ಕಲಾವಿದರ ಬದ್ಧತೆ ಮತ್ತು ಟೆಂಟ್‌ ಮೇಳಗಳ ಆದಾಯ


Team Udayavani, May 31, 2019, 6:00 AM IST

v-7

ಸಾಂದರ್ಭಿಕ ಚಿತ್ರ

ಯಕ್ಷಗಾನ ಮೇಳಗಳ ಸಂಪಾದನೆಯ ಪ್ರಧಾನ ಮೂಲ ಮೀನುಗಾರಿಕೆ ಹಾಗೂ ಬೇಸಾಯ. ಆದರೆ ಈ ವರ್ಷದಲ್ಲಿ ಮೀನುಗಾರಿಕೆಯಲ್ಲಿ ಆದ ಭಾರಿ ಕುಸಿತ ಹಾಗೂ ಮರಳಿನ ಸಮಸ್ಯೆಯಿಂದಾದ ಕೂಲಿಗಾರರ ಆದಾಯ ಖೋತಾವು ಟೆಂಟ್‌ ಮೇಳಗಳ ಗಳಿಕೆಗೆ ಹೊಡೆತ ಕೊಟ್ಟಿದೆ.

ಐವತ್ತು ವರ್ಷಗಳ ಇತಿಹಾಸವುಳ್ಳ ಸಾಲಿಗ್ರಾಮ, ಸೌಕೂರು, ಹಿರಿಯಡ್ಕ, ಮಡಾಮಕ್ಕಿ ಮೇಳಗಳ ಯಜಮಾನ ಪಳ್ಳಿ ಕಿಶನ್‌ ಹೆಗ್ಡೆಯವರು ಹೇಳುವ ಪ್ರಕಾರ ಮೇಳವು ಪಾರಂಪರಿಕ ಕಂಟ್ರಾಕುrದಾರರನ್ನು ಹೊಂದಿದ್ದು, ಆಟಕ್ಕೆ ಕೊರತೆ ಇಲ್ಲ. ಇತ್ತೀಚಿನ ತಿರುಗಾಟದಲ್ಲಿ 100 ರಿಂದ 120 ಬಯಲಾಟಗಳ ಕಾಂಟ್ರಾಕ್ಟ್ ಇದೆ. ಮೇಳದಲ್ಲಿ ಕಲಾವಿದರ ಅನುಕೂಲಗಳ ಜೊತೆಗೆ ಕಾಂಟ್ರಾಕ್ಟ್ದಾರರ ಅನುಕೂಲಕ್ಕೆ ಆದ್ಯತೆ ಕೊಟ್ಟಿದ್ದು, ಈಗ ಮೇಳದ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಕೆಲಸಗಾರರ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿದೆ.

ಮೇಳಗಳ ನಿಯಮ ಪ್ರಕಾರ ಒಂದು ಮೇಳಕ್ಕೆ ಒಪ್ಪಂದ ಆದ ಕಲಾವಿದ ಬೇರೆ ಮೇಳಕ್ಕೆ ಅತಿಥಿಯಾಗಿ ಹೋಗಲು ಆಸ್ಪದ ಇಲ. ಮೇಳದಲ್ಲಿ ಕಲಾವಿದರ ಸಹಕಾರ ಅನನ್ಯ. ಆದರೆ ಪ್ರಸ್ತುತ ಕಲಾವಿದರು ಹೆಚ್ಚುವರಿ ಆದಾಯದ ಆಸೆಯಿಂದ ಗುಣಮಟ್ಟದ ಪರಿವೆ ಇಲ್ಲದೆ ವಿವಿಧ ಸಂಘಟನೆಗಳ ಆಟಗಳಿಗೆ ಹೋಗುವ ಮನೋಧರ್ಮಕ್ಕೆ ಒಗ್ಗಿಕೊಂಡಿದ್ದಾರೆ. ಇದು ಕಲಾವಿದನ ಸ್ಟಾಂಡರ್ಡ್‌ಗೆ ಕುಂದು ತರುವ ವಿಚಾರ. ಈ ಕಾರಣದಿಂದ ಮೇಳದ ಸಮಗ್ರತೆಗೆ ಧಕ್ಕೆಯಾಗಿ ಆದಾಯ ಕೊರತೆ ಆಗುವುದು ನಿಶ್ಚಯ.

ಸೀಮಿತ ತಿರುಗಾಟ ಕ್ಷೇತ್ರ ವಿಸ್ತಾರವಿದ್ದ ಯಕ್ಷಗಾನ ರಂಗದಲ್ಲಿ ಕಳೆದ ಒಂದು ದಶಕದಲ್ಲಿ ಹರಕೆ ಬಯಲಾಟ ಹಾಗೂ ಬಯಲಾಟ ಮೇಳಗಳ ಸಂಖ್ಯೆಯಲ್ಲಿ ಆದ ಹೆಚ್ಚಳವು ಟೆಂಟ್‌ ಮೇಳಗಳ ಪ್ರದರ್ಶನ ಅವಕಾಶ ಕೊರತೆಗೆ ಕಾರಣವಾಗಿದೆ.ಭವಿಷ್ಯದಲ್ಲಿ ಟೆಂಟ್‌ ಮೇಳ ನಡೆಯುವ ಬಗ್ಗೆ ಅನುಮಾನ ಇಲ್ಲ . ಆದರೆ ಪ್ರಕಾರ ಬದ್ಧತೆಯಲ್ಲಿ ಮೌಲ್ಯಯುಕ್ತ ಕಥಾನಕದ ಜೊತೆಗೆ ಪ್ರದರ್ಶನಗಳನ್ನು ಕಳೆಗಟ್ಟಿಸುವಲ್ಲಿ ಕಲಾವಿದರ ತೊಡಗಿಸುವಿಕೆಯ ಅಗತ್ಯವಿದೆ.

ಈಗಿನ ಪ್ರೇಕ್ಷಕರ ರಸಸ್ವಾದದ ಆಕಾಂಕ್ಷೆಯೇ ಬದಲಾಗಿದೆ. ಮುಂಚಿನ ಆಟಗಳನ್ನು ಅವರು ಕಂಡಿಲ್ಲ ಈಗಿನ ಆಟ ಹೇಗಿರಬೇಕೆಂದು ಗೊತ್ತಿಲ್ಲದ ಅವರು ಪ್ರತಿ ಪ್ರಸಂಗಗಳಲ್ಲಿ ಗಿಮಿಕ್‌ ಇರಲಿ ಆಟ ಗೌಜಿ ಆಗಲಿ ಅನ್ನುವ ಧೋರಣೆಯನ್ನು ಬದಿಗಿರಿಸಿ ನೈಜ ಯಕ್ಷಗಾನದ ಬಗ್ಗೆ ಅರಿವನ್ನು ಹೊಂದಿ ಪ್ರಬುದ್ಧರಾಗಬೇಕಿದೆ.

ವೈ. ಕರುಣಾಕರ ಶೆಟ್ಟಿಯವರು 34 ವರ್ಷಗಳಲ್ಲಿ ಯಶಸ್ವಿ ತಿರುಗಾಟ ನಡೆಸಿದವರು. ಸದ್ಯ ಪೆರ್ಡೂರು ಮೇಳದ ಜೊತೆ ಹಾಲಾಡಿ ಉಭಯ ಮೇಳಗಳ ಯಜಮಾನ. ಈ ಸಲದ ಟೆಂಟ್‌ ಮೇಳ ತಿರುಗಾಟದ ಸ್ಥಿತಿ ಗತಿಯ ಬಗ್ಗೆ ಅವರ ಮಾತಲ್ಲಿ ಕೇಳ್ಳೋದಾದರೆ,”ಮೌಲ್ಯಾಧಾರಿತ ಪ್ರಸಂಗಗಳ ಪ್ರಯೋಗದ ಇತಿಹಾಸ ಹೊಂದಿರುವ ನಮ್ಮ ಮೇಳದಲ್ಲಿ ಒಂದು ವರ್ಷ ಪ್ರಸಂಗ ಗೆದ್ದರೆ ಮರುವರ್ಷ ಆಟ ಕಂಟ್ರಾಕ್ಟ್ ಹೋಗುತ್ತಾ ಮೇಳ ಗೆಲ್ಲುವುದು ರೂಢಿಯಾಗಿದೆ. ಈ ಸಲದ ಆರ್ಥಿಕ ಮುಗ್ಗಟ್ಟಿನ ದೆಸೆಯಿಂದ ಆಟಗಳು ಕಾಂಟ್ರಾಕ್ಟ್ ಹೋಗುವಲ್ಲಿ ಸ್ವಲ್ಪ ಹಿನ್ನಡೆ ಕಂಡಾಗ ಈ ಬಗ್ಗೆ ಖು¨ªಾಗಿ ಕಾರ್ಯ ಪ್ರವೃತ್ತನಾದೆ.

ಆದರೂ ಸೀಮಿತ ಕಾರ್ಯಕ್ಷೇತ್ರ ಪರಿಧಿಯಲ್ಲಿ ಹರಕೆ ಹಾಗೂ ಬಯಲಾಟ ಮೇಳಗಳ ಒತ್ತಡದ ನಡುವೆ ಹೊಸ ಪ್ರೇಕ್ಷಕರನ್ನು ಸೆಳೆಯಲು ಟೆಂಟ್‌ ಮೇಳಗಳ ಪ್ರದರ್ಶನ ವ್ಯವಸ್ಥೆಯು ಮರು ಪರಿಶೀಲನೆಗೆ ಒಳ ಪಡುವ ಅಗತ್ಯ ಇದೆ.

ಸದ್ಯದ ಪರಿಸ್ಥಿತಿಯಲ್ಲಿ ಕಲಾವಿದರು ಅತಿಥಿ ಕಲಾವಿದರಾಗಿ ದಿನಕ್ಕೆ 3 ಕಡೆ ಪ್ರದರ್ಶನಕ್ಕೆ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಕನಿಷ್ಠ ಒಂದು ಕಾರ್ಯಕ್ರಮಕ್ಕೂ ನ್ಯಾಯ ಒದಗಿಸುವ ಭರವಸೆ ಇಲ್ಲ. ಕಲಾವಿದರ ಮಿತಿಮೀರಿದ ಸಂಬಳ ಟೆಂಟ್‌ ಮೇಳಗಳ ವೀಳ್ಯದ ಮೇಲೆ ಪ್ರಭಾವ ಬೀರಿದ್ದು ಕಾಂಟ್ರಾಕ್ಟ್ದಾರರಿಗೆ ಕೈಗೆಟಕುವ ವೀಳ್ಯದಲ್ಲಿ ಆಟ ನೀಡಲು ಕಷ್ಟ ಎನ್ನುತ್ತಾರೆ ಮೇಳದ ಯಜಮಾನರೂ ಆಗಿರುವ ಕಲಾವಿದ ವಿದ್ಯಾಧರ ಜಲವಳ್ಳಿ.

ಮುಂದಿನ ದಿನಗಳಲ್ಲಿ ಟೆಂಟ್‌ ಮೇಳಗಳ ಪ್ರದರ್ಶನಗಳಲ್ಲಿ ಒಂದಷ್ಟು ಬದಲಾವಣೆ ಸಾಧ್ಯತೆಯನ್ನು ನೋಡುವುದಾದರೆ ಸಿನೆಮಾ ಆಧಾರಿತ ಸಾಮಾಜಿಕ ಪ್ರಸಂಗಳ ಯಥಾಪ್ರತಿ ಭಟ್ಟಿ ಇಳಿಸುವುದರ ಬದಲಿಗೆ ಈವರೆಗೂ ರಂಗ ಕಾಣದ ಪೌರಾಣಿಕ ಕತೆಯ ಪ್ರಸಂಗಗಳನ್ನು ಹುಡುಕಿ ನಿರ್ದೇಶಿಸಿ ರಂಗಕ್ಕೆ ಅಳವಡಿಸಬಹುದು. ಹಾಗೆಯೇ ಚಾಲ್ತಿಯಲ್ಲಿದ್ದ ಪೌರಾಣಿಕ ಪ್ರಸಂಗಗಳ ಮೂಲ ಕತೆಯನ್ನು ಹೊಸಕದೆ ಹೊಸ ರೀತಿಯಲ್ಲಿ ಕಟ್ಟಿ ಕೊಡುವ ಚಿಂತನೆಬರಬೇಕು. ಇದಕ್ಕೆ ಹೊಸ ಪೀಳಿಗೆಯ ಕಲಾವಿದರ ಅಧ್ಯಯನಶೀಲಯುಕ್ತ ತೊಡಗಿಸಿಕೊಳ್ಳುವಿಕೆಯ ಅಗತ್ಯ ಇದೆ. ಯಕ್ಷಗಾನ ಕಲೆ ನಿಂತ ನೀರಾಗದೆ ಹುಚ್ಚು ಹೊಳೆಯೂ ಆಗದೆ, ನವ ಮನ್ವಂತರದ ಕಡೆಗೆ ನಡಿಗೆ ಹಾಕುತ್ತಿರುವ ಈ ಪರ್ವ ಕಾಲದಲ್ಲಿ ಹೊಸತನದೊಂದಿಗೆ ಯುವ ಪೀಳಿಗೆಗೆ ನೈಜ ಯಕ್ಷಗಾನದ ಅರಿವು ಮೂಡಿಸಿ ಅವರನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಯೋಚಿಸಬೇಕು. ಮೊಬೈಲ್‌ ಚಿತ್ರೀಕರಣದ ದೆಸೆಯಿಂದ ಮನೆಯಲ್ಲಿ ಕುಳಿತು ಪುಗಸಟ್ಟೆ ಯಕ್ಷಗಾನ ವೀಕ್ಷಣೆಯ ಮೇಲೆ ಕಡಿವಾಣದ ಅಗತ್ಯ ಇದೆ.

ಸುರೇಂದ್ರ ಪಣಿಯೂರು

ಟಾಪ್ ನ್ಯೂಸ್

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.