ತಾಲೀಮಿನೊಂದಿಗೆ ಈ ಅಭ್ಯಾಸವಿರಲಿ

Team Udayavani, Sep 10, 2019, 5:00 AM IST

ಹೊಸದಾಗಿ ಜಿಮ್‌ ವ್ಯಾಯಾಮದಲ್ಲಿ ತೊಡಗಿಸಿಕೊಂಡವರು ಏಕಾಏಕಿ ವರ್ಕೌಟ್‌ ಮಾಡುವುದರಿಂದ ದೇಹದ ಅಂಗಾಂಗಗಳ ಮೇಲೆ ಒತ್ತಡ ಉಂಟಾಗಿ ನೋವು ಉಂಟಾಗುವ ಪ್ರಮೇಯ ಕಂಡು ಬರುತ್ತದೆ. ತೋಳು, ತೊಡೆ ಹಾಗೂ ಸ್ನಾಯುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಂಡು ಎರಡು ಮೂರು ದಿನಗಳವರೆಗೆ ದೇಹದಲ್ಲಿ ನೋವು ಉಳಿದುಕೊಳ್ಳುವುದು. ಇಂತಹ ನೋವನ್ನು ತಪ್ಪಿಸುವ ಕೆಲ ಆರೋಗ್ಯಕರ ಆಹಾರ ಕ್ರಮಗಳ ಅಭ್ಯಾಸ ಅಗತ್ಯ. ಈ ಕುರಿತ ಕೆಲ ಮಾರ್ಗೋಪಾಯ ಇಂತಿವೆ.

ಆರೋಗ್ಯಕರ ಆಹಾರ
ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಅತ್ಯಾವಶ್ಯಕ. ಪ್ರೋಟಿನ್‌, ಕಾಬೋìಹೈಡ್ರೇಟ್‌ ಮತ್ತು ಫ್ಯಾಟ್‌ ಅಂಶವಿರುವ ಆಹಾರಗಳನ್ನು ಸೇವಿಸುವುದರಿಂದ ಸ್ನಾಯು ನೋವು ತ್ವರಿತವಾಗಿ ಸರಿಯಾಗುತ್ತದೆ. ಈ ಆಹಾರದೊಂದಿಗೆ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಕ್ಕರೂ ಮುಂದೆ ನಿಮಗೆ ವಕೌìಟ್‌ ನೋವು ಇರುವುದಿಲ್ಲ. ಹಾಗೆಯೇ ಫಿಟೆ°ಸ್‌ ತಜ್ಞರ ಮೂಲಕ ನೀವು ಪ್ರೋಟಿನ್‌ ಪೂರಕಗಳನ್ನು ಸಹ ತೆಗೆದುಕೊಳ್ಳಬಹುದು.
ಕೊಬ್ಬಿನ ಅಂಶವಿರುವ ಆಹಾರ ವರ್ಕೌಟ್‌ ನೋವು ಕಡಿಮೆ ಮಾಡಲು, ಒಮೆಗಾ -3 ಕೊಬ್ಬಿನ ಅಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಮೀನು- ಮಾಂಸ, ವಾಲ…ನಟ್ಸ… ಇತ್ಯಾದಿಗಳಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಕಂಡುಬರುತ್ತದೆ.

ಐಸ್‌ ಪ್ಯಾಕ್‌
ತಾಲೀಮು ಅನಂತರ, ನೋವು ಇರುವ ಜಾಗದಲ್ಲಿ ಐಸ್‌ ಪ್ಯಾಕ್‌ ಇಟ್ಟುಕೊಳ್ಳಿ. ಇದು ನೋವು ಮತ್ತು ಉರಿಯೂತ ಎರಡನ್ನೂ ಕಡಿಮೆ ಮಾಡುತ್ತದೆ.

-  ಕಾರ್ತಿಕ್‌ ಚಿತ್ರಾಪುರ


ಈ ವಿಭಾಗದಿಂದ ಇನ್ನಷ್ಟು

  • ವ್ಯಾಯಾಮ ಮಾಡುವುದರಿಂದ ಬೊಜ್ಜು ಕರಗುತ್ತದೆ. ಆದರೆ ಸ್ಟ್ರೆಚ್‌ ಮಾರ್ಕ್‌ ಮೂಡುತ್ತದೆ ಎನ್ನುವುದು ಬಹುತೇಕ‌ರ ಅಳಲು. ಮಾತ್ರವಲ್ಲ ಪ್ರಸವದ ನಂತರ ಹೊಟ್ಟೆಯಲ್ಲಿ...

  • ವ್ಯಾಯಾಮಗಳಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತಾ ಇರುತ್ತಿವೆ. ಹಾಗೇ ಸೌಂದರ್ಯಪ್ರಿಯರು ಕೂಡ ದೇಹವನ್ನು ಕಟ್ಟುಮಸ್ತಾಗಿ ಇಡಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಲ್ಲೇ...

  • ಸೌಂದರ್ಯದ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ? ಹುಡುಗಿರೇ ಇರಲಿ, ಹುಡುಗರೇ ಇರಲಿ ಎಲ್ಲರಲ್ಲಿಯೂ ಸೌಂದರ್ಯ ಪ್ರಜ್ಞೆ ಇದ್ದೇ ಇರುತ್ತದೆ. ದಿನದಿಂದ ದಿನಕ್ಕೆ ಸೌಂದರ್ಯ...

  • ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಸ್ತ್ರೀ ಮತ್ತು ಪುರುಷರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಕೂದಲು ಉದುರಲು ಅನೇಕ ಕಾರಣಗಳಿವೆ....

  • ಇತರೆ ದಿನಗಳಿಗಿಂತ ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಹಿಳೆಯರು ವಿವಿಧ ಟಿಪ್ಸ್‌ ಬಳಸಿಕೊಂಡು ತಮ್ಮ ತ್ವಚೆಯನ್ನು...

ಹೊಸ ಸೇರ್ಪಡೆ