- Wednesday 11 Dec 2019
ಬಹೂಪಯೋಗಿ ಪೇರಳೆ
Team Udayavani, Aug 13, 2019, 5:02 AM IST
ಪೇರಳೆ ನಮ್ಮ ಹಳ್ಳಿಗಳಲ್ಲಿ ಸಾಧಾರಣವಾಗಿ ಕಾಣ ಸಿಗುವ ಒಂದು ಹಣ್ಣು. ಎಲ್ಲ ಹವಾಮಾನಗಳಲ್ಲಿ ಬೆಳೆಯುವುದರಿಂದ ಇದು ಎಲ್ಲ ಸಮಯಗಳಲ್ಲಿ ಸಿಗುತ್ತದೆ. ಪೇರಳೆ ಹಣ್ಣು ಆರೋಗ್ಯಕ್ಕೆ ಉತ್ತಮ. ಇದರ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಕೇವಲ ಹಣ್ಣು ಮಾತ್ರವಲ್ಲ ಇದರ ಎಲೆಯೂ ಆರೋಗ್ಯಕ್ಕೆ ಉತ್ತಮ.
ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಧಾರಾಳವಾಗಿದ್ದು ಇದು ದೇಹಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಪೊಟಾಶಿಯಂ ಹಾಗೂ ಫೈಬರ್ನ ಅಂಶವೂ ಇದರಲ್ಲಿದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ
ಪೇರಳೆ ಹಣ್ಣಿನ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವಾಗುತ್ತದೆ. ಹೃದಯದ ಆರೋಗ್ಯವನ್ನು ಹೆಚ್ಚಿಸಲು ಪೇರಳೆ ಹಣ್ಣು ಸಹಕಾರಿ. ಪೇರಳೆ ಹಣ್ಣನ್ನು ದಿನನಿತ್ಯ ಸೇವಿಸುವುದರಿಂದ ಹಾಗೂ ಪೇರಳೆ ಎಲೆಯ ಕಷಾಯವನ್ನು ಸತತವಾಗಿ ಸೇವಿಸುವುದು ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ಪೇರಳೆ ಎಲೆಯ ಚಿಗುರನ್ನು ಪ್ರತಿನಿತ್ಯ ಬೆಳಗ್ಗೆ ಎರಡರಿಂದ ಮೂರು ಸೇವಿಸುವುದರಿಂದ ದೇಹದಲ್ಲಿನ ಪಿತ್ತ ಕಡಿಮೆಯಾಗುತ್ತದೆ. ಉಷ್ಣ ದೇಹ ಪ್ರಕೃತಿಯವರು ಪೇರಳೆ ಹಣ್ಣು ಸೇವಿಸುವುದರಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ.
ಪೇರಳೆ ಹಣ್ಣು ಪಚನಕ್ರಿಯೆಗೆ ಸಹಕಾರಿ. ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಪೇರಳೆ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಪೇರಳೆ ಹಣ್ಣು ಮತ್ತು ಎಲೆಗಳಲ್ಲಿರುವ ಫೈಬರ್ ಅಂಶವು ದೇಹದಲ್ಲಿ ಡಯಾಬಿಟಿಸ್ ಪ್ರಮಾಣ ಹೆಚ್ಚುವುದನ್ನು ತಡೆಗಟ್ಟುತ್ತದೆ. ಅಥವಾ ಡಯಾಬಿಟಿಸ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಪೇರಳೆ ಎಲೆಯನ್ನು ಸೇವಿಸುವುದರಿಂದ ಅಥವಾ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ದೇಹದ ಭಾರವನ್ನು ಕಡಿಮೆ ಮಾಡಬಹುದು.
ಪೇರಳೆ ಹಣ್ಣನ್ನು ಸೇವನೆ ಮಾಡುವುದರಿಂದ ಚರ್ಮಕ್ಕೆ ಹೊಳಪು ಉಂಟಾಗುತ್ತದೆ. ಇದರಲ್ಲಿರುವ ವಿಟಮಿನ್ಗಳು ದೇಹದ ಕಾಂತಿ ವೃದ್ಧಿಗೆ ಸಹಕಾರಿ. ಈ ಹಣ್ಣಿ ನಲ್ಲಿ ವಿಟಮಿನ್ ಎ ಕೂಡಾ ಧಾರಾಳವಾಗಿ ಇದೆ. ಇದು ಕಣ್ಣಿನ ದೃಷ್ಟಿ ಹೆಚ್ಚಳಕ್ಕೆ ಸಹಕಾರಿ. ಕಣ್ಣಿನ ದೃಷ್ಟಿ ಕಡಿಮೆಯಾಗುವುದನ್ನು ತಡೆಯುವುದು ಮಾತ್ರವಲ್ಲ ಕಡಿಮೆಯಾದ ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಳಕ್ಕೆ ಇದು ಸಹಕಾರಿ.
ಈ ವಿಭಾಗದಿಂದ ಇನ್ನಷ್ಟು
-
ವ್ಯಾಯಾಮ ಮಾಡುವುದರಿಂದ ಬೊಜ್ಜು ಕರಗುತ್ತದೆ. ಆದರೆ ಸ್ಟ್ರೆಚ್ ಮಾರ್ಕ್ ಮೂಡುತ್ತದೆ ಎನ್ನುವುದು ಬಹುತೇಕರ ಅಳಲು. ಮಾತ್ರವಲ್ಲ ಪ್ರಸವದ ನಂತರ ಹೊಟ್ಟೆಯಲ್ಲಿ...
-
ವ್ಯಾಯಾಮಗಳಲ್ಲಿ ಹೊಸ ಹೊಸ ಟ್ರೆಂಡ್ಗಳು ಬರುತ್ತಾ ಇರುತ್ತಿವೆ. ಹಾಗೇ ಸೌಂದರ್ಯಪ್ರಿಯರು ಕೂಡ ದೇಹವನ್ನು ಕಟ್ಟುಮಸ್ತಾಗಿ ಇಡಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಲ್ಲೇ...
-
ಸೌಂದರ್ಯದ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ? ಹುಡುಗಿರೇ ಇರಲಿ, ಹುಡುಗರೇ ಇರಲಿ ಎಲ್ಲರಲ್ಲಿಯೂ ಸೌಂದರ್ಯ ಪ್ರಜ್ಞೆ ಇದ್ದೇ ಇರುತ್ತದೆ. ದಿನದಿಂದ ದಿನಕ್ಕೆ ಸೌಂದರ್ಯ...
-
ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಸ್ತ್ರೀ ಮತ್ತು ಪುರುಷರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಕೂದಲು ಉದುರಲು ಅನೇಕ ಕಾರಣಗಳಿವೆ....
-
ಇತರೆ ದಿನಗಳಿಗಿಂತ ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಹಿಳೆಯರು ವಿವಿಧ ಟಿಪ್ಸ್ ಬಳಸಿಕೊಂಡು ತಮ್ಮ ತ್ವಚೆಯನ್ನು...
ಹೊಸ ಸೇರ್ಪಡೆ
-
ಬದುಕಿನಲ್ಲಿ ಯಾರೂ ಹುಟ್ಟುತ್ತಲೇ ಸಾಧಕರಾಗಲ್ಲ. ಎಲ್ಲರೂ ಆಯಾ ಪರಿಸ್ಥಿತಿಯಲ್ಲಿ ಕುಂಟುತ್ತಾ, ಈಜುತ್ತಾ, ಬೀಳುತ್ತಾ,ಓಡುತ್ತಾ ಸಾಧಕರಾಗುವುದು. ಎಲ್ಲರೊಳಗೊಂದು...
-
ರಾಂಚಿ: ಮಾಂಸದ ಅಡುಗೆ ಮಾಡುತ್ತಿದ್ದ ಮನೆಗೆ ನುಗ್ಗಿದ್ದ ಹುಲಿ ಮಹಿಳೆ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಜಾರ್ಖಂಡ್ ನ ರಾಮ್ ಕಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
-
ರಾಯಚೂರು: 1995ರಿಂದ ಆರಂಭಗೊಂಡ ಎಲ್ಲ ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ವೇತನಾನುದಾನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ...
-
ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘೀ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆರೋಗ್ಯ...
-
ಬೀದರ: ಜನಸಾಮಾನ್ಯರಲ್ಲಿ ಭಾರತದ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಲು ಇಬ್ಬರು ಮಹಿಳೆಯರು ರಾಜಧಾನಿ ಬೆಂಗಳೂರಿನಿಂದ ಹಮ್ಮಿಕೊಂಡಿದ್ದ ಸೈಕಲ್ ಯಾತ್ರೆಯು ಮಂಗಳವಾರ...