ಸಕ್ಕರೆ ತ್ಯಜಿಸಿ ದೇಹದಲ್ಲಿ ಬದಲಾವಣೆ ಕಾಣಿ

Team Udayavani, Jul 23, 2019, 5:32 AM IST

ಇತ್ತೀಚೆಗೆ ಎಲ್ಲರು ಸಕ್ಕರೆಯನ್ನು ದ್ವೇಷಿಸಲಾರಂಭಿಸಿದ್ದಾರೆ. ಹೌದು ಸಕ್ಕರೆ ದೇಹ ತೂಕ ಇಳಿಕೆಯ ಯೋಜನೆಯನ್ನು ಹಾಳುಗೆಡವುತ್ತದೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ತರುತ್ತದೆ ಎಂಬ ಕಾರಣಕ್ಕೆ ಸಕ್ಕರೆಯನ್ನು ದ್ವೇಷಿಸುವವರು ಹೆಚ್ಚು. ಡಯಟ್ ಯೋಜನೆಗೆ ಸಕ್ಕರೆ ಬಹುದೊಡ್ಡ ದುಷ್ಟ. ಆದರೆ ಸಿಹಿ ಪದಾರ್ಥಗಳನ್ನು ನೋಡಿದಾಕ್ಷಣ ಅದನ್ನು ತಿನ್ನಬೇಕೆಂಬ ಆಸೆ ಹುಟ್ಟುವುದು ಸಹಜ. ಸಕ್ಕರೆ ಬಳಕೆಯನ್ನು ನಿಲ್ಲಿಸುವುದರಿಂದ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅವು ಯಾವ ಬದಲಾವಣೆ ಎಂಬ ಮಾಹಿತಿ ಇಲ್ಲಿದೆ.

ತೂಕ ಇಳಿಕೆ
ವರದಿಗಳ ಪ್ರಕಾರ ಸಕ್ಕರೆಯನ್ನು ತ್ಯಜಿಸಿದರೆ ಗ್ಲೂಕೋಸ್‌ ಇಲ್ಲದಿರುವ ಕಾರಣ ದೇಹ ಕೊಬ್ಬಿನಿಂದ ಕೀಟೋನ್‌ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುತ್ತದೆ. ಇದು ಕೊಬ್ಬನ್ನು ಕರಗಿಸುವ ಲಕ್ಷಣ. ಒಂದು ವೇಳೆ ಕೀಟೋ ಜ್ವರ ಅಂದರೆ ತಲೆನೋವು, ವಿವರಿಸಲಾಗದ ಸುಸ್ತು ಹಾಗೂ ಸೆಳೆತಗಳಿಂದ ಕೂಡಿರುವ ಜ್ವರವನ್ನು ಹೊಂದಿದ್ದರೆ ಒಂದು ವಾರದೊಳಗೆ ರೋಗಲಕ್ಷಣಗಳು ಕಡಿಮೆಯಾಗುತ್ತದೆ. ಕೀಟೋದ ಅಡ್ಡಪರಿಣಾಮ ಹಾಗೂ ಈ ಡಯಟ್ ಸೂಕ್ತವೆ ಎಂಬುದನ್ನು ಪೌಷ್ಟಿಕತಜ್ಞರಲ್ಲಿ ಕೇಳಿ ಅನುಸರಿಸುವುದು ಉತ್ತಮ.

ಆರೋಗ್ಯಕರ ಹೃದಯ
ಸಕ್ಕರೆಯನ್ನು ಸೇವಿಸಿದಾಗ ಇನ್ಸುಲಿನ್‌ ಮಟ್ಟ ಹೆಚ್ಚುತ್ತದೆ. ಇದು ನರಮಂಡಲವನ್ನು ಉತ್ತೇಜಿಸುತ್ತದೆ. ಹೀಗಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚುತ್ತದೆ. ಒಂದು ವೇಳೆ ಸಕ್ಕರೆಯನ್ನು ತ್ಯಜಿಸಿದಾಗ ಒಂದು ವಾರದಲ್ಲಿ ರಕ್ತದೊತ್ತಡ ಸ್ಥಿರವಾಗುತ್ತದೆ ಹಾಗೂ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ.

ಮಧುಮೇಹ ನಿಯಂತ್ರಣ
ಎಲ್ಲ ಮಧುಮೇಹಿಗಳಿಗೆ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೇಗೆ ಕಡಿಮೆಗೊಳಿಸುವುದೆಂಬ ಚಿಂತೆ. ಸಕ್ಕರೆ ಪ್ರಮಾಣ ಕುಗ್ಗಿಸಿದಲ್ಲಿ ದೇಹದಲ್ಲಿನ ಇನ್ಸುಲಿನ್‌ ಉತ್ಪಾದನೆ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳುತ್ತಾರೆ. ಆಹಾರ ಸೇವನೆಯಲ್ಲಿ ಸಕ್ಕರೆಯನ್ನು ಬಿಟ್ಟು ಆರೋಗ್ಯಕರ ಆಯ್ಕೆಯನ್ನು ಸೇರಿಸಿದಾಗ ದೇಹದಲ್ಲಿ ಕೊಬ್ಬು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತದಲ್ಲಿನ ಇನ್ಸುಲಿನ್‌ ಮಟ್ಟ ಆರೋಗ್ಯಕರವಾಗಿರುವುದು.
ಹೊಳೆಯುವ ಚರ್ಮ
ಸಕ್ಕರೆ ಕೇವಲ ತೂಕ, ಮಧುಮೇಹ ಮತ್ತು ಇತರ ಜೀವನಶೈಲಿಯನ್ನು ಕೆಡಿಸುವುದು ಮಾತ್ರವಲ್ಲದೇ ಮೊಡವೆಗಳನ್ನು ಪ್ರಚೋದಿಸುತ್ತದೆ.ವಾಸ್ತವವಾಗಿ ಅಮೆರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ ನಡೆಸಿದ ಅಧ್ಯಯನವು ಸಕ್ಕರೆ ತುಂಬಿರುವ ಸೋಡಾ, ಸಾಫ್ಟ್ ಡ್ರಿಂಕ್ಸ್‌ಗಳನ್ನು ತ್ಯಜಿಸಿದ ಮಹಿಳೆಯರು ಉತ್ತಮ ಚರ್ಮವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಉತ್ತಮ ಮನಸ್ಥಿತಿ
ಕೊಲಂಬಿಯಾ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಅಧಿಕ ಸಕ್ಕರೆಯುಳ್ಳ ಆಹಾರವನ್ನು ಸೇವಿಸುವ ಮಹಿಳೆಯರಲ್ಲಿ ಕಿರಿಕಿರಿ ಮತ್ತು ಆತಂಕಗಳು ಹೆಚ್ಚಿರುತ್ತವೆ ಎಂದು ತಿಳಿದು ಬಂದಿದೆ. ಸಕ್ಕರೆಯನ್ನು ತ್ಯಜಿಸಿದ್ದಲ್ಲಿ ಉತ್ತಮ ಮನಃಸ್ಥಿತಿ ಹೊಂದಲು ಸಾಧ್ಯ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮರೆವು ಒಂದು ರೀತಿಯ ಮೆದುಳಿನ ನ್ಯೂನತೆ. ಭೌತಿಕ ಅಥವಾ ಮಾನಸಿಕ ಆಘಾತದಿಂದ ಉಂಟಾಗುವ ರೋಗವಿದು. ಮನಸ್ಸಿಗೆ ತೀವ್ರ ರೀತಿಯ ಆಘಾತವಾದಾಗ ಅದರಿಂದ ಘಾಸಿಯಾಗಿ ಜ್ಞಾಪಕ...

  • ಸಾಮಾನ್ಯವಾಗಿ ಹುಡುಗಿಯರಷ್ಟೇ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಮಾತಿದೆ. ಅಂತೆಯೇ ಪುರುಷರು ಕೂಡ ಇತ್ತೀಚೆಗೆ ಹೆಚ್ಚು ಸೌಂದರ್ಯ ಕಾಳಜಿ ವಹಿಸುತ್ತಿರುವುದು...

  • ನಮ್ಮ ಮನೆಯ ಅಡುಗೆ ಮನೆಯಲ್ಲಿ ಹಲವಾರು ಔಷಧ ಗುಣಗಳಿರುವ ಮತ್ತು ಆರೋಗ್ಯದಾಯಕ ವಸ್ತುಗಳಿವೆ. ಅವುಗಳ ಪ್ರಯೋಜನವನ್ನು ತಿಳಿದು ಬಳಸಿದರೆ ರೋಗ ನಿಯಂತ್ರಣಕಾರಿಯಾಗಿ...

  • ಉಪ್ಪು ಆಹಾರ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರ ಎಷ್ಟೇ ಚೆನ್ನಾಗಿದ್ದರೂ ಉಪ್ಪಿನಂಶಇಲ್ಲದಿದ್ದರೆ ಅದರ ರುಚಿ ಕೆಟ್ಟು ಹೋಗುತ್ತದೆ. ಉಪ್ಪು...

  • ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು...

ಹೊಸ ಸೇರ್ಪಡೆ