ಭಕ್ತಿ ಪರವಶವಾಗಿಸಿದ ಭಕ್ತಿ ಭಾವ ಗಾಯನ


Team Udayavani, Jul 5, 2019, 5:00 AM IST

4

ಬ್ರಹ್ಮಾವರದಲ್ಲಿ ಇತ್ತೀಚೆಗೆ ಸಾಧನ ಕಲಾ ಸಂಗಮ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು “ಭಕ್ತಿ ಭಾವ ಗಾಯನ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೊದಲಿಗೆ “ನೀ ಸುಖಕಾರಕ ವಿಘ್ನ ನಿವಾರಕ …’ ಗಣೇಶ ಸ್ತುತಿ(ಸಾಹಿತ್ಯ: ಗಜಾನನ ಹೆಬ್ಟಾರ್‌) ಹಾಡಿನ ಮೂಲಕ ಮಾ| ಶುಭಾಂಗ್‌ ಐತಾಳ್‌ ಕಾರ್ಯಕ್ರಮಕ್ಕೆ ಸೊಗಸಾದ ಮುನ್ನುಡಿ ಬರೆದರು. ನಂತರ ಗುರು ವಂದನೆಯಾಗಿ ಪುರಂದರ ದಾಸರ “ಗುರುವಿನ ಗುಲಾಮನಾಗುವ ತನಕ …’ ವನ್ನು ಕು| ವರ್ಷಾ ಅವರು ಇಂಪಾಗಿ ಹಾಡಿದರೆ, ಸಮೂಹ ಗಾಯನದಲ್ಲಿ ವಿ| ಕೆ. ವಿ. ರಮಣ್‌ ಅವರ ರಚನೆಯಾದ “ಆಂಜನೇಯ ಸ್ತೋತ್ರ’ವನ್ನು ಹಾಡಿರುವುದು ಶ್ರೋತೃಗಳನ್ನು ಭಕ್ತಿ ಪರವಶರಾಗುವಂತೆ ಮಾಡಿತು. ಅನಂತರ ಮಾ| ಭಾರ್ಗವ ಪುರಂದರ ದಾಸರ “ಇದು ಭಾಗ್ಯವಿದು ಭಾಗ್ಯ…’ ಮತ್ತು ವಿಜಯ ವಿಠಲ ದಾಸರ “ಸದಾ ಎನ್ನ ಹೃದಯದಲ್ಲಿ…’ ಹಾಡನ್ನು ಕು| ಶರಣ್ಯಾ ಹಾಡಿ ಎಲ್ಲರ ಗಮನ ಸೆಳೆದರು.

ಅಪೂರ್ವಾ ಅವರ ಸೊಗಸಾದ ಕಂಠಸಿರಿಯಲ್ಲಿ “ಸೌರಾಷ್ಟ್ರ ದೇಶದಲಿ…’ ಈಶ್ವರ ಭಕ್ತಿಯ ಹಾಡು ಮೂಡಿ ಬಂದರೆ, ಸಮೂಹ ಗಾಯನದಲ್ಲಿ ಆದಿ ಶಂಕರಾಚಾರ್ಯರ “ಶಿವ ಮಾನಸ ಸ್ತೋತ್ರ’ ತಲ್ಲೀನರಾಗುವಂತೆ ಮಾಡಿತು. ಮುಂದೆ ಪುರಂದರ ದಾಸರ “ತಾರಕ್ಕ ಬಿಂದಿಗೆ…’ಯನ್ನು ಮಾ| ಶುಭಾಂಗ್‌ ಐತಾಳ್‌, ನರೇಂದ್ರ ಶರ್ಮರ “ಭಾಜೆ ಮುರಳೀಯ…’ವನ್ನು ಕು| ವರ್ಷಾ, ಪುರಂದರ ದಾಸರ “ಪವಮಾನ…’ವನ್ನು ಮತ್ತು “ಬಂದಾನೋ ಗೋವಿಂದ…’ ಹಾಗೂ “ನೋಡಿದ್ಯಾ ಸೀತಮ್ಮ…’ವನ್ನು ಮಾ| ಭಾರ್ಗವ್‌ ಹಾಗೂ ಅಪೂರ್ವಾ ಮತ್ತು ಕು| ಶರಣ್ಯಾ ಹಾಡಿರುವುದು ಖುಷಿ ನೀಡಿತು. ಅನಂತರ ಮೀರಾ ಭಜನ್‌ನ “ಪಾಯೋಜೆ ಮೈನೆ…’ ಇದನ್ನು ಸಮೂಹವಾಗಿ ಹಾಡಿರುವುದು ಚೇತೋಹಾರಿಯಾಗಿತ್ತು. ಮುಂದೆ “ಕವನ ಸುಖ ಪಾಯೋ…’ ವನ್ನು ಹಿರಿಯರಾದ ಡಾ| ಎಚ್‌. ಆರ್‌. ಹೆಬ್ಟಾರ್‌ ಮತ್ತು ಮೀರಾ ಭಜನ್‌ನ “ಮೇ ಗಿರಿದಾರಿ …’ಯನ್ನು ಕು| ವರ್ಷಾ ಹಾಡಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಕೊನೆಯಲ್ಲಿ ಸಮೂಹವಾಗಿ “ಮಂತ್ರ ಪುಷ್ಪ’ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಮಂಗಳವನ್ನಿತ್ತರು. ತಬಲಾದಲ್ಲಿ ರಾಘವೇಂದ್ರ ಹೆಗಡೆ ಭಟ್ಕಳ್‌ ಮತ್ತು ಪೂರ್ಣಾನಂದ ಬಸ್ರೂರ್‌, ಕೀ ಬೋರ್ಡ್‌ನಲ್ಲಿ ಭಾಸ್ಕರ್‌ ಆಚಾರ್‌ ಬಸ್ರೂರು, ಕೊಳಲಿನಲ್ಲಿ ಕಿರಣ್‌ ಹೊಳ್ಳ ವಡ್ಡರ್ಸೆ ಸಹಕರಿಸಿದ್ದರು. ಈ ವಿದ್ಯಾರ್ಥಿಗಳು ಗುರುಗಳಾದ ವಿ| ಗಜಾನನ ಹೆಬ್ಟಾರ್‌ ಹಾಗೂ ಸುಗಮ ಸಂಗೀತ ಗುರುಗಳಾದ ಸುರೇಖಾ ಕೆ. ಎಸ್‌. ಬೆಂಗಳೂರು ಇವರ ಶಿಷ್ಯಂದಿರು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.