ಮಹಿಳೆಯರ ನೆಚ್ಚಿನ ಸಂಗಾತಿ ಮೆನ್‌ಸ್ಟ್ರೆವಲ್‌ ಕಪ್‌

Team Udayavani, Sep 10, 2019, 5:24 AM IST

ಋತುಚಕ್ರ ಹೆಣ್ಣು ಮಕ್ಕಳಲ್ಲಿ ಸ್ವಾಭಾವಿಕ. ಪ್ರತಿ ತಿಂಗಳು ಹೆಣ್ಮಕ್ಕಳು ಈ ಋತುಚಕ್ರದಲ್ಲಿ ಸಾಕಷ್ಟು ಮಾನಸಿಕ, ದೈಹಿಕ ಹಿಂಸೆ, ನೋವು ಅನುಭವಿಸುತ್ತಾರೆ. ಹಿಂದೆ ಋತುಚಕ್ರದ ವೇಳೆ ಬಟ್ಟೆಗಳು ಉಪಯೋಗವಾಗುತ್ತಿತ್ತು. ಆ ಬಳಿಕ ಅದರ ಸ್ಥಾನಕ್ಕೆ ಸ್ಯಾನಿಟರಿ ಪ್ಯಾಡ್‌ಗಳ ಆಗಮನವಾಗಿ ಮಹಿಳೆಯರಿಗೆ ಕೊಂಚ ನೆಮ್ಮದಿ ನೀಡಿತ್ತು. ಆದರೆ ಪ್ಯಾಡ್‌ಗಳ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದೀಗ ಸ್ಯಾನಿಟರಿ ಪ್ಯಾಡ್‌ಗಳ ಜಾಗಕ್ಕೆ ಬಂದಿದೆ ಮನ್‌ಸ್ಟ್ರೆವಲ್‌ ಕಪ್‌ (ಮುಟ್ಟಿನ ಕಪ್‌). ಇವುಗಳ ಬಳಕೆ ಹೇಗೆ, ಪ್ರಯೋಜನಗಳೇನು ಎಂಬ ಮಾಹಿತಿ ಇಲ್ಲಿದೆ.

ಹೆಣ್ಣು ಮಕ್ಕಳಿಗೆ ಮುಟ್ಟು ಸ್ವಾಭಾವಿಕ. ಆ ನೋವು ಸಹಿಸುವುದರೊಂದಿಗೆ ಆ ಸಮಯವನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಉದ್ಯೋಗಕ್ಕಾಗಿ ಹೊರಗಡೆ ತೆರಳುವ ಮಹಿಳೆಯರಿಗೆ ಈ ಸಮಯವನ್ನು ಕೂಲ್‌ ಆಗಿ ನಿಭಾಯಿಸುವುದು ಸವಾಲು.

ದಶಕಗಳ ಹಿಂದೆ ಮುಟ್ಟಿನ ಸಮಯದಲ್ಲಿ ಬಟ್ಟೆಗಳನ್ನು ಬಳಸುತ್ತಿದ್ದರು. ಬಳಸಿದ ಬಟ್ಟೆಯನ್ನು ಶುಚಿಯಾಗಿಟ್ಟುಕೊಳ್ಳಬೇಕಾಗಿತ್ತು. ಶುದ್ಧತೆ ಕಾಪಾಡಿಕೊಳ್ಳದೆ ಇದ್ದಲ್ಲಿ ಸೋಂಕುಗಳು ಕಾಣಿಸಿಕೊಳ್ಳುತ್ತವೆ ಎಂಬ ಕಾರಣಕ್ಕಾಗಿ ಇಂದು ಹೆಚ್ಚಿನ ಮಹಿಳೆಯರು ಸ್ಯಾನಿಟರಿ ಪ್ಯಾಡ್‌, ಟ್ಯಾಂಪೂನ್‌ ಬಳಸಲಾರಂಭಿಸಿದ್ದಾರೆ. ಆದರೆ ಹೊರಗಡೆ ಹೋದಾಗ ಅದನ್ನು ನಿಭಾಯಿಸುವುದು ಕಷ್ಟ. ಪ್ಯಾಡ್‌ ಬದಲಾಯಿಸಿಕೊಳ್ಳುವ ಅವಕಾಶ ಎಲ್ಲಾ ಕಡೆಯಲ್ಲೂ ಇರುವುದಿಲ್ಲ. ಅದಕ್ಕಾಗಿ ಋತುಚಕ್ರದ ವೇಳೆ ಧರಿಸಲು ಹೊಸ ಅವಿಷ್ಕಾರವಾಗಿರುವಂತಹ ಮೆನ್‌ಸ್ಟ್ರೆವಲ್‌ ಕಪ್‌ ಬಂದಿದೆ. ಇದು ಸ್ವಚ್ಛತೆಯನ್ನು ಮತ್ತೂಂದು ಮಟ್ಟಕ್ಕೆ ಕೊಂಡೊಯ್ದಿದೆ.

ಪ್ಯಾಡ್‌ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಈ ಕಪ್‌ ತುಂಬಾ ನೆರವಿಗೆ ಬರುತ್ತದೆ. ಇದನ್ನು ಬಳಸುವುದು ತುಂಬಾ ಸುಲಭ. ಹಲವಾರು ಅಧ್ಯಯನಗಳು ಇದರಿಂದ ಆರೋಗ್ಯದ ಮೇಲೆ ಮಾರಕ ಪರಿಣಾಮವಿಲ್ಲ ಎಂದು ಹೇಳಿವೆ.

ಮೆನ್‌ಸ್ಟ್ರೆವಲ್‌ ಕಪ್‌ಗಳ ಪ್ರಯೋಜನ
ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿದರೆ ಅದನ್ನು ಆಗಾಗ ಬದಲಾಯಿಸಬೇಕಾಗುತ್ತದೆ. ಅಧಿಕ ರಕ್ತಸ್ರಾವ ಇರುವವರಿಗೆ ಇದನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಆದರೆ ಕಪ್‌ಗ್ಳಿಂದ ಅಧಿಕ ರಕ್ತಸ್ರಾವದಿಂದ ಆಗುವ ಮುಜುಗರ ತಪ್ಪುತ್ತದೆ. ಇದಕ್ಕೆ 12 ಗಂಟೆಗಳ ರಕ್ತಸ್ರಾವವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಅದರೊಂದಿಗೆ ಕಪ್‌ ಸ್ವತ್ಛತೆಯನ್ನು ಕಾಪಾಡುತ್ತದೆ. ಅಲರ್ಜಿ ಸಮಸ್ಯೆ ಇಲ್ಲ. ಒಮ್ಮೆ ಬಳಸಿದ ಕಪ್‌ನ್ನು ಮತ್ತೂಮ್ಮೆ ಬಳಸಬಹುದು. ಕೆಲವು ಮಹಿಳೆಯರು ಇದನ್ನು ಬಳಸಲು ಕಷ್ಟ ಎನ್ನುತ್ತಾರೆಯಾದರೂ ರೂಢಿಯಾದ ಮೇಲೆ ಸುಲಭ ಅನ್ನುವುದು ಇನ್ನು ಹಲವರ ವಾದ. ಇದರಲ್ಲಿ ರಾಸಾಯನಿಕ ವಸ್ತುಗಳಿರುವುದಿಲ್ಲ. ಸರಿಯಾದ ವಿಧಾನದಲ್ಲಿ ಬಳಸಿದರೆ ಇದು ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಅತ್ಯುತ್ತಮ ಸಂಗಾತಿ ಎಂದರೆ ತಪ್ಪಾಗಲಾರದು. ಇವುಗಳನ್ನು ಹಾಕಿಕೊಂಡು ಯಾವುದೇ ರೀತಿಯ ಚಟುವಟಿಕೆಯಲ್ಲಿ ಭಯವಿಲ್ಲದೇ ಭಾಗವಹಿಸಬಹುದು. ಈಜು, ಯೋಗ ಚಟುವಟಿಕೆಗಳನ್ನು ಆರಾಮವಾಗಿ ಮಾಡಬಹುದು.

ಪ್ಯಾಡ್‌ ಮತ್ತು ಟ್ಯಾಂಪೂನ್‌ ನಿಗೆ ಇದು ಸರಿಯಾದ ಪರ್ಯಾಯ. ಆರಂಭದಲ್ಲಿ ತುಂಬಾ ಕಿರಿಕಿರಿ ಅನಿಸಬಹುದು. ಈ ಕಪ್‌ ನ್ನು ಮರಳಿ ಬಳಕೆ ಮಾಡಬಹುದು. ಅದರ ದಿನಾಂಕದ ಬಳಿಕ ಬದಲಾಯಿಸಿಕೊಳ್ಳಿ. ಆರು ತಿಂಗಳ ಕಾಲ ಬಳಸಿ ಕೊಳ್ಳಬಹುದು.

ಮೆನ್‌ಸ್ಟ್ರೆವಲ್‌ ಕಪ್‌ಗ್ಳಿಗೆ ಹೆಚ್ಚಿದ ಬೇಡಿಕೆ
ಮುಟ್ಟಿನ ಕಪ್‌ನ ವೈದ್ಯಕೀಯ ದರ್ಜೆಯ ಸಿಲಿಕೋನ್‌ ಎಂಬ ಸಂಯುಕ್ತ ಪದಾರ್ಥದಿಂದ ಮಾಡಲಾಗುತ್ತದೆ. ಇದರಿಂದ ಯಾವುದೇ ಸೋಂಕುಗಳು ಉಂಟಾಗುವುದಿಲ್ಲ. ಇದರಲ್ಲಿ ಹಲವು ವಿಧ ಹಾಗೂ ಬಣ್ಣಗಳಿದ್ದು, ಬಳಸುವುದು ಕೂಡ ಸುಲಭವಾಗಿದೆ. ಆ ಕಾರಣಕ್ಕಾಗಿ ಬಹುತೇಕ ಮಹಿಳೆಯರು ಬಟ್ಟೆ, ಸ್ಯಾನಿಟರಿ ಪ್ಯಾಡ್‌ಗಳನ್ನು ದೂರ ಸರಿಸಿ ಮೆಸ್ಟ್ರವಲ್‌ ಕಪ್‌ಗ್ಳನ್ನು ಬಳಸುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂದು ಸಾಬೀತಾದ ಬಳಿಕ ಮಹಿಳೆಯರು ಪ್ಯಾಡ್‌ಗಳ ಬದಲಾಗಿ ಕಪ್‌ಗ್ಳ ಬಳಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಬಳಕೆ ಹೇಗೆ
ತಿಂಗಳ ಮುಟ್ಟು ಆರಂಭವಾದ ದಿನ ಪ್ರಥಮವಾಗಿ ಕೈಗಳನ್ನು ಹಾಗೂ ಕಪ್‌ ಅನ್ನು ನೀರಿನಲ್ಲಿ ಶುಚಿಗೊಳಿಸಬೇಕು. ಬಾಗುವ ಹಾಗೂ ಬಳಕುವ ಈ ಕಪ್‌ ಅನ್ನು ಮಡಚಿ ಯೋನಿಯೊಳಗೆ ತೂರಿಸಬೇಕು. ಬೆರಳುಗಳ ಸಹಾಯದಿಂದ ಈ ಕಪ್‌ ಅನ್ನು ಒಳಗೆ ಸೇರಿಸಿದ ಅನಂತರ ಯೋನಿಯ ಗೋಡೆಯ ಆಕಾರದಂತೆ ಈ ಕಪ್‌ ತೆರೆದುಕೊಳ್ಳುತ್ತದೆ. ಅನಂತರ ಋತುಸ್ರಾವವು ಅದರಲ್ಲಿ ಶೇಖರಣೆಯಾಗುತ್ತದೆ. ಋತುಸ್ರಾವ ಕಡಿಮೆ ಹಾಗೂ ಸಾಮಾನ್ಯವಾಗಿದ್ದಲ್ಲಿ 8ರಿಂದ 12 ಗಂಟೆಗಳ ಅನಂತರ ಅದನ್ನು ಹೊರತೆಗೆದು ಶುಚಿಗೊಳಿಸಿ ಮತ್ತೆ ಬಳಸಬಹುದು. ಈ ಕಪ್‌ನ ಬಳಕೆ ಕಷ್ಟವೇನಲ್ಲ. ಆ ದಿನಗಳಲ್ಲಿ ಕಪ್‌ ಅನ್ನು ಬಳಸುವಾಗ ಪ್ರತಿಬಾರಿಯೂ ಕೈ ಹಾಗೂ ಕಪ್‌ ಅನ್ನು ಬಿಸಿನೀರು ಅಥವಾ ತಣ್ಣೀರಿನಲ್ಲಿ ಶುಭ್ರಗೊಳಿಸಬೇಕು. ಮುಟ್ಟಿನ ದಿನಗಳು ಮುಗಿದ ಬಳಿಕ ಕಪ್‌ ಅನ್ನು ತೊಳೆದು, ಬಿಸಿನೀರಿನಲ್ಲಿ ಕುದಿಸಿ ಒಣ ಪ್ರದೇಶದಲ್ಲಿ ಶೇಖರಿಸಿಡಬೇಕು.

ಬಳಸಿದ ಬಳಿಕ ರೂಢಿಯಾಗುತ್ತದೆ
ಮುಟ್ಟಿನ ಸಮಯದಲ್ಲಿ ಬಟ್ಟೆ, ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿ ಸ್ವಚ್ಛತೆ ಕಾಪಾಡದೆ ಇದ್ದಲ್ಲಿ ಕೆಲವರಿಗೆ ಬ್ಯಾಕ್ಟೀರಿಯಾದ ಸೋಂಕು, ಚರ್ಮದಲ್ಲಿ ತುರಿಕೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹವರು ಮುಟ್ಟಿನ ಕಪ್‌ ಬಳಸಿಕೊಳ್ಳಬಹುದು. ಮೊದಲಾಗಿ ಕಂಫರ್ಟ್‌ ಫೀಲ್‌ ಸಿಗದೆ ಇದ್ದರೂ ಮತ್ತೆ ರೂಢಿಯಾಗುತ್ತದೆ.
– ಡಾ| ನಯನಾ ವೈದ್ಯರು

-  ಪ್ರಜ್ಞಾ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಮಾರುತ್ತಿರುವ ತಿಂಡಿಗಳನ್ನು ನೋಡಿದರೆ ಬಾಯಲ್ಲಿ ನೀರು ಬಾರದೆ ಇರದು. ಹಾಗಂತ ತಿಂದರೆ ಅನೇಕರು ಫುಡ್‌ ಪಾಯ್ಸನ್‌ ಸಮಸ್ಯೆಗೆ...

  • ಹುಡುಗಿಯರಿಗೆ ತಲೆಕೂದಲು ಸೌಂದರ್ಯದ ಸಂಕೇತ. ಕೆಲವರಿಗೆ ಉದ್ದನೆಯ ಕೂದಲು ಇನ್ನು ಕೆಲವರಿಗೆ ಸಣ್ಣ ಕೂದಲು, ಗುಂಗುರು ಕೂದಲು ಇಷ್ಟಪಡುತ್ತಾರೆ. ಕೂದಲನ್ನು ನಾಜೂಕಾಗಿ...

  • ಬದಲಾಗುವ ಹವಾಮಾನ ಮತ್ತು ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕಾಯಿಲೆಗಳ ಬಾಧೆಯೂ ಅಧಿಕ. ಅದರಲ್ಲೂ ಇತ್ತೀಚೆಗಿನ ಹವಾಮಾನವಂತೂ ಕಾಯಿಲೆಗಳಿಗೆ...

  • ಬಲಿಷ್ಠ ಸ್ನಾಯುಗಳನ್ನು ಹೊಂದುವ ಮೂಲಕ ಫಿಟ್‌ ಆಗಿರಲು ಹೆಚ್ಚಿನ ಯುವಕರು ಆಶಿಸುತ್ತಾರೆ. ಕೆಲವರು ಆಹಾರದ ಮೂಲಕ ದೇಹದ ಸದೃಢತೆಯನ್ನು ಕಾಪಾಡಿಕೊಂಡರೆ ಮತ್ತೂ ಕೆಲವರು...

  • ಅಲೋವೆರಾ ಈ ಹೆಸರು ಕೇಳಿದಾಗ ಇದು ಲೋಳೆಯಾಗಿದ್ದು ಮುಖದ ಅಂದಕ್ಕೆ ಬಳಸುತ್ತಾರೆಂದು ಎಲ್ಲೂ ಓದಿದಂತೆ ನಿಮಗೂ ಭಾಸವಾಗಬಹುದು. ಆದರೆ ಮುಖದೊಂದಿಗೆ ಹಲವಾರು ರೋಗದ...

ಹೊಸ ಸೇರ್ಪಡೆ

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ "ಬೆಂಗಳೂರು ಟೆಕ್‌ ಸಮಿಟ್‌'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ...

  • ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ...

  • ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು...