ನಗರದ ಸಂಚಾರ ಸಮಸ್ಯೆ ಪರಿಹಾರಕ್ಕೆ ಪೋಡ್‌ಕಾರ್‌ ಬಳಕೆ ಅಗತ್ಯ

Team Udayavani, Jan 12, 2020, 4:49 AM IST

ಸಾರಿಗೆ ವ್ಯವಸ್ಥೆಯಲ್ಲಿ ದಿನೇದಿನೇ ಬದಲಾವಣೆಗಳಾಗುತ್ತಿದೆ. ಅದರ ಬಳಕೆಯು ಹೆಚ್ಚುತ್ತಲೇ ಇದೆ. ರೈಲು, ಬಸ್‌, ಬುಲೆಟ್‌ ಟ್ರೈನ್‌, ಮೆಟ್ರೋ ಹೀಗೆ ಒಂದಾದ ಮೇಲೆ ಒಂದು ಆವಿಷ್ಕಾರಗಳು ನಡೆಯುತ್ತಲೆಯಿದೆ. ಇಂಥಹ ಸುಗಮ ಸಂಚಾರದ ದೃಷ್ಟಿಯನ್ನಿಟ್ಟುಕೊಂಡು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟರೆ ಹೇಗೆ?

ಹೌದು!….. ಇಂತಹ ಫ್ಯೂಚರಿಸ್ಟಿಕ್‌ ಟ್ರಾನ್ಸ್‌ ಪೋರ್ಟ್‌ ವಾಹನಗಳು ನಗರ ಸಾರಿಗೆಗೆ ಬಂದರೆ ಪ್ರಯಾಣಿಕರಿಗೆ ಒಂದು ವರದಾನವಾಗುವುದಂತು ಸತ್ಯ. ಜನಸ್ನೇಹಿ, ಪರಿಸರ ಸ್ನೇಹಿ, ಸ್ವಯಂ ಚಾಲಿತ, ವೇಗವಾಗಿ ಒಂದು ಕಡೆಯಿಂದ ಇನ್ನೊಂದೆಡೆಗೆ ಯಾವುದೇ ಟ್ರಾಫಿಕ್‌ ಸಮಸ್ಯೆ ಅಡ್ಡಿ ಬಾರದಂತಹ ಆವಿಷ್ಕಾರ ವಿದೇಶಗಳಲ್ಲಿ ಈಗಾಗಲೇ ಕಾಯ ನಿರ್ವಹಿಸುತ್ತಿದ್ದರೆ ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಇದನ್ನು ರೂಪಿಸುವ ಚಿಂತ ನೆ ಯಷ್ಟೇ ಇದೆ. ಸಂಚಾರ ಸಮಸ್ಯೆ ಹಾಗೂ ಕಡಿಮೆ ಸಮಯದಲ್ಲಿ ನಾವು ತಲುಪ ಬೇ ಕಿ ರುವ ಪ್ರದೇಶವನ್ನು ಮುಟ್ಟುವಂತಹ ಸಂಚಾರಿ ಆವಿಷ್ಕಾರ ಎಂದರೆ ಅದು ಪೋಡ್‌ ಕಾರ್.

ಈ ಪೋಡ್‌ ಕಾರ್‌ ನೆಟ್‌ವರ್ಕ್‌ಗಳು ಬ್ಯುಸಿ ರಸ್ತೆಗಳು ಮತ್ತು ಹೆದ್ದಾರಿಗಳ (ಅಂಡರ್‌ಗ್ರೌಂಡ್‌) ಮೇಲೆ ಎತ್ತರದ ಪ್ರತ್ಯೇಕ ರಸ್ತೆಯಲ್ಲಿ ರೈಲು ಮತ್ತು ರಸ್ತೆಗಳಂತೆ ಕಾರ್ಯ ನಿರ್ವಹಿಸುತ್ತವೆ. ವಿದ್ಯುಚ್ಛಕ್ತಿಯಿಂದ ಇದು ಚಾಲನೆಯಾಗುತ್ತದೆ. ಪ್ರಸ್ತುತ ಹಲವಾರು ದೊಡ್ಡ ಪ್ರಮಾಣದ ಯೋಜನೆಗಳು ಲಂಡನ್‌ನಲ್ಲಿರುವ ಹೀಥ್ರೋ ಇಂಟರ್‌ ನ್ಯಾಶನಲ್‌ ವಿಮಾನ ನಿಲ್ದಾಣದಲ್ಲಿ ULTRAPRT ವ್ಯವಸ್ಥೆಯನ್ನು ಮತ್ತು ಅಬುದಾಬಿಯಲ್ಲಿರುವ ಮಸರ್‌ ಸಿಟಿ ಪೋಡ್‌ ಕಾರ್‌ ಸಿಸ್ಟಮ್‌ ಅನ್ನು ಒಳಗೊಂಡಿವೆ. ವೆಸ್ಟ್‌ ವರ್ಜೀನಿಯಾ ವಿಶ್ವವಿದ್ಯಾನಿಲಯವು 1970 ರ ದಶಕದಿಂದ ಸೇವೆಯನ್ನು ನಿರ್ವಹಿಸುತ್ತಿದೆ. ಇದರಿಂದಾಗಿ ಅಬುದಾಬಿಯ ನಗರದಲ್ಲಿ ಬಹುತೇಕ ಸಂಚಾರ ಸಮಸ್ಯೆಗೆ ಇದು ಪರ್ಯಾಯ ಮಾರ್ಗವನ್ನು ಕಂಡುಕೊಂಡು ಜಗತ್ತಿಗೆ ಮಾದರಿಯಾಗಿದೆ. ಇದು ಮಾದರಿಯಾದ ಯೋಜನೆಯಾಗಿದ್ದು ಭಾರತ ದೇಶದಲ್ಲಿ ಪೋಡ್‌ ಕಾರುಗಳ ಬಳಕೆಗೆ ಸಿದ್ಧವಾಗಬೇಕಿದೆ.

ಇಂತಹ ವ್ಯವಸ್ಥೆ ಸ್ಮಾರ್ಟ್‌ ಸಿಟಿಯಾಗುತ್ತಿರುವ ಮಂಗಳೂರಿಗೂ ಬಂದರೆ ಹೇಗೆ? ಅಂದರೆ ಮೆಟ್ರೋ ಸಾಕಾರವಾದ ಮೇಲೆ ಇಂತಹ¨ªೊಂದು ಮಹತ್ತರ ಕಾರ್ಯವನ್ನು ರೂಪಿಸಿದರೆ ಇಲ್ಲಿನ ಜನತೆಗೆ ಮತ್ತಷ್ಟು ಸಂಚಾರ ಸುವ್ಯವಸ್ಥೆಯನ್ನು ಮತ್ತಷ್ಟು ವೃದ್ಧಿಸುವತ್ತ ಇದು ಕೊಂಡೊಯ್ಯಬಹುದು. ನಗರದ ಪ್ರಮುಖ ಜನ ಸಂಚಾರದ ಪ್ರದೇಶಗಳಿಗೆ ಇಂತಹ ವ್ಯವಸ್ಥೆಗಳನ್ನು ರೂಪಿಸಿದರೆ ಇದು ಮತ್ತಷ್ಟು ಸೂಕ್ತ. ಇದು ಸಂಚಾರದ ಅಡಚಣೆಗಳಿಂದ ಮುಕ್ತಗೊಳಿಸಿ ತಮ್ಮ ಉದ್ದೇಶಿತ ಪ್ರದೇಶಕ್ಕೆ ಮುಟ್ಟಲು ಸಹಾಯ ಮಾಡುತ್ತದೆ. ನಗರದ ಪ್ರಮುಖ ಪ್ರವಾಸಿ ತಾಣಗಳಾದ ಪಿಲಿಕುಳ, ತಣ್ಣೀರು ಬಾವಿ, ಪಣಂಬೂರು ಬೀಚ್‌ ಹಾಗೂ ಅಧಿಕ ಜನನಿಬಿಡ ಪ್ರದೇಶಗಳಾದ ಸ್ಟೇಟ್‌ಬ್ಯಾಂಕ್‌, ಸುರತ್ಕಲ…, ಲಾಲ್‌ಬಾಗ್‌ ಪ್ರದೇಶಗಳಲ್ಲಿ ಇದನ್ನು ನಿರ್ಮಿಸಿದರೆ ಒಳ್ಳೆಯದು.

ಈ ಪೋಡ್‌ ಕಾರ್ ಎಂದರೆ
ಈ ಪೋಡ್‌ ಕಾರ್ ಎಂದರೆ ಮೆಟ್ರೋ ಅನಂತರದ ಸುಧಾರಿತ ತಂತ್ರಜ್ಞಾನವಾಗಿದೆ. ಇದು ಕಾರುಗಳ ರೀತಿ ಸೆಮಿ ಪ್ಯಾಸೆಂಜರ್ ಅಂದರೆ 2 ರಿಂದ 6 ಜನರನ್ನು ಕೊಂಡೊಯ್ಯಬಲ್ಲ ಸಾರಿಗೆ ಸಾಧನ. ವೈಯಕ್ತಿಕ ವೇಗದ ಸಾಗಣೆ (ಪಿಆರ್‌ಟಿ) ಒಂದು ಹೊಸ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದು, ತ್ವರಿತ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

– ಸುಶ್ಮಿತಾ ಜೈನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ವರ್ಷಗಳ ಹಿಂದೆ ಪ್ರಮುಖ ಬ್ಯಾಂಕ್‌ಗಳ ಹಲವಾರು ಗ್ರಾಹಕರು ಎಟಿಎಂನಲ್ಲಿ ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಂಡ ಕುರಿತು ವರದಿಯಾಗಿತ್ತು. ತನಿಖೆ ನಡೆಸಿದಾಗ...

  • ಕಂಬದ ಮೇಲೆ ತೊಲೆಗಳು ಬರುವುದು ಎಲ್ಲೆಡೆ ಕಂಡುಬರುವ ಸಾಮಾನ್ಯ ಸಂಗತಿ. ಆದರೆ, ತೊಲೆಗಳ ಮೇಲೆ ಕಂಬಗಳನ್ನು ಹೊರಿಸಬೇಕು ಎಂದರೆ ಸ್ವಲ್ಪ ಹುಷಾರಾಗಿ ಮುಂದುವರಿಯಬೇಕಾಗುತ್ತದೆ....

  • 26 ಡಿಸೆಂಬರ್‌ 2019ರಂದು ರಾಜಸ್ಥಾನದ ಬಾರ್ಮೆರಿನ ರೈತ ಜುಗ್ತಾ ರಾಮ್‌ ಆಕಾಶದಲ್ಲಿ ಮಿಡತೆಗಳ ಬೃಹತ್‌ ಸೈನ್ಯ ಕಂಡು ಬೆಕ್ಕಸ ಬೆರಗಾದ. ಅದು ಲಕ್ಷಾಂತರ ಮಿಡತೆಗಳ ಹಿಂಡು....

  • ಲ್ಯಾರಿ ಟೆಸ್ಲರ್‌ ಎಂಬ ಕಂಪ್ಯೂಟರ್‌ ವಿಜ್ಞಾನಿ ಕೆಲ ದಿನಗಳ ಹಿಂದಷ್ಟೆ ತೀರಿಕೊಂಡರು. ಜಗತ್ತಿನೆಲ್ಲೆಡೆ ಅದು ಸುದ್ದಿಯಾಯಿತು. ಏಕೆಂದರೆ, ಇಂದು ಜಗತ್ತಿನಲ್ಲಿರುವ...

  • ಎಷ್ಟೋ ಬಾರಿ ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಗುರಿಮಾಡಿದಾಗ ಕೋಪ, ಅಸಹನೆ, ದಃಖ ಹೀಗೆ ಎಲ್ಲೂವೂ ಒಟ್ಟಿಗೆ ಅಭಿವ್ಯಕ್ತಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ...