ನೀವೂ ಬಳಸಿ ನೈಸರ್ಗಿಕ ಶ್ಯಾಂಪೂ

Team Udayavani, Dec 17, 2019, 5:52 AM IST

ಪ್ರತಿನಿತ್ಯ ಟಿವಿ, ಮೊಬೈಲ್‌ಗ‌ಳಲ್ಲಿ ಸೌಂದರ್ಯ ವರ್ಧಕದ ಜಾಹೀರಾತುಗಳು ಸಾವಿರಾರು ಬರುತ್ತವೆ. ಅದರಲ್ಲಿಬಹುಪಾಲು ಕೇಶಕ್ಕೆ ಸಂಬಂಧಿಸಿದವುಗಳೇ ಆಗಿರುತ್ತವೆ. ಶ್ಯಾಂಪೂಗಳಿಂದ ಕೂದಲು ಉದ್ದ ಬರುತ್ತದೆ, ತಲೆ ಹೊಟ್ಟು ಕಡಿಮೆಯಾಗುತ್ತದೆ ಮೊದಲಾದ ನಂಬಿಕೆಗಳನ್ನು ಈ ಶ್ಯಾಂಪೂ ಜಾಹೀರಾತುಗಳು ಸೃಷ್ಟಿಸುತ್ತವೆ. ಆದರೆ ನಿಜವಾಗಿ ಹೆಚ್ಚಿನ ಎಲ್ಲ ರಾಸಾಯನಿಕ ಪದಾರ್ಥಯುಕ್ತ ಶ್ಯಾಂಪೂಗಳು ಕೂದಲಿನ ಸತ್ವವನ್ನು ಕಡಿಮೆಮಾಡಿ ಬಲಿಷ್ಠತೆ ಕಳೆದುಕೊಳ್ಳುವಂತೆ ಮಾಡುತ್ತದೆ. ರಾಸಾಯನಿಕ ಶ್ಯಾಂಪೂಗಳಿಗಿಂತ ಹೆಚ್ಚಾಗಿ ಗಿಡಮೂಲಿಕೆಗಳ ಶ್ಯಾಂಪೂಗಳು ತಲೆಕೂದಲಿಗೆ ಆರೋಗ್ಯವನ್ನು ನೀಡುತ್ತವೆ. ಇದರಿಂದ ಯಾವುದೇ ವಿಧವಾದ ಸೈಡ್‌ ಎಫೆಕ್ಟ್ಗಳೂ ಇರುವುದಿಲ್ಲ.

ದಾಸವಾಳ
ದಾಸವಾಳ ಹೂ ಹಾಗೂ ಇದರ ಎಲೆ ಅತ್ಯುತ್ತಮ ಶ್ಯಾಂಪೂ ಆಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಜಜ್ಜಿ ತಲೆಗೆ ಹಚ್ಚುವುದರಿಂದ ಕೂದಲಿಗೆ ತಂಪು ಉಂಟಾಗುತ್ತದೆ. ಉದ್ದಕ್ಕೆ ಬೆಳೆಯಲೂ ಇದು ಸಹಕಾರಿ. ದಾಸವಾಳದ ಎಲೆ ಹಾಗೂ ನೀರಿನಲ್ಲಿ ನೆನೆಸಿದ ಮೆಂತೆಯನ್ನು ಪೇಸ್ಟ್‌ ಮಾಡಿ ಹಚ್ಚಬಹುದು. ಇದು ಕೂದಲಿನಲ್ಲಿರುವ ಜಿಡ್ಡಿನ ಅಂಶವನ್ನು ತೆಗೆಯಲು ಸಹಕಾರಿ. ಮೆಂತೆಯೂ ದೇಹಕ್ಕೆ ತಂಪನ್ನು ನೀಡುತ್ತದೆ. ಜತೆಗೆ ಕೂದಲಿನ ಬೆಳವಣಿಗೆಗೂ ಇದು ಉತ್ತಮ.

ಲೋಳೆಸರ
ಹೆಚ್ಚಿನ ಎಲ್ಲ ಶ್ಯಾಂಪೂಗಳು ಲೋಳೆಸರ ಜೆಲ್ಲಿಯಿಂದ ತಯಾರಿಸಲಾಗಿದೆ ಎಂದು ಹೇಳಿದರೂ ಅದರಲ್ಲಿರುವ ಪ್ರಮಾಣ ಎಷ್ಟು ಎಂಬುದು ಪ್ರಶ್ನಾತೀತ. ಲೋಳೆಸರ ಜೆಲ್ಲಿಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಹೊಳೆಯುತ್ತದೆ ಹಾಗೂ ಸೊಂಪಾಗಿ ಬೆಳೆಯುತ್ತದೆ.

ಸರೋಳಿ ಸೊಪ್ಪಿನ ರಸ (ಗೊಂಪು)ಇದು ಸಣ್ಣ ಮಕ್ಕಳಿಗೆ ತಲೆಗೆ ಹಚ್ಚುವಂತಹ ರಸ. ಈ ಸೊಪ್ಪಿನ ರಸ ತೆಗೆದು ಶ್ಯಾಂಪೂ ಆಗಿ ಬಳಸಬಹುದು. ಕೂದಲು ಬೆಳೆಯಲು ಬೇಕಾಗುವ ಅಂಶಗಳು ಈ ಸೊಪ್ಪಿನಲ್ಲಿವೆ.

ಸೀಗೆ ಕಾಯಿ
ಸೀಗೆ ಕಾಯಿಯಲ್ಲಿರುವ ನೊರೆ ಅಂಶವು ಕೂದಲಿನ ಜಿಡ್ಡು ನಿವಾರಣೆಗೆ ಸಹಕಾರಿ. ಇದನ್ನು ತಲೆಗೆ ಹಚ್ಚುವುದರಿಂದ ಯಾವುದೇ ವಿಧವಾದ ಸೈಡ್‌ ಎಫೆಕ್ಟ್ ಗಳಿಲ್ಲ. ಕೂದಲಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.ಜಾಹೀರಾತನ್ನು ನೋಡಿ ಬಳಸುವ ಮುನ್ನ ಮನೆ ಹಿತ್ತಿಲಿನಲ್ಲಿರುವ ಮದ್ದುಗಳನ್ನು ಒಂದು ಸಲ ಪ್ರಯೋಗಿಸುವುದು ಒಳಿತು.

-   ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮರೆವು ಒಂದು ರೀತಿಯ ಮೆದುಳಿನ ನ್ಯೂನತೆ. ಭೌತಿಕ ಅಥವಾ ಮಾನಸಿಕ ಆಘಾತದಿಂದ ಉಂಟಾಗುವ ರೋಗವಿದು. ಮನಸ್ಸಿಗೆ ತೀವ್ರ ರೀತಿಯ ಆಘಾತವಾದಾಗ ಅದರಿಂದ ಘಾಸಿಯಾಗಿ ಜ್ಞಾಪಕ...

  • ಸಾಮಾನ್ಯವಾಗಿ ಹುಡುಗಿಯರಷ್ಟೇ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಮಾತಿದೆ. ಅಂತೆಯೇ ಪುರುಷರು ಕೂಡ ಇತ್ತೀಚೆಗೆ ಹೆಚ್ಚು ಸೌಂದರ್ಯ ಕಾಳಜಿ ವಹಿಸುತ್ತಿರುವುದು...

  • ನಮ್ಮ ಮನೆಯ ಅಡುಗೆ ಮನೆಯಲ್ಲಿ ಹಲವಾರು ಔಷಧ ಗುಣಗಳಿರುವ ಮತ್ತು ಆರೋಗ್ಯದಾಯಕ ವಸ್ತುಗಳಿವೆ. ಅವುಗಳ ಪ್ರಯೋಜನವನ್ನು ತಿಳಿದು ಬಳಸಿದರೆ ರೋಗ ನಿಯಂತ್ರಣಕಾರಿಯಾಗಿ...

  • ಉಪ್ಪು ಆಹಾರ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರ ಎಷ್ಟೇ ಚೆನ್ನಾಗಿದ್ದರೂ ಉಪ್ಪಿನಂಶಇಲ್ಲದಿದ್ದರೆ ಅದರ ರುಚಿ ಕೆಟ್ಟು ಹೋಗುತ್ತದೆ. ಉಪ್ಪು...

  • ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು...

ಹೊಸ ಸೇರ್ಪಡೆ