ಪರಿಸರ ಸ್ನೇಹಿ ಬಸ್‌ ಸ್ಟ್ಯಾಂಡ್ ನಗರದ ಆದ್ಯತೆಯಾಗಲಿ

Team Udayavani, Dec 8, 2019, 4:32 AM IST

ಪರಿಸರ ಮಾಲಿನ್ಯವು ದೇಶವನ್ನು ಕಾಡುತ್ತಿರುವ ಜಠಿಲವಾದ ಸಮಸ್ಯೆ. ಸಾರಿಗೆ, ಸಂಚಾರದಲ್ಲಿ ಕ್ರಾಂತಿಯಿಂದಾಗಿ ಇಂದು ನಗರದಲ್ಲಿ ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ನಗರದಲ್ಲಿ ವಾಯು ಮಾಲಿನ್ಯ ಸಹಿತ ಶಬ್ದ ಮಾಲಿನ್ಯವೂ ಕೂಡ ದೇಶವನ್ನು ಬಾಧಿಸುತ್ತಿದೆ. ಇತ್ತೀಚೆಗೆ ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳದಿಂದಾಗಿ ಇಲ್ಲಿನ ಜನ ಕಷ್ಟ ಅನುಭವಿಸುವಂತಾಗಿತ್ತು. ಅಲ್ಲದೇ ಶುದ್ಧಗಾಳಿಗಾಗಿ ಕೃತಕ ಆಕ್ಸಿಜನ್‌ ಮೊರೆ ಹೋಗಿದ್ದು ನಾವು ಸುದ್ದಿಯನ್ನು ಕೇಳಿದ್ದೇವೆ, ನೋಡಿದ್ದೇವೆ.

ಇದು ಕೇವಲ ಹೊಸದಿಲ್ಲಿಯ ಮಾತಲ್ಲ ಇದು ದೇಶದ ಎಲ್ಲ ಪ್ರಮುಖ ನಗರಗಳ ಕಥೆಯೂ ಇದೆ. ಮುಂಬಯಿ, ಚೆನ್ನೈ, ಕೊಲ್ಕತ್ತಾ ಸಹಿತ ಬೆಂಗಳೂರು ನಗರವೂ ಕೂಡ ಮಾಲಿನ್ಯದ ಸಮಸ್ಯೆಯನ್ನು ಆಗಾಗ ಎದುರಿಸುತ್ತವೆ. ಈಗ ಸಾಲಿನಲ್ಲಿ ಬೆಳಯುತ್ತಿರುವ ಕಡಲ ನಗರಿಯಾದ ಮಂಗಳೂರು ಕೂಡ ಸೇರ್ಪಡೆಯಾಗುತ್ತಿದೆ. ಹೀಗಾಗಿ ಸಂಚಾರ ವ್ಯವಸ್ಥೆಯಲ್ಲಿ ಹಲವು ತಾಂತ್ರಿಕ ಬದಲಾವಣೆಯನ್ನು ಕಾಣುತ್ತಿರುವ ಅದನ್ನು ಸುಸ್ಥಿರ ಬದುಕಿಗೆ ಅನ್ವಯಿಸುತ್ತಿಲ್ಲ. ಪರಿಸರ ಸ್ನೇಹಿ ಪೂರಕ ಕ್ರಮಗಳನ್ನು ಕೂಡ ನಾವು ಅನ್ವಯಿಸುತ್ತಿಲ್ಲ . ಹೀಗಾಗಿ ಈ ಸಮಸ್ಯೆ ನಮ್ಮನ್ನು ಕಾಡುತ್ತಿದೆ.

ಆಗದರೆ ಈ ಸಮಸ್ಯೆಗೆ ಪೂರಕ ಕ್ರಮವಿಲ್ಲವೇ ಎಂದು ಕೇಳಿಕೊಳ್ಳುವಾಗ ನೆದರಲ್ಯಾಂಡ್‌ ದೇಶವೂ ಇಂದು ನಮಗೆ ಮಾದರಿಯಾಗುತ್ತದೆ. ನೆದರಲ್ಯಾಂಡ್‌ ದೇಶವೂ ಪರಿಸರ ಸ್ನೇಹಿ ಬಸ್‌ಸ್ಟಾಂಡ್‌ ನಿರ್ಮಾಣದಿಂದ ಆ ದೇಶವೂ ರೂಢಿಸಿಕೊಂಡಿರುವ ಪರಿಸರ ಸ್ನೇಹಿ ಕ್ರಮದಿಂದಾಗಿ ಪ್ರಯಾಣ ಸ್ನೇಹಿ ಸಂಚಾರವಾಗಿದೆ. ಇದನ್ನು ಎಲ್ಲ ದೇಶಗಳು ಆಳವಡಿಸಿಕೊಳ್ಳುವ ಮಾದರಿ ಯೋಜನೆಯಾಗಿದೆ.

ಮಾದರಿ ಯೋಜನೆ
ಹಾಲೆಂಡ್‌ನ‌ ನಗರದಲ್ಲಿ ನಿರ್ಮಾಣವಾಗಿರುವ ಪರಿಸರ ಸ್ನೇಹಿ ಬಸ್‌ಸ್ಟಾಂಡ್‌ನ‌ ಮೇಲೆ ಸುಮಾರು 316 ವಿಧವಿಧವಾದ ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿ ಹೆಚ್ಚು ಹೂವಿನ ಗಿಡಗಳನ್ನೇ ಬೆಳೆಸಲಾಗಿದೆ. ಈ ಹೂವಿನ ಗಿಡದಲ್ಲಿ ಜೇನು ಹುಳುಗಳು ಕೂಡ ವಾಸಿಸುತ್ತಿವೆ. ಬಸ್‌ ಸ್ಟಾಂಡಿನಲ್ಲಿ ಗಿಡಗಳನ್ನು ಬೆಳೆಸಿದ್ದರಿದ ಮಳೆ ನೀರನ್ನು ಸಂಗ್ರಹಿಸಲು ಕೂಡ ಇದು ಸಹಾಯ ಮಾಡುತ್ತದೆ. ಎಲೆಕ್ಟ್ರಿಕ್‌ ವಾಹನಗಳಲ್ಲಿ ಓಡಾಡುವ ಕಾರ್ಮಿಕರು ಈ ಚಾವಣಿಗಳನ್ನು ನೋಡಿಕೊಳ್ಳುತ್ತಾರೆ. ಈ ಬಸ್‌ ನಿಲ್ದಾಣದಲ್ಲಿ ಸಮರ್ಥ ಎಲ್‌ಇಡಿ ದೀಪಗಳು ಮತ್ತು ಬಿದಿರಿನ ಬೆಂಚುಗಳನ್ನು ಕೂಡ ಅಳವಡಿಸಲಾಗಿದೆ. ಈ ಬಸ್‌ ಸ್ಟಾಂಡ್‌ ಆಕರ್ಷಣೆಯ ಹೊರತಾಗಿ ರಸ್ತೆಯಲ್ಲಿ ಉಂಟಾಗುವ ಧೂಳನ್ನು ಕೂಡ ಸೆರೆ ಹಿಡಿಯುತ್ತದೆ. ಹಾಗೂ ನಗರದಲ್ಲಿ ಶುದ್ಧ ಗಾಳಿಯನ್ನು ನೀಡಲು ಕೂಡ ಅನುಕೂಲವಾಗಿದೆ.

ಇದೇ ರೀತಿಯ ಮಾದರಿಯ ಬಸ್‌ ಸ್ಟಾಂಡ್‌ಗಳನ್ನು ಭಾರತದ ನಗರಗಳಲ್ಲಿ ಕೂಡ ಅಳವಡಿಸಿದರೆ, ಪರಿಸರ ಸ್ನೇಹಿಯಾಗಲು ಸಹಾಯ ಮಾಡುತ್ತದೆ ಜತೆಗೆ ಪರಿಸರ ಮಾಲಿನ್ಯವನ್ನು ಕೂಡ ತಡೆಗಟ್ಟಬಹುದಾಗಿದೆ. ಇದೊಂದು ಜನಪರವಾದ ಯೋಜನೆಯಾಗಿದ್ದು ಈ ಮಾದರಿ ಭಾರತದ ಪ್ರಮುಖ ನಗರಗಳಿಗೆ ಆದ್ಯತೆಯಾಗಬೇಕಿದೆ.

ಮಂಗಳೂರಿಗೆ ಬರಲಿ
ಈ ರೀತಿಯ ಮಾದರಿ ಕ್ರಮಗಳಿಂದ ಕೂಡಿರುವ ಬಸ್‌ ನಿಲ್ದಾಣ ನಮ್ಮ ನಗರಕ್ಕೂ ಬರಲಿ ಎಂಬ ಬೇಡಿಕೆ ನಮ್ಮಲ್ಲೂ ಇದ್ದು, ಹೀಗಾಗಿ ಆಡಳಿತ ವ್ಯವಸ್ಥೆಯೂ ಕೂಡ ಈ ಮಾದರಿ ಕ್ರಮವನ್ನು ಬೆಳೆಯುತ್ತಿರುವ ಸ್ಮಾರ್ಟ್‌ ಸಿಟಿ ಮಂಗಳೂರಿಗೂ ಬರುವಂತೆ ಆಸ್ಥೆ ವಹಿಸಬೇಕಿದೆ.

ಮಾದರಿ ಬಸ್‌ ಸ್ಟ್ಯಾಂಡ್
ಪ್ರಯಾಣಿ ಸ್ನೇಹಿ ಪೂರಕವಾಗಿ ಮೊದಲಿಗೆ ಬಸ್‌ಸ್ಟಾಂಡ್‌ಗಳು ಪರಿಸರ ಸ್ನೇಹಿಯಾಗಿದ್ದರೆ ಮಾಲಿನ್ಯ ನಿಯಂತ್ರಿಸಬಹುದು ಎಂಬ ಮೂಲ ಮಂತ್ರವನ್ನು ಅರಿತ ನೆದರಲ್ಯಾಂಡ್‌ ದೇಶವೂ ಬಸ್‌ಸ್ಟಾಂಡ್‌ಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಅದರ ಮೇಲೆ ಬಗೆ ಬಗೆಯ ಗಿಡ-ಸಸಿಗಳನ್ನು ಬೆಳೆಸಲಾಗಿದೆ. ಇದರಿಂದ ವಾಯು ಮಾಲಿನ್ಯವನ್ನುವಾಗುವುದನ್ನು ತಡೆಯಬಹುದುಎಂದು ಅಲ್ಲಿನ ಸ್ಥಳೀಯ ಆಡಳಿತ ತಿಳಿಸಿದೆ. ನೆದರ್‌ಲ್ಯಾಂಡ್‌ ದೇಶದ ಪ್ರಮುಖ ನಗರದ ಬಸ್‌ಸ್ಟಾಂಡ್‌ನ‌ಲ್ಲಿ ಮಾದರಿ ಯೋಜನೆ ಅಳವಡಿಸಲಾಗಿದೆ.

- ಪೂರ್ಣಿಮಾ ಪೆರ್ಣಂಕಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...