ಗೋ ಸಂಸ್ಕೃತಿಯನ್ನು ಸಾರುವ ಗೋ ರೂಪಕ


Team Udayavani, Nov 16, 2018, 6:00 AM IST

17.jpg

ಒಂದೂವರೆ ವರ್ಷದಲ್ಲಿ ಕರ್ನಾಟಕ, ಕೇರಳ, ಚೆನ್ನೈ, ಮಹಾರಾಷ್ಟ್ರ, ಉತ್ತರ ಪ್ರದೇಶ, ದಿಲ್ಲಿ, ಗೋವ, ಗುಜರಾತ್‌, ರಾಜಸ್ಥಾನದಲ್ಲಿ ಪ್ರಯೋಗಗಳನ್ನು ನಡೆಸಿದ್ದಾರೆ . ಗರಿಷ್ಠ 25 ಕಲಾವಿದರು ಇರುತ್ತಾರೆ. ಜಮ್ಮು ಕಾಶ್ಮೀರ, ಚಂಡೀಗಢದಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ಕರ್ನಾಟಕ ಹೊರತುಪಡಿಸಿ ಉಳಿದೆಡೆ ಹಿಂದಿಯನ್ನು ಬಳಸುತ್ತಾರೆ. 

ಕಿನ್ನಿಗೋಳಿ ಎಳತ್ತೂರು ಶ್ರೀಶಕ್ತಿದರ್ಶನ ಯೋಗಾಶ್ರಮದ ದೇವಬಾಬಾ ಅವರು ದೇಸೀ ತಳಿಗಳ ದನಗಳಿಂದ ಆಗುತ್ತಿರುವ ಉತ್ತಮಾಂಶ ಮತ್ತು ಮಿಶ್ರ ತಳಿಯ ದನಗಳ ಕೆಡುಕಿನ ಅಂಶಗಳನ್ನು “ವಿಶ್ವಮಾತಾ ಗೋಮಾತಾ’ ಎಂಬ ನೃತ್ಯರೂಪಕದ ಮೂಲಕ ಸಾರುತ್ತಿದ್ದಾರೆ. ಒಂದೂವರೆ ವರ್ಷ ಹಿಂದೆ ಆರಂಭಗೊಂಡ ರೂಪಕ ಕರ್ನಾಟಕವೂ ಸೇರಿದಂತೆ 9 ರಾಜ್ಯಗಳಲ್ಲಿ ಪ್ರಯೋಗವಾಗಿದೆ. ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನ. 10ರಂದು 46ನೆಯ ಪ್ರಯೋಗ ನಡೆಯಿತು. ಪ್ರಸನ್ನಲಕ್ಷ್ಮೀ ರೂಪಕದ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ. 

ಆರಂಭದಲ್ಲಿ ಗೀರ್‌, ಕಪಿಲೆಯಂತಹ ದೇಸೀ ಹಸುಗಳ ಎತ್ತರದ ಭುಜ, ಕುತ್ತಿಗೆ ಕೆಳಭಾಗದ ಗಂಗೆ ತೊಗಲು ಲಕ್ಷಣಗಳನ್ನು ವಿವರಿಸಿ ಮಿಶ್ರ ತಳಿಯ ವಿದೇಶಿ ಹಸುಗಳ ಉತ್ಪನ್ನಗಳಿಂದ ಎಂತಹ ಹಾನಿಗಳಿವೆ ಎಂದು ಪಾಶ್ಚಾತ್ಯ ವಿಜ್ಞಾನಿಗಳು ಹೇಳಿರುವುದನ್ನು ಉಲ್ಲೇಖೀಸುತ್ತಾರೆ. ಇಂತಹ ಆಹಾರಕ್ರಮ ಮಧುಮೇಹ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಕಾರಣ ಎನ್ನುವ ನಿರೂಪಕರು ನಾವು ನಿತ್ಯ ಖರೀದಿಸುವ ಪ್ಯಾಕೇಟ್‌ ಹಾಲೇ ಉತ್ತಮವೆಂದು ಪರಿಗಣಿಸಿದ ಅಜ್ಞಾನವನ್ನೂ ಬೆಟ್ಟು ಮಾಡುತ್ತಾರೆ. ಕೃಷಿ ಕ್ಷೇತ್ರವೂ ಸೇರಿದಂತೆ ಜನಜೀವನದಲ್ಲಿ ಹಾಸುಹೊಕ್ಕಾದ ಬೃಹತ್‌ ಇತಿಹಾಸ ಹೊಂದಿರುವ ಕಾರಣ ದನಗಳಿಗೆ ವಿಶ್ವಮಾತೆ, ಗೋಮಾತೆ ಎಂಬ ಹೆಸರು ಬಂತೆನ್ನುವುದನ್ನು ಸಕಾರಣವಾಗಿ ತಿಳಿಸುತ್ತಾರೆ. 

ಕೃಷ್ಣನ ಕಾಲದಲ್ಲಿ 97 ತಳಿಗಳಿದ್ದರೆ ಈಗ 37 ತಳಿಗಳಿವೆ. ಇವುಗಳಲ್ಲಿ ಕೆಲವು ಅಳಿವಿನಂಚಿನಲ್ಲಿವೆ ಎಂಬ ಕಳವಳಕಾರಿ ಅಂಶವನ್ನು ಬಿಚ್ಚಿಡುತ್ತಾರೆ. ಭೂಮಿಗೆ ಪೃಥ್ವಿ ಎಂಬ ಹೆಸರು ಬಂದದ್ದು ಪೃಥು ಚಕ್ರವರ್ತಿಯಿಂದ. ಆತ ಲೋಕದಲ್ಲಿ ದುರ್ಭಿಕ್ಷೆ ಬಂದುದನ್ನು ಕಂಡು ಭೂತಾಯಿಯನ್ನು ಅಟ್ಟಿಸಿಕೊಂಡು ಹೋದ. ಆಕೆ ಗೋರೂಪವನ್ನು ತಾಳಿದಳು. ಮನುಷ್ಯರು ಸ್ವಾರ್ಥದಿಂದ ಮಾಡಿದ ಅನಾಹುತಗಳಿಂದ ದುರ್ಭಿಕ್ಷೆ ಬಂದದ್ದೇ ವಿನಾ ತನ್ನ ತಪ್ಪಲ್ಲ ಎಂದಳು ಗೋಮಾತೆ. ವಸಿಷ್ಟ ಋಷಿಯ ಆಶ್ರಮಕ್ಕೆ ಬಂದ ಕೌಶಿಕ ರಾಜ ತತ್‌ಕ್ಷಣದಲ್ಲಿ ಸೈನಿಕರಿಗೆ ಅಡುಗೆ ಮಾಡಿದ್ದನ್ನು ಕಂಡು ಅಚ್ಚರಿಪಟ್ಟು ಅದರ ಹಿಂದಿರುವ ಶಕ್ತಿಯಾದ ಗೋಮಾತೆಯನ್ನು ಕೇಳಿದ. ಒಪ್ಪದಿದ್ದಾಗ ಗೋಮಾತೆ ಕ್ರುದ್ಧಳಾಗಿ ಸೈನಿಕರನ್ನು ಮಣಿಸಿದ್ದೇ ಮೊದಲಾದ ಕಥಾನಕಗಳನ್ನು ರೂಪಕ ಆಕರ್ಷಕವಾಗಿ ತೋರಿಸುತ್ತದೆ. 

ಶ್ರೀಕೃಷ್ಣ ಗೋವರ್ಧನಗಿರಿಗೆ ಪೂಜೆ ಮಾಡಿದಾಗ ಸಿಟ್ಟುಕೊಂಡ ದೇವೇಂದ್ರ ಮಹಾಮಳೆಗೆರೆದ. ಆಗ ಕೃಷ್ಣ ತನ್ನ ಕಿರುಬೆರಳಿನಿಂದ ಗೋವರ್ಧನ ಬೆಟ್ಟವನ್ನು ಎತ್ತಿ ಗೋವುಗಳನ್ನೂ ಗೋಪಾಲಕರನ್ನೂ ರಕ್ಷಿಸಿದ ದೃಶ್ಯ ಕಥೆ ಕೇಳಿದವರಿಗೆ ಸುಲಭದಲ್ಲಿ ಅರ್ಥವಾಗುತ್ತದೆ. ಈ ಸಂದರ್ಭ ಶಿವ ಬಂದು ದೇವೇಂದ್ರನಿಗೆ ಬುದ್ಧಿ ಮಾತು ಹೇಳಿರುವುದು ಹರಿಹರರ ನಡುವಿನ ಒಮ್ಮತವನ್ನು ಸಾರುತ್ತದೆ. 

ಕೊನೆಯ ದೃಶ್ಯದಲ್ಲಿ ಶ್ರೀಮದ್ಭಾಗವತ ಪುರಾಣ ಜನಪ್ರಿಯವಾಗಲು ಕಾರಣನಾದ ಪರೀಕ್ಷಿತ ಮಹಾರಾಜನು ಗೋಮಾಂಸ ಭಕ್ಷಕರಿಗೆ ಬುದ್ಧಿ ಮಾತು ಹೇಳಿ ಅವರೇ ಗೋಕಥೆಯನ್ನು ಸಾರುವಂತೆ ಮಾಡುವುದು ಈಗಿನ ಆಡಳಿತಗಾರರಿಗೆ ಬುದ್ಧಿಮಾತು ಹೇಳಿದಂತಿದೆ. 

ಅರಿವಿಲ್ಲದ ದಡ್ಡತನ!
ರೂಪಕದಲ್ಲಿ ವಿರೋಧಿಗಳನ್ನು ಗೋಮಾತೆ ಹಣಿದಾಗ ಸಭಾಸದರು ಚಪ್ಪಾಳೆ ತಟ್ಟುತ್ತಿದ್ದರು. ವಿಪರ್ಯಾಸವೆಂದರೆ ಈ ವರ್ಗ ತಮ್ಮ ತಂದೆತಾಯಿ, ಅಜ್ಜ ಅಜ್ಜಿಯ ಕಾಲದಿಂದ ಬಂದ ಗೋ ಸಂಸ್ಕೃತಿಯನ್ನು ಬಿಟ್ಟು ಪೇಟೆಯಲ್ಲಿ “ಐಶಾರಾಮಿತನ’ದಲ್ಲಿ ಬದುಕುತ್ತಿರುವವರು. ಬಂದವರಲ್ಲಿ ಬಹುತೇಕರು ಇಂತಹ ವರ್ಗದವರೇ. ರೂಪಕವನ್ನು ನೋಡಲು ಬಾರದ, ಇದರ ವಿಷಯವೇ ಗೊತ್ತಿಲ್ಲದ ವರ್ಗ ಈಗಲೂ ದನಗಳನ್ನು ಹಳ್ಳಿಗಳಲ್ಲಿ ಅಷ್ಟೋ ಇಷ್ಟೋ ಸಾಕುತ್ತಿದೆ. ಈ ವರ್ಗ ಅಭಿವೃದ್ಧಿ ವೇಗದ ಪರಿಣಾಮ ಭವಿಷ್ಯದಲ್ಲಿ ಕೈಚಪ್ಪಾಳೆ ತಟ್ಟಿದ ವರ್ಗಕ್ಕೆ ಸೇರುವವರು. ನೂರರಲ್ಲಿ ಒಬ್ಬರಾದರೂ ತಮ್ಮದೇ ಕೈಚಪ್ಪಾಳೆಯಿಂದ ಎಚ್ಚರವಾಗಬಹುದು ಎಂಬುದು ಆಶಾವಾದ. ಪೌರಾಣಿಕ ಕಥಾನಕಗಳ ಜತೆಗೆ ವಾಸ್ತವ, ವೈಜ್ಞಾನಿಕ ಅಂಶಗಳನ್ನು ರೂಪಕದಲ್ಲಿ ಸೇರಿಸಿದರೆ ಅದು ಇನ್ನಷ್ಟೂ ಪರಿಣಾಮಕಾರಿಯಾದೀತು. ಸಮಾಜದಲ್ಲಿ ಇಂದು ಲಾಭವೇ ಮುಖ್ಯ ಗುರಿಯಾಗಿರುವಾಗ ಅದೇ ಭಾಷೆಯಲ್ಲಿ ತಿಳಿಸಬೇಕಾಗುತ್ತದೆ. 

ಮಟಪಾಡಿ ಕುಮಾರಸ್ವಾಮಿ 

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.