ಮನೋಜ್ಞ ಅಭಿನಯದ ದೇವಯಾನಿಯ ಸ್ವಗತ 


Team Udayavani, Mar 1, 2019, 12:30 AM IST

v-8.jpg

ನಾದ ನೃತ್ಯ ಸ್ಕೂಲ್‌ ಆಫ್ ಡ್ಯಾನ್ಸ್‌ ಆ್ಯಂಡ್‌ ಕಲ್ಚರ್‌ ಟ್ರಸ್ಟ್‌ (ರಿ.) ವತಿಯಿಂದ ಭ್ರಮರಿ ಶಿವಪ್ರಕಾಶ್‌ ಪ್ರಸ್ತುತಪಡಿಸಿದ ದೇವಯಾನಿಯ ಸ್ವಗತ ಏಕವ್ಯಕ್ತಿ ಪ್ರಯೋಗ ಬಹಳ ಕಾಲ ನೆನಪಲ್ಲಿ ಉಳಿಯುವ ಅಭಿವ್ಯಕ್ತಿ. ಯಾವುದೇ ಅಭಿವ್ಯಕ್ತಿಗೂ ಅಂತರಂಗದ ಅನುಭವವೇ ಮೂಲ. ನಟಿಸಬೇಡಿ ಅನುಭವಿಸಿ ಇದು ನಟನೆಯ ಮೂಲಮಂತ್ರ. ಅದಕ್ಕೆ ಸಾತ್ವಿಕಂ ಶಿವಂ ಎನ್ನುವುದು. ಭಾವನೆಗಳೇ ನಟನೊಬ್ಬನ ಅಭಿವ್ಯಕ್ತಿಯ ಅಸ್ತ್ರ. ಪರಿಣಾಮಗಳು ಮಾತ್ರ ಹೊರಗಡೆ ಕಾಣುವುದು. ಪ್ರಕ್ರಿಯೆಗಳೆಲ್ಲಾ ಅಂತರಂಗದಲ್ಲೇ ನಡೆಯುವುದು. ಈ ನಿಟ್ಟಿನಲ್ಲಿ ದೇವಯಾನಿಯ ಸ್ವಗತ ಪ್ರಯೋಗ ಸತ್ವಯುತವಾಗಿಯೇ ಮೂಡಿಬಂತು. ಭ್ರಮರಿ ಮೂಲತಃ ಭರತನಾಟ್ಯದ ಕಲಾವಿದೆಯಾಗಿದ್ದು, ತಂದೆ ಉದ್ಯಾವರ ಮಾಧವಾಚಾರ್ಯರ ಸಾಹಿತ್ಯ ಹಾಗೂ ತನ್ನ ಸುತ್ತಮುತ್ತಲಿನ ರಂಗಮಜಲಿನ ಗರಡಿಯಲ್ಲಿ ಬೆಳೆದವರು. ಇಲ್ಲಿಯ ತನಕ ರುಗ್ಮಿಣೇಶ ವಿಜಯ, ಪಾಂಚಾಲಿ, ಆನಂದ ಮುಕುಂದ, ಸೀತೆಯ ಸ್ವಗತ, ಶ್ರೀರಾಮ ನೃತ್ಯ ನಮನ, ಸೀಳು ಬಿದಿರಿನ ಸಿಳ್ಳು ಮುಂತಾದ ಮಹತ್ವದ ಏಕವ್ಯಕ್ತಿ ಪ್ರಯೋಗಗಳನ್ನು ನೀಡಿದವರು ಜೊತೆಗೆ ನೃತ್ಯ ಪದ್ಧತಿಯೊಳಗಿರುವ ಸೃಜನಾತ್ಮಕ ಸಾಧ್ಯತೆಗಳನ್ನು ಅನ್ವೇಷಿಸುವುದರಲ್ಲಿ ಕುತೂಹಲ ಇಟ್ಟುಕೊಂಡವರು. ಕವಿ ಕಂಡ ಕಲ್ಪನೆಯನ್ನು ತನ್ನ ರಂಗಾಭಿವ್ಯಕ್ತಿಯಿಂದ ಪ್ರೇಕ್ಷಕರಿಗೆ ಸಾತ್ವಿಕವಾಗಿ ತಲುಪಿಸಿದವರು. 

ಅವರ ದೇವಯಾನಿಯ ಸ್ವಗತ ಈ ನಿಟ್ಟಿನಲ್ಲಿ ಮಹತ್ವಪೂರ್ಣ ಪ್ರಯೋಗ. ಅಸುರ ಗುರು ಶುಕ್ರಾಚಾರ್ಯರ ಮಗಳಾದ ದೇವಯಾನಿ ದೇವಲೋಕದಿಂದ ಶಿಕ್ಷಣಾರ್ಥಿಯಾಗಿ ಬಂದ ಕಚನಿಂದ ಸ್ನೇಹವನ್ನು ಅರಸುವ ಪರಿಯನ್ನು ಅನುಭವಿಸಿದ ರೀತಿಯೇ ಅನನ್ಯ. ಅದು ಕೈತಪ್ಪಿದಾಗ ಪಟ್ಟ ಪಡಿಪಾಟಲು, ಯಯಾತಿಯ ಪಟ್ಟದರಸಿಯಾದಾಗ ಪಡುವ ಸಂಭ್ರಮ, ತನ್ನ ದಾಸಿ ಶರ್ಮಿಷ್ಠೆಯೇ ತನ್ನರಸನ ಪಲ್ಲಂಗದಲ್ಲಿ ಪಾಲು ಪಡೆಯುವುದನ್ನು ಕಣ್ಣಾರೆ ಕಾಣುವ ಸ್ಥಿತಿ, ಅಕಾಲ ವೃದ್ಧಾಪ್ಯವನ್ನು ಅನುಭವಿಸಬೇಕಾದ ತನ್ನರಸ ಯಯಾತಿಯ ವೇದನೆಯನ್ನು ಅನುಭವಿಸಿದ ರೀತಿ ಬೆರಗು ಹುಟ್ಟಿಸಿತು. ನೃತ್ಯ ಅಭಿವ್ಯಕ್ತಿಯ ಚೌಕಟ್ಟಲ್ಲ ಅದು ಸಾಧ್ಯತೆ. ಕಲಾವಿದ ಪಾತ್ರವಾಗಿ ರಂಗದ ಮೇಲಿದ್ದಷ್ಟು ಹೊತ್ತು ತನ್ನ ಮನೋಧರ್ಮದ ಮೂಲಕ ಯಾವುದೇ ಪ್ರಕಾರದ ವ್ಯಾಕರಣವನ್ನು ಮೀರಿದರೆ ಪ್ರೇಕ್ಷಕನಿಗೆ ಹೃದಯಸ್ಪರ್ಶಿಯಾಗಿ ಮುಟ್ಟುವುದಕ್ಕೆ ಸಾಧ್ಯ. 

ಅದಕ್ಕೆ ಸಹೃದಯತೆ ಎನ್ನುವುದು. ದೇವ ಯಾನಿಯ ಸ್ವಗತ ಹೃದಯಸ್ಪರ್ಶಿಯಾಗುವುದು ಈ ನೆಲೆಯಲ್ಲಿಯೇ. ದೇವಯಾನಿಯ ಮಾತನ್ನೂ ಹಿನ್ನೆಲೆಯಾಗಿಸಿಕೊಂಡು ಅದಕ್ಕೆ ತನ್ನ ನೃತ್ಯದ ಪರಿಭಾಷೆಯನ್ನು ಮೇಳೈಸಿ ಕೊಂಡು ಮೂಡಿಬಂದ ದೇವಯಾನಿಯ ಅಂತರಂಗ ಪ್ರೇಕ್ಷಕನ ಸ್ವಗತವಾದದ್ದು ಸುಳ್ಳಲ್ಲ. ಆದರೆ ಮಧ್ಯೆ ಮಧ್ಯೆ ಕೆಲವು ಮಾತಗಳನ್ನಾದರೂ ಕಲಾವಿದೆಯೇ ದೇವಯಾನಿಯ ಬಾಯಲ್ಲಿ ಆಡಿದ್ದರೆ ಇನ್ನಷ್ಟು ಮಾರ್ಮಿಕವಾಗುತಿತ್ತೇನೊ.ಯಯಾತಿಯ ವೃದ್ಧಾಪ್ಯದ ವೇದನೆಯನ್ನು ಅನುಭವಿಸುತ್ತಾ ಅದನ್ನು ಕೆಲವು ಕ್ಷಣವಾದರೂ ಚಲನೆಯಲ್ಲಿ ತೋರಿಸಿದ್ದರೆ ಆ ಅನುಭವ ಪ್ರೇಕ್ಷಕನಿಗೆ ಇನ್ನಷ್ಟು ತೀವ್ರವಾಗಿ ಮನ ಮುಟ್ಟುತ್ತಿತ್ತೇನೊ. 

ಮಾತುಗಳನ್ನು ವಾಚಿಸಿದ ಸ್ಮಿತಾ ಶೆಣೈ ಹಾಗೂ ಹಾಡಿದ ವಿ. ಶೀಲಾ ದಿವಾಕರ್‌ ಇಬ್ಬರೂ ಕಲಾವಿದೆಯ ಅಂತರಂಗವನ್ನು ಆವರಿಸುವ ಮೂಲಕ ಪ್ರೇಕ್ಷಕನಿಗೆ ದೇವಯಾನಿಯ ಸ್ವಗತದ ಸೂಕ್ಷ್ಮಗಳನ್ನು ತಲುಪಿಸುವಲ್ಲಿ ಯಶಸ್ವಿಯಾದರು. ಸಣ್ಣ ಆಕ್ಷೇಪವೇನೆಂದರೆ ಮೃದಂಗ ಹಾಗೂ ಕೊಳಲು ಕಲಾವಿದೆಯ ಮನೋಧರ್ಮಕ್ಕೆ ಪೂರಕವಿರಲಿಲ್ಲ. ಯಕ್ಷಗಾನದಂಥ ಪ್ರಕಾರದಲ್ಲೂ ಹಿಮ್ಮೇಳ ಕಲಾವಿದನ ಸರ್ವತೋಮುಖ ಅಭಿವ್ಯಕ್ತಿಗೆ ಪೂರಕವಾಗಿರುತ್ತದೆ. ಕ್ಷಣದ ಮನೋಧರ್ಮವನ್ನೂ ಕೂಡ ಅಭಿವ್ಯಕ್ತಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಇಲ್ಲಿ ಕಲಾವಿದೆಯ ಜೊತೆಗೆ ಯಾವುದೇ ಸಂಪರ್ಕವಿಲ್ಲದೆ ಕೇವಲ ಸಂಗೀತದಲ್ಲೇ ಪಕ್ಕ ವಾದ್ಯ ತೊಡಗಿಸಿಕೊಂಡರೆ ಅನುಭವಿಸಿ ಅಭಿನಯಿಸುವ ಕಲಾವಿದೆಯ ಪಾಡು? ಇದೆಲ್ಲದರ ನಡುವೆ ನೋಡುಗರನ್ನು ಭಾವನಾ ಲೋಕಕ್ಕೆ ಕೊಂಡೊಯ್ದ ದೇವಯಾನಿಯ ಸ್ವಗತ ಬಹಳ ಕಾಲ ನೆನಪಿನಲ್ಲಿ ಉಳಿಯುವಂಥ ಅಭಿವ್ಯಕ್ತಿ. ಉದ್ಯಾವರ ಮಾಧವ ಆಚಾರ್ಯರ ರಂಗಕೃತಿ ಗಟ್ಟಿಯಾದದ್ದೇ. 
 
ಕೃಷ್ಣಮೂರ್ತಿ ಕವತ್ತಾರ್‌

ಟಾಪ್ ನ್ಯೂಸ್

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರ್ ಹತ್ಯೆಗೈದ ಪೊಲೀಸರು

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರನ್ನು ಹತ್ಯೆಗೈದ ಪೊಲೀಸರು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

meghana gaonkar

ಶಿವಾಜಿ ಸುರತ್ಕಲ್‌-2: ಮೇಘನಾ ಗಾಂವ್ಕರ್‌ ಎಂಟ್ರಿ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 14,306 ಕೋವಿಡ್ ಪ್ರಕರಣ ಪತ್ತೆ, 443 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 14,306 ಕೋವಿಡ್ ಪ್ರಕರಣ ಪತ್ತೆ, 443 ಮಂದಿ ಸಾವು

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

Untitled-1

ಕಾಪು: ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ‌ ಮೆಂಡನ್ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

HDK

ಸಿದ್ದು ಕಣ್ಣೀರಿಟ್ಟಾಗ ಧೈರ್ಯ ತುಂಬಿದ್ದೇ ಗೌಡರು

14brims

ವೈದ್ಯ ಪಿಜಿ ಕೋರ್ಸ್‌ ಆರಂಭಿಸಲು ಬ್ರಿಮ್ಸ್ ಸಿದ್ದತೆ

ಮೈಸೂರು

18 ದಿನ ಕಂಗೊಳಿಸಿದ ದಸರಾ ದೀಪಾಲಂಕಾರ ಅಂತ್ಯ

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

13water

ನೀರು ಕೊಡಿ ಹೋರಾಟಕ್ಕೆ ಬಾಬುಗೌಡ ಬಾದರ್ಲಿ ಧ್ವನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.