ಶೌಚಾಲಯಕ್ಕೆ ಬಸ್‌ಗಳ ಮುತ್ತಿಗೆ !

Team Udayavani, Dec 8, 2019, 4:00 AM IST

ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ. ಇರುವ ಒಂದು ಶೌಚಾಲಯ ಕೂಡ ಕಾಣದಂತೆ, ಕಂಡರೂ ಅದರತ್ತ ಹೋಗಲು ಸಾಧ್ಯವಾಗದ ರೀತಿಯಲ್ಲಿ ಬಸ್‌ಗಳನ್ನು ನಿಲ್ಲಿಸಿಡಲಾಗುತ್ತದೆ.

ರೆಗ್ಯುಲರ್‌ ಆಗಿ ಶೌಚಾಲಯಕ್ಕೆ ಹೋಗುವವರು ಬಸ್‌ನ ಎಡೆಯಲ್ಲಿ ತೂರಿಕೊಂಡು ಹೋಗುತ್ತಾರೆ. ಬೇರೆ ಊರುಗಳಿಂದ ಬರುವವರು ಬಸ್‌ಗಳ ಮರೆಯಲ್ಲಿರುವ ಶೌಚಾಲಯವನ್ನು ಕಾಣಲಾಗದೆ ಹಾಗೆಯೇ ವಾಪಸ್ಸಾಗುತ್ತಾರೆ. ಕಂಡರೂ ಶೌಚಾಲಯ ಕಡೆಗೆ ಹೋಗುವುದೇ ಒಂದು ದೊಡ್ಡ ಸವಾಲು. ಮಳೆಗಾಲದಲ್ಲಂತೂ ಘನ ಘೋರ ಎಂಬಂತಹ ಸ್ಥಿತಿ. ಮೊದಲೇ ಇಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ. ರಾತ್ರಿ ಹಗಲೆನ್ನದೆ ರಸ್ತೆ ಬದಿ, ಬಸ್‌ ನಿಲ್ದಾಣದ ಒಳಗೆಯೇ ಶೌಚಾಲಯ ಮಾಡುವವರಿದ್ದಾರೆ. ದಾರಿಯೂ ಕಾಣದಿರುವುದರಿಂದ ಬಯಲೇ ಶೌಚಾಲಯವಾಗಿದೆ.

ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಅಗತ್ಯ ಇರುವಲ್ಲಿ ಶೌಚಾಲಯಗಳಿಲ್ಲ. ಮುಖ್ಯವಾಗಿ ಆರ್‌ಟಿಒ ಕಚೇರಿಯಿಂದ ಎ.ಬಿ.ಶೆಟ್ಟಿ ಸರ್ಕಲ್‌, ಸಿಟಿ ಬಸ್‌ ನಿಲ್ದಾಣ, ಸರ್ವಿಸ್‌ ಬಸ್‌ ನಿಲ್ದಾಣ, ಮೈದಾನ ಪರಿಸರದಲ್ಲಿ ಶೌಚಾಲಯಗಳ ಅಗತ್ಯವಿದೆ. ಇಲ್ಲಿ ಇರುವುದು ಸದ್ಯ ಖಾಸಗಿ ಬಸ್‌ ನಿಲ್ದಾಣದಲ್ಲಿ ಮಾತ್ರ. ಆದರೆ ಅದು ಕೂಡ ಬಸ್‌ಗಳಿಂದಾಗಿ ಮರೆಯಲ್ಲಿದೆ. ಬಯಲುಶೌಚ ಮುಕ್ತ ನಗರವೆಂದು ಹೇಳಿಕೊಳ್ಳುವ ಮೊದಲು ಅಗತ್ಯ ಶೌಚಾಲಯಗಳನ್ನು ಒದಗಿಸಿಕೊಡುವುದು ಅಗತ್ಯ. ಉಚಿತವಾಗಿ ಶೌಚಾಲಯ ಒದಗಿಸಿಕೊಡುವುದು ಸ್ಥಳೀಯಾಡಳಿತದ ಜವಾಬ್ದಾರಿ. ಆದರೆ ಅದು ಸಾಧ್ಯವಾಗದಿದ್ದರೆ ಶುಲ್ಕವನ್ನಾದರೂ ವಿಧಿಸಲಿ. ಒಟ್ಟಿನಲ್ಲಿ ಸ್ವತ್ಛತೆ, ಸಾಮಾನ್ಯ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಿಸಲಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...