ವ್ಹೀಲ್‌ಚೇರ್‌ ಕಾರು ಮಂಗಳೂರಿಗೂ ಬರಲಿ

Team Udayavani, Oct 20, 2019, 5:41 AM IST

ನಗರಗಳು ದಿನೇ ದಿನೇ ಹೊಸ ಅನ್ವೇಷಣೆಗಳನ್ನು ಜನರಿಗೆ ಪರಿಚಯಿಸುತ್ತಾ ಬಂದಿವೆ. ಆದರೆ ಈ ಅನ್ವೇಷಣೆಗಳು ಎಷ್ಟು ಜನ ಉಪಯೋಗಿಸುತ್ತಾರೆ, ಇದರಿಂದ ನಮಗೆಷ್ಟು ಲಾಭವಾಗುತ್ತದೆ ಎನ್ನುವ ದೃಷ್ಟಿಕೋನದಿಂದ ಜನರ ಸಂಖ್ಯೆಗಳಿಗನುಗುಣವಾಗಿ ಹೊಸ ತಂತ್ರಜ್ಞಾನಗಳು ಪರಿಚಯವಾಗುತ್ತಲೇ ಇರುತ್ತವೆ. ಆದರೆ ಈ ಬೆಳವಣಿಗೆ ತಪ್ಪು ನಗರದ ಬೆಳವಣಿಗೆ ಎಲ್ಲ ವಲಯವನ್ನು ಕೇಂದ್ರೀಕರಿಸಿ ನಿರ್ಮಾಣವಾಗಬೇಕಿದೆ. ಇಂದು ಅಂಗವೈಕಲ್ಯವನ್ನು ಎದುರಿಸುವ ಸೀಮಿತ ವರ್ಗಕ್ಕೆ ಇವತ್ತಿನ ತಂತ್ರಜ್ಞಾನ ಅವರ ಪರವಾಗಿ ಯೋಚಿಸುವುದು ಕಡಿಮೆಯೇ.ಆದರೆ ಇದು ಹಾಗಾಗಬಾರದು ನಗರಗಳು ಎಲ್ಲ ವರ್ಗವನ್ನು ಪರಿಗಣಿಸಿ ಒಂದು ಯೋಜಿತ ಪ್ರಬುದ್ಧ ನಗರವಾಗಬೇಕು.

ವಿದೇಶದಲ್ಲಿ ಅಂಗವೈಕಲ್ಯ ಸಮಸ್ಯೆ ಹೊಂದಿದವರಿಗೆ ತಂತ್ರಜ್ಞಾನ ವರವಾಗಿ ಪರಿಣಮಿಸಿದೆ. ಇದಕ್ಕೊಂದು ನಿದರ್ಶನವೆಂಬಂತೆ ಕಾರು ವ್ಹೀಲ್‌ಚೇರ್‌ ಮೂಲಕ ಅಂಗವಿಕಲರೂ ಎಲ್ಲರಂತೆ ನಗರವನ್ನು ಸುತಾಡುವ ವಾತಾವರಣ ನಿರ್ಮಾಣವಾಗಿದೆ.

ಈ ವ್ಹೀಲ್‌ಚೇರ್‌ ಕಾರು ಅಂಗವಿಕಲರಿಗೆ ಯಾರ ಸಹಾಯವು ಇಲ್ಲದೆ ಓಡಿಸಲು ಅವಕಾಶವನ್ನು ಒದಗಿಸುತ್ತದೆ. ಅದೇಗೆ ಅಂತೀರಾ ಈ ಬಗ್ಗೆ ಮಾಹಿತಿ ಇಲ್ಲಿದೆ.

ಕಾರ್‌ ವ್ಹೀಲ್‌ಚೇರ್‌
ಕಾರು ಈ ವ್ಹೀಲ್‌ಚೇರ್‌ ಅನ್ನುವ ಕಲ್ಪನೆ ಹುಟ್ಟಿಕೊಂಡದ್ದು ಲಡಿಸ್ಲಾವ್‌ ಬ್ರಾಜ್ಡಿಲ್‌ ಎಂಬುವವರಿಂದ. ಇದು ವಿಶೇಷವಾಗಿ ಅಂಗವಿಕಲರನ್ನು ಗುರಿಯಾಗಿಸಿಕೊಂಡು ಈ ಚೇಯರನ್ನು ವಿನ್ಯಾಸಗೊಳಿಸಲಾಗಿದೆ. ಈ ವ್ಹೀಲ್‌ಚೇರ್‌ನಿಂದ ಜೀವನ ಸಾಗಿಸುವವರಿಗೆ ನಗರವನ್ನು ಸುತ್ತು ಹಾಕಲು ತಮಗೆ ಬೇಕೆಂದಾಗ ಈ ವೀಲ್‌ ಚಯರ್‌ ಕಾರ್‌ ನಲ್ಲಿ ಸುತ್ತು ಹಾಕಬಹುದು. ಇಲ್ಲಿಗೂ ಪರಿಚಯವಾಗಲಿ ನಗರವನ್ನು ಸುತ್ತಾಡುವ ಬಯಕೆ ಇರುವ ಅದೆಷ್ಟೋ ಮಂದಿ ನಮ್ಮಲ್ಲಿ ಇರುತ್ತಾರೆ. ಆದರೆ ಅವರ ಅಂಗವಿಕಲತೆ ಅವರಿಗೆ ಶಾಪವಾಗಿ ಪರಿಣಮಿಸಿರುತ್ತದೆ. ಇಂತಹ ಕಾರುಗಳು ನಮ್ಮ ನಗರದಲ್ಲಿ ಪರಿಚಯವಾದಲ್ಲಿ ಯಾರ ಸಹಾಯವೇ ಇಲ್ಲದೆ ಈ ವ್ಹೀಲ್‌ಚೇರ್‌ ಕಾರ್‌ನಲ್ಲಿ ನಗರವನ್ನು ಸುತ್ತಾಡಬಹುದಾಗಿದೆ. ಪರ್ಯಾಯ ಪರಿಕಲ್ಪನೆ ಅಳವಡಿಕೆ ಇಂದಿನ ತುರ್ತು ಅಗತ್ಯ.

ಹೇಗಿದೆ ಈ ಕಾರು?
ಈ ಕಾರಿನ ಮುಂಭಾಗದಿಂದ ಬಲಕ್ಕೆ ತೆರೆದರೆ, ಅದು ಚಾಲಕನಿಗೆ ಅವನ / ಅವಳ ಗಾಲಿಕುರ್ಚಿಯೊಂದಿಗೆ ನೇರವಾಗಿ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ. ಕಾರಿನ ಫ್ರಂಟ್‌ -ಎಂಡ್‌ ಒಪನಿಂಗ್‌ ಎನ್ನುವುದು ನಾವೀನ್ಯತೆಯಾಗಿದ್ದು ಅದು ಚಾಲನೆ ಮಾಡುವ ಗಾಲಿಕುರ್ಚಿ ಬಳಕೆದಾರರ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ