ಮನೋಜ್ಞ ಅಭಿನಯದ ಆಲಿಬಾಬ ಮತ್ತು ನಲ್ವತ್ತು ಕಳ್ಳರು

ಧರ್ಮಸ್ಥಳದ ಮಕ್ಕಳ ಪ್ರಸ್ತುತಿ

Team Udayavani, Jun 21, 2019, 5:00 AM IST

“ಅದೃಷ್ಟವೆಂಬ ನೌಕೆಯಲ್ಲಿ ನಾವಿಕರು ಇಲ್ಲಿ ನಾವು ನೀವು’ ಮಾತು ಮತ್ತೆ ಮತ್ತೆ ಧ್ವನಿಸುತ್ತದೆ. “ಖುದಾ ಕಾ ಕಸಂ ಕಸಂ ಕಾ ಹುಕುಂ ಖುಲ್‌ಜಾ ಸಿಂ ಸಿಂ’ ಮತ್ತು “ಬಂದ್‌ ಹೋಜಾ ಸಿಂ ಸಿಂ’ ಕಳ್ಳರ ಗುಂಪಿನ ಗುಪ್ತನಿಧಿ ತಾಣದ ಬಾಗಿಲು ಮುಚ್ಚುವ ಮತ್ತು ತೆರೆಯುವ ರಹಸ್ಯ ಬಯಲಾಗುವ ಕತೆ‌ ಯೋಚನಾಲಹರಿಗೆ ಸ್ಪೂರ್ತಿದಾಯಕವಾಗಿದೆ.

ಉಜಿರೆಯ ಸಿದ್ಧವನ ಗುರುಕುಲದಲ್ಲಿ ಧರ್ಮಸ್ಥಳದ ಮಕ್ಕಳು ಪ್ರಸ್ತುತಪಡಿಸಿದ ಕಿರುನಾಟಕ “ಆಲಿಬಾಬ ಮತ್ತು ನಲ್ವತ್ತು ಕಳ್ಳರು’ ಮನೋಜ್ಞವಾಗಿ ಮೂಡಿಬಂದಿದೆ. ಚಂದ್ರಶೇಖರ ಕಂಬಾರರ ರಚನೆಯನ್ನು ಯಶವಂತ ಬೆಳ್ತಂಗಡಿ ಪರಿಣಾಮಕಾರಿಯಾಗಿ ನಿರ್ದೇಶಿಸಿ 18 ಮಕ್ಕಳ ಮೂಲಕ ರಂಗದಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಕಮಲಾಕ್ಷ ಮತ್ತು ಸಮರ್ಥನ್‌ ಸಂಗೀತ ಹಿನ್ನೆಲೆಯಲ್ಲಿ ಶಿಶಿರ ಕಲ್ಕೂರ ಬೆಳಕಿನ ಸಂಯೋಜನೆ ನೀಡಿದ್ದಾರೆ.

“ಅದೃಷ್ಟವೆಂಬ ನೌಕೆಯಲ್ಲಿ ನಾವಿಕರು ಇಲ್ಲಿ ನಾವು ನೀವು’ ಮಾತು ಮತ್ತೆ ಮತ್ತೆ ಧ್ವನಿಸುತ್ತದೆ. “ಖುದಾ ಕಾ ಕಸಂ ಕಸಂ ಕಾ ಹುಕುಂ ಖುಲ್‌ಜಾ ಸಿಂ ಸಿಂ’ ಮತ್ತು “ಬಂದ್‌ ಹೋಜಾ ಸಿಂ ಸಿಂ’ ಕಳ್ಳರ ಗುಂಪಿನ ಗುಪ್ತನಿಧಿ ತಾಣದ ಬಾಗಿಲು ಮುಚ್ಚುವ ಮತ್ತು ತೆರೆಯುವ ರಹಸ್ಯ ಬಯಲಾಗುವ ಕುತೂಹಲಭರಿತ ಕಥೆ ಮಕ್ಕಳ ಯೋಚನಾಲಹರಿಗೆ ಸ್ಪೂರ್ತಿದಾಯಕವಾಗಿದೆ. “ಚೋರೋಂಕಾ ರಾಜಾ ಹಸನ್‌’ನ ತಂತ್ರಗಾರಿಕೆ ತನಗೇ ಮುಳುವಾಗುವ ವಿಚಿತ್ರ ಸನ್ನಿವೇಶವೇ ನಾಟಕದ ಕಥಾವಸ್ತು. ಹಾಸ್ಯ, ನೃತ್ಯ, ಪ್ರೇಮ, ಗಣಪತಿಯ ದೃಶ್ಯ ರೂಪಕಗಳು ನಾಟಕದ ಪರಿಪೂರ್ಣತೆಗೆ ಕನ್ನಡಿಯಂತಿದೆ. ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಎಲ್ಲ ಮಕ್ಕಳೂ ನಾಟಕಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಸೂತ್ರಧಾರಿಯಾಗಿ ಮಾನ್ಯ ಗಮನ ಸೆಳೆಯುತ್ತಾರೆ. 6ನೇ ವರ್ಷದಲ್ಲಿ ಮಕ್ಕಳು ದ್ವಿತೀಯ ಪ್ರದರ್ಶನದಲ್ಲಿ ಪ್ರಬುದ್ಧತೆ ಅಭಿವ್ಯಕ್ತಗೊಳಿಸಿ ಭರವಸೆ ಮೂಡಿಸಿದ್ದಾರೆ. ಒಂದು ಗಂಟೆ ಅವಧಿಯ ಪ್ರದರ್ಶನದಲ್ಲಿ ಎಲ್ಲ ಮಕ್ಕಳೂ ತಮ್ಮ ಸೃಜನಶೀಲ ಕಲಾವಂತಿಕೆಯನ್ನು ಒರೆಗೆ ಹಚ್ಚಿದ್ದಾರೆ. ಹಿತಮಿತ ಸಂಗೀತ ನಾಟಕದ ಯಶಸ್ಸಿಗೆ ಪೂರಕವಾಗಿತ್ತು. ಕೊನೆಯವರೆಗೂ ಕಥೆಯ ತಿರುವು ಕುತೂಹಲಕಾರಿಯಾಗಿ ಮುನ್ನೆಡೆಸಿಕೊಂಡು ಹೋಗಿದೆ.

ಸಾಂತೂರು ಶ್ರೀನಿವಾಸ ತಂತ್ರಿ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ