ಅಸ್ತಮಾ ನಿವಾರಣೆಗೆ ನೈಸರ್ಗಿಕ ವಿಧಾನ

Team Udayavani, Jul 16, 2019, 5:05 AM IST

ಉಸಿರಾಟದ ತೊಂದರೆ ಇಂದಿನ ಸಾಮಾನ್ಯ ಸಮಸ್ಯೆ. ಅಸ್ತಮಾ ಅಥವ ಉಬ್ಬಸ ಎಂದು ಕರೆಯಲ್ಪಡುವ ಈ ಉಸಿರಾಟದ ಸಮಸ್ಯೆಗಳು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತವೆ.

ಆರೋಗ್ಯ ಸಮಸ್ಯೆ ಕಂಡು ಬರುವಾಗ ಪ್ರತಿಯೊಬ್ಬರೂ ಇಂಗ್ಲೀಷ್‌ ಮದ್ದನ್ನು ಅಧಿಕವಾಗಿ ಅವಲಂಬಿಸುತ್ತಾರೆ. ಆದರೆ ಕೆಲವೊಂದು ಬಾರಿ ನೈಸರ್ಗಿಕ ಮದ್ದುಗಳಿಂದ ರೋಗಗಳಿಗೆ ಪರಿಹಾರ ಸಿಗುತ್ತವೆ.
·  ಸಾಸಿವೆ ಎಣ್ಣೆಯಿಂದ ಅಸ್ತಮಾ ಉಂಟಾದಾಗ ಪರಿಹಾರ ಲಭಿಸುತ್ತವೆ. ಎದೆ ಭಾಗಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡುವುದರಿಂದ ಸ್ವಲ್ಪ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.
·  ಒಣ ಅಂಜೂರದ ಹಣ್ಣನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಸೇವಿಸುವುದರಿಂದ ಹಾಗೂ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಅಸ್ತಮಾ ರೋಗ ಕ್ರಮೇಣ ನಿವಾರಣೆಯಾಗುತ್ತದೆ.
·  ಚಾ ವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಅದರ ಬದಲಿಗೆ ಕಾಫಿ, ಅಥವಾ ಬ್ಲ್ಯಾಕ್‌ ಟೀ ಸೇವಿಸುವುದು ಉತ್ತಮ. ಇವುಗಳು ಸುಲಭ ಉಸಿರಾಟಕ್ಕೆ ಸಹಕಾರಿ.
·  ಯಾವುದೇ ಔಷಧಗಳ ಸಹಾಯವಿಲ್ಲದೆ ರೋಗ ಗುಣಪಡಿಸುವ ಸಾಮರ್ಥ್ಯವಿರುವ ಆಕ್ಯುಪಂಕ್ಚರ್‌ ಚಿಕಿತ್ಸೆಯನ್ನು ಅಸ್ತಮಾ ರೋಗಗಳಿಗೆ ಬಳಸಬಹುದು.
·  ಯೋಗ ಅಥವಾ ವ್ಯಾಯಾಮ ಮಾಡುವುದರಿಂದ ಅಸ್ತಮಾವನ್ನು ನಿಯಂತ್ರಿಸಬಹುದು. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮವನ್ನು ಮಾಡುವುದು ಹೆಚ್ಚು ಸೂಕ್ತ.
·  ನಿಧಾನವಾಗಿ ಉಸಿರಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಅಸ್ತಮಾ ರೋಗವು ಕೇವಲ ಉಸಿರಾಟಕ್ಕೆ ಸಂಬಂಧಿಸಿದ್ದಾಗಿದೆ. ಆಹಾರ ಹಾಗೂ ದೇಹದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ರಥಮ ಚಿಕಿತ್ಸೆ ಕೌಶಲ ಪ್ರತಿಯೊಬ್ಬರೂ ಕಲಿಯಲೇಬೇಕಾದುದು. ಏಕೆಂದರೆ, ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ಪ್ರತಿಯೊಬ್ಬರಿಗೂ ಇದರ ಅಗತ್ಯ ಬೀಳಬಹುದು. ಈ ಬಗ್ಗೆ...

  • ನಾವು ಸೌಂದರ್ಯಕ್ಕಾಗಿ ಏನೆಲ್ಲ ಮಾಡುತ್ತೇವೆ. ಬಗೆ ಬಗೆಯ ಸೌಂದರ್ಯ ವರ್ಧಕಗಳನ್ನು ಬಳಸುತ್ತೇವೆ. ಆದರೆ ನೈಸರ್ಗಿಕವಾಗಿಯೂ ಸೌಂದರ್ಯ ಪಡೆದುಕೊಳ್ಳಬಹುದು. ಇದಕ್ಕೆ...

  • ಪುರಾತನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಭಾರತೀಯರು ತಮ್ಮ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ. ಆಯುರ್ವೇದದಲ್ಲಿ ಇದರ ಔಷಧೀಯ ಗುಣಗಳನ್ನು ತಿಳಿಸಲಾಗಿದೆ....

  • ಬಹಳ ಹಿಂದೆ ಹರಳೆಣ್ಣೆ ಅಡುಗೆಯಿಂದ ಹಿಡಿದು ಸೌಂದರ್ಯ ಪೋಷಣೆಗೂ ಸಹ ದಿನನಿತ್ಯ ಬಳಸುತ್ತಿದ್ದರಂತೆ. ಇದು ಸಾಮಾನ್ಯ ಎಣ್ಣೆಯೆಂದು ಭಾವಿಸದೇ ಇದರಲ್ಲಿರುವ ನೈಸರ್ಗಿಕ...

  • ಯಾವುದೇ ವ್ಯಕ್ತಿಯೇ ಆದರೂ ಎಲ್ಲದಕ್ಕಿಂತ ಆರೋಗ್ಯ ಬಹಳ ಮುಖ್ಯ. ವಾತಾವರಣದ ಬದಲಾವಣೆ, ಹೊರಗಿನ ಧೂಳು, ಹಗಲೆಲ್ಲಾ ವಾಹನದ ಹೊಗೆ, ಹಾನಿಕಾರಕ ವಿಷಾನಿಲಗಳು ಬೆರೆತ ಗಾಳಿ...

ಹೊಸ ಸೇರ್ಪಡೆ