ಗಿಡಮೂಲಿಕೆ: ಹಲವು ಸಮಸ್ಯೆಗಳಿಗೆ ಪರಿಹಾರ

Team Udayavani, Oct 29, 2019, 5:06 AM IST

ಭಾರತ ಗಿಡಮೂಲಿಕೆಗಳಲ್ಲಿ ಶ್ರೀಮಂತ ದೇಶ. ಹಿಂದಿನಿಂದಲೂ ಗಿಡಮೂಲಿಕೆಗಳ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲಾಗುತ್ತಿತ್ತು. ಆದರೆ ಇಂದು ಫಾಸ್ಟ್‌ ಯುಗದಲ್ಲಿ ಆರೋಗ್ಯ ಬೇಗ ಸುಧಾರಿಸಬೇಕು ಹಂಬಲದಿಂದ ಅವುಗಳ ನಕರಾತ್ಮಕ ಪರಿಣಾಮಗಳ ಅರಿವಿದ್ದೂ ಪಾಶ್ಚಾತ್ಯ ಚಿಕಿತ್ಸೆಗಳ ಮೊರೆ ಹೋಗುತ್ತಿದ್ದೇವೆ. ಗಿಡಮೂಲಿಕೆಗಳನ್ನು ದಿನನಿತ್ಯದ ಜೀವನದಲ್ಲಿ ಬಳಸುವುದರಿಂದ ಆರೋಗ್ಯಕರವಾಗಿರಲು ಸಾಧ್ಯ. ಮನೆಯ ಸುತ್ತಮುತ್ತಲೇ ಹಲವಾರು ಬಗೆಯ ಔಷಧೀಯ ಗುಣವುಳ್ಳ ಸಸ್ಯಗಳು ಕಾಣಸಿಗುತ್ತದೆ. ಅವುಗಳ ಪ್ರಯೋಜನಗಳನ್ನು ತಿಳಿದು ಬಳಕೆ ಮಾಡಬಹುದು.

1 ತುಳಸಿ
ತುಳಸಿ ಮನೆಯಂಗಳದಲ್ಲಿ ಸುಲಭವಾಗಿ ಸಿಗುವ ಗಿಡಮೂಲಿಕೆಯಾಗಿದ್ದು, ಹೆಚ್ಚು ರೋಗನಿರೋಧಕ ಅಂಶಗಳನ್ನು ಹೊಂದಿದೆ. ಧಾರ್ಮಿಕ ಆಚರಣೆಗೆ ಬಳಸುವುದರ ಜತೆಗೆ ಇದು ಆರೋಗ್ಯದ ದೃಷ್ಟಿಯಲ್ಲೂ ಬಳಕೆ ಮಾಡುತ್ತಾರೆ. ಆಯುರ್ವೇದದಲ್ಲಿ ಇದಕ್ಕೆ ಪ್ರತ್ಯೇಕ ಸ್ಥಾನವಿದೆ. ಕಫ‌, ಜ್ವರ ನಿವಾರಣೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಜತೆಗೆ ಇದು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ.

2 ಒಂದೆಲಗ ಸೊಪ್ಪು
ಬೌದ್ಧಿಕವಾಗಿ ಹೆಚ್ಚು ಚುರುಕಾಗಲು ಒಂದೆಲಗ ಸೊಪ್ಪು ಹೆಚ್ಚು ಪರಿಣಾಮಕಾರಿ. ಜತೆಗೆ ಇದು ಹಲವಾರು ಸಮಸ್ಯೆಗಳಿಗೂ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ.

3 ಕಹಿಬೇವು
ಅತಿ ಹೆಚ್ಚು ರೋಗನಿರೊಧಕ ಶಕ್ತಿಯನ್ನು ಹೊಂದಿರುವ ಕಹಿಬೇವಿಗೆ ಹೆಚ್ಚು ಮಹತ್ವವಿದೆ. ಕಹಿಬೇವನ್ನು ಜ್ವರ, ಕಫ‌ ಮುಂತಾದ ಸಮಸ್ಯೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಮನೆಯಂಗಳದಲ್ಲೇ ದೊರಕುವ ಅರಶಿನ ಮುಂತಾದ ವಸ್ತುಗಳೂ ಆರೋಗ್ಯವರ್ಧನೆಗೆ ಸಹಕಾರಿ.

ಪ್ರಯೋಜನಗಳು
1 ಯಾವುದೇ ನಕರಾತ್ಮಕ ಪರಿಣಾಮವಿಲ್ಲ.
2 ಸುಲಭವಾಗಿ ಮನೆಯಲ್ಲೇ ಲಭ್ಯವಿದೆ.
3 ದೇಹದ ಆರೋಗ್ಯ, ಚರ್ಮ, ಕೂದಲ ಸೌಂದರ್ಯಕ್ಕೂ ಗಿಡಮೂಲಿಕೆಗಳು ಸಹಾಯಕಾರಿ.

ಮೂಲಿಕೆ ಯಾವುವು?
ಕಾಡು, ತೋಟಗಳಲ್ಲಿ ಹಲವಾರು ನಮಗೆ ತಿಳಿಯದ ಅನೇಕ ಗಿಡಮೂಲಿಕೆ ಗಳು ಇದ್ದು, ಅವುಗಳ ಪ್ರಯೋಜನೆಗಳೇನು ಎಂಬುದನ್ನು ತಿಳಿದುಕೊಂಡು ಬಳಕೆ ಮಾಡಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಮಾರುತ್ತಿರುವ ತಿಂಡಿಗಳನ್ನು ನೋಡಿದರೆ ಬಾಯಲ್ಲಿ ನೀರು ಬಾರದೆ ಇರದು. ಹಾಗಂತ ತಿಂದರೆ ಅನೇಕರು ಫುಡ್‌ ಪಾಯ್ಸನ್‌ ಸಮಸ್ಯೆಗೆ...

  • ಹುಡುಗಿಯರಿಗೆ ತಲೆಕೂದಲು ಸೌಂದರ್ಯದ ಸಂಕೇತ. ಕೆಲವರಿಗೆ ಉದ್ದನೆಯ ಕೂದಲು ಇನ್ನು ಕೆಲವರಿಗೆ ಸಣ್ಣ ಕೂದಲು, ಗುಂಗುರು ಕೂದಲು ಇಷ್ಟಪಡುತ್ತಾರೆ. ಕೂದಲನ್ನು ನಾಜೂಕಾಗಿ...

  • ಬದಲಾಗುವ ಹವಾಮಾನ ಮತ್ತು ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕಾಯಿಲೆಗಳ ಬಾಧೆಯೂ ಅಧಿಕ. ಅದರಲ್ಲೂ ಇತ್ತೀಚೆಗಿನ ಹವಾಮಾನವಂತೂ ಕಾಯಿಲೆಗಳಿಗೆ...

  • ಬಲಿಷ್ಠ ಸ್ನಾಯುಗಳನ್ನು ಹೊಂದುವ ಮೂಲಕ ಫಿಟ್‌ ಆಗಿರಲು ಹೆಚ್ಚಿನ ಯುವಕರು ಆಶಿಸುತ್ತಾರೆ. ಕೆಲವರು ಆಹಾರದ ಮೂಲಕ ದೇಹದ ಸದೃಢತೆಯನ್ನು ಕಾಪಾಡಿಕೊಂಡರೆ ಮತ್ತೂ ಕೆಲವರು...

  • ಅಲೋವೆರಾ ಈ ಹೆಸರು ಕೇಳಿದಾಗ ಇದು ಲೋಳೆಯಾಗಿದ್ದು ಮುಖದ ಅಂದಕ್ಕೆ ಬಳಸುತ್ತಾರೆಂದು ಎಲ್ಲೂ ಓದಿದಂತೆ ನಿಮಗೂ ಭಾಸವಾಗಬಹುದು. ಆದರೆ ಮುಖದೊಂದಿಗೆ ಹಲವಾರು ರೋಗದ...

ಹೊಸ ಸೇರ್ಪಡೆ