ಸಾಹಿತ್ಯೋತ್ಸವಕ್ಕೆ ವರ್ಣಸ್ಪರ್ಶ ನೀಡಿದ ಕಲಾಪ್ರದರ್ಶನ


Team Udayavani, Jan 25, 2019, 12:30 AM IST

w-5.jpg

ಸಂಗೀತ, ಸಾಹಿತ್ಯ, ಕಲೆಗಳು ಪರಸ್ಪರ ಪೂರಕವಾದವುಗಳು. ಭಾವನಾತ್ಮಕ ಪ್ರಪಂಚದ ಮೇರುಕೃತಿಗಳಿವು. ಇವು ಮೂರೂ ಒಂದೆಡೆ ಸೇರಿದರೆ ಶ್ರೋತೃಗಳು ವಿಶೇಷ ಆನಂದ ಹೊಂದುತ್ತಾರೆ, ಆ ರೀತಿಯ ಅನುಭವ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಾಯಿತು. ಸಾಹಿತ್ಯೋತ್ಸವದ ಜೊತೆಗೆ ರಸಮಯ ಕಾವ್ಯ-ಕುಂಚ ಪ್ರಾತ್ಯಕ್ಷಿಕೆ ಹಾಗೂ ಚಿತ್ರಕಲಾ ಪ್ರದರ್ಶನ ನಡೆದು ಕನ್ನಡಾಭಿಮಾನಿಗಳು ಖುಷಿಗೊಂಡರು. 

ಶಿರ್ವ ಕುತ್ಯಾರಿನ ಪರಶುರಾಮೇಶ್ವರ ಕ್ಷೇತ್ರದಲ್ಲಿ ನಡೆದ ಈ ಸಾಹಿತ್ಯ ಸಮ್ಮೇಳನದಲ್ಲಿ ಕಾಪು ತಾಲೂಕಿನ ಖ್ಯಾತ ಕಲಾವಿದರೆಲ್ಲಾ ಸೇರಿ ನಡೆಸಿದ ಚಿತ್ರಕಲಾ ಪ್ರದರ್ಶನ ಗಮನಸೆಳೆಯಿತು. ಬೆಳ್ಳೆ ಪದ್ಮನಾಭ ನಾಯಕ್‌, ರಮೇಶ ಬಂಟಕಲ್‌, ಉಪಾಧ್ಯಾಯ ಮೂಡುಬೆಳ್ಳೆ, ಪ್ರಮೋದನ ಯು. ಮುಂತಾಗಿ ಹಲವರ ನೈಜ ಮತ್ತು ನವ್ಯ ಕಲಾಕೃತಿಗಳು ಕಲಾಪ್ರದರ್ಶನದಲ್ಲಿದ್ದವು. 

ವೈವಿಧ್ಯಮಯ ವಿಷಯಗಳ ಚಿತ್ರಗಳು ಕಲಾಪ್ರದರ್ಶನದಲ್ಲಿದ್ದವು. ಈ ಮಣ್ಣಿನ ವಾಸನೆಯ ಕೆಲವಂಶಗಳು ಕಲಾಕೃತಿಯೊಳಗೆ ಪ್ರಸ್ತುತಗೊಂಡಿದ್ದವು. ಎಲ್ಲಾ ಕ್ಷೇತ್ರಗಳಲ್ಲೂ ಇಂದು ಸ್ವಂತಿಕೆ-ಸೃಜನಶೀಲತೆ, ಚಿಂತನೆ ಎಂಬ ಪದ ಹೆಚ್ಚು ಬಳಕೆಯಾಗುತ್ತಿರುವಂತೆ ಚಿತ್ರಕಲಾವಿದನ ಕಲಾಕೃತಿಗಳಲ್ಲೂ ವೀಕ್ಷಕರು ಈ ಅಂಶಗಳನ್ನು ಹುಡುಕುವುದು ಸರ್ವೇಸಾಮಾನ್ಯವಾಗಿದೆ.ಪ್ರಮೋದ ಅವರ ಕಲಾಕೃತಿಗಳು ನವ್ಯತೆಯ ಮೆರುಗಿನೊಂದಿಗೆ ಚಿಂತನಾತ್ಮಕವಾಗಿದ್ದವು. ಇದು ಒಂದು ವರ್ಗದ ಜನರ ಅಭಿಪ್ರಾಯವಾದರೆ ಇನ್ನೊಂದು ವರ್ಗದ ಜನರು ಸಾಂಪ್ರದಾಯಿಕತೆಗೆ ಒತ್ತು ಕೊಡುವ ನವ್ಯಸ್ಪರ್ಶದ ಕಲಾಕೃತಿಗಳನ್ನು ಕಾಣಬಯಸುತ್ತಾರೆ. ಉಪಾಧ್ಯಾಯ ಮೂಡುಬೆಳ್ಳೆಯವರ ಕಲಾಕೃತಿಗಳು ಈ ವರ್ಗಕ್ಕೆ ಸೇರಿದ್ದವು. ಮತ್ತೂಂದು ವರ್ಗದ ಜನ ನಿಸರ್ಗದೃಶ್ಯ ಚಿತ್ರ, ಜನಪದ ಚಿತ್ರ (ಯಕ್ಷಗಾನ, ಕಂಬಳ, ನೇಮೋತ್ಸವ, ಜಾತ್ರೆ, ನಾಗಮಂಡಲ) ರಾಷ್ಟ್ರನಾಯಕರ ಚಿತ್ರಗಳನ್ನು ಇಷ್ಟಪಡುತ್ತಾರೆ. ರಮೇಶ ಬಂಟಕಲ್‌, ಪದ್ಮನಾಭ ನಾಯಕ್‌ರವರ ಕೃತಿಗಳು ಈ ನಿಟ್ಟಿನಲ್ಲಿದ್ದವು. ಕಲಾವಿದ ಒಳಮುಖನಾಗದೆ ಸಮಾಜಮುಖೀಯಾಗಬೇಕು. ಅವನ ಕಲಾಕೃತಿಗಳು ಸಮಾಜದ ಪ್ರತಿಬಿಂಬವಾಗಿದ್ದು ಸಮಾಜದ ಒಳಿತನ್ನು ಸಾಧಿಸುವಂತಿರಬೇಕು ಎಂಬ ತತ್ವ ಕಲಾಕೃತಿಯೊಳಗೆ ಅಡಗಿತ್ತು. ಒಟ್ಟಿನಲ್ಲಿ ಈ ಕಲಾಪ್ರದರ್ಶನ ಸಾಹಿತ್ಯೋತ್ಸವಕ್ಕೆ ವರ್ಣಸ್ಪರ್ಶ ನೀಡಿ ಹೊಸ ಸಂಚಲನ ಮೂಡಿಸಿತು. 

ಉಪಾಧ್ಯಾಯ ಮೂಡುಬೆಳ್ಳೆ 

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.