Udayavni Special

ಆಫೀಸ್‌ನಲ್ಲಿ ರಿಲ್ಯಾಕ್ಸ್‌ ಆಗಿ


Team Udayavani, Feb 18, 2020, 5:07 AM IST

ben-22

ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು ಪರಿಹಾರ? ತುಂಬ ಸರಳ. ಜೀವನ ರೀತಿಯಲ್ಲಿ ಕೆಲವೊಂದು ಸಣ್ಣ ಪುಟ್ಟ ಬದಲಾವಣೆ, ಸ್ವಲ್ಪ ಓಡಾಟದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಸ್ವಲ್ಪ ದೂರದಲ್ಲಿ ವಾಹನ ನಿಲುಗಡೆ
ನಿಮ್ಮ ಮನೆ ಅಥವಾ ರೂಮ್‌ ಕಚೇರಿ ಸಮೀಪದಲ್ಲೇ ಇದ್ದರೆ ಕೆಲವೊಮ್ಮೆ ನಡದೇ ಹೋಗುವುದು ಉತ್ತಮ. ಇನ್ನು ವಾಹನ ಬಳಕೆ ಅನಿವಾರ್ಯ ಎಂದಾದರೆ ಕಚೇರಿಯ ಸ್ಪಲ್ಪ ದೂರದಲ್ಲಿ ಪಾರ್ಕ್‌ ಮಾಡಿ ನಡೆದು ಹೋಗಿ. ಇದರಿಂದ ಶರೀರಕ್ಕೆ ಸ್ಪಲ್ಪವಾದರೂ ವ್ಯಾಯಾಮ ಲಭಿಸಿದಂತಾಗುತ್ತದೆ.

ಮೆಟ್ಟಿಲು ಬಳಸಿ
ಕಚೇರಿ ಒಳಗೆ ಮತ್ತು ಹೊರಗೆ ಹೋಗುವಾಗ, ಕ್ಯಾಂಟೀನ್‌ ಹೋಗುವಾಗ ಅಥವಾ ಕೆಲಸಕ್ಕಾಗಿ ಬೇರೆ ಕಡೆ ಹೋಗಬೇಕಾದಾಗ ಲಿಫ್ಟ್ ಅಥವಾ ಎಸ್ಕಲೇಟರ್‌ ಬಳಸಬೇಡಿ. ಮೆಟ್ಟಿಲು ಬಳಸಿ. ನಿಮಗೆ ಗೊತ್ತಾ?ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದು ಉತ್ತಮ ವ್ಯಾಯಾಮ ಇದ್ದಂತೆ. ಜಾಗಿಂಗ್‌, ವಾಕಿಂಗ್‌ಗಿಂತ ಇದು ಉತ್ತಮ ಎನ್ನುತ್ತಾರೆ ತಜ್ಞರು. ಇನ್ನೊಂದು ಮುಖ್ಯ ವಿಚಾರ ಎಂದರೆ ಮೆಟ್ಟಿಲಿನ ಸಹಾಯದಿಂದ ಮಾಡುವ ವ್ಯಾಯಾಮ ಇತ್ತೀಚೆಗೆ ಟ್ರೆಂಡಿಂಗ್‌ ಆಗುತ್ತಿದೆ.

ಆನ್‌ಲೈನ್‌ ಬಳಕೆ ಕಡಿಮೆ ಮಾಡಿ
ನಿಮ್ಮ ಸಹದ್ಯೋಗಿಗಳೊಂದಿಗೆ ಮಾತನಾಡಬೇಕೆಂದರೆ, ಸಮಾಲೋಚನೆ ನಡೆಸಲಿದ್ದರೆ ಆನ್‌ಲೈನ್‌, ಫೋನ್‌ ಬಳಸುವುದು ಬಿಟ್ಟು ಅವರ ಬಳಿ ಹೋಗಿ ಮಾತನಾಡಿ. ಕುಳಿತುಕೊಂಡೇ ಇರುವ ಸಮಯದಲ್ಲಿ ಇಂತಹ ಸಣ್ಣ ಪುಟ್ಟ ವಾಕಿಂಗ್‌ ಉತ್ತಮ.

ಬ್ರೇಕ್‌ ನೀಡಿ
ಪ್ರತಿ ಗಂಟೆಗೊಮ್ಮೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ಓಡಾಡಲು ಸಾಧ್ಯವಿಲ್ಲ ಎಂದಾರೆ ಎದ್ದು ನಿಲ್ಲಿ. ಕನಿಷ್ಠ ಹತ್ತು ನಿಮಿಷವಾದರೂ ನಿಂತುಕೊಂಡಿರಿ.

ಸಣ್ಣ ಪುಟ್ಟ ವ್ಯಾಯಾಮ ಇರಲಿ
ಊಟದ ಸಮಯದಲ್ಲಿ ಸಣ್ಣ ಪುಟ್ಟ ವ್ಯಾಯಾಮ ಮಾಡುವುದು ಒಳಿತು ಎನ್ನುತ್ತಾರೆ ಆರೋಗ್ಯ ತಜ್ಞರು. ಉದಾ: ಕೈ, ಕಾಲುಗಳನ್ನು ಒದರುವುದು ಇತ್ಯಾದಿ. ಮೊಬೈಲ್‌ನಲ್ಲಿ ಮಾತನಾಡುವಾಗ ಕುಳಿತುಕೊಳ್ಳದೆ ಅತ್ತ ಇತ್ತ ಓಡಾಡಿ. ನಿಮ್ಮ ಡೆಸ್ಕ್ನಲ್ಲೇ ಊಟ ಮಾಡುವ ಬದಲು ಡೈನಿಂಗ್‌ ಹಾಲ್‌ ಅನ್ನು ಬಳಸಿ.

ಸಾಕಷ್ಟು ನೀರು ಕುಡಿಯಿರಿ
ಇದು ಬಹಳ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು.

ಕುಳಿತುಕೊಳ್ಳುವ ಭಂಗಿ ಗಮನಿಸಿ
ಇನ್ನೊಂದು ಪ್ರಧಾನ ಅಂಶವೆಂದರೆ ನೀವು ಕುಳಿತುಕೊಳ್ಳುವ ರೀತಿ ಸಮರ್ಪಕವಾಗಿದ್ದರೆ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಬಹುದು. ನೆಟ್ಟಗೆ ಕುಳಿತುಕೊಳ್ಳಬೇಕು ಮತ್ತು ಕುತ್ತಿಗೆ ನೇರವಾಗಿರಬೇಕು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

world-wide-covid19

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump-jpeg

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

Bilvapatre

ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ

cycling

ಸೈಕ್ಲಿಂಗ್‌ನ ಪ್ರಯೋಜನಗಳು

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ