ಸ್ಟ್ರೆಚ್‌ ಮಾರ್ಕ್‌: ಮನೆಮದ್ದಿನಲ್ಲಿದೆ ಪರಿಹಾರ

Team Udayavani, Dec 10, 2019, 5:48 AM IST

ವ್ಯಾಯಾಮ ಮಾಡುವುದರಿಂದ ಬೊಜ್ಜು ಕರಗುತ್ತದೆ. ಆದರೆ ಸ್ಟ್ರೆಚ್‌ ಮಾರ್ಕ್‌ ಮೂಡುತ್ತದೆ ಎನ್ನುವುದು ಬಹುತೇಕ‌ರ ಅಳಲು. ಮಾತ್ರವಲ್ಲ ಪ್ರಸವದ ನಂತರ ಹೊಟ್ಟೆಯಲ್ಲಿ ಸ್ಟ್ರೆಚ್‌ ಮಾರ್ಕ್‌ ಕಾಣಿಸಿಕೊಳ್ಳುವುದೂ ಇದೆ. ಇದರ ಪರಿಹಾರಕ್ಕೆ ರಾಸಾಯನಿಕಯುಕ್ತ ಕ್ರೀಮ್‌ ಮೊರೆ ಹೋಗಬೇಕಾಗಿಲ್ಲ. ಕೆಲವೊಂದು ಮನೆ ಮದ್ದು ಬಳಸಿ ಈ ಕಿರಿಕಿರಿಯಿಂದ ಹೇಗೆ ಪಾರಾಗಬಹುದು ಎನ್ನುವುದರ ಮಾಹಿತಿ ಇಲ್ಲಿದೆ.

ದೇಹಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆಂಬುದು ಎಲ್ಲರ ಇಚ್ಛೆಯೇ. ಅದಕ್ಕಾಗಿ ಜೀವನಶೈಲಿಯಲ್ಲಿಯೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಅತಿಯಾಗಿ ದಪ್ಪ ಕಾಣಿಸದಿರಲು ಆಹಾರ ಪದ್ಧತಿ ರೂಢಿಸಿಕೊಳ್ಳುವುದು, ಡಯಟ್‌ ಮೊರೆ ಹೋಗುವುದು, ನೀಳಕಾಯದವರು ಮೆಡಿಸಿನ್‌ಗಳ ಮೊರೆ ಹೋಗುವುದೆಲ್ಲ ನಡೆಯುತ್ತಲೇ ಇರುತ್ತದೆ.

ಸೌಂದರ್ಯಕ್ಕೆ ಸಮಸ್ಯೆ ತಂದೊಡ್ಡುವ ಬಹುದೊಡ್ಡ ಸಮಸ್ಯೆಯೆಂದರೆ ಬೊಜ್ಜು. ಪ್ರಸ್ತುತ ಬಹುತೇಕರನ್ನು ಕಾಡುವ ಜಾಗತಿಕ ಸಮಸ್ಯೆಯಾಗಿ ಕಾಣಿಸಿಕೊಳ್ಳುವ ಈ ಬೊಜ್ಜು ತೊಂದರೆಯಿಂದ ಮುಕ್ತಿ ಹೊಂದಬೇಕೆಂದರೆ ಬೊಜ್ಜು ಕರಗಿಸುವ ಔಷಧಗಳ ಸೇವನೆಗೆ ಮುಂದಾಗುತ್ತಾರೆ. ಔಷಧಗಳ ಪರಿಣಾಮದಿಂದ ಬೊಜ್ಜು ಕರಗಿ ದೇಹ ಸ್ಲಿಮ್‌ ಆಯಿತೆಂದರೆ ಶುರುವಾಗುವುದು ಮತ್ತೂಂದು ಸಮಸ್ಯೆ. ಅದರೆಂದರೆ ಹೊಟ್ಟೆಯ ಭಾಗದಲ್ಲಿ ಮೂಡುವ ಸ್ಟ್ರೆಚ್‌
ಮಾರ್ಕ್‌ಗಳು.

ಪ್ರಸವದ ನಂತರ ಸ್ಟ್ರೆಚ್‌ ಮಾರ್ಕ್‌
ಹೊಟ್ಟೆಯಲ್ಲಿ ಸ್ಟ್ರೆಚ್‌ ಮಾರ್ಕ್‌ ಮೂಡುವುದು ಮತ್ತು ಅದೊಂದು ಕಿರಿಕಿರಿಯಾಗಿ ಬಹು ಸಮಯದವರೆಗೆ ಕಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಬೊಜ್ಜು ಇಳಿಸಿಕೊಂಡವರಲ್ಲಿ ಮತ್ತು ಮಗುವಿಗೆ ಜನ್ಮ ನೀಡಿದವರ ಹೊಟ್ಟೆಯಲ್ಲಿ ಈ ಸ್ಟ್ರೆಚ್‌ ಮಾರ್ಕ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಧಾರಣೆ ಎನ್ನುವುದು ಪ್ರತಿ ಮಹಿಳೆಗೂ ಸುಮಧುರ ಅನುಭವ. ಗರ್ಭ ಧಾರಣೆ ವೇಳೆ ತಿಂಗಳುಗಳು ಕಳೆದಂತೆ ಹೊಟ್ಟೆ ದೊಡ್ಡದಾಗಿ, ಹೆರಿಗೆ ಬಳಿಕ ಸಣ್ಣದಾಗುತ್ತದೆ. ಈ ಸಂದರ್ಭ ದಲ್ಲಿ ಗರ್ಭಿಣಿಯಾಗಿದ್ದ ಮಹಿಳೆಯ ಹೊಟ್ಟೆಯಲ್ಲಿ ಸ್ಟ್ರೆಚ್‌ ಮಾರ್ಕ್‌ ಮಾಡುತ್ತದೆ. ಮಹಿಳೆ-ಪುರುಷರು ತೂಕ ಇಳಿಸಿಕೊಂಡಾಗಲೂ ಕಾಣಿಸಿ ಕೊಳ್ಳುತ್ತದೆ.

ಕ್ರೀಂ ಹಚ್ಚುವ ಮುನ್ನ…
ಸ್ಟ್ರೆಚ್‌ ಮಾರ್ಕ್‌ ಹೋಗಲಾಡಿಸಲು ಹಲವಾರು ರೀತಿಯ ಕ್ರೀಂಗಳನ್ನು ಬಳಕೆ ಮಾಡಲು ಜನ ತೊಡಗುತ್ತಾರೆ. ವೈದ್ಯರೊಂದಿಗೆ ಸಮಾಲೋಚಿಸದೆಯೇ ರಾಸಾಯನಿಕ ಮಿಶ್ರಿತ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇದರಿಂದ ಸ್ಟ್ರೆಚ್‌ ಮಾರ್ಕ್‌ ಹೋಗದೇ ಹಾಗೇ ಉಳಿದುಕೊಳ್ಳುವುದರ ಜತೆಗೆ ಕ್ರೀಂ ಹಚ್ಚಿದ ಭಾಗದಲ್ಲಿ ಕಪ್ಪಾಗುವಂತಹ ಸಮಸ್ಯೆಗಳನ್ನು ಎಳೆದುಕೊಳ್ಳಬೇಕಾಗುತ್ತದೆ. ಕ್ರೀಂ ಬಳಸುವುದಾದರೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

ಸ್ಟ್ರೆಚ್‌ ಹೋಗಲಾಡಿಸಲು ಮನೆಮದ್ದು
ಸ್ಟ್ರೆಚ್‌ ಮಾರ್ಕ್‌ ಹೋಗಲಾಡಿಸಲು ರಾಸಾಯನಿಕ ಮಿಶ್ರಿತ ಕ್ರೀಂಗಳನ್ನು ಬಳಸುವ ಬದಲು ಮನೆಯಲ್ಲೇ ಸಿಗುವ ಕೆಲವೊಂದು ಔಷಧೀಯ ಗುಣವುಳ್ಳ ವಸ್ತುಗಳನ್ನು ಬಳಬಹುದು. ಮುಖ್ಯವಾಗಿ ಅಲೊ ವೆರಾವು ಇದಕ್ಕೆ ಅತ್ಯುತ್ತಮ ಔಷಧ. ಅಲೊವೆರಾ ಎಲೆಯಿಂದ ಲೋಳೆ ತೆಗೆದು ಸ್ಟ್ರೆಚ್‌ ಮಾರ್ಕ್‌ ಇರುವೆಡೆ ನಿತ್ಯ ಹಚ್ಚಿಕೊಂಡು ಮಸಾಜ್‌ ಮಾಡಬೇಕು. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಲಿಂಬೆರಸ ಮತ್ತು ಸೌತೆಕಾಯಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮಾರ್ಕ್‌ ಮೇಲೆ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ಬಿಸಿ ನೀರಿನಿಂದ ತೊಳೆದರೆ ಸ್ಟ್ರೆಚ್‌ ಮಾರ್ಕ್‌ ನಿವಾರಿಸಬಹುದು. ಬಾದಾಮಿ ಎಣ್ಣೆ, ತೆಂಗಿನೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಮಾರ್ಕ್‌ ಇರುವ ಜಾಗಕ್ಕೆ ಮಸಾಜ್‌ ಮಾಡಿ ಸ್ವಲ್ಪ ಸಮಯದ ಬಳಿಕ ತೊಳೆಯಬೇಕು.

ವಿಟಮಿನ್‌ ಆಹಾರ ಸೇವಿಸಿ
ಗರ್ಭಿಣಿಯಾಗಿದ್ದಾಗ ಸೇವಿಸುವ ಪೌಷ್ಟಿಕಾಂಶಯುಕ್ತ ಆಹಾರವೂ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ. ವಿಟಮಿನ್‌ ಎ, ಇ ಹೆಚ್ಚಿರುವ ಆಹಾರ ಸೇವಿಸಿದರೆ, ಪ್ರಸವದ ನಂತರ ಸ್ಟ್ರೆಚ್‌ ಮಾರ್ಕ್‌ ಸಮಸ್ಯೆ ಕಂಡು ಬರುವುದಿಲ್ಲ ಎನ್ನುತ್ತದೆ ವೈದ್ಯಲೋಕ. ವಿಶೇಷವಾಗಿ ಮೀನಿನ ಎಣ್ಣೆ, ಕ್ಯಾರೆಟ್‌, ಮೊಟ್ಟೆ ಮುಂತಾದವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ದೇಹದಲ್ಲಿ ಯಾವಾಗಲೂ ನೀರಿನಾಂಶ ಜಾಸ್ತಿ ಇರಬೇಕು. ಅದಕ್ಕಾಗಿ ಕನಿಷ್ಠ ಮೂರ್‍ನಾಲ್ಕು ಲೀಟರ್‌ ನೀರನ್ನು ಪ್ರತಿನಿತ್ಯ ಕಡಿಯಬೇಕು. ದೇಹದಲ್ಲಿ ರಕ್ತ ಸಂಚಾರ ವೃದ್ಧಿಸಲು ಸಹಕರಿಸುವ ವ್ಯಾಯಾಮವು ದೈನಂದಿನ ಜೀವನದ ಭಾಗವಾಗಬೇಕು. ಇವಿಷ್ಟನ್ನು ನಿತ್ಯ ರೂಢಿಸಿಕೊಂಡರೆ ಪ್ರಸವದ ನಂತರ ಸ್ಟ್ರೆಚ್‌ ಮಾರ್ಕ್‌ ಬಾರದಂತೆ ತಡೆಯಬಹುದು ಎನ್ನುವುದು ವೈದ್ಯರು.

ತಡೆ ಸಾಧ್ಯವಿದೆ‌
ಮಹಿಳೆಯರಿಗೆ ಪ್ರಸವದ ನಂತರ ಹೊಟ್ಟೆಯಲ್ಲಿ ಸ್ಟ್ರೆಚ್‌ ಮಾರ್ಕ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಲ್ಲದೆ, ಜಿಮ್‌ಗೆ ಹೋಗುವವರು, ದೇಹತೂಕ ಇಳಿಸಿಕೊಂಡವರಲ್ಲಿಯೂ ಕಾಣಿಸಿಕೊಳ್ಳಬಹುದು. ಗರ್ಭಿಣಿಯಾಗಿರುವಾಗಲೇ ಆಲಿವ್‌ ಆಯಿಲ್‌ ಅಥವಾ ತೆಂಗಿನೆಣ್ಣೆಯನ್ನು ಹೊಟ್ಟೆಗೆ ಹಚ್ಚಿಕೊಳ್ಳುವುದರಿಂದ ಶೇ. 50ರಷ್ಟು ಸ್ಟ್ರೆಚ್‌ ಮಾರ್ಕ್‌ ತಡೆಯುವುದು ಸಾಧ್ಯವಿದೆ. ಶುದ್ಧ ಅಲೋವೆರಾವನ್ನೂ ಹಚ್ಚಬಹುದು. ಕ್ರೀಂಗಳನ್ನು ಹಚ್ಚುವ ಮೊದಲು ಚರ್ಮರೋಗ ತಜ್ಞರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದುಕೊಳ್ಳಬೇಕು.
– ಡಾ| ವಿಜೇತಾ ರೈ, ವೈದ್ಯರು

  ಧನ್ಯಾ ಬಾಳೆಕಜೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಂಡಿರುವ ಅಶ್ವಗಂಧ ಮನೆ ಮುಂದೆ, ಹಿತ್ತಲಲ್ಲಿ ಬೆಳೆಯಬಹುದಾದ ಮನೆಮದ್ದು. ಇದು ಕುದುರೆಯ ಮೂತ್ರದ ವಾಸನೆ ಹೊಂದಿರುವ ಕಾರಣ...

  • ಅರಿಶಿನವು ಹಲವು ಕಾಯಿಲೆಗಳಿಗೆ ಮದ್ದು. ಹೀಗಾಗಿ ಆಯುರ್ವೇದದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ನಾವು ಸಾಮಾನ್ಯವಾಗಿ ಲೆಮನ್‌ ಟೀ, ಪುದೀನಾ ಟೀ ಸಹಿತ ಇನ್ನಿತರ ಮಾದರಿಯ...

  • ಕಂಪ್ಯೂಟರ್‌ನಲ್ಲಿ ಗ್ರಾಫಿಕ್ಸ್‌ ವಿನ್ಯಾಸ ಮಾಡುವವರು ಕಂಪ್ಯೂಟರ್‌ ಮೌಸ್‌ ಹಿಡಿಯುವ ಕೈಯತ್ತ ತಮ್ಮ ದೇಹವನ್ನು ಕೂಡ ಸ್ವಲ್ಪ ವಾಲಿಸುತ್ತಾ ಇರುತ್ತಾರೆ. ಈ ರೀತಿ...

  • ಒತ್ತಡದ ಬದುಕಿನ ಶೈಲಿಯಿಂದ ಕೆಲವು ನೋವುಗಳು ಮಹಿಳೆಯರನ್ನೇ ಹೆಚ್ಚಾಗಿ ಕಾಡುವುದಿದೆ. ಅದೂ ವಯಸ್ಸು 28 ದಾಟಿದರೆ ಸಾಕು, ಒಂದಲ್ಲ ಒಂದು ರೀತಿಯ ನೋವು.ನೋವು ನಿವಾರಕ...

  • ಆರೋಗ್ಯಕರವಾಗಿದ್ದ ದೇಹವಿದ್ದರೆ ಮಾತ್ರ ಏನೇ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಇಂದು ಜಿಮ್‌ ಮೊದಲಾದ ಫಿಟ್ನೆಸ್‌ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದೆ. ಫಿಟ್ನೆಸ್‌...

ಹೊಸ ಸೇರ್ಪಡೆ

  • ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈಗಾಗಲೇ ಶುರುವಾಗಿದ್ದು, 26ಕ್ಕೆ ಕೊನೆಗೊಳ್ಳಲಿದೆ. ಜಗತ್ತಿಗೆ ಶಾಂತಿ ಬೋಧಿಸಿದ ಈ ಮಠದಲ್ಲಿ ಭೋಜನವೂ...

  • ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ...

  • ಕುರಿಗಾಹಿಯೊಬ್ಬನಿಗೆ ಭೀಮಾ ನದಿಯಲ್ಲಿ ಗಾಜಿನ ರೂಪದ ಕಂಬದಲ್ಲಿದ್ದ ದೇವಿ ಕಾಣಿಸಿಕೊಳ್ಳುತ್ತಾಳೆ. ಆ ದೇವಿಯನ್ನು ಒಂದು ಸರ್ಪವು ಕಾಯುತ್ತಿತ್ತು... ಭೀಮಾ ನದಿಯಲ್ಲಿ...

  • "ಅದೊಂದು ವಟವೃಕ್ಷ. ಅಲ್ಲೊಂದು ವಿಚಿತ್ರವಾದ ಸನ್ನಿವೇಶ. ಗುರುವನ್ನು ಸುತ್ತುವರಿದು ಶಿಷ್ಯರೆಲ್ಲ ಕುಳಿತಿದ್ದಾರೆ. ಶಿಷ್ಯರೆಲ್ಲರೂ ವೃದ್ಧರು. ಗುರುವಾದರೋ ಯುವಕ....

  • ಎಷ್ಟು ಬಗೆಯಲ್ಲಿ ಇಡ್ಲಿ ಮಾಡಬಹುದು ಅಂದುಕೊಂಡಿದ್ದೀರಿ? ಹೆಚ್ಚೆಂದರೆ ಹತ್ತಿಪ್ಪತ್ತು ವೆರೈಟಿ ಅಂತೀರಾ? ಇಲ್ಲ, 55 ವೆರೈಟಿಯ ಇಡ್ಲಿ ಮಾಡಬಹುದು ಅನ್ನುತ್ತಿದೆ...