Udayavni Special

ಫಿಟ್ನೆಸ್‌, ಪರಿಸರ ಕಾಳಜಿಗೆ ಪ್ಲಾಗಿಂಗ್‌ ವ್ಯಾಯಾಮ


Team Udayavani, Nov 5, 2019, 4:48 AM IST

zz-41

ಪ್ಲಾಗಿಂಗ್‌ ಹೊಸ ಮಾದರಿಯ ವ್ಯಾಯಮಾಭ್ಯಾಸ, ಸ್ವೀಡನ್‌ಲ್ಲಿ ಪ್ರಚಲಿತಗೊಂಡ ಈ ವ್ಯಾಯಾಮ ಜಾಗಿಂಗ್‌ ಮಾದರಿಯಾಗಿ ಪ್ರಸಿದ್ಧಿಗೊಂಡಿದೆ. ಜಾಗಿಂಗ್‌ ಮಾಡುತ್ತಾ ರಸ್ತೆಬದಿಯಲ್ಲಿದ್ದ ಕಸ ಹೆಕ್ಕುವ ಹೊಸ ಬಗೆಯ ಫಿಟ್ನೆಸ್‌ ಮಾದರಿ ಇದಾಗಿದೆ. ಇದು ಜಾಗಿಂಗ್‌ಗಿಂತಲೂ ಪರಿಣಾಮಕಾರಿ ಹಾಗೂ ಪರಿಸರ ಸ್ವತ್ಛ ಮಾಡುತ್ತ ಆರೋಗ್ಯ ಕಾಪಾಡಿಕೊಳ್ಳಬಹುದು.

ಒಬ್ಬ ವ್ಯಕ್ತಿ ಓಡುತ್ತಾ, ಆ ದಾರಿಯಲ್ಲಿ ಸಿಗುವ ಕಸವನ್ನು ಹೆಕ್ಕಿ ಕೈಯಲ್ಲಿದ್ದ ಬ್ಯಾಗ್‌ಗೆ ತುಂಬಿಸಿಕೊಂಡು ಪರಿಸರ ಕಾಳಜಿ, ಫಿಟ್ನೆಸ್‌ ಬಗ್ಗೆಯೂ ಆಲೋಚನೆ ಮಾಡುವುದು ಪ್ಲಾಗಿಂಗ್‌ ಹಿಂದಿನ ಉದ್ದೇಶ. ಈ ಪರಿಸರ ಸ್ನೇಹಿ ಟ್ರೆಂಡ್‌ ಯೂರೋಪ್‌, ಅಮೆರಿಕ, ಮೆಕ್ಸಿಕೋ ಹಾಗೂ ಇನ್ನು ಕೆಲ ರಾಷ್ಟ್ರಗಳಿಗೆ ಹಬ್ಬಿತು ಎನ್ನಲಾಗಿದೆ.

ಮೊದಲ ಆರಂಭ
ಈ ಫಿಟ್ನೆಸ್‌ ಟ್ರೆಂಡ್‌ ಆರಂಭಿಸಿದ್ದು 2016ರಲ್ಲಿ ಸ್ವೀಡನ್ನ ಎರಿಕ್‌ ಅಸ್ಟ್ರೋಮ್‌ ಎಂಬ ಓಟಗಾರ್ತಿ. ತಾನು ಪ್ರತಿದಿನ ಜಾಗಿಂಗ್‌ ಮಾಡುವ ಮಾರ್ಗದಲ್ಲಿ ಕಸದ ರಾಶಿ ನೋಡಿ ರೋಸಿ ಹೋಗಿ ಇದನ್ನು ಆರಂಭಿಸಿದರು. ಎಲ್ಲರೂ ಪರಿಸರ ಸ್ವಚ್ಛತೆ ಬಗ್ಗೆ ಗಮನ ಹರಿಸಲಿ ಎಂದು ಅದರ ಫೋಟೊಗಳನ್ನು ಇನ್‌ಸ್ಟ್ರಾ ಗ್ರಾಮ್‌ನಲ್ಲಿ ಹಂಚಿಕೊಂಡರು. ಇದು ಬರಬರುತ್ತಾ ಭಾರಿ ಪ್ರಚಾರ ಪಡೆಯಿತು.

ಈಗ ನಮ್ಮ ದಿಲ್ಲಿ, ಬೆಂಗಳೂರಿನಲ್ಲೂ ಇಂತಹ ಟ್ರೆಂಡ್‌ ನಿಧಾನವಾಗಿ ಆರಂಭವಾಗಿದೆ. ಅದರಲ್ಲೂ ಪರಿಸರಪ್ರೇಮಿಗಳು ಹಾಗೂ ಫಿಟೆ°ಸ್‌ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತಿದೆ.

ಹೆಚ್ಚು ಪರಿಣಾಮಕಾರಿ
ಅರ್ಧಗಂಟೆ ಬರಿಯ ಜಾಗಿಂಗ್‌ ಮಾಡುವುದಕ್ಕಿಂತ ಪ್ಲಾಗಿಂಗ್‌ ಮಾಡಿದರೆ ಎರಡು ಪಟ್ಟು ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ. ಇದರಲ್ಲಿ ಓಡುವುದು, ಬಗ್ಗುವುದು, ಏಳುವುದು ಮಾಡಬೇಕಾಗಿದ್ದರಿಂದ ಸಹಜವಾಗಿ ಹೆಚ್ಚು ಕ್ಯಾಲೋರಿ ಕಳೆದುಕೊಳ್ಳುತ್ತೇವೆ. ಹಾಗೇ ದೇಹಕ್ಕೆ ಅಧಿಕ ವ್ಯಾಯಾಮವೂ ಆಗುವುದರಿಂದ ಫಿಟ್‌ಆಗಿ, ಸ್ನಾಯುಗಳು ಸದೃಢವಾಗುತ್ತವೆ. ದೈಹಿಕ ಆರೋಗ್ಯ ಸುಧಾರಣೆ ಹಾಗೂ ಪರಿಸರ ಕಾಳಜಿಯನ್ನು ಒಟ್ಟಿಗೆ ಮಾಡಬಹುದು. ಈಗೀಗ ಟ್ರೆಕಿಂಗ್‌ನಲ್ಲೂ ಪ್ಲೊಗ್ಗಿಂಗ್‌ ಆರಂಭವಾಗಿದೆ.

ಮೋದಿಯವರಿಂದ ಪ್ಲಾಗಿಂಗ್‌ ಮಾದರಿ
ಇತ್ತೀಚೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಮಹಾಬಲಿಪುರಂ ಸಮುದ್ರ ತೀರದಲ್ಲಿ ವಾಯು ವಿಹಾರ ಮಾಡಿ ಬೀಚ್‌ನಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪ್ಲಾಗಿಂಗ್‌ ಮಾದರಿಯಲ್ಲಿ ಕೈಗೊಂಡು ಸ್ವಚ್ಛ ಭಾರತ ಮತ್ತು ಫಿಟೆ°ಸ್‌ ಸಂದೇಶವನ್ನು ಸಾರಿದರು. ಹಾಗೇ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ವೈರಲ್‌ ಕೂಡ ಆಗಿತ್ತು.

-ಕಾರ್ತಿಕ್‌ ಚಿತ್ರಾಪುರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಕ್ ಡೌನ್ 5.0 ಮಾರ್ಗಸೂಚಿ ಪ್ರಕಟ: ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳು ನಾಳೆ ತೆರೆಯುವುದಿಲ್ಲ

ಲಾಕ್ ಡೌನ್ 5.0 ಮಾರ್ಗಸೂಚಿ ಪ್ರಕಟ: ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳು ನಾಳೆ ತೆರೆಯುವುದಿಲ್ಲ

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ppe-kit

ಮಾಸ್ಕ್, ಪಿಪಿಇ ಕಿಟ್‌ ಧರಿಸಿ ಬಂದ ಪಾದ್ರಿ

ಕ್ವಾರಂಟೈನ್ ಮುಗಿಸಿ ಬಂದ ಬೆಳಪು ಗ್ರಾಮದ ವ್ಯಕ್ತಿಗೆ ಸೋಂಕು: ಕಂಟೈನ್ಮೆಂಟ್ ವಲಯ ಘೋಷಣೆ

ಕ್ವಾರಂಟೈನ್ ಮುಗಿಸಿ ಬಂದ ಬೆಳಪು ಗ್ರಾಮದ ವ್ಯಕ್ತಿಗೆ ಸೋಂಕು: ಕಂಟೈನ್ಮೆಂಟ್ ವಲಯ ಘೋಷಣೆ

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ನಿರಾಣಿ ಮನೆಯಲ್ಲಿ ರಾಮದಾಸ್, ಉಮೇಶ್ ಕತ್ತಿ ಮೀಟಿಂಗ್? ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ನಿರಾಣಿ ಮನೆಯಲ್ಲಿ ರಾಮದಾಸ್, ಉಮೇಶ್ ಕತ್ತಿ ಮೀಟಿಂಗ್? ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ಇದೊಂದು ದೀರ್ಘ ಹೋರಾಟ, ಲಾಕ್ ಡೌನ್ ಸಡಿಲಗೊಂಡರೂ ಎಚ್ಚರಿಕೆ ಅಗತ್ಯ: ಮೋದಿ

ಇದೊಂದು ದೀರ್ಘ ಹೋರಾಟ, ಲಾಕ್ ಡೌನ್ ಸಡಿಲಗೊಂಡರೂ ಎಚ್ಚರಿಕೆ ಅಗತ್ಯ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

Bilvapatre

ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಲಾಕ್ ಡೌನ್ 5.0 ಮಾರ್ಗಸೂಚಿ ಪ್ರಕಟ: ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳು ನಾಳೆ ತೆರೆಯುವುದಿಲ್ಲ

ಲಾಕ್ ಡೌನ್ 5.0 ಮಾರ್ಗಸೂಚಿ ಪ್ರಕಟ: ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳು ನಾಳೆ ತೆರೆಯುವುದಿಲ್ಲ

31-May-19

ಚಿತ್ರದುರ್ಗದಲ್ಲಿ ಹೆಚ್ಚು ಮಳೆ

ಪ್ರಾಥಮಿಕ ಸಂಪರ್ಕಿತರು ನಾಪತ್ತೆ

ಪ್ರಾಥಮಿಕ ಸಂಪರ್ಕಿತರು ನಾಪತ್ತೆ

ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ನಮ್ಮ ಗುರಿ: ಶ್ವೇತಾ

ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ನಮ್ಮ ಗುರಿ: ಶ್ವೇತಾ

31-May-18

ಬೆಂಬಲ ಬೆಲೆಯಂತೆ ಭತ್ತ ಖರೀದಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.