖನಿಜಾಂಶ ಹೊಂದಿರುವ ನೇರಳೆ ಹಣ್ಣು ಮಳೆಗಾಲದಲ್ಲಿ ಹೇರಳವಾಗಿ ದೊರೆಯುವ ಹಣ್ಣು. ಇದು ಕಿಡ್ನಿ ಮತ್ತು ಲಿವರ್‌ನ ಆರೋಗ್ಯಕ್ಕೆ ಉತ್ತಮ. ಇದರ ರಸವನ್ನು ನಿಯಮಿತವಾಗಿ ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು.

ಲೀಚಿ ಹಣ್ಣು: ವಿಟಮಿನ್‌ ಸಿ ಯನ್ನು ಹೊಂದಿರುವ ಈ ಹಣ್ಣು ರೋಗನಿರೋಧಕ ಶಕ್ತಿ ಹೊಂದಿದೆ. ಶೀತ, ನೆಗಡಿಯನ್ನು ತಡೆಯುವಲ್ಲಿ ಇದು ಸಹಾಯಕ ಹಾಗೂ ಚರ್ಮದ ಆರೋಗ್ಯಕ್ಕೆ ಈ ಹಣ್ಣಿನ ರಸ ಪ್ರಯೋಜನಕಾರಿ.

ಮಳೆಗಾಲದಲ್ಲಿ ಎಲ್ಲ ಹಣ್ಣುಗಳು ತಿನ್ನಲು ಸೂಕ್ತವಲ್ಲ. ಶೀತ, ಅನಾರೊಗ್ಯದ ಅಪಾಯ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ತಿನ್ನಬಹುದಾದ ಹಣ್ಣುಗಳನ್ನು ಮಾತ್ರ ಸೇವಿಸಬೇಕು.

ದಾಳಿಂಬೆ
ಸಮೃದ್ಧ ಪೋಷಕಾಂಶಗಳನ್ನು ಹೊಂದಿ ರುವ ದಾಳಿಂಬೆ ಮಳೆಗಾಲದಲ್ಲಿ ರೋಗ ಬಾರದಂತೆ ತಡೆಯಲು ಸಹಕಾರಿ ಯಾಗಿದೆ. ಕ್ಯಾನ್ಸರ್‌, ಹೃದ್ರೋಗದ ವಿರುದ್ಧ ಹೋರಾಡುತ್ತದೆ. ವಿಟಮಿನ್‌ ಬಿ ಯನ್ನು ಹೊಂದಿರುವ ಇದು ಕೆಂಪು ರಕ್ತ ಕಣಗಳನ್ನು ವೃದ್ಧಿಸುತ್ತದೆ.

ಪಪ್ಪಾಯಿ
ವಿಟಮಿನ್‌ ಸಿಯಿಂದ ಕೂಡಿರುವ ಈ ಹಣ್ಣು ಕಾಯಿಲೆಯ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಹೆಚ್ಚು ಪೈಬರ್‌ ಅಂಶವನ್ನು ಹೊಂದಿರುವ ಪಪ್ಪಾಯಿ ಜೀರ್ಣಕ್ರಿಯೆಗೆ ಸಹಾಯಕಾರಿ.

-  ರಂಜಿನಿ ಮಿತ್ತಡ್ಕ


ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆಧುನಿಕ ಜೀವನಶೈಲಿ ಕೆಲಸಗಳನ್ನು ಕಡಿಮೆ ಮಾಡಿದೆ. ಆದರೆ, ರೋಗಗಳನ್ನು ಜಾಸ್ತಿ ಮಾಡಿದೆ. ಹೌದು. ಕಂಪ್ಯೂಟರ್‌ ಯುಗಾರಂಭವಾದ ಮೇಲೆ ಮನುಷ್ಯನ ಕೆಲಸಗಳು ಶೇ. 50ರಷ್ಟು...

  • ಇತರರ ಮುಂದೆ ಸುಂದರವಾಗಿ ಕಾಣಬೇಕೆನ್ನುವುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಹೀಗಿದ್ದಾಗಲೇ ಸಹಜ ಅಂದಕ್ಕಿಂತ ಮಾರುಕಟ್ಟೆಯ ಕೃತಕ ಅಂದಕ್ಕೆ ಮೊರೆಹೋಗುತ್ತೇವೆ....

  • ಕರಿಬೇವಿನ ಎಲೆಗಳನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಅದು ಆಹಾರಕ್ಕೆ ಪರಿಮಳದೊಂದಿಗೆ ರುಚಿಯನ್ನು ನೀಡುತ್ತದೆ. ಆಯುರ್ವೇದದ ಪ್ರಕಾರ ಇದನ್ನು...

  • ಬಿಲ್ವಪತ್ರೆ ಶಿವನಿಗೆ ಅಚ್ಚುಮೆಚ್ಚು ಎಂಬುದು ತಿಳಿದೇ ಇರುವ ವಿಚಾರ. ಅಷ್ಟು ಮಾತ್ರವಲ್ಲದೇ ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧೀಯ ಗುಣಗಳಿಂದ ಕೂಡಿದೆ. ಬಿಲ್ವಪತ್ರೆ...

  • ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸೈಕ್ಲಿಂಗ್‌ ಅತ್ಯುತ್ತಮ ಮಾರ್ಗ. ಅಧ್ಯಯನದ ಪ್ರಕಾರ ಸೈಕ್ಲಿಂಗ್‌ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸುವ ಜತೆಗೆ ಮನಸ್ಥಿತಿ,ವಿಲ್‌...

ಹೊಸ ಸೇರ್ಪಡೆ