ಸರಳ ವ್ಯಾಯಾಮಕ್ಕೆ ಥೆರಾ ಬ್ಯಾಂಡ್‌

Team Udayavani, Aug 6, 2019, 7:33 AM IST

ಮನೆಯಲ್ಲೇ ಕುಳಿತು ಯಾರ ಸಹಾಯವೂ ಇಲ್ಲದೇ ನಮ್ಮಷ್ಟಕ್ಕೆ ನಾವೇ ಸರಳವಾದ ವ್ಯಾಯಾಮಗಳನ್ನು ಮಾಡಿ ಸದಾ ಫಿಟ್‌ ಆಗಿರಬಹುದು ಕೆಲ ವ್ಯಾಯಾಮಗಳ ಪೈಕಿ ರೆಸಿಸ್ಟೆಸ್‌Õ ಬ್ಯಾಂಡ್‌ (ಥೆರಾ ಬ್ಯಾಂಡ್‌) ಒಂದು. ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಇದು ಲಭ್ಯವಿದ್ದು ಕಡಿಮೆ ಸಮಯದಲ್ಲಿ ಸರಳ ವ್ಯಾಯಾಮವನ್ನು ಮಾಡಬಹುದಾಗಿದೆ.

ರೆಸಿಸ್ಟೆಸ್‌Õ ಬ್ಯಾಂಡ್‌
ರೆಸಿಸ್ಟೆಸ್‌Õ ಬ್ಯಾಂಡ್‌ ಒಂದು ರಬ್ಬರ್‌ ಬ್ಯಾಂಡ್‌ (ಪಟ್ಟಿ). ಇದರ ಎರಡು ಬದಿಯ ತುದಿಗೆ ಮುಷ್ಟಿಯಲ್ಲಿ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಗಟ್ಟಿಯಾದ ಪ್ಲಾಸ್ಟಿಕ್‌ ಹಿಡಿಕೆಗಳು ಇರುತ್ತವೆ. ಇದರ ರಬ್ಬರ್‌ ಟ್ಯೂಬ್‌ ನೀವು ಎಳೆಯುವ ಒತ್ತಡವನ್ನು ತಡೆದುಕೊಳ್ಳುವಂತಿರುತ್ತದೆ. ತುಂಬ ಹಗುರವಾಗಿರುವುದರಿಂದ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಬಹುದು.

ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಂಡ್‌ ವಿಧಗಳು
ಹಲವು ವಿಧದ ಬ್ಯಾಂಡ್‌ಗಳು ಲಭ್ಯ ವಿದ್ದು ಒಂದು ಎಳೆ, ಎರಡು, ಮೂರು
ಹೀಗೆ ಅವರವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಂಡ್‌ಗಳನ್ನು ಉಪಯೋಗಿಸಬಹುದು. ರನ್ನಿಂಗ್‌ ಮಾಡುವವರಿಗೆ ದಪ್ಪವಾದ ಬ್ಯಾಂಡ್‌ ಹಾಗೂ ಜಿಮ್‌ನಲ್ಲಿ ದೇಹವನ್ನು ಹುರಿಗೊಳಿಸುವ ಹೆಚ್ಚು ಬಿಗಿಯಾಗಿರುವ ಬ್ಯಾಂಡ್‌ಗಳನ್ನು ಉಪಯೋಗಿಸುತ್ತಾರೆ.

ಉಪಯೋಗ
ಜಿಮ್‌ಗೆ ಹೋಗಿ ಡಂಬಲ್‌ಗ‌ಳನ್ನು ಮುಷ್ಟಿಯಲ್ಲಿ ಎತ್ತಿ ತೋಳು ಹಾಗೂ ಮುಂಗೈಗಳನ್ನು ಬಲಗೊಳಿಸುವಂತೆ ಅಷ್ಟೇ ಪರಿಣಾಮಕಾರಿಯಾಗಿ ತೋಳುಗಳ ಸ್ನಾಯುಗಳನ್ನು ಬಲಗೊಳಿಸುವಲ್ಲಿ ಈ ಬ್ಯಾಂಡ್‌ಗಳು ಸಹಕಾರಿ. ಈ ಬ್ಯಾಂಡ್‌ ಅನ್ನು ನೆಲದ ಮೇಲೆ ನೇರವಾಗಿ ಹಾಸಿ ಮಧ್ಯಭಾಗದಲ್ಲಿ ಅದರ ಮೇಲೆ ನಿಂತು ಹಿಡಿಕೆಗಳನ್ನು ಮುಷ್ಟಿಯಲ್ಲಿ ಹಿಡಿದು ಡಂಬಲ್ಸ್‌ ಎತ್ತುವ ರೀತಿಯಲ್ಲಿಯೇ ಒಂದೊಂದೇ ಮುಷ್ಟಿಗಳನ್ನು ಭುಜದವರೆಗೆ ತಂದು ಹತ್ತು ಸೆಕೆಂಡುಗಳ ಕಾಲ ಒತ್ತಡವನ್ನು ತಡೆದುಕೊಂಡು ಅದೇ ಸ್ಥಿತಿಯಲ್ಲಿರಬೇಕು. ಅನಂತರ ನಿಧಾನವಾಗಿ ಕೆಳಗಿಳಿಸಬೇಕು.

ಇದನ್ನು ಕಂಬಕ್ಕೆ ಸುತ್ತಿ ಇಲ್ಲವೇ ನಿಮ್ಮ ಮನೆಯ ಕಿಟಿಕಿಯ ಸರಳುಗಳಿಗೆ ಸಿಕ್ಕಿಸಿ ಭುಜ, ಎದೆ, ಕಾಲು, ತೊಡೆ ಭಾಗದ ಸ್ನಾಯುಗಳಿಗೆ ವ್ಯಾಯಾಮ ನೀಡಿ ಬಲಗೊಳಿಸಬಹುದು.

- ಕಾರ್ತಿಕ್‌ ಚಿತ್ರಾಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮರೆವು ಒಂದು ರೀತಿಯ ಮೆದುಳಿನ ನ್ಯೂನತೆ. ಭೌತಿಕ ಅಥವಾ ಮಾನಸಿಕ ಆಘಾತದಿಂದ ಉಂಟಾಗುವ ರೋಗವಿದು. ಮನಸ್ಸಿಗೆ ತೀವ್ರ ರೀತಿಯ ಆಘಾತವಾದಾಗ ಅದರಿಂದ ಘಾಸಿಯಾಗಿ ಜ್ಞಾಪಕ...

  • ಸಾಮಾನ್ಯವಾಗಿ ಹುಡುಗಿಯರಷ್ಟೇ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಮಾತಿದೆ. ಅಂತೆಯೇ ಪುರುಷರು ಕೂಡ ಇತ್ತೀಚೆಗೆ ಹೆಚ್ಚು ಸೌಂದರ್ಯ ಕಾಳಜಿ ವಹಿಸುತ್ತಿರುವುದು...

  • ನಮ್ಮ ಮನೆಯ ಅಡುಗೆ ಮನೆಯಲ್ಲಿ ಹಲವಾರು ಔಷಧ ಗುಣಗಳಿರುವ ಮತ್ತು ಆರೋಗ್ಯದಾಯಕ ವಸ್ತುಗಳಿವೆ. ಅವುಗಳ ಪ್ರಯೋಜನವನ್ನು ತಿಳಿದು ಬಳಸಿದರೆ ರೋಗ ನಿಯಂತ್ರಣಕಾರಿಯಾಗಿ...

  • ಉಪ್ಪು ಆಹಾರ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರ ಎಷ್ಟೇ ಚೆನ್ನಾಗಿದ್ದರೂ ಉಪ್ಪಿನಂಶಇಲ್ಲದಿದ್ದರೆ ಅದರ ರುಚಿ ಕೆಟ್ಟು ಹೋಗುತ್ತದೆ. ಉಪ್ಪು...

  • ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು...

ಹೊಸ ಸೇರ್ಪಡೆ