ಆರೋಗ್ಯವಂತರಾಗಿರಲು ನಿದ್ದೆ ಅವಶ್ಯ


Team Udayavani, Feb 5, 2019, 4:45 AM IST

yogakshema.jpg

ಮನುಷ್ಯನಿಗೆ ನಿದ್ದೆ ಎನ್ನುವುದು ಅಮೃತವಿದ್ದಂತೆ. ಇದು ಪ್ರತಿ ದಿನ ಆತನಿಗೆ ಹೊಸ ಹುಮ್ಮಸ್ಸನ್ನು ನೀಡುತ್ತದೆ.ಆದರೆ ಇಂದು ಕೆಲಸದ ಒತ್ತಡದಿಂದ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಾರೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ದಿನ ನಿತ್ಯ ಕೆಲಸದ ಮಧ್ಯೆ ನಿರ್ದಿಷ್ಟ ಸಮಯವನ್ನು ಮೀಸಲಿಟ್ಟು ಹಾಯಾಗಿ ನಿದ್ದೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಇಂದು ನಿದ್ದೆಗಿಂತ ಜಾಸ್ತಿ ಕೆಲಸಕ್ಕೆ ಮಹತ್ವ ಕೊಡುವ ಮಂದಿ ಅನೇಕರು. ಕೆಲಸಗಳ ಒತ್ತಡದ ನಡುವೆ ನಿದ್ರೆ ಬರುವುದಿಲ್ಲ ಎಂದು ಹೇಳುವ ವರ್ಗವೂ ಕೂಡ ಇದೆ. ಹಾಗಂತ ನಿದ್ರೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ನಿದ್ರಾಹೀನತೆಯಿಂದ ವಿವಿಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಮನುಷ್ಯ ದೀರ್ಘಾಯುಷಿಯಾಗಲು ಮತ್ತು ಆರೋಗ್ಯವಂತವಾಗಿರಲು ನಿದ್ರೆ ಕೂಡ ಅತೀ ಆವಶ್ಯಕ.

ಕನಿಷ್ಠ 8 ಗಂಟೆ ನಿದ್ದೆ
ನಿದ್ರೆಯು ಮನುಷ್ಯನ ವಯಸ್ಸನ್ನು ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ವಯಸ್ಕರಿಗಿಂತ ಹೆಚ್ಚಾಗಿ ನಿದ್ದೆಯ ಆವಶ್ಯಕತೆ ಮಕ್ಕಳಿಗೆ ಇದೆ. ನವಜಾತ ಶಿಶುಗಳು 18 ತಾಸು, ಒಂದು ವರ್ಷದ ಮಗು 14 ತಾಸು ನಿದ್ರಿಸಬೇಕು. ವಯಸ್ಕರಿಗೆ ಕನಿಷ್ಠ 8 ತಾಸುಗಳ ನಿದ್ದೆ ಅಗತ್ಯ. ಸಮರ್ಪಕವಾಗಿ ನಿದ್ದೆ ಇಲ್ಲದಿದ್ದರೆ ಮಾನಸಿಕ ಒತ್ತಡ ಕಾಣಿಸಿಕೊಳ್ಳುತ್ತದೆ. ರಕ್ತನಾಳಗಳು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮುಖದ ಚಹರೆಯಲ್ಲಿಯೂ ಒಣಗಿದಂತೆ ಕಾಣಿಸಿಕೊಳ್ಳುತ್ತದೆ. ಮಲಗುವ ಭಂಗಿ

ಕುರಿತು ಎಚ್ಚರವಿರಲಿ
ಮಲಗುವ ಭಂಗಿ ಕೂಡ ಅನಾರೋಗ್ಯಕ್ಕೆ ಎಡೆಮಾಡಿಕೊಡಬಹುದು. ಸರಿಯಾದ ಭಂಗಿಯಲ್ಲಿ ಮಲಗದಿದ್ದರೆ ಬೆನ್ನು ನೋವು, ಕುತ್ತಿಗೆ ನೋವು, ಹೊಟ್ಟೆಯಲ್ಲಿ ಸಮಸ್ಯೆ, ಅವಧಿಗೂ ಮುನ್ನ ವೃದ್ಧಾಪ್ಯ ಬರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮುಕ್ತಿ ಪಡೆಯಲು ಸರಿಯಾದ ಭಂಗಿಯಲ್ಲಿ ಮಲಗುವುದನ್ನು ಮೈಗೂಡಿಸಬೇಕು. ಬೆನ್ನು ಹುರಿಗೆ ಹಾಸಿಗೆ ಸರಿಯಾಗಿ ಆಧಾರ ನೀಡುವಂತೆ ಮಲಗಬೇಕು. ಹಾಸಿಗೆ ಮೇಲೆ ನೇರವಾಗಿ ಮಲಗುವುದನ್ನು ರೂಢಿ ಮಾಡಬೇಕು.

ತಲೆದಿಂಬು ಬಳಕೆ ಒಳ್ಳೆಯದಲ್ಲ
ಹೆಚ್ಚಿನ ಮಂದಿಗೆ ತಲೆದಿಂಬು ಇಲ್ಲದೆ ಮಲಗಿದರೆ ನಿದ್ದೆ ಬರುವುದಿಲ್ಲ ಎಂಬ ಸಮಸ್ಯೆ ಇರುತ್ತದೆ. ಹಾಗಂತ ಎತ್ತರದ ತಲೆದಿಂಬು ಬಳಕೆ ಒಳ್ಳೆಯದಲ್ಲ. ಏಕೆಂದರೆ ಬೆಳಗ್ಗೆ ಏಳುವಾಗ ಕುತ್ತಿಗೆ ನೋವಿಗೆ ಕಾರಣವಾಗಬಹುದು. ಆದ್ದರಿಂದ ತೆಳ್ಳಗಿನ ದಿಂಬು ಬಳಸಿ ಮಲಗುವುದು ಉತ್ತಮ. ಕೇವಲ ಒಂದು ಬದಿಗೆ ಮಲಗುವ ಅಭ್ಯಾಸ ಅನೇಕರಿಗಿರುತ್ತದೆ. ಬಲ ಮಗ್ಗುಲಲ್ಲಿ ಮಲಗುವುದಕ್ಕಿಂತಲೂ ಎಡ ಮಗ್ಗುಲಲ್ಲಿ ಮಲಗುವುದು ಉತ್ತಮ. ಕವುಚಿ ಮಲಗುವ ಭಂಗಿ ಸರಿಯಾದ ಕ್ರಮವಲ್ಲ. ಈ ರೀತಿ ಮಲಗಿದರೆ, ಬೆನ್ನು ಹುರಿಗೆ ಸೂಕ್ತವಾದ ಆಧಾರ ದೊರಕದೆ ಒತ್ತಡ ಬೀಳುತ್ತದೆ. ಇದರಿಂದ ಬೆನ್ನು ನೋವು, ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ.

ನಿದ್ರಾಹೀನತೆಯನ್ನು ನಿರ್ಲಕ್ಷಿಸದಿರಿ
ಕೆಲವರಿಗೆ ಎಷ್ಟೇ ಹೊತ್ತು ಮಲಗಿದರೂನಿದ್ದೆ ಬರುವುದಿಲ್ಲ. ರಾತ್ರಿಯಿಡೀ ನಿದ್ದೆ ಬಾರದೆ ಒದ್ದಾಡಿ ಮುಂಜಾನೆ ಸಮಯ ಸ್ವಲ್ಪ ಹೊತ್ತು ನಿದ್ದೆಗೆ ಜಾರುವ ಮಂದಿ ಕೂಡ ಇದ್ದಾರೆ. ಈ ಸಮಸ್ಯೆಯನ್ನು ನಿರ್ಲಕ್ಷಿಸದೆ, ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಿದ್ರಾಹೀನತೆಯು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಮಾನಸಿಕ ಆರೋಗ್ಯದ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಖನ್ನತೆ ಕಾಡಲು ಪ್ರಾರಂಭವಾಗುತ್ತದೆ.

ನಿದ್ದೆ ಬಾರದೆ ಇದ್ದರೆ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯ ಕ್ರಮವಲ್ಲ. ಇದರಿಂದ ಹಲವು ರೋಗಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಅದರ ಬದಲಾಗಿ ಮನೆಮದ್ದು ಮಾಡಿದರೆ ಯಾವುದೇ ದುಷ್ಪರಿಣಾಮವಿಲ್ಲ. ಸ್ವಲ್ಪ ಬೆಚ್ಚಗಿನ ಎಣ್ಣೆಯಿಂದ ತಲೆಗೆ ಮತ್ತು ಪಾದಕ್ಕೆ ಮಸಾಜ್‌ ಮಾಡಿದರೆ ಬೇಗ ನಿದ್ದೆ ಬರುತ್ತದೆ.

ಮಲಗುವ ಮುನ್ನ ಹೊಟ್ಟೆ ತುಂಬ ಊಟ ಬೇಡ
ಮಲಗುವ ಮೊದಲು ಹೊಟ್ಟೆ ತುಂಬ ತಿನ್ನುವುದು ಕೂಡ ಸರಿಯಲ್ಲ. ಮಲಗಲು ಸುಮಾರು ಒಂದು ಗಂಟೆ ಇರುವಾಗಲೇ ಊಟ ಮಾಡಿ. ಬಳಿಕ ಮಲಗಿದರೆ ಜೀರ್ಣಕ್ರಿಯೆಯೂ ಸರಿಯಾಗಿ ಆಗುತ್ತದೆ.

ಮೆದುಳಿನ ಕಾಯಿಲೆ
ಕಡಿಮೆ ಸಮಯ ನಿದ್ರಿಸುತ್ತಿದ್ದರೆ, ಮೆದುಳು ಸಂಬಂಧಿ ರೋಗ, ನರರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಈ ಹಿಂದೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಇಟೆಲಿಯ ಮಾರ್ಕೆ ಪಾಲಿಟೆಕ್ನಿಕ್‌ ವಿವಿಯ ಸಂಶೋಧಕರು ಈಗಾಗಲೇ ಸಂಶೋಧನೆಯೊಂದನ್ನು ನಡೆಸಿದ್ದು, ಎರಡು ಇಲಿಗಳ ನಡುವೆ ಪ್ರಯೋಗ ಮಾಡಿದ್ದರೆ ಅದರಲ್ಲಿ ಕಡಿಮೆ ನಿದ್ರಿಸಿದ ಇಲಿಯ ಮಿದುಳಿನ ಪ್ರಮುಖ ಸೆಲ್‌ಗ‌ಳಿಗೆ ಹಾನಿಯಾಗಿತ್ತು.

ಮಲಗುವ ಕೋಣೆ ಶುಚಿಯಾಗಿರಲಿ
ಸುಖವಾದ ನಿದ್ದೆಗೆ ಮಲಗುವ ಕೋಣೆಯ ಶುಚಿ ಕೂಡ ಮುಖ್ಯ. ಕೆಲವೊಬ್ಬರು ಹಾಸಿಗೆಯಲ್ಲಿಯೇ ಲ್ಯಾಪ್‌ಟಾಪ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಇಟ್ಟಿರುತ್ತಾರೆ. ಮಲಗುವ ಕೋಣೆ ಎಂದಿಗೂ ನಿಶ್ಯಬ್ಧವಾಗಿರಬೇಕು. ಮಲಗುವ ಕೋಣೆಯಲ್ಲಿ ಶಬ್ದಬಾರದ ಗಡಿಯಾರವಿರಬೇಕು.

ಮಾನಸಿಕ ಖನ್ನತೆಗೂ ಕಾರಣ
ವ್ಯಕ್ತಿ ನಿದ್ರಾಹೀನತೆಗೆ ಒಳಗಾದಾಗ ಏಕಾಗ್ರತೆ ಕಡಿಮೆಯಾಗಬಹುದು. ಜ್ಞಾಪಕ ಶಕ್ತಿಯ ಕೊರತೆ ಕೂಡ ಕಾಣಿಸಿಕೊಳ್ಳಬಹುದು. ವೈವಾಹಿಕ ಸಂಬಂಧಗಳಲ್ಲಿ ತೊಂದರೆ, ಕೆಲಸಗಳಲ್ಲಿ ನಿರಾಸಕ್ತಿಯೂ ಉಂಟಾಗಬಹುದು. ನಿದ್ರಾಹೀನತೆ ತುಂಬಾ ಸಮಯದವರೆಗೆ ಇದ್ದಾಗ ಮಾನಸಿಕ ಖನ್ನತೆಗೆ ಒಳಗಾಗುವ ಸಾಧ್ಯತೆಯೂ ಅಧಿಕ.
– ಡಾ| ರಕ್ಷಿತ್‌ ಕೆದಂಬಾಡಿ, ವೈದ್ಯರು

•••••ನವೀನ್‌ ಭಟ್ ಇಳಂತಿಲ

ಟಾಪ್ ನ್ಯೂಸ್

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

4araga

ರಾಜ್ಯದ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ದವಾಗಿದೆ: ಆರಗ ಜ್ಞಾನೇಂದ್ರ

24

ಕುಣಿಗಲ್: ಭಿಕ್ಷಾಟನೆ; ಮೂರು ಮಂದಿ ರಕ್ಷಣೆ

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

3arrest

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಮಂದಿಗೆ ವಂಚನೆ; ನಾಲ್ವರು ಅರೆಸ್ಟ್‌

1-ddssadsa

ಶಸ್ತ್ರಾಸ್ತ್ರ ಸಾಗಾಟ:ಜಮ್ಮು-ಕಾಶ್ಮೀರ ಜೈಲಿನಲ್ಲಿ ಶಂಕಿತ ಉಗ್ರ ಹೃದಯಾಘಾತದಿಂದ ಸಾವು

ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನ

ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

ದೊಡ್ಡಾಟಕ್ಕೆಸಹಾಯ ಧನ ನೀಡಲು ಮನವಿ

25

ಖಾಸಗಿ ಶಾಲೆಯಲ್ಲಿ ರಾಖಿ ರಾದ್ಧಾಂತ: ಪ್ರತಿಭಟನೆ

4araga

ರಾಜ್ಯದ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ದವಾಗಿದೆ: ಆರಗ ಜ್ಞಾನೇಂದ್ರ

24

ಕುಣಿಗಲ್: ಭಿಕ್ಷಾಟನೆ; ಮೂರು ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.