ವ್ಯಾಯಾಮವಿಲ್ಲದ ಜೀವನಶೈಲಿ ಅಪಾಯ

ವಯಸ್ಸಿನ ಭೇದವಿಲ್ಲದೆ ಕಾಡುವ ಗಂಟು ನೋವು

Team Udayavani, Jan 28, 2020, 6:14 AM IST

ಸಾಮಾನ್ಯವಾಗಿ ಚಳಿಗಾಲದಲ್ಲಿ ಇತರೆ ದಿನಗಳಿಗಿಂತ ಹೆಚ್ಚಿನ ಮಂದಿ ಮಂಡಿ ನೋವು, ಬೆನ್ನು ನೋವು, ಸೊಂಟ ನೋವಿನಿಂದ ಬಳಲುತ್ತಾರೆ ಎಂದು ವರದಿಗಳು ಹೇಳುತ್ತವೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ರಕ್ತನಾಳಗಳು ಸಂಕೋಚಗೊಂಡು ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹಾಗಾಗಿ ಕೈ, ಕಾಲಿನ ಗಂಟುಗಳಿಗೆ ರಕ್ತ ಪರಿಚಲನೆಯು ಕಡಿಮೆಯಾಗಿ ನೋವುಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ಗಂಟು ನೋವುಗಳಲ್ಲಿ ಹಲವು ವಿಧ. ಕೆಲವು ವಿಧದ ಗಂಟು ನೋವುಗಳಿಗೆ ಕಿರಿಯರು, ಹಿರಿಯರು ಎಂಬ ಭೇದವಿಲ್ಲ. ಇನ್ನು ಕೆಲವು ಗಂಟು ನೋವುಗಳು ವಯಸ್ಸಾದಂತೆ ಕಾಣಿಸಿಕೊಂಡು ಹೆಚ್ಚುತ್ತಾ ಹೋಗುತ್ತವೆ. ಆರಂಭಿಕ ಹಂತದಲ್ಲಿಯೇ ನಿರ್ಲಕ್ಷ್ಯ ವಹಿಸದೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ, ವ್ಯಾಯಾಮ, ಚಿಕಿತ್ಸೆಗೆ ಪೂರಕವಾದ ಆಹಾರ ಸೇವನೆ, ಜೀವನಶೈಲಿ ಬದಲಾವಣೆಯಿಂದ ಗಂಟು ನೋವುಗಳಿಂದ ಮುಕ್ತರಾಗಬಹುದು ಇಲ್ಲವೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಸಾಮಾನ್ಯವಾಗಿ ಚಳಿಗಾಲದಲ್ಲಿ ಇತರೆ ದಿನಗಳಿಗಿಂತ ಹೆಚ್ಚಿನ ಮಂದಿ ಮಂಡಿ ನೋವು, ಬೆನ್ನು ನೋವು, ಸೊಂಟ ನೋವಿನಿಂದ ಬಳಲುತ್ತಾರೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ರಕ್ತನಾಳಗಳು ಸಂಕುಚಿತಗೊಂಡು ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹಾಗಾಗಿ ಗಂಟುಗಳಿಗೂ ರಕ್ತ ಪರಿಚಲನೆ ಕಡಿಮೆಯಾಗಿ ನೋವುಂಟಾಗುವ ಸಾಧ್ಯತೆಗಳು ಹೆಚ್ಚು.

ಗಂಟುಗಳ ನೋವಿಗೆ
ಸಾಮಾನ್ಯ ಕಾರಣ
ಇಂದು ದೈಹಿಕ ಶ್ರಮವುಳ್ಳ ಕೆಲಸಗಳನ್ನು ಮಾಡುವವರು ಕಡಿಮೆ. ಕಚೇರಿ ಗಳಲ್ಲಿ ಕೂತು ಕೆಲಸ ಮಾಡುವವರೇ ಹೆಚ್ಚು. ಮಾನಸಿಕ ಶ್ರಮವನ್ನೇ ಬಯಸುವ ಉದ್ಯೋಗಗಳು ಹೆಚ್ಚು. ಕೆಲಸದ ಒತ್ತಡದ ನಡುವೆ ತಮ್ಮ ದೈಹಿಕ ಚಟುವಟಿಕೆಯತ್ತ ಗಮನ ಕೊಡುವವರೂ ಕಡಿಮೆಯಾಗುತ್ತಿದ್ದಾರೆ. ನಡೆಯುವುದು, ಲಿಫ್ಟ್ ಬಳಕೆ ಮಾಡದೆ ಮೆಟ್ಟಿಲು ಹತ್ತುವುದು ಮೊದಲಾದ ಚಟುವಟಿಕೆಗಳು ನಿರ್ಲಕ್ಷಿಸಲ್ಪಟ್ಟಿವೆ. ಇವು ನಿಧಾನವಾಗಿ ವಿವಿಧ ರೀತಿಯ ದೈಹಿಕ ಸಮಸ್ಯೆಗೆ ಕಾರಣವಾಗುತ್ತದೆ. ಇದರಲ್ಲಿ ಒಂದು ಗಂಟು ನೋವು. ವಿವಿಧ ರೀತಿಯ ಗಂಟು ನೋವುಗಳಿಗೆ ನಿರ್ದಿಷ್ಟ ಕಾರಣವನ್ನು ತಪಾಸಣೆ ನಡೆಸಿಯೇ ಪತ್ತೆ ಹಚ್ಚಬಹುದು. ಎಲ್ಲ ರೀತಿಯ ಗಂಟು ನೋವುಗಳಿಗೂ ಪ್ರತ್ಯೇಕ ಕಾರಣವಿರಬಹುದು. ಹಾಗಾಗಿ ನಿರ್ಲಕ್ಷ್ಯ ಸಲ್ಲದು.

ಮಂಡಿನೋವು
ಮಂಡಿ ನೋವಿಗೆ ವಯಸ್ಸಿನ ಮಿತಿ ಇಲ್ಲ. ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಕಬ್ಬಿಣದ ಅಂಶ ಕಡಿಮೆಯಾಗಿ ಅಥವಾ ವಯಸ್ಸಾದವರಲ್ಲಿ ಸಾಮಾನ್ಯವಾಗಿರುವ ಮಾಂಸದ ಹರಿತ ಮೂಳೆಗಳ ಸವೆತದಿಂದ ಮಂಡಿ ನೋವು ಬರಬಹುದು. ಮೂಳೆಸಾಂದ್ರತೆಯಿಂದ ಇತ್ತೀಚಿನ ದಿನಗಳಲ್ಲಿ ಮಂಡಿನೋವು ಹೆಚ್ಚಿನವರಲ್ಲಿ ಕಂಡುಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ರುಮಟ್ಟಾಯ್ಡ ಸಂಧಿವಾತ (ಆಥೆùಟೀಸ್‌) ಸಾಮಾನ್ಯವಾಗಿದೆ ಎನ್ನುತ್ತಾರೆ ವೈದ್ಯರು. 20ರಿಂದ ಹಿಡಿದು ವಯಸ್ಕರವರೆಗೂ ಇದು ಕಂಡುಬರುತ್ತದೆ. ಜೀವನ ಶೈಲಿಯೂ ಇದಕ್ಕೆ ಕಾರಣ. ಕೈ ಮತ್ತು ಕಾಲಿನ ಕೀಲುಗಳಲ್ಲಿ ನೋವು, ಬಾವು ಕಾಣಿಸಿಕೊಳ್ಳುವುದು ಇದರ ಲಕ್ಷಣ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯದಿದ್ದರೆ ದೀರ್ಘ‌ಕಾಲಿಕ ನ್ಯೂನ್ಯತೆ ಉಂಟಾಗುವ ಅಪಾಯವಿದೆ. ಒತ್ತಡ, ಇನ್‌ಫೆಕ್ಷನ್‌, ಅನುವಂಶೀಯತೆ ಮೊದಲಾದವು ಇದಕ್ಕೆ ಕಾರಣ. ಗಂಟುಗಳಲ್ಲಿ 6 ವಾರಕ್ಕಿಂತ ಹೆಚ್ಚು ಕಾಲ ನೋವಿದ್ದರೆ ಅದು ರೂಮಟ್ಟಾಯ್ಡ ಆಥೆùಟೀಸ್‌ ಎನ್ನುವುದು ವೈದ್ಯರ ಅಭಿಪ್ರಾಯ. ವ್ಯಾಯಾಮ, ಮತ್ತು ಶಸ್ತ್ರಚಿಕಿತ್ಸೆ ಇದಕ್ಕೆ ಪರಿಹಾರ.

ವಿಟಮಿನ್‌ “ಡಿ’ ಮಹತ್ವ
ಸೂರ್ಯನ ಬಿಸಿಲಿನಿಂದ ನಮಗೆ ವಿಟಮಿನ್‌ “ಡಿ’ ದೊರೆಯುತ್ತದೆ. ಮೂಳೆಗಳು ಶಕ್ತಿಶಾಲಿಯಾಗಿರಲು ಮತ್ತು ದೇಹದ ಇತರೆ ಚಟುವಟಿಕೆಗಳಿಗೆ ವಿಟಮಿನ್‌ “ಡಿ’ ಅತ್ಯಗತ್ಯ. ಮುಂಜಾನೆ ಅಥವಾ ಸಂಜೆ ಸೂರ್ಯನ ಬಿಸಿಲಿನಲ್ಲಿ ನಿಲ್ಲುವುದು ಉತ್ತಮ. ವ್ಯಾಯಾಮ ಮಾಡುವುದರಿಂದ ದೇಹದ ತೂಕ ಕಡಿಮೆಯಾಗಿ ಕೀಲು ಮತ್ತು ಮೊಣಕಾಲುಗಳ ಸ್ನಾಯು ಶಕ್ತಿಯುತವಾಗುತ್ತವೆ. ಹಣ್ಣುಗಳು, ಧಾನ್ಯ, ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳನ್ನು ಹೇರಳವಾಗಿ ಸೇವಿಸುವುದು ಉತ್ತಮ. ಜತೆಗೆ ವಿಟಮಿನ್‌ “ಕೆ’, “ಡಿ’, ಮತ್ತು “ಸಿ’ ಅಂಶ ಹೇರಳವಾಗಿರುವ ಕಿತ್ತಳೆ ಹಣ್ಣು, ಪಾಲಕ್‌ ಸೊಪ್ಪು, ಎಲೆಕೋಸು ಮತ್ತು ಟೊಮೇಟೊದಂತಹ ಹಣ್ಣು ಮತ್ತು ತರಕಾರಿ ಹೆಚ್ಚು ಸೇವಿಸಿ ಎಂಬುದು ವೈದ್ಯರ ಸಲಹೆ.

ಹೀಗೆ ಕಾಡಬಹುದು ನೋವು
* ವ್ಯಾಯಾಮ, ನಡಿಗೆ ಸೇರಿದಂತೆ ದೈಹಿಕ ಚಟುವಟಿಕೆಗಳನ್ನು ಮಾಡದಿರುವುದು.
* ಅತಿಯಾದ ಜಿಮ್‌, ಹೆಚ್ಚಿನ‌ ಭಾರ ಎತ್ತುವಿಕೆ ಇತ್ಯಾದಿಯಿಂದಲೂ ಕಾಲಕ್ರಮೇಣ ಗಂಟುನೋವು ಬರಬಹುದು.
* ಅಪಘಾತ ಅಥವಾ ಇತರ ಬಲವಾದ ಹೊಡೆತ ಬಿದ್ದಾಗ ಅದು ಗಂಟುನೋವಿಗೆ ಕಾರಣವಾಗುತ್ತದೆ.
ಮುನ್ನೆಚ್ಚರಿಕೆಗಳೇನು?
* ಕಂಫ‌ರ್ಟ್‌ ಎನಿಸುವ, ನಡೆದಾಡುವಾಗ ದೇಹಕ್ಕೆ ಯಾವುದೇ ರೀತಿಯಲ್ಲಿಯೂ ಅಹಿತವೆನಿಸದ ಶೂ/ ಚಪ್ಪಲಿಗಳನ್ನೇ ಸದಾ ಧರಿಸಿ.
* ಹೈ ಹೀಲ್ಡ್‌ ಚಪ್ಪಲಿಗಳನ್ನು ದೀರ್ಘ‌ ಸಮಯ ಧರಿಸದಿರುವುದು ಉತ್ತಮ.
* ದೈಹಿಕ ಶ್ರಮದ ಕೆಲಸಗಳನ್ನು ಏಕಾಏಕಿ ಮಾಡದಿರಿ.
* ಜಡ ಜೀವನಶೈಲಿ ತೊರೆದು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಿ.
* ನಡೆಯುವಾಗ, ಕುಳಿತುಕೊಳ್ಳುವಾಗ, ಕೆಲಸ ಮಾಡುವಾಗ, ವಾಹನ ಚಾಲನೆ ಮಾಡುವಾಗ ನಿಮ್ಮ ದೇಹದ ಸ್ಥಿತಿಯ ಬಗ್ಗೆ ಗಮನ ಕೊಡಿ.
* ಸಾಧ್ಯವಾದಷ್ಟು ನಡೆಯಿರಿ ಮತ್ತು ಇಲವೇಟರ್‌ಗಳನ್ನು ಬಳಸದೆ ಮೆಟ್ಟಿಲು ಹತ್ತಿ ಇಳಿಯಿರಿ.
* ಕ್ಯಾಲ್ಸಿಯಂ ಮತ್ತು ವಿಟಮಿನ್‌ “ಡಿ’ ಅಧಿಕವಾಗಿರುವ ಆಹಾರಗಳನ್ನು ಸೇವಿಸಿ.
* ವಜ್ರಾಸನ ಅಭ್ಯಾಸ ಕೂಡ ಮೊಣಕಾಲು ನೋವು, ಪಾದಗಳ ಗಂಟಿನ ನೋವು, ಕಾಲುಗಳ ಸೆಳೆತ ಮೊದಲಾದವುಗಳನ್ನು ನಿವಾರಿಸಲು ಸಹಕಾರಿ. ಇದರಿಂದ ಬೆನ್ನುನೋವು, ಸೆಳೆತ ಕಡಿಮೆಯಾಗುತ್ತದೆ.

– ಸಂತೋಷ್‌ ಬೊಳ್ಳೆಟ್ಟು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ