ಏನಿದು ಹೃದಯಾಘಾತ ಹೃದಯ ಸ್ತಂಭನ

Team Udayavani, Aug 20, 2019, 5:00 AM IST

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನದಿಂದಾಗಿ ನಿಧನ ಹೊಂದಿರುವ ಸುದ್ದಿಯನ್ನು ನಾವು ಕೇಳಿರುತ್ತೇವೆ. ಆದರೆ ಕೆಲವರು ಈ ಎರಡೂ ವಿಧಾನಗಳು ಒಂದೇ ಎಂದು ಭಾವಿಸಿರುತ್ತಾರೆ. ಆದರೆ ವಾಸ್ತವದಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಇವು ಎರಡೂ ಬೇರೆ ಬೇರೆ ಸಮಸ್ಯೆಗಳಾಗಿವೆ. ಹಾಗದರೆ ಈ ಎರಡೂ ಸಮಸ್ಯೆಗಳ ಲಕ್ಷಣಗಳು ಏನು ಎಂದು ತಿಳಿದುಕೊಳ್ಳುವುದು ಒಳಿತು.

ಹೃದಯಾಘಾತಕ್ಕೆ ಕಾರಣಗಳು
ನಮ್ಮ ಹೃದಯಕ್ಕೆ ರಕ್ತ ಪರಿಚಲನೆ ಸ್ಥಗಿತಗೊಂಡಾಗ ಅಥವಾ ರಕ್ತ ಪ್ರವಹಿಸಲು ಅಡ್ಡಿಯಾದಾಗ ಹೃದಯದ ಜೀವಕೋಶಗಳು ಸಾಯುತ್ತವೆ. ಇದರಿಂದಾಗಿ ಹೃದಯಾಘಾತ ಸಂಭವಿಸುತ್ತದೆ. ಹೃದಯಾಘಾತ ಸಂಭವಿಸಲು ಕೆಲವೊಂದು ಕಾರಣಗಳನ್ನು ಗುರುತಿಸಬಹುದಾಗಿದೆ. ಹೃದಯದ ಸ್ನಾಯುಗಳಿಗೆ ರಕ್ತದ ಮೂಲಕ ಆಮ್ಲಜನಕ ಮತ್ತು ಯುಕ್ತ ಪೋಷಕಾಂಶಗಳನ್ನು ಒದಗಿಸುವ ಪರಿದಮನಿ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್‌ ಸಂಗ್ರಹಗೊಂಡು ರಕ್ತದೊತ್ತಡ ಉಂಟಾಗುತ್ತದೆ. ಸಾಮಾನ್ಯವಾಗಿ ಈ ರಕ್ತದೊತ್ತಡದಿಂದಾಗಿಯೇ ಹೃದಯದಲ್ಲಿ ರಂಧ್ರಗಳು ಉಂಟಾಗಿ ರಕ್ತವೂ ಹೆಪ್ಪುಗಟ್ಟುತ್ತದೆ. ಈ ಹೆಪ್ಪುಗಟ್ಟುವಿಕೆಯಿಂದಾಗಿಯೇ ರಕ್ತನಾಳಗಳ ರಕ್ತ ಪರಿಚಲನೆ ಸ್ಥಗಿತಗೊಂಡು ಹೃದಯಾಘಾತ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ, ಧೂಮಪಾನ, ಮದ್ಯಪಾನ, ಹೆಚ್ಚಿನ ಬೊಜ್ಜಿನಿಂದ ಹೃದಯಾಘಾತ ಸಂಭವಿಸುತ್ತದೆ. ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ಬಹುತೇಕರು ಸೂಕ್ತ ಚಿಕಿತ್ಸೆಯಿಂದ ಬದುಕುಳಿದ ಸಂದರ್ಭವಿದೆ. ಆದರೆ ಹೃದಯ ಸ್ತಂಬನವಾದಾಗ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ನೀಡದಿದ್ದರೆ ರೋಗಿಗಳು ಬದುಕುಳಿಯುವುದು ಕಷ್ಟಸಾಧ್ಯ.

ಹೃದಯ ಸ್ತಂಭನ
ಹೃದಯಸ್ತಂಭನವೂ ಹೃದಯಾಘಾತಕ್ಕಿಂತ ಭಿನ್ನ ಸಮಸ್ಯೆಯಾಗಿದೆ. ಇಲ್ಲಿ ಹೃದಯವೂ ದಿಢೀರನೇ ಕೆಲಸ ನಿಲ್ಲಿಸುವುದರಿಂದ ಹೃದಯ ಸ್ತಂಭನ ಉಂಟಾಗುತ್ತದೆ. ಎಲ್ಲ ಪ್ರಮುಖ ಅಂಗಗಳಿಗೆ ರಕ್ತ ಪೂರೈಕೆ ಏಕಾಏಕೀ ಕಡಿತಗೊಳಿಸಿ ನಮ್ಮ ಮಿದುಳು, ಹೃದಯದ ಭಾಗಗಳ ನಿಷ್ಕ್ರಿಯಗೊಳ್ಳುತ್ತವೆ. ಪ್ರಜ್ಞೆ ತಪ್ಪಿ ಸಾವು ಸಂಭವಿಸುತ್ತದೆ. ಕೆಲವೊಂದು ಅಂಶಗಳಿಂದ ಈ ಎರಡೂ ಸಮಸ್ಯೆಗಳು ಭಿನ್ನ ಎಂದು ವೈದ್ಯರು ಗುರುತಿಸುತ್ತಾರೆ. ಮಾದಕ ವಸ್ತುಗಳ ಸೇವನೆ, ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನಿರ್ಲಕ್ಷಿಸುವುದು ಮತ್ತು ಹೃದಯ ಭಾಗಗಳಲ್ಲಿ ಹಾನಿಯಾದಾಗ ಹೃದಯ ಸ್ತಂಭನ ಉಂಟಾಗುತ್ತದೆ.

-   ಅಭಿನವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎಣ್ಣೆ ಆಹಾರಗಳನ್ನು ಸೇವಿಸಿದರೆ ಶರೀರದಲ್ಲಿ ಕೊಬ್ಬು ಅಧಿಕವಾಗುತ್ತದೆ ಎಂಬುದು ಸಾಮಾನ್ಯವಾದ ನಂಬಿಕೆ. ಅದು ನಿಜವೂ ಹೌದು. ಎಣ್ಣೆಯಲ್ಲಿ ಕರಿದ ತಿಂಡಿಗಳ ನಿರಂತರ...

  • ಋತುಚಕ್ರ ಹೆಣ್ಣು ಮಕ್ಕಳಲ್ಲಿ ಸ್ವಾಭಾವಿಕ. ಪ್ರತಿ ತಿಂಗಳು ಹೆಣ್ಮಕ್ಕಳು ಈ ಋತುಚಕ್ರದಲ್ಲಿ ಸಾಕಷ್ಟು ಮಾನಸಿಕ, ದೈಹಿಕ ಹಿಂಸೆ, ನೋವು ಅನುಭವಿಸುತ್ತಾರೆ. ಹಿಂದೆ...

  • ತಿನ್ನಲು ರುಚಿಕರವಾದ ಬಾಳೆಹಣ್ಣು ಆರೋಗ್ಯ, ಚರ್ಮ ಮತ್ತು ಕೂದಲಿಗೆ ಬಹು ಪ್ರಯೋಜನಕಾರಿ. ಬಾಳೆಹಣ್ಣು ತಿನ್ನುವುದರಿಂದ ಶಕ್ತಿ ಹೆಚ್ಚುತ್ತದೆ, ಅದ್ಭುತ ಚರ್ಮ ಮತ್ತು...

  • ಮಳೆಗಾಲದಲ್ಲಿ ಕರವಾಳಿಯಲ್ಲಿ ನೈಸರ್ಗಿಕವಾಗಿ ಸಿಗುವ ಆಹಾರ ಪದರ್ಥಾಗಳಿಗೆ ಹೆಚ್ಚಿನ ಬೇಡಿಕೆ. ಕೇಸುವಿನ ಎಲೆ, ಅಣಬೆ, ತಗಟೆ ಸೊಪ್ಪು ಹಾಗೂ ಕಳಲೆ ಕರಾವಳಿಗರ ಮನೆಯಲ್ಲಿ...

  • ನಮ್ಮ ಜೀವನವು ನಮ್ಮ ಕೈಯಲ್ಲಿದೆ. ನಾವು ಎಲ್ಲಿದ್ದರೂ, ಹೇಗಿದ್ದರೂ ನಮ್ಮ ಜೀವನದಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಆಲೋಚನೆಗಳನ್ನು ಸಕಾರಾತ್ಮಕವಾಗಿ ಆಯ್ಕೆ ಮಾಡಲು...

ಹೊಸ ಸೇರ್ಪಡೆ