ಅಪೌಷ್ಟಿಕತೆ ಇರಲಿ ಆರೋಗ್ಯ ಕಾಳಜಿ

Team Udayavani, Oct 1, 2019, 5:42 AM IST

ದೇಶವನ್ನು ಕಾಡುತ್ತಿರುವ ಬಹುದೊಡ್ಡ ಆರೋಗ್ಯ ಸಮಸ್ಯೆ ಅಪೌಷ್ಟಿಕತೆ. ಇತ್ತೀಚೆಗೆ ಬಿಡುಗಡೆಯಾದ ವರದಿಯ ಪ್ರಕಾರ ಭಾರತದಲ್ಲಿ 5 ವರ್ಷ ವಯೋಮಾನದೊಳಗಿನ 68 ಪ್ರತಿಶತ ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿ ದ್ದಾರೆ.ಇದರೊಂದಿಗೆ ತಾಯಂದಿರು ಕೂಡ ಈ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸೇವಿ ಸುವ ಆಹಾರ ಪೌಷ್ಟಿಕತೆಯಿಂದ ಕೂಡಿದ್ದರೆ ಮಾನವ ಆರೋಗ್ಯಕರವಾಗಿರಲು ಸಾಧ್ಯ.

ದೇಹಕ್ಕೆ ಶಕ್ತಿ ತುಂಬಲೆಂದೋ, ಮಕ್ಕಳ ಬೆಳವಣಿಗೆಗೆಂದೋ ಆಹಾರ ಸೇವಿಸಿದರೆ, ಅದು ಆಹಾರವಾಗಿಯಷ್ಟೇ ಹೊಟ್ಟೆ ಸೇರುತ್ತದೆ ವಿನಾ ಪೌಷ್ಟಿಕಾಂಶಯುಕ್ತ ಆಹಾರವಾಗದು. ಆಹಾರ ಬೇಕೆಂದು ಬೇಕಾಬಿಟ್ಟಿಯಾಗಿ ಸಿಕ್ಕಿದ್ದನ್ನೆಲ್ಲ ತಿನ್ನುವುದೂ, ತಿನ್ನಿಸುವುದೂ ಎಳವೆಯಿಂದಲೇ ಹಾನಿಕಾರಕ. ಕಳಪೆ ಆಹಾರ, ಆಹಾರದ ಕೊರತೆಯೂ ಅಪೌಷ್ಟಿಕತೆ ಹೆಚ್ಚಲು ಕಾರಣವಾಗುತ್ತದೆ.

ಅಪೌಷ್ಟಿಕತೆ ಎಂಬುದು ಪ್ರಸ್ತುತ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಸೇವಿಸುವ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಪೋಷಕಾಂಶಗಳು ಇಲ್ಲದೇ ಇದ್ದಲ್ಲಿ ದೇಹದ ಒಟ್ಟು ಬೆಳವಣಿಗೆಗೆ ಪೋಷಣೆ ಸಿಗುವುದಿಲ್ಲ. ಇದರಿಂದ ಅಪೌಷ್ಟಿಕತೆ ಸಮಸ್ಯೆ ತಲೆದೋರಿ ತಾಯಂದಿರು, ಮಕ್ಕಳಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತೀವ್ರವಾದ ಅಪೌಷ್ಟಿಕತೆಯಿಂದಾಗಿ ಮಕ್ಕಳು ಮರಣವಪ್ಪುವ ಸಾಧ್ಯತೆಗಳೂ ದಟ್ಟವಾಗಿವೆ. 5 ವರ್ಷದೊಳಗಿನ ಮಕ್ಕಳ ಸಾವಿಗೆ ಅಪೌಷ್ಟಿಕತೆಯೇ ಮೂಲಕ ಕಾರಣವಾಗಿದೆ

ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌, ಪಬ್ಲಿಕ್‌ ಹೆಲ್ತ್‌ ಫೌಂಡೇಶನ್‌ ಆಫ್‌ ಇಂಡಿಯಾ ಮತ್ತು ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಟ್ರಿಶನ್‌ ಸಂಸ್ಥೆಗಳ ವರದಿ ಪ್ರಕಾರ ಭಾರತದಲ್ಲಿ ಶೇ. 15ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಕಡಿಮೆ ತೂಕ, ರಕ್ತಹೀನತೆ ಮುಂತಾದ ಸಮಸ್ಯೆಗಳು ಮಕ್ಕಳಲ್ಲಿ ಇದರಿಂದಾಗಿ ಕಂಡು ಬರುತ್ತಿವೆ. ದಣಿವು, ಆಯಾಸ, ಅನಾಸಕ್ತಿ, ಪದೇಪದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು ಮುಂತಾದವು ಪೌಷ್ಟಿಕಾಂಶ ಕೊರತೆಯಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳು. ಪುರುಷ ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಕೊರತೆ ಕೂಡಾ ಅಪೌಷ್ಟಿಕತೆಯಿಂದಾಗಿ ಉಂಟಾಗುತ್ತದೆ.

ಡಯಟ್‌ ಮಾಡುವಿಕೆ, ಕಡಿಮೆ ಆಹಾರ ಸೇವನೆಯೂ ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕಾಗುತ್ತದೆ. ಅತಿಯಾದ ಅಪೌಷ್ಟಿಕತೆಯಿಂದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ ಎನ್ನುತ್ತದೆ ವೈದ್ಯಲೋಕ. ಬೆಳವಣಿಗೆ ಕುಂಠಿತವಾಗುವುದು, ತೂಕ ಹೆಚ್ಚಾಗುವುದೂ ಅಪೌಷ್ಟಿಕತೆಗೆ ಕಾರಣವಾಗುತ್ತಿದೆ.

ಸೊಪ್ಪು ತರಕಾರಿ ಸೇವಿಸಿ
ಹಸಿರು ಸೊಪ್ಪು, ತರಕಾರಿ, ಮೀನು, ದವಸ ಧಾನ್ಯ, ಮೊಟ್ಟೆ ಸೇವಿಸುವುದರಿಂದ ಪೌಷ್ಟಿಕಾಂಶ ಹೆಚ್ಚಾಗಲು ಸಾಧ್ಯವಾಗುತ್ತದೆ. ಭ್ರೂಣವು ಹೊಟ್ಟೆಯಲ್ಲಿ ಬೆಳವಣಿಗೆ ಹಂತದಲ್ಲಿರುವಾಗಲೇ ತಾಯಿ ಹೆಚ್ಚಾಗಿ ಪಾಲಕ್‌ ಸೊಪ್ಪು, ಮೆಂತ್ಯೆ ಸೊಪ್ಪು, ನುಗ್ಗೆ ಸೊಪ್ಪು, ಪುದೀನಾ ಸೊಪ್ಪು ಸೇವಿಸಬೇಕು. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಹಸಿರು ಎಲೆ ತರಕಾರಿಗಳು ದೇಹದಲ್ಲಿ ಎ ಅನ್ನಾಂಗವಾಗಿ ಪರಿವರ್ತನೆಯಾಗುತ್ತವೆ. ಇದರಿಂದ ಕುರುಡುತನ ಮುಂತಾದವುಗಳನ್ನು ತಪ್ಪಿಸಬಹುದು.

ಪರೀಕ್ಷೆಗೊಳಪಡಿಸಿ
ಮಗುವನ್ನು ಕಾಲಕಾಲಕ್ಕೆ ವೈದ್ಯರಲ್ಲಿ ಪರೀಕ್ಷೆಗೊಳಪಡಿಸಿ. ಅಪೌಷ್ಟಿಕತೆ ಬಗ್ಗೆ ವೈದ್ಯರು ತಿಳಿಸಿದ್ದಲ್ಲಿ ಸೂಕ್ತ ಪೋಷಕಾಂಶಭರಿತ ಆಹಾರ ಸೇವಿಸುವುದರತ್ತ ಗಮನ ಹರಿಸಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಸೊಪ್ಪು ತರಕಾರಿ, ದವಸಧಾನ್ಯಗಳ ಸೇವನೆಗೆ ಮೊದಲ ಆದ್ಯತೆ ಇರಲಿ. ಹಾಲು, ಮೊಸರು, ಮೊಟ್ಟೆ, ಮೀನು ಸೇವನೆ ರೂಢಿಯಾಗಲಿ. ಒಟ್ಟಿನಲ್ಲಿ ದೇಹಕ್ಕೆ ಬೇಕಾಗುವ ಉತ್ತಮ ವಿಟಮಿನ್‌, ಖನಿಜಾಂಶ, ಪೋಷಕಾಂಶಭರಿತ ಆಹಾರದತ್ತ ಗಮನಹರಿಸಿ. ಗರ್ಭಿಣಿಯರು ಪೌಷ್ಟಿಕಾಂಶಭರಿತ ಆಹಾರ ಸೇವನೆ ಮಾಡುವುದರೊಂದಿಗೆ ವೈದ್ಯರ ಸಲಹೆಯೊಂದಿಗೆ ಕಬ್ಬಿಣಾಂಶ ಮಾತ್ರೆಗಳನ್ನು ಸೇವನೆ ಮಾಡಬೇಕು.

ಆರೋಗ್ಯ ಸ್ಥಿರ
ಮೂಢನಂಬಿಕೆ, ಬಡತನ, ಆಹಾರ ತೆಗೆದುಕೊಳ್ಳುವ ಸಂಬಂಧಿ ಸಿದಂತೆ ಇರುವ ಮಾಹಿತಿ ಕೊರತೆ ಮುಂತಾದ ಕಾರಣಗಳಿಂದಾಗಿ ಅಪೌಷ್ಟಿಕತೆ ಪ್ರಮಾಣ ಹೆಚ್ಚುತ್ತಿದೆ. ಮಹಿಳೆ ಗರ್ಭಾವಸ್ಥೆಯಲ್ಲಿರುವಾಗ ಸೂಕ್ತ ಪ್ರಮಾ ಣದ ಪೋಷಕಾಂಶಯುಕ್ತ ಆಹಾರ, ಸೊಪ್ಪು ತರಕಾರಿ, ಧಾನ್ಯಗಳನ್ನು ಸೇವನೆ ಮಾಡಬೇಕು. ಸಮತೋಲಿತ ಆಹಾರ ಕ್ರಮ ರೂಢಿಸಿ ಕೊಂಡರೆ ಮಗುವಿನ ಬೆಳವಣಿಗೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದು. ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ಪೌಷ್ಟಿಕತೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.
– ಡಾ| ಸವಿತಾ, ವೈದ್ಯರು

- ಧನ್ಯಾ ಬಾಳೆಕಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಮ್ಮ ದಿನನಿತ್ಯದ ಆಹಾರದಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತೇವೆ. ಅವು ತನ್ನದೇ ಆದ ಸುವಾಸನೆಯನ್ನು ಹೊಂದಿವೆ. ಇವು ಆಹಾರವನ್ನು ರುಚಿಯಾಗಿಸುವುದು...

  • ಪಂಚೇಂದ್ರಿಯಗಳಲ್ಲಿ ಅತಿ ಸೂಕ್ಷ್ಮವಾದ ಇಂದ್ರಿಯ ಎಂದರೆ ಅದು ಕಣ್ಣು. ಇದನ್ನು ರಕ್ಷಿಸಿಕೊಳ್ಳುವುದಕ್ಕೆ ಅಷ್ಟೇ ರೀತಿಯಾಗಿ ಪ್ರಾಮುಖ್ಯತೆ ನೀಡಬೇಕಾಗುತ್ತದೆ....

  • ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿದಂತೆಲ್ಲಾ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಲಾಗುತ್ತಿದೆ. ಇತಂಹ ವಿಶಿಷ್ಟ ವ್ಯಾಯಾಮಗಳ...

  • ಸುಂದರವಾರ ತ್ವಚೆ ಹೊಂದುವುದು ಎಲ್ಲರ ಆಸೆ. ಆದರೆ ಮಲಿನಗೊಂಡ ವಾತಾವರಣ, ಸರಿಯಾದ ಆರೈಕೆ ಮಾಡದಿರುವುದು, ಜೀವನಶೈಲಿಯಿಂದ ತ್ವಚೆ ಹೊಳಪು ಕಳೆದುಕೊಂಡಿರುತ್ತದೆ....

  • ತೆಂಗಿನ ಎಣ್ಣೆಗೆ ಆಯುರ್ವೇದದಲ್ಲಿ ಪ್ರಮುಖ ಸ್ಥಾನವಿದೆ. ತೆಂಗಿನೆಣ್ಣೆಯು ಆರೋಗ್ಯವರ್ಧಕವಾಗಿ ಮತ್ತು ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಪ್ರತಿದಿನದ ಬದುಕಿನಲ್ಲಿ...

ಹೊಸ ಸೇರ್ಪಡೆ