ಕಣ್ಣಿನ ಪೊರೆ ನಿವಾರಣೆಗೆ ವರದಾನ ಫೇಕೊ ಇಮಲ್ಸಿಫಿಕೇಶನ್‌

Team Udayavani, Jul 23, 2019, 5:00 AM IST

ಡಾ| ಚಾಲ್ಸ್ರ್ ಕೆಲ್ಮನ್‌ ಕ್ಯಾಟರ್ಯಾಕ್ಟ್ ಆದ ಕಣ್ಣಿನ ಮಸೂರದಿಂದ ಕ್ಯಾಟರ್ಯಾಕ್ಟ್ ಪೀಡಿತ ಭಾಗವನ್ನು ಕರಗಿಸಿ ಅತೀ ಸೂಕ್ಷ್ಮ ಗಾಯದ ಮೂಲಕ ಹೊರತೆಗೆಯುವ ಆವಿಷ್ಕಾರ ಮಾಡಿದರು. ಹಾಗಾಗಿ ಅವರನ್ನು ಫೇಕೊ ಇಮಲ್ಸಿಫಿಕೇಶನ್‌ ಚಿಕಿತ್ಸೆಯ ಪಿತಾಮಹ ಎಂದು ಕರೆಯಲಾಗುತ್ತದೆ.

ಈ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾಟರ್ಯಾಕ್ಟ್ ಅಥವಾ ಪೊರೆಯಿಂದ ಮಸುಕಾದ ಲೆನ್ಸನ್ನು ಅಲಾó ಸೌಂಡ್‌ ಸಾಧನ ಬಳಸಿ ಕರಗಿಸಲಾಗುತ್ತದೆ. ಬಳಿಕ ಇಂಜಕ್ಟರನ್ನು ಉಪಯೋಗಿಸಿ ಅದೇ ಜಾಗದಲ್ಲಿ ಹೊಸ ಮಡಚಬಹುದಾದ ಮಸೂರವನ್ನು ಅಳವಡಿಸಲಾಗುವುದು. ಈಗ ಲಭ್ಯವಿರುವ ಸಾಧನಗಳ ಮೂಲಕ ಕೇವಲ 2.2 ಮಿ.ಮೀ. ಅಥವಾ ಅದಕ್ಕಿಂತಲೂ ಕಿರಿದಾದ ಗಾಯದ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ನಡೆಸಬಹುದು. ಇನ್ನೊಂದು ವೈಶಿಷ್ಟ್ಯವೆಂದರೆ, ಇದರಲ್ಲಿ ಆಪ್ಟಿಕಲ್ ಸೆನ್ಸರ್‌ ಇರುವುದರಿಂದ ಈ ಶಸ್ತ್ರಚಿಕಿತ್ಸೆ ಅತ್ಯಂತ ಸುರಕ್ಷಿತ. ಅತಿ ಸೂಕ್ಷ್ಮ ಗಾಯವಾದುದರಿಂದ ರೋಗಿ ಬಹಳ ಉತ್ತಮ ದೃಷ್ಟಿ ಪಡೆಯಲು ಸಾಧ್ಯ.

ಶಸ್ತ್ರಚಿಕಿತ್ಸೆ ನಡೆಸಿದ ಕೆಲವೇ ತಾಸುಗಳಲ್ಲಿ ಮನೆಗೆ ಹೋಗಬಹುದು. ಇದು ರೋಗಿಗಳ ಸಮಯವನ್ನು ಉಳಿಸುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದವರು ಬೇಗನೆ ದೈನಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಮೊದಲ ಶಸ್ತ್ರಚಿಕಿತ್ಸೆ
ಸರ್‌ ಹೆರಾಲ್ಡ್ ರಿಡ್ಲೆ ಎಂಬ ನೇತ್ರ ಶಸ್ತ್ರಚಿಕಿತ್ಸಕ ಪ್ರಪ್ರಥಮವಾಗಿ ಕಣ್ಣಿನ ಒಳಗಿನ ಪೊರೆ ತೆಗೆದು ಅದೇ ಜಾಗದಲ್ಲಿ ಹೊಸ ಮಸೂರ ಅಳವಡಿಸಿದರು. ಇದಕ್ಕೆ ಇಂಟ್ರಾ ಓಕ್ಯುಲರ್‌ ಲೆನ್ಸ್‌ ಎನ್ನುತ್ತಾರೆ. ಈಗ ಹೊಸ ತರಹದ ಮಡಚಬಲ್ಲ ಮಸೂರಗಳು ಬಂದಿವೆ. ಎಸ್ಪೆರಿಕ್‌ ಲೆನ್ಸ್‌ ಬಳಸುತ್ತೇವೆ. ದೃಷ್ಟಿ ಮಂಜಾಗಿದ್ದಲ್ಲಿ ಟೋರಿಕ್‌ ಲೆನ್ಸನ್ನು ಬಳಸಬಹುದು. ದೂರ ಮತ್ತು ಹತ್ತಿರದ ದೃಶ್ಯಗಳನ್ನು ನೋಡಲು ಮಲ್ಟಿಫೋಕಲ್ ಲೆನ್ಸನ್ನು ಆಳವಡಿಸಬಹುದು.

ಶಸ್ತ್ರಚಿಕಿತ್ಸೆಯ ಬಳಿಕ

ಶಸ್ತ್ರಚಿಕಿತ್ಸೆಯ ಅನಂತರ ಜಾಗರೂಕತೆ ಬಹಳ ಮುಖ್ಯ. ಕೈಯನ್ನು ಸ್ವಚ್ಛ ಮಾಡಿ ವೈದ್ಯರು ಹೇಳಿದಂತೆ ಕಣ್ಣಿಗೆ ಔಷಧವನ್ನು ಹಾಕಬೇಕು. ತುಂಬಾ ತೀವ್ರವಾದ ವ್ಯಾಯಮ ಮಾಡಬಾರದು. ದೂರ ಪ್ರಯಾಣವನ್ನು ಮಾಡುವುದು ಉತ್ತಮವಲ್ಲ. ಕೆಂಪು ಕಣ್ಣಿನ ಕಾಯಿಲೆ ಇರುವವರಿಂದ ದೂರವಿರಬೇಕು. ಧೂಳು ಮತ್ತು ಹೊಗೆಯಿಂದ ದೂರವಿರುವುದು ಉತ್ತಮ. ನಮಗೆಲ್ಲ ಹೆಮ್ಮೆಯ ವಿಷಯ ಎಂದರೆ ಈ ಕಣ್ಣಿನ ಪ‌ರೆಗೆ ಭಾರತದ ಹೆಸರಾಂತ ಶಸ್ತ್ರಚಿಕಿತ್ಸಕರಾದ ಶುಶ್ರುತ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಯನ್ನು ಕ್ರಿ.ಪೂ. 600 ಅಂದರೆ ಎರಡೂವರೆ ಸಾವಿರ ವರ್ಷಗಳ ಹಿಂದೆಯೆ ನಡೆಸಿದರು. ಅನಂತರ ಕಾಲಕಾಲಕ್ಕೆ ಹತ್ತು ಹಲವು ಅಭಿವೃದ್ಧಿ ಶಸ್ತ್ರಚಿಕಿತ್ಸೆಯಲ್ಲಿ ನಡೆಯಿತು. ಈಗಿನ ಫೇಕೊ ಇಮಲ್ಸಿಫಿಕೇಶನ್‌ ಅದನ್ನು ಅತ್ಯುತ್ತಮ ಮಟ್ಟಕ್ಕೆ ತಂದಿದೆ ಎಂದರೆ ಅತಿಶಯೋಕ್ತಿಯಲ್ಲ.
• •ಡಾ| ಪ್ರಶಾಂತ್‌ಕುಮಾರ್‌ ಶೆಟ್ಟಿ ಕಣ್ಣಿನ ವೈದ್ಯರು, ಪ್ರಶಾಂತ್‌ ನೇತ್ರಾಲಯ, ಬಂಟ್ಸ್‌ ಹಾಸ್ಟೆಲ್ ರಸ್ತೆ, ಮಂಗಳೂರು

ಯಾರಿಗೆಲ್ಲ ಬರಬಹುದು?

·ಎಕ್ಸ್‌ರೇ ಅಥವಾ ಗಾಮಾ ಕಿರಣಗಳಿಗೆ ಒಡ್ಡಿಕೊಂಡು ಕೆಲಸ ಮಾಡುವವರು.
·ಕಬ್ಬಿಣದ ಕುಲುಮೆ, ಗಾಜಿನ ಕಾರ್ಖಾನೆಯ ಕೆಲಸ ಮಾಡುವವರು.
·ವಿದ್ಯುತ್‌ ಶಾರ್ಟ್‌ ಸರ್ಕೀಟ್ ಆಗಿ ಶಾಕ್‌ನಿಂದ ಕೂಡ ಪೊರೆ ಬರಬಹುದು.
·ಕಣ್ಣಿಗೆ ಏಟು ಬಿದ್ದಾಗ ಪೊರೆ ಬರುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ