ಎಣ್ಣೆಸ್ನಾನ ದೇಹಕ್ಕೆ ಹೊಸ ಚೈತನ್ಯ

Team Udayavani, Aug 6, 2019, 7:17 AM IST

ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿ ವೇಳೆ ಮೈಗೆಲ್ಲ ಎಣ್ಣೆ ಹಚ್ಚಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಸಂಪ್ರದಾಯ. ಆದರೆ ಈ ಅಭ್ಯಾಸ ಕೇವಲ ಆ ಒಂದು ದಿನಕ್ಕೆ ಸೀಮಿತವಾಗಿದೆ. ವಾರದಲ್ಲಿ ಒಂದು ದಿನ ಎಣ್ಣೆ ಸ್ನಾನ ಮಾಡುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಹೊಸ ಚೈತನ್ಯ ತುಂಬವಲ್ಲಿ ಎಣ್ಣೆ ಸ್ನಾನ ಸಹಕಾರಿ.

ಪ್ರಸ್ತುತ ಸ್ನಾನಕ್ಕಾಗಿ, ದೇಹದ ಹೊಳಪು ಹೆಚ್ಚಿಸಲು ಅನೇಕ ಸೋಪ್‌, ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ದೇಹಕ್ಕೆ ಹೊಸ ಚೈತನ್ಯ ನೀಡಬಲ್ಲ ಎಣ್ಣೆಸ್ನಾನ ಕೇವಲ ಹಬ್ಬಹರಿದಿನಗಳಿಗೆ ಮೀಸಲಾಗಿದೆ. ತಲೆಗೆ ಎಣ್ಣೆ ಹಚ್ಚಿಕೊಳ್ಳುವಂತೆ ಹೇಳಿದರೆ ದೂರ ಸರಿಯುವ ಯುವ ಪೀಳಿಗೆ ಇನ್ನು ಎಣ್ಣೆ ಹಾಕಿ ಸ್ನಾನ ಮಾಡುವುದುಂಟೆ?

ಎಣ್ಣೆ ಸ್ನಾನ ಮಾಡುವುದರಿಂದ ದೇಹದ ನಾನಾ ಭಾಗಗಳಿಗೆ ಚೈತನ್ಯ ಸಿಗುತ್ತದೆ ಹಾಗೂ ತಲೆಯಿಂದ ಪಾದದವರೆಗೆ ಹಚ್ಚುವ ಎಣ್ಣೆ ಕೂದಲಿನ ಹಾಗೂ ತ್ವಚೆಯ ಆರೋಗ್ಯಕ್ಕೆ ಉತ್ತಮ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ವಾರದಲ್ಲಿ ಒಮ್ಮೆಯಾದರೂ ಎಣ್ಣೆ ಹಾಕಿ ಸ್ನಾನ ಮಾಡುವುದರಿಂದ ದೇಹದ ವಿವಿಧ ಭಾಗಗಳಿಗೆ ಉತ್ತಮ ವ್ಯಾಯಾಮ ನೀಡಿದಂತಾಗುತ್ತದೆ. ದೇಹಕ್ಕೆ ಎಣ್ಣೆ ಹಚ್ಚುವುದು ಒಂದು ಬಗೆಯ ಸ್ಪರ್ಶ ಚಿಕಿತ್ಸೆ. ಶರೀರದ ಅಂಗಾಗಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದು ನರನಾಡಿಗಳಿಗೆ ಪುನಶ್ಚೇತನ್ಯ ನೀಡುವ ವಿಧಾನ.

ಮನೆಯಲ್ಲೇ ತಯಾರಿಸಿದ ಉತ್ತಮ ಎಣ್ಣೆಯನ್ನು ಹಚ್ಚಿ. ಮೃದುವಾಗಿ ಮಸಾಜ್‌ ಮಾಡಿ 30ರಿಂದ 35 ನಿಮಿಷ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದು ಅಭ್ಯಾಸ. ಆದರೆ ಹೆಚ್ಚು ಬಿಸಿಯಾದ ನೀರಿನ ಬಳಕೆ ತ್ವಚೆಗೆ ಒಳ್ಳೆಯದಲ್ಲ. ಸ್ನಾನಕ್ಕೆ ಮೊದಲು ಔಷಧಿಯುಕ್ತ ಅರಿಶಿನ, ಮಾವಿನ ಎಲೆ, ಬೇವಿನ ಎಲೆ, ಶ್ರೀಗಂಧದೆಣ್ಣೆಯನ್ನು ಬಿಸಿ ನೀರಿಗೆ ಸೇರಿಸುವುದರಿಂದ ತ್ವಚೆ ಸಂಬಂಧಿ ಸಮಸ್ಯೆಗಳು ದೂರವಾಗುತ್ತದೆ.

ಮಕ್ಕಳ ಚರ್ಮದ ಹೊಳಪಿಗೆ ಎಣ್ಣೆ ಸ್ನಾನ
ಮಕ್ಕಳು ಎಂದಾಗ ಅವರ ಆರೋಗ್ಯ, ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ಎಣ್ಣೆಸ್ನಾನ ಮಕ್ಕಳ ಚರ್ಮದ ಹೊಳಪಿಗೆ, ರಕ್ಷಣೆಗೆ ಹೆಚ್ಚು ಸಹ ಕರಿಸುತ್ತದೆ. ಮಕ್ಕಳ ಚರ್ಮ ಅತಿ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಧೂಳು ಮೊದಲಾದವುಗಳಿಂದ ಚರ್ಮವನ್ನು ಸಂರಕ್ಷಿಸುವಷ್ಟು ಬೆಳವಣಿಗೆಯಾಗಿರುವುದಿಲ್ಲ. ಅಲ್ಲದೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗಿರುತ್ತದೆ. ಅದಕ್ಕಾಗಿ ಬೇಗನೇ ಅಲರ್ಜಿಯಾಗುತ್ತದೆ. ಚರ್ಮದ ಆರೋಗ್ಯಕ್ಕೆ ಹಾಗೂ ರಕ್ತ ಪರಿಚಲನೆಗೆ ಎಣ್ಣೆ ಸ್ನಾನ ಸಹಾಯಕವಾಗಿರುತ್ತದೆ. ಚರ್ಮದ ಹೊಳಪು ಹೆಚ್ಚುತ್ತದೆ.

ಎಣ್ಣೆ ಸ್ನಾನದಿಂದ ಆಗುವ ಲಾಭಗಳೇನು?
ತಲೆಗೆ ನಿತ್ಯ ಎಣ್ಣೆ ಹಚ್ಚುವುದರಿಂದ ತಲೆನೋವು ಬರುವದಿಲ್ಲ. ಕೂದಲು ನೆರೆಯುವುದನ್ನು ಇದರಿಂದ ತಡೆಗಟ್ಟಬಹುದು. ಯುವಕರ ಸಮಸ್ಯೆಯಾದ ಕೂದಲು ಉದುರುವಿಕೆ, ತಲೆ ಬೋಳಾಗುವಿಕೆ ಇದು ಅತ್ಯುತ್ತಮ ಪರಿಹಾರ . ಎಣ್ಣೆ ಹಚ್ಚುವುದರಿಂದ ತಲೆ ಕೂದಲು ಕಪ್ಪಾಗಿ ಸೊಂಪಾಗಿ ಬೆಳೆಯುವುದು ಮತ್ತು ಕೂದಲುಗಳು ಉದ್ದವಾಗಿಯೂ ಬೆಳೆಯುವುದು. ಇದರೊಂದಿಗೆ ಕಿವಿಗಳಿಗೆ ಶುದ್ಧವಾದ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಾಕುವುದರಿಂದ ಕಿವಿ ಕೇಳದಿರುವಿಕೆ, ಕಿವುಡುತನದ ಸಮಸ್ಯೆಗಳು ಕಂಡು ಬರುವುದಿಲ್ಲ. ಇಡೀ ಶರೀರಕ್ಕೆ ಎಣ್ಣೆ ಸವರುವುದರಿಂದ ಶರೀರ ಸುಂದರ, ಬಲಿಷ್ಠವಾಗುವುದು ಪಾದಗಳಿಗೆ ಎಣ್ಣೆ ಹಚ್ಚುವುದರಿಂದ ಪಾದ ಬಲಿಷ್ಠ ಹಾಗೂ ಮƒದುತ್ವ ಪಡೆಯುವವು.

ಎಣ್ಣೆ ಸ್ನಾನಕ್ಕೆ ಬಳಸುವ ನಾನಾ ಎಣ್ಣೆಗಳು
1 ಆರೋಗ್ಯಕರ ಅಭ್ಯಂಗ ಸ್ನಾನಕ್ಕೆ ಕೊಬ್ಬರಿ ಎಣ್ಣೆ, ಧನ್ವಂತರಿ ತೈಲ, ನಾರಾಯಣ ತೈಲ, ಎಳ್ಳೆಣ್ಣೆ ಮಹಾನಾರಾಯಣ ತೈಲ ಇತ್ಯಾದಿ ಬಳಸಬಹುದು ಆದರೆ ಎಳ್ಳೆಣ್ಣೆ ಶ್ರೇಷ್ಠ.

2 ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಶ್ರೀಗಂಧದ ಎಣ್ಣೆಯನ್ನು ತ್ವಚೆಯ ಹಾಗೂ ಕೂದಲ ಆರೈಕೆಗೆ ಬಳಸಲಾಗುತ್ತದೆ. ಇದರ ಜತೆಗೆ ಇತರ ತೆ„ಲಗಳನ್ನು ಮಿಶ್ರಣ ಮಾಡಿ ಬಳಸಲಾಗುತ್ತದೆ.

3 ಎಳ್ಳೆಣ್ಣೆಯ ಜತೆ 20 ಹನಿ ಸುವಾಸಿತ ಮಲ್ಲಿಗೆ, 8 ಹನಿ ಕಿತ್ತಳೆ ರಸ ಮಿಶ್ರ ಮಾಡಿ ಹಚ್ಚುವುದರಿಂದ ಮನಸ್ಸು ರಿಲ್ಯಾಕ್ಸ್‌ ಆಗುತ್ತದೆ.

4 ತೆಂಗಿನ ಎಣ್ಣೆಯ ಜತೆ 1 ಹನಿ ಶ್ರೀಗಂಧ, 6 ಹನಿ ನಿಂಬೆ ಸೇರಿಸಿ ತಲೆಗೆ ಹಚ್ಚಿದರೆ ಮಾನಸಿಕ ಒತ್ತಡದ ಸಮಸ್ಯೆಗಳಿಂದ ದೂರವಿರುಬಹುದು ಹಾಗೂ ಮನಸ್ಸು ಶಾಂತಿಯಿಂದ ಇರಲು ಸಹಾಯಕ.

5 ಮಾಂಸಖಂಡಗಳ ನೋವು ನಿವಾರಣೆಗೆ ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರೊಂದಿಗೆ ಎಳ್ಳೆಣ್ಣೆ , ನೀಲಗಿರಿ ತೆ„ಲ ಸೇರಿಸಿ ಬಳಸಿ ಮƒದುವಾಗಿ ಮಸಾಜ್‌ ನೀಡುವುದು ಉತ್ತಮ.

-  ಪ್ರಜ್ಞಾ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮರೆವು ಒಂದು ರೀತಿಯ ಮೆದುಳಿನ ನ್ಯೂನತೆ. ಭೌತಿಕ ಅಥವಾ ಮಾನಸಿಕ ಆಘಾತದಿಂದ ಉಂಟಾಗುವ ರೋಗವಿದು. ಮನಸ್ಸಿಗೆ ತೀವ್ರ ರೀತಿಯ ಆಘಾತವಾದಾಗ ಅದರಿಂದ ಘಾಸಿಯಾಗಿ ಜ್ಞಾಪಕ...

  • ಸಾಮಾನ್ಯವಾಗಿ ಹುಡುಗಿಯರಷ್ಟೇ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಮಾತಿದೆ. ಅಂತೆಯೇ ಪುರುಷರು ಕೂಡ ಇತ್ತೀಚೆಗೆ ಹೆಚ್ಚು ಸೌಂದರ್ಯ ಕಾಳಜಿ ವಹಿಸುತ್ತಿರುವುದು...

  • ನಮ್ಮ ಮನೆಯ ಅಡುಗೆ ಮನೆಯಲ್ಲಿ ಹಲವಾರು ಔಷಧ ಗುಣಗಳಿರುವ ಮತ್ತು ಆರೋಗ್ಯದಾಯಕ ವಸ್ತುಗಳಿವೆ. ಅವುಗಳ ಪ್ರಯೋಜನವನ್ನು ತಿಳಿದು ಬಳಸಿದರೆ ರೋಗ ನಿಯಂತ್ರಣಕಾರಿಯಾಗಿ...

  • ಉಪ್ಪು ಆಹಾರ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರ ಎಷ್ಟೇ ಚೆನ್ನಾಗಿದ್ದರೂ ಉಪ್ಪಿನಂಶಇಲ್ಲದಿದ್ದರೆ ಅದರ ರುಚಿ ಕೆಟ್ಟು ಹೋಗುತ್ತದೆ. ಉಪ್ಪು...

  • ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು...

ಹೊಸ ಸೇರ್ಪಡೆ