ಮನಸ್ಸು ಅರಳಲಿ

Team Udayavani, Apr 10, 2019, 6:00 AM IST

ಜಗತ್ತಿನಲ್ಲಿ ಎಲ್ಲರಿಗೂ ಎದುರಾಗುವ ದೈನಂದಿನ ಸನ್ನಿವೇಶಗಳಿಗೆ ಸಾಮಾನ್ಯರು ತೋರುವ ಪ್ರತಿಕ್ರಿಯೆಗಳ ಮನೋ ವೈಜ್ಞಾನಿಕ ಹಾಗೂ ವೇದಾಂತಾನು ಗುಣ ವಿಶ್ಲೇಷಣೆಯ ಮೂಲಕ ಸಮರ್ಥ, ಸಂಪನ್ನ ಜೀವನದ ಮಾರ್ಗವನ್ನು ತೋರಿಸಿಕೊಡುತ್ತದೆ ಸ್ವಾಮಿ ದಯಾನಂದ ಸರಸ್ವತೀ ಅವರ ಮನಸ್ಸು ಅರಳಲಿ ಪುಸ್ತಕ. ಈ ಪುಸ್ತಕದ ಮೂಲಕ ಸ್ವಾಮೀ ದಯಾನಂದ ಸರಸ್ವತಿ ಅವರು ಜೀವನದ ಬಗೆಗಿನ ಹಲವು ಜಿಜ್ಞಾಸತ್ಮಕವಾದ ಪ್ರಶ್ನೆಗಳಿಗೆ ತಮ್ಮ ಅನುಭವದ ಮೂಲಕ ಸರಳವಾಗಿ ಉತ್ತರ ನೀಡಿರುವುದು ಗಮನಾರ್ಹವಾದುದು.

ಘಟನೆ 1
ದೇಹವೇನೊ ಪ್ರಕೃತಿ ನಿಯಮದಂತೆ ಬೆಳೆಯುತ್ದೆ. ಆದರೆ ವ್ಯಕ್ತಿತ್ವವು ಸಮಗ್ರವಾಗಿ ರೂಪಗೊಳ್ಳಬೇಕಾದರೆ ಮನಸ್ಸು ಅರಳಬೇಕು. ಇದಕ್ಕೆ ಆತ್ಮಾವಲೋಕನ, ಆತ್ಮ ಸಂಸ್ಮರಣ ಅನಿವಾರ್ಯ. ಮನಸ್ಸಿನೊಡನೆ ದ್ವಂದಕ್ಕೆ ನಿಲ್ಲದಂತೆ ವಿವಿಧತೆಯನ್ನು ಬೆಳೆಸಿಕೊಂಡಲ್ಲಿ ಶಾಂತಿಯೂ, ಸುಖವೂ ದೊರೆಯುತ್ತದೆ. ಹೀಗೆ ಮನಸ್ಸನ್ನು ಪಕ್ವಗೊಳಿಸುವಂಥ ನಡೆ  ನುಡಿಗಳನ್ನು ಬೋಧಿಸುವ ಶಾಸ್ತ್ರವೇ ವೇದಾಂತ ಎಂದು ಅವರು ಪ್ರತಿಯೊಬ್ಬರಿಗೂ ಹೇಳುವ ಮಾತಾಗಿದೆ.

ಘಟನೆ 2
ಬದುಕೆಂಬ ಮೋಟರ್‌ ಗಾಡಿಗೂ ಸ್ಪಿಯರಿಂಗ್‌ ವ್ಹೀಲ್‌, ಗೇರ್‌ ಮೊದಲಾದವು ಇರುತ್ತವೆ! ಇವನ್ನು ಆತ್ಮ ವೀಕ್ಷಣೆಯಿಂದ ಅರಿತುಕೊಂಡಲ್ಲಿ ಅದಕ್ಷತೆ, ಕೋಪ, ಅಶಾಂತಿ, ಮೊದಲಾದವು ನೀಗಿ ಬದುಕು ನೆಮ್ಮದಿಯಾಗುತ್ತದೆ. ಭಗವದ್ಗೀತೆ-ಉಪನಿಷತ್ತುಗಳು ನಮ್ಮ ಸ್ವರೂಪವನ್ನು ಬಿಂಬಿಸುವ ನಿಲುವು ಗನ್ನಡಿಗಳು. ಅವುಗಳ ನೆರವು ಪಡೆದು, ನಮಗೆ ದೂರಾದ ಪರಿಸ್ಥಿತಿಯಲ್ಲಿ ಏನೂ ಮಾಡಬೇಕು, ಏನು ಮಾಡಬಾರದು ಎಂದು ಧರ್ಮ ದೃಷ್ಟಿಯಿಂದ ವಸ್ತು ನಿಷ್ಠವಾಗಿ ನಿರ್ಣಯಿಸಿಕೊಳ್ಳುವುದೇ ಕೌಶಲ; ಎಂದು ತಮ್ಮ ಪ್ರವಚನ ಮಾಲೆಯಲ್ಲಿ ಸ್ವಾಮೀಜಿ ತಿಳೀಸುತ್ತಾರೆ.

ಘಟನೆ 3
ಮಾನಸಿಕ ಚಡಪಡಿಕೆಗಳು- ಸಮಸ್ಯೆಗಳು ಉದ್ಭವವಾಗುವುದು ಏಕೆ? ಈ ವಿಷಯಗಳು ಉಳಿಸುಕೊಂಡೇ ಬರುವುದು ಏಕೆ? ಈ ಮೂಲಭೂತ ಅನುಮಾನ ಬದುಕಿನಲ್ಲಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಅಷ್ಟೇ ಅಲ್ಲ. ವೇದಾಂತ ಪುರಾಣಗಳನ್ನು ಕೇಳುತ್ತಿರುವವರಿಗೂ ಈ ಪ್ರಶ್ನೆ ಉದ್ಭವಾಗುತ್ತದೆ. ಇಂತಹ ಹಲವು ಸಮಸ್ಯೆಗಳಿಗೆ ಉತ್ತರ ಸಿಗುವಲ್ಲಿ ಯಶಸ್ಸಿಯಾಗಲೂ ಸುಲಭವಾಗುತ್ತದೆ. ನಾವು ಬೆಳೆಯುತ್ತಾ ಹೋದಂತೆನಮ್ಮ ಮನಸ್ಸಿನ ಪಕ್ವತೆ ಎಷ್ಟರ ಮಟ್ಟಿಗೆ ಬೆಳೆಯುತ್ತದೆ ಎನ್ನುವುದರ ಮೇಲೆ ನಮ್ಮ ಸಮಸ್ಯೆಗಳನ್ನು ನಾವು ಹೇಗೆ ನಿಭಾಯಿಸಬಲ್ಲೇವು ಎಂಬುದು ನಿರ್ಧಾರವಾಗುತ್ತದೆ ಎಂದು ದಯಾನಂದ ಸರ ಸ್ವತೀ ತಮ್ಮ ಅನುಭವದ ಉದಾಹರಣೆಗಳ ಮೂಲಕ ತಿಳಿಸುತ್ತಾ ಹೋಗುತ್ತಾರೆ. ಮನುಷ್ಯ ದಿನ ನಿತ್ಯ ಹೇಗೆಲ್ಲಾ ವರ್ತಿಸುತ್ತಾನೆ. ಅವನಿಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿ ಏನು ಮಾಡಬಹುದು ಎಂಬುದನ್ನು ಓದುಗರಿಗೆ ಈ ಪುಸ್ತಕದ ಮೂಲಕ ತಿಳಿಸುತ್ತಾರೆ ಲೇಖಕರು.

ಪ್ರೀತಿ ಭಟ್‌ ಗುಣವಂತೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ