ನಿಂಬೆ ಹಣ್ಣಿನಿಂದ ಆರೋಗ್ಯ ವೃದ್ಧಿ

Team Udayavani, Jan 28, 2020, 5:57 AM IST

ನಿಂಬೆ ಹಣ್ಣನ್ನು ನಮ್ಮ ದಿನನಿತ್ಯದ ಅಡುಗೆಯಲ್ಲಿ ಹೆಚ್ಚಾಗಿ ಬಳಸುವುದರಿಂದ ಅದರಲ್ಲಿರುವ ಆರೋಗ್ಯಕರ ಗುಣಗಳು ನಮ್ಮ ಆರೋಗ್ಯವನ್ನು ಕಾಪಾಡುವುದರ ಜತೆಗೆ ಕಾಯಿಲೆ ಮುಕ್ತರನ್ನಾಗಿಸುತ್ತದೆ.

ಚಿಕಿತ್ಸಾ ಗುಣಗಳು:
ನೆಗಡಿ ಮತ್ತು ಫ‌ೂ ಶಮನಕಾರಿ: ನಿಂಬೆ ಹಣ್ಣಿನಲ್ಲಿ ವಿಟಮಿನ್‌ ಸಿ ಇರುವುದರಿಂದ ಇದು ಸೋಂಕು ತಗುಲದಂತೆ ನೋಡಿಕೊಳ್ಳುತ್ತದೆ ಮತ್ತು ನೆಗಡಿಯಿಂದ ನಮ್ಮನ್ನು ರಕ್ಷಿಸುತ್ತದೆ.

ದೊಡ್ಡ ಕರುಳನ್ನು ಸ್ವತ್ಛಗೊಳಿಸುತ್ತದೆ: ನಿಂಬೆ ಸೇವನೆಯಿಂದ ಕರುಳಿನಲ್ಲಿ ತ್ಯಾಜ್ಯದ ಸುಲಭ ಚಲನೆಗೆ ಸಹಕಾರಿ. ನಿಂಬೆ ರಸವನ್ನು ಪ್ರತಿದಿನ ಬೆಳಗ್ಗೆ ನೀರಿನೊಂದಿಗೆ ಸೇರಿಸಿ ಕುಡಿದರೆ ಇನ್ನಷ್ಟು ಉತ್ತಮ.

ಕ್ಯಾನ್ಸರ್‌ ದೂರಗೊಳಿಸಲು ಸಹಕಾರಿ: ನಿಂಬೆ ಹಣ್ಣು 22 ಕ್ಯಾನ್ಸರ್‌ ಪ್ರತಿಬಂಧಕ ಸಂಯುಕ್ತಗಳನ್ನು ಹೊಂದಿದೆ.

ಲಿವರ್‌ ಸಮಸ್ಯೆಗೆ ರಾಮಬಾಣ: ಒಂದು ಲೋಟ ನೀರಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಲಿವರ್‌ ಆರೋಗ್ಯ ಕಾಪಾಡಬಹುದು.

ಸಮತೋಲನ ಕಾಪಾಡುತ್ತದೆ: ನಿಂಬೆ ಹಣ್ಣು ಆಮ್ಲಿàಯವಾಗಿದ್ದು, ಅದು ದೇಹದ ಪಚನ ಕ್ರಿಯೆಯಲ್ಲಿ ಪಾತ್ರವಹಿಸುತ್ತದೆ. ದೇಹದ ವಿವಿಧ ದ್ರವಗಳ ಮೆಲೆ ಪ್ರತ್ಯಾಮ್ಲಿàಯ ಪರಿಣಾಮವನ್ನು ಉಂಟು ಮಾಡುತ್ತದೆ.

ಅಲರ್ಜಿಯಿಂದ ಮುಕ್ತಿ: ನಿಂಬೆ ಹಣ್ಣು ಅಲರ್ಜಿಯನ್ನು ದೂರಗೊಳಿಸುವ ಶಕ್ತಿಯನ್ನು ಹೊಂದಿದೆ.

ನರಸಂಬಂಧಿ ರೋಗ ಮುಕ್ತಿ: ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಅತಿಯಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಮಿದುಳಿಗೆ ಸಂಬಂಧಿಸಿದ ದೋಷಗಳನ್ನು ಕಡಿಮೆಗೊಳಿಸಿ ಉತ್ತಮ ಆರೋಗ್ಯವನ್ನು ನೀಡುತ್ತದೆ.

ಕಣ್ಣಿನ ವ್ಯಾಧಿಗಳು: ನಿಂಬೆ ಹಣ್ಣಿನಲ್ಲಿರುವ ರುಟಿನ್‌ ಎಂಬ ಅಂಶವು ಡಯಾಬೆಟಿಕ್‌ ರೆಟಿನೋಪತಿಯನ್ನು ಒಳಗೊಂಡಿರುವುದರಿಂದ, ಅನೇಕ ಕಣ್ಣಿನ ರೋಗಗಳನ್ನು ನಿವಾರಿಸುತ್ತದೆ.

ಡಯಾಬಿಟಿಸ್‌ ನಿಯಂತ್ರಣ: ನಿಂಬೆ ಹಣ್ಣಿನಲ್ಲಿರುವ ಹೆಸ್ಪರ್‌ಟೈನ್‌ ಎಂಬ ರಾಸಾಯನಿಕವು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಕರಿಸುತ್ತದೆ.

ಕಿಡ್ನಿಯಲ್ಲಿನ ಕಲ್ಲುಗಳು: ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್‌ ಆಮ್ಲವು ಕಿಡ್ನಿಯಲ್ಲಿರುವ ಕಲ್ಲುಗಳನ್ನು ಕರಗಿಸಿ ಕಿಡ್ನಿಸ್ಟೋನ್‌ ನಿವಾರಿಸುವಲ್ಲಿ ಸಹಕರಿಸುತ್ತದೆ.

ತಾರುಣ್ಯವನ್ನು ಕಾಪಾಡುತ್ತದೆ: ನಿಂಬೆ ಹಣ್ಣಿನಲ್ಲಿರುವ ವಿಟಮಿನ್‌ ಸಿ ದೇಹದಲ್ಲಿ ರಾಡಿಕಲ್ಸ್‌ಗಳನ್ನು ತಟಸ್ಥಗೊಳಿಸುತ್ತದೆ. ಇದರಿಂದ ನಮ್ಮ ತಾರುಣ್ಯ ಇನ್ನಷ್ಟು ಹೆಚ್ಚುತ್ತದೆ.

ಸಿಟ್ರಿಕ್‌ ಆ್ಯಸಿಡ್‌ ಇರುವುದರಿಂದ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ನಿಂಬೆ ರಸವನ್ನು ದಿನನಿತ್ಯ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಮೊಡವೆಯಿಂದ ಮುಕ್ತಿ: ಪ್ರತಿ ದಿನ ನಿಂಬೆ ರಸ ಮುಖಕ್ಕೆ ಹಚ್ಚಿ 5 ನಿಮಿಷದ ಬಳಿಕ ಮುಖ ತೊಳೆಯುವುದರಿಮದ ಮೊಡವೆ ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.

- ವಿಜಿತಾ ಅಮೀನ್‌ ಬಂಟ್ವಾಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮರೆವು ಒಂದು ರೀತಿಯ ಮೆದುಳಿನ ನ್ಯೂನತೆ. ಭೌತಿಕ ಅಥವಾ ಮಾನಸಿಕ ಆಘಾತದಿಂದ ಉಂಟಾಗುವ ರೋಗವಿದು. ಮನಸ್ಸಿಗೆ ತೀವ್ರ ರೀತಿಯ ಆಘಾತವಾದಾಗ ಅದರಿಂದ ಘಾಸಿಯಾಗಿ ಜ್ಞಾಪಕ...

  • ಸಾಮಾನ್ಯವಾಗಿ ಹುಡುಗಿಯರಷ್ಟೇ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಮಾತಿದೆ. ಅಂತೆಯೇ ಪುರುಷರು ಕೂಡ ಇತ್ತೀಚೆಗೆ ಹೆಚ್ಚು ಸೌಂದರ್ಯ ಕಾಳಜಿ ವಹಿಸುತ್ತಿರುವುದು...

  • ನಮ್ಮ ಮನೆಯ ಅಡುಗೆ ಮನೆಯಲ್ಲಿ ಹಲವಾರು ಔಷಧ ಗುಣಗಳಿರುವ ಮತ್ತು ಆರೋಗ್ಯದಾಯಕ ವಸ್ತುಗಳಿವೆ. ಅವುಗಳ ಪ್ರಯೋಜನವನ್ನು ತಿಳಿದು ಬಳಸಿದರೆ ರೋಗ ನಿಯಂತ್ರಣಕಾರಿಯಾಗಿ...

  • ಉಪ್ಪು ಆಹಾರ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರ ಎಷ್ಟೇ ಚೆನ್ನಾಗಿದ್ದರೂ ಉಪ್ಪಿನಂಶಇಲ್ಲದಿದ್ದರೆ ಅದರ ರುಚಿ ಕೆಟ್ಟು ಹೋಗುತ್ತದೆ. ಉಪ್ಪು...

  • ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು...

ಹೊಸ ಸೇರ್ಪಡೆ

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

  • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...

  • ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ...

  • ಬೆಂಗಳೂರು: ಹುಳಿಮಾವು ಕೆರೆ ದುರಂತ ಸಂಭವಿಸಿ ಇಂದಿಗೆ (ಫೆ.24)ನಾಲ್ಕು ತಿಂಗಳಾಗಲಿದೆ. ಆದರೆ, ಇದಕ್ಕೆ "ಪರೋಕ್ಷವಾಗಿ ಕಾರಣರಾದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ'...