ಓಷನ್‌ ಮೊಬೈಲ್‌ ಸ್ಕಿಮ್ಮರ್‌ ತಂತ್ರಜ್ಞಾನ ನಗರಕ್ಕೂ ಬರಲಿ

Team Udayavani, Nov 3, 2019, 3:58 AM IST

ನಾವು ನಗರದ ಜೊತೆಗೆ ಬೆಳೆಯುತ್ತಿದ್ದೇವೆ, ನಗರ ಬೆಳೆಯುತ್ತಿರುವ ಹಾದಿಯಲ್ಲೇ ಸಾಗುತ್ತಿದ್ದೇವೆ. ಅಭಿವೃದ್ಧಿ ಎನ್ನುವ ಮಾನದಂಡದೊಂದಿಗೆ ಋಣಾತ್ಮಕ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳದಷ್ಟು ಅಪ್ರಬುದ್ಧರಾಗಿದ್ದೇವೆ. ಪರಿಸರವನ್ನು ಹಾಳುಗೆಡವಿ ಮಾಡುತ್ತಿರುವ ಅಭಿವೃದ್ಧಿಯ ಅಡ್ಡ ಪರಿಣಾಮಗಳ ಒಂದೊಂದು ಎಳೆಯು ಇತ್ತೀಚೆಗೆ ಕಾಣಲಾರಂಭಿಸಿದೆ.

ಅಭಿವೃದ್ಧಿಗೆ ಒಂದೇ ದೃಷ್ಟಿಕೋನ ಎನ್ನುವ ಪಥದಲ್ಲಿ ಹೊರಟ ಅದೆಷ್ಟೋ ನಗರಗಳು ಇಂದು ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿವೆ. ಮುಂಬಯಿ, ಹೊಸದಿಲ್ಲಿ, ಬೆಂಗಳೂರು ಮುಂತಾದ ನಗರಗಳಲ್ಲಿ ನಗರ ಜೀವನ ನರಕ ಎನ್ನುವಂತಹ ವಾತಾವರಣವನ್ನು ಸೃಷ್ಟಿಸಿದೆ. ಇದಕ್ಕೆ ಕಾರಣ ಹೊರಟರೆ ಹಲವಾರು ಹೆಸರಿಸಬಹುದು. ಸದ್ಯ ಬೆಳೆಯತ್ತಿರುವ ನಗರಗಳಿಗೆ ಇದೊಂದು ಎಚ್ಚರಿಕೆಯ ಕರೆಗಂಟೆ ಇದ್ದಂತೆ. ಮುಂದಿನ ದಿನಗಳಲ್ಲಿನ ನಗರದ ಕಲ್ಪನೆಗೆ ಯಾವ ಅಂಶವನ್ನು ಸೇರಿಸಬೇಕೆನ್ನುವ ಪ್ರಬಲ ಸೂತ್ರವಿದ್ದಂತೆ. ಅಭಿವೃದ್ಧಿ ಹುಚ್ಚು ವೇಗದಲ್ಲಿ ನಾವು ಪರಿಸರವನ್ನು ಹಾಳುಗಡೆವಿ, ಅಸಮಪರ್ಕವಾಗಿ ಬಳಸಿಕೊಳ್ಳುತ್ತಿದ್ದೇವೆ ಇದರಿಂದ ಸುಸ್ಥಿರವಾದ ಬದುಕು ವಿನಾಶವಾಗುತ್ತದೆ ಎಂಬ ಎಚ್ಚರವೂ ಕೂಡ ನಮಗಿಲ್ಲ.

ಅಭಿವೃದ್ಧಿ ಪರಿಸರದ ಜತೆಗೆ ಆಗಬೇಕು. ಅಭಿವೃದ್ಧಿ ವಿಚಾರದಲ್ಲಿ ಪರಿಸರದ ಕಾಳಜಿ ಪ್ರಮುಖವಾಗಿರಬೇಕು. ಸದ್ಯ ಪರಿಸರಕ್ಕಾಗುವ ಎಡರು ತೊಡರುಗಳತ್ತ ನಾವು ಗಮನಹರಿಸಬೇಕಾಗಿದೆ.ಇಂತಹ ಪ್ರಯತ್ನಗಳು ಹೊರದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿ ತಂತ್ರಜ್ಞಾನದಿಂದಲೇ ಪರಿಸರದ ಕಾಳಜಿಗಾಗಿ ದುಡಿಯುತ್ತಿವೆ. ಇಂತಹ ಸಾಲಿನಲ್ಲಿ 4 ಓಷನ್‌ ಮೊಬೈಲ್‌ ಸ್ಕಿಮ್ಮರ್‌ ಕೂಡ ಒಂದು.

4 ಓಷನ್‌ ಮೊಬೈಲ್‌ ಸ್ಕಿಮ್ಮರ್‌
ಈ 4 ಓಷನ್‌ ಮೊಬೈಲ್‌ ಸ್ಕಿಮ್ಮರ್‌ ಎನ್ನುವ ತಂತ್ರಜ್ಞಾನ ಸಮುದ್ರದಲ್ಲಿನ ಪ್ಲಾಸ್ಟಿಕ್‌ ನಿರ್ಮೂಲನೆಗಾಗಿ ನಿರ್ಮಿತಗೊಂಡಿದೆ.ಮನುಷ್ಯ ಮಾಡಿಟ್ಟ ಬೇಜಾವಾಬ್ದಾರಿತನದಿಂದ ಸಮುದ್ರದಲ್ಲಿ ಪ್ಲಾಸ್ಟಿಕ್‌ ವಲಯ ಉಂಟಾಗಿದೆ ಅದೆಷ್ಟೋ ಸಮುದ್ರದ ಜೀವಿಗಳು ಪ್ಲಾಸ್ಟಿಕ್‌, ಬಾಟಲ್‌ಗ‌ಳನ್ನು ತಿಂದು ಸಾವೀಗೀಡಾಗುತ್ತಿದೆ, ಸಮುದ್ರದ ಸೌಂದರ್ಯ ಪ್ಲಾಸ್ಟಿಕ್‌ ಭೂತ ಹಾಳುಗೆಡವುತ್ತಿವೆ. ಮನುಷ್ಯನೇ ಮಾಡಿಟ್ಟ ಸಮಸ್ಯೆಗೆ ಪರಿಹಾರ ಕಂಡುಕೊಂಡದ್ದು ಈ 4 ಓಷನ್‌ ಮೊಬೈಲ್‌ ಸ್ಕಿಮ್ಮರ್‌ ಮೂಲಕ. ಸಮುದ್ರದಲ್ಲಿನ ಪ್ಲಾಸ್ಟಿಕ್‌ಗಳನ್ನು ಚಿತ್ರದಲ್ಲಿ ಕಾಣುವಂತೆ ತನ್ನ ಅಗಲದ ಕೈಗಳಿಂದ ಬಾಚಿ ಸೋಸಿ ಸಮುದ್ರವನ್ನು ಪ್ಲಾಸ್ಟಿಕ್‌ ಸ್ವಚ್ಛಗೊಳಿಸುತ್ತಿವೆ.

ಸಮುದ್ರದಿಂದ ಪ್ಲಾಸ್ಟಿಕ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆಯಲು ಇದರಿಂದ ಸಹಾಯವಾಗಲಿದೆ. ಪ್ರಸ್ತುತ ಸಂದರ್ಭಕ್ಕೆ ಪ್ಲಾಸ್ಟಿಕ್‌ನಿಂದಲೇ ಹಾಳುಗೆಡವಿರುವ ಅನೇಕ ಸಮುದ್ರಗಳ ತೀರಗಳನ್ನು ಇದರ ಮುಖೇನ ಸ್ವತ್ಛಗೊಳಿಸಲು ಅತ್ಯಂತ ಅಗತ್ಯ ತಂತ್ರಜ್ಞಾನ ಎನ್ನಬಹುದು.

ಪ್ಲಾಸ್ಟಿಕ್‌ ಮಾರಕ
ಪ್ಲಾಸ್ಟಿಕ್‌ ಎಷ್ಟು ಮಾರಕವೆನ್ನುವುದು ಮನುಷ್ಯನಿಗೆ ಗೊತ್ತಿದ್ದರೂ ಅದರ ಅರಿವಾದದ್ದು ತುಂಬಾ ತಡವಾಗಿ ದೇಶ ವಿದೇಶದಲ್ಲಿ ಪ್ಲಾಸ್ಟಿಕ್‌ ಬಗ್ಗೆ ಬಹು ಗಂಭೀರವಾದ ಆಕ್ರೋಶ,ಚರ್ಚೆ, ಅಭಿಯಾನ ಎಲ್ಲಾ ಮೂಲೆಗಳನ್ನು ತಟ್ಟುತ್ತಿವೆ. ಪ್ಲಾಸ್ಟಕ್‌ ವಿರೋಧಿಸಿ ಅಭಿಯಾನ ಕೇವಲ ಮಾತಿಗಷ್ಟೇ ಸೀಮಿತವಾಗದೆ ಹೊಸ ಹೊಸ ಆವಿಷ್ಕಾರಗಳು ಪ್ಲಾಸ್ಟಿಕ್‌ ವಿರುದ್ಧವಾಗಬೇಕು. ಇಂತಹ ತಂತ್ರಜ್ಞಾನಗಳು ತಡವಾಗದೆ ನಮ್ಮ ನಗರವನ್ನು ಪ್ರವೇಶಿಸಬೇಕು. ಸಮಸ್ಯೆಯನ್ನು ಈಗಲೇ ಹೋಗಲಾಡಿಸುವಂತಹ ಎಲ್ಲದ ಕ್ರಮಗಳಿಗೆ ನಾವು ಸಿದ್ಧರಾಗಬೇಕು.

ಪ್ಲಾಸ್ಟಿಕ್‌ ಕೇವಲ ಇದುಮಾರಕವಷ್ಟೇ ಅಲ್ಲ, ಇಡೀ ಜೀವಿ ಸಂಕುಲವನ್ನು ನಾಶದತ್ತ ಹೋಗುವಂತೆ ಮಾಡುತ್ತದೆ. ಪ್ಲಾಸ್ಟಿಕ್‌, ಕಟ್ಟಡ ತ್ಯಾಜ್ಯದತ್ತ ವಿನಾಶಕಾರಿ ವಸ್ತುಗಳನ್ನು ಸಮುದ್ರಕ್ಕೆ ಎಸೆಯುವುದರಿಂದ ಸಮುದ್ರದ ಜೀವ ಸಂಕುಲಕ್ಕೂ ಹಾಗೂ ಜಲಚರ ಜೀವಿಗಳಿಗೂ ತೊಂದರೆಯಾಗುತ್ತದೆ. ಅವುಗಳ ಪ್ರಾಣಕ್ಕೆ ಅಪಾಯವಾಗುತ್ತದೆ.

ನಮ್ಮ ನಗರಕ್ಕೂ ಬರಲಿ
ನಗರವೆಂದು ಗುರುತಿಸಿಕೊಂಡಿರುವ ಅನೇಕ ನಗರಗಳು ಸಮುದ್ರಕ್ಕೆ ಅಂಟಿಕೊಂಡೇ ನಿರ್ಮಾಣವಾಗಿವೆ. ನಗರಾಡಳಿತ ಮಂಡಳಿಗಳು ಎಲ್ಲಾ ಸ್ತರದಲ್ಲೂ ಯೋಚಿಸುವಂತೆ ನಗರದ ಬೆಳವಣಿಗೆಗೆ ಸಮುದ್ರವನ್ನು ಕೈ ಬಿಡದೆ ಸಮುದ್ರದ ಸಮಸ್ಯೆಗಳಿಗೆ ಇಂತಹ ಯೋಜಿತ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಕಿವಿಯಾಗಬೇಕು.

- ವಿಶ್ವಾಸ್‌ ಅಡ್ಯಾರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ