Udayavni Special

ತ್ಯಾಜ್ಯ ನಿರ್ವಹಣೆ: ಕೈಗೊಳ್ಳಬೇಕಿದೆ ಕಟ್ಟು ನಿಟ್ಟಿನ ಕ್ರಮ


Team Udayavani, Sep 16, 2018, 12:59 PM IST

16-sepctember-13.jpg

ಉರ್ವಸ್ಟೋರ್‌ ಸಮೀಪ ಕೆಲವು ವಾರಗಳ ಹಿಂದೆ ತ್ಯಾಜ್ಯ ಎಸೆದವರನ್ನೊಬ್ಬರು ತ್ಯಾಜ್ಯ ತೆಗೆಯುವಂತೆ ಇನ್ನೊಬ್ಬರು ಪರಿಪರಿಯಾಗಿ ಕೇಳಿಕೊಂಡರೂ ತೆಗೆಯದೆ ಹೊರಟೇ ಬಿಟ್ಟರು. ಇಂಥ ಅನುಭವ ಎಲ್ಲರ ಗಮನಕ್ಕೂ ಬಂದಿರಬಹುದು.

ತ್ಯಾಜ್ಯವನ್ನು ರಸ್ತೆಯಲ್ಲಿ ಅಥವಾ ರಸ್ತೆ ಅಂಚಿನಲ್ಲಿ ಯಾಕೆ ಎಸೆಯಲಾಗುತ್ತಿ ದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡದೆ ಇರಲಾರದು. ಕಳೆದ ಮೂರುವರೆ ವರ್ಷಗಳ ಹಿಂದೆ ಜಾರಿಗೆ ಬಂದ ಹೊಸ ತ್ಯಾಜ್ಯ ನಿರ್ವಹಣೆ, ಮೊದಲ ಕೆಲವು ತಿಂಗಳ ಆರಂಭದ ತೊಂದರೆಯ ಅನಂತರ ಅತ್ಯುತ್ತಮವಾಗಿ ನಡೆಯುತ್ತಿತ್ತು. ಬರುಬರುತ್ತಾ ಪ್ರಗತಿಯಾಗುವ ಬದಲು ಕಳಪೆಯಾಗುತ್ತಾ ಸಾಗುತ್ತಿದೆ. ಬೆಳಗ್ಗಿನ ಹೊತ್ತು ಬಹುತೇಕ ಎಲ್ಲ ರಸ್ತೆಯ ಅಂಚಿನಲ್ಲೂ ಅಲ್ಲಲ್ಲಿ ತ್ಯಾಜ್ಯ ತುಂಬಿದ ಚೀಲಗಳು ಬಿದ್ದಿರುತ್ತವೆ. ಕೆಲವು ಕಡೆ ತ್ಯಾಜ್ಯವು ರಸ್ತೆಯಲ್ಲಿರುತ್ತದೆ.  ನಮ್ಮ ಮಂಗಳೂರು 10 ಲಕ್ಷ ಜನ ಸಂಖ್ಯೆ ಇರುವ ನಗರಗಳಲ್ಲಿ, ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಅಗ್ರಗಣ್ಯ ನಗರವಾಗಿ ಗುರುತಿಸಿಕೊಂಡಿದೆ. ಈ ಪಟ್ಟವನ್ನು ಉಳಿಸುವುದು ಎಲ್ಲರ ಜವಾಬ್ದಾರಿ. ನಮ್ಮ ಮನೆ ಸುತ್ತಮುತ್ತಲಿನ ಪರಿಸರದಂತೆ ನಾವು ನಮ್ಮ ನಗರವನ್ನು ಏಕೆ ನೋಡಬಾರದು. ಅದು ನಮ್ಮೆಲ್ಲರ ಕರ್ತವ್ಯವಲ್ಲವೇ?

ತ್ಯಾಜ್ಯ ನಿರ್ವಹಣಾ ಪ್ರತಿನಿಧಿಗಳು ಅಥವಾ ಕಾರ್ಮಿಕರು ಮನೆ ಮನೆಗೆ ಬಂದು ತ್ಯಾಜ್ಯವನ್ನು ಸಂಗ್ರಹಿಸಿ, ವಾಹನದಲ್ಲಿ ತುಂಬಿಸಿಕೊಂಡು ಹೋಗು ತ್ತಾರೆ. ಕೆಲವೆಡೆ ಬಾರದೇ ಇರುವುದರಿಂದ ಈ ಸಮಸ್ಯೆ ಉದ್ಭವಿಸಿರಬಹುದು. ಆದರೆ ಇದು ಸರಿಯಾದ ಪರಿಹಾರವಲ್ಲ. ನಗರದ ಸ್ವಚ್ಛತೆ ದೃಷ್ಟಿಯಿಂದ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ತ್ಯಾಜ್ಯವನ್ನು ಮಾರ್ಗದಂಚಿಗೆ ಸುರಿಯುವುದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ.

ಈ ನಿಟ್ಟಿನಲ್ಲಿ ಆಡಳಿತವೂ ಒಂದಷ್ಟು ಕ್ರಮಗಳನ್ನು ಕೈಗೊಳ್ಳ ಬೇಕಿದೆ. ತ್ಯಾಜ್ಯ ನಿರ್ವಹಣೆ ವಾಹನಗಳು ಕೆಟ್ಟು ಹೋದರೆ ಬೇರೆ ಕಡೆಯ ವಾಹನಗಳನ್ನು ಅಲ್ಲಿಗೆ ನಿಯೋಜಿಸಬೇಕು. ತಡವಾಗಿ ಆದರೂ ತ್ಯಾಜ್ಯ ಸಂಗ್ರಹವನ್ನು ಮಾಡಲೇಬೇಕು.

ನಗರದಲ್ಲಿ 60 ವಾರ್ಡ್‌ಗಳಿದ್ದು, ಪ್ರತೀ ವಾರ್ಡ್‌ಗಳಲ್ಲಿ ಒಂದು ಕಡೆ ಅನುಕೂಲವಾಗುವ ಸ್ಥಳದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ಇದರಿಂದ ಈ ವಾರ್ಡ್‌ನ ಜನರು ಬೇರೆ ಕಡೆ ತ್ಯಾಜ್ಯವನ್ನು ಬಿಸಾಡುವುದನ್ನು ತಪ್ಪಿಸಬಹುದು. 

ಪ್ರತಿ ವಾರ್ಡ್‌ಗೆ ಒಬ್ಬರಂತೆ ತ್ಯಾಜ್ಯ ಸಂಗ್ರಹಣಾಕಾರರನ್ನು ನಿಯೋಜಿಸಬೇಕು. ಅಸಾಧ್ಯವಾದರೆ ತ್ಯಾಜ್ಯ ಸುರಿಯುವ ಕಡೆಗಳಲ್ಲಿ ಬಿತ್ತಿ ಪತ್ರ/ ಬ್ಯಾನರ್‌ಗಳನ್ನು ಅಳವಡಿಸಿ ತ್ಯಾಜ್ಯ ಸುರಿಯದಂತೆ ಪ್ರೇರಣೆ ಕೊಡಬೇಕು. ಇದರಿಂದಲೂ ಫ‌ಲಿತಾಂಶ ಉತ್ತಮವಾಗಿಲ್ಲದಿದ್ದರೆ, ಸಂಗ್ರಹಣಾ ಪ್ರತಿನಿಧಿಗಳು ಆ ಸ್ಥಳದಲ್ಲಿದ್ದು, ತ್ಯಾಜ್ಯ ಸುರಿಯುವವರಿಗೆ ಖುದ್ದಾಗಿ ತಿಳಿಹೇಳಬಹುದು. ಇದೆಲ್ಲಾ ಸಾಧ್ಯವಿಲ್ಲವಾದರೆ ಮಹಾನಗರ ಪಾಲಿಕೆಯವರು ತ್ಯಾಜ್ಯವನ್ನು ಸುರಿಯುವವರ ಬಗ್ಗೆ ಮಾಹಿತಿ ಪಡೆದು ಕಠಿನ ಕ್ರಮ ಕೈಗೊಳ್ಳಬೇಕು. 

ಈ ನಿಟ್ಟಿನಲ್ಲಿ ಆಡಳಿತವಷ್ಟೇ ಅಲ್ಲ ಸ್ಥಳೀಯರೂ ಎಚ್ಚರಿಕೆ ವಹಿಸಬೇಕು. ತಮ್ಮ ಭಾಗದ ರಸ್ತೆಯಂಚಿನಲ್ಲಿ ಯಾರೇ ಕಸ ತಂದು ಬಿಸಾಡಿದರೂ ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡುವ ಕೆಲಸ ಮಾಡಬೇಕು. ಅಥವಾ ಈ ಭಾಗದಲ್ಲಿ ಒಂದು ಡಸ್ಟ್‌ ಬಿನ್‌ ಅಳವಡಿಸಿ ಕಸ ತಂದು ಸುರಿಯಲು ಅಲ್ಲಿಂದ ತ್ಯಾಜ್ಯ ನಿರ್ವಹಣಾಕರರು ಕಸ ತೆಗೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಲುಸ್ಥಳೀಯ ಕಾರ್ಪೊರೇ ಟರ್‌ ಮೂಲಕ ಒತ್ತಾಯ ಮಾಡಬಹುದು.

 ವಿಶ್ವನಾಥ್‌ ಕೋಟೆಕಾರ್‌, ಕೋಡಿಕಲ್‌

ಟಾಪ್ ನ್ಯೂಸ್

Puneeth Rajkuamr

ಅಪ್ಪು ಸಿನಿ ಪಯಣಕ್ಕೆ 45 ವಸಂತಗಳ ಸಂಭ್ರಮ…ತಾರೆಯರಿಂದ ಶುಭಹಾರೈಕೆಗಳ ಸುರಿಮಳೆ  

Indian Oil Launches 100 Octane Fuel In Hyderabad

ಹೈದರಾಬಾದ್ ನಲ್ಲಿ 100 ಆಕ್ಟೇನ್ ಪ್ರೀಮಿಯಂ ಪೆಟ್ರೊಲ್ ಬಿಡುಗಡೆ ಮಾಡಿದ ಐಒಸಿ

Prashant neel

ಇಂದು ‘ಸಲಾರ್’ ಕುರಿತು ಬಿಗ್ ಅಪ್ಡೇಟ್ ನೀಡಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್….ಏನದು ?  

HD Set-Top Boxes D2H New Plan

D2H ನೀಡುತ್ತಿದೆ ಬೊಂಬಾಟ್ ಆಫರ್ ..!

Amithabh Bachan

ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಹಿರಿಯ ನಟ ಅಮಿತಾಭ್ !  

SBI Gold Loan

ಚಿನ್ನದ ಮೇಲೆ ಸಾಲ ಪಡೆಯುವವರಿಗೆ ವಾರ್ಷಿಕ ಶೇ7.25 ಬಡ್ಡಿದರದಲ್ಲಿ ಸಾಲ ನೀಡಲಿದೆ ಎಸ್ ಬಿ ಐ

PSLV-C51/Amazonia-1 mission successful, Isro places 19 satel

ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದ ಇಸ್ರೋ ರಾಕೆಟ್..!   ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

Puneeth Rajkuamr

ಅಪ್ಪು ಸಿನಿ ಪಯಣಕ್ಕೆ 45 ವಸಂತಗಳ ಸಂಭ್ರಮ…ತಾರೆಯರಿಂದ ಶುಭಹಾರೈಕೆಗಳ ಸುರಿಮಳೆ  

v-nagendra-prasad-sangeetha-sanje

ಕೋಟೇಶ್ವರದಲ್ಲಿ ವಿ.ನಾಗೇಂದ್ರ ಪ್ರಸಾದ್ ಸಂಗೀತ ಸವಿಸಂಜೆ

Indian Oil Launches 100 Octane Fuel In Hyderabad

ಹೈದರಾಬಾದ್ ನಲ್ಲಿ 100 ಆಕ್ಟೇನ್ ಪ್ರೀಮಿಯಂ ಪೆಟ್ರೊಲ್ ಬಿಡುಗಡೆ ಮಾಡಿದ ಐಒಸಿ

Prashant neel

ಇಂದು ‘ಸಲಾರ್’ ಕುರಿತು ಬಿಗ್ ಅಪ್ಡೇಟ್ ನೀಡಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್….ಏನದು ?  

HD Set-Top Boxes D2H New Plan

D2H ನೀಡುತ್ತಿದೆ ಬೊಂಬಾಟ್ ಆಫರ್ ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.