ಬಾಲ ಕಲಾವಿದರ ದೇವಿ ಮಹಾತ್ಮೆ

Team Udayavani, Dec 27, 2019, 12:53 AM IST

52

ಬಡಾನಿಡಿಯೂರು ಸನ್ಯಾಸಿ ಮಠದ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರದ ಬಾಲಕಲಾವಿದರು ಶ್ರೀದೇವಿ ಮಹಾತ್ಮೆ ಅಖ್ಯಾನದ “ಮೇದಿನಿ ನಿರ್ಮಾಣ’ ಮತ್ತು “ಮಹಿಷಾಸುರ ವಧೆ ‘ ಭಾಗವನ್ನು ಪ್ರದರ್ಶಿಸಿ ಜನಮೆಚ್ಚುಗೆಯನ್ನು ಗಳಿಸಿದರು.

ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಮನಗಂಡ ಸೇವಾರ್ಥಿಗಳು ಶ್ರೀ ದೇವಿ ಮಹಾತ್ಮೆಯನ್ನು ತರಬೇತಿ ಮಾಡಿ ಪ್ರದರ್ಶನ ನೀಡಬೇಕೆಂದು ವಿನಂತಿಸಿಕೊಂಡರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಕೇಂದ್ರದ ಗುರು ಬಡಾನಿಡಿಯೂರು ಕೇಶವರಾವ್‌ ಎಲ್‌ಕೆಜಿಯಿಂದ ಎಸೆಸ್ಸೆಲ್ಸಿವರೆಗಿನ ವಿದಾರ್ಥಿಗಳಿಂದ ಅಮೋಘ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾದರು.

ಎಲ್‌ಕೆಜಿಯ ಎಂಟು ವಿದ್ಯಾರ್ಥಿಗಳಿಂದ ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ ಸಾಂಪ್ರಾದಾಯಿಕವಾಗಿ ರಂಗ ಪ್ರವೇಶ ಮಾಡಿದಾಗ ಗೊಂಬೆಗಳ ಪ್ರವೇಶವಾದಂತೆ ಭಾಸವಾಯಿತು. 5ನೇ ಕ್ಲಾಸಿನ ವೈಷ್ಣವ, 7ನೇ ಕ್ಲಾಸಿನ ಸ್ವಸ್ತಿಕ್‌, 6ನೇ ಕ್ಲಾಸಿನ ದಿಗಂತ್‌, ಬ್ರಹ್ಮ, ವಿಷ್ಣು ಮಹೇಶ್ವರರಾಗಿ ಮೈಮರೆತು ಅಭಿನಯಿಸಿ ಕರತಾಡನಕ್ಕೆ ಪಾತ್ರರಾದರು.ಮಧು ಕೈಟಭರಾಗಿ ನಿರ್ಮಲ್‌ ಹಾಗೂ ಯೋಧನ್‌ ಗಾಂಭಿರ್ಯವನ್ನು ಮೆರೆದು ಹಿರಿಯ ಕಲಾವಿದರಿಗೆ ಕಮ್ಮಿ ಇಲ್ಲದಂತೆ ಅಭಿನಯಿಸಿದರು. ಆದಿಮಾಯೆಯಾಗಿ ಲಾಸ್ಯಾ, ಮಾಲಿನಿಯ ಪ್ರವೇಶ ರಂಗದಲ್ಲಿ ಮಿಂಚಿನ ಸಂಚಾರವನ್ನೇ ತಂದಿತು. 6ನೇ ಕ್ಲಾಸಿನ ಅರ್ಪಿತಾ ಸಂತೋಷ, ದುಃಖ, ಕ್ರೋಧವನ್ನು ಮಾತಿನ ಮೂಲಕ ಸಮರ್ಥರಾಗಿ ಅಭಿನಯಿಸಿ ತಾನೋರ್ವ ಅಭಿಜಾತ ಕಲಾವಿದೆ ಎಂಬುದನ್ನು ತೋರಿಸಿಕೊಟ್ಟರು.

ಮಾಲಿನಿಯ ಧೂತನಾಗಿ ಸಮನ್ವಿ ಅಭಿನಯ ಅದ್ಭುತವಾಗಿತ್ತು. ಏಳನೇ ತರಗತಿಯ ಮಾ| ಸಾನ್ವಿಶ್‌ ಮಹಿಷಾಸುರನ ಪಾತ್ರಕ್ಕೆ ಒಂದು ವಿಶೇಷ ಆಯಾಮ ನೀಡಿದ್ದಾರೆ. ರಂಗಸ್ಥಳದಿಂದ ಹೊರಗಿನಿಂದ ಮಾಡಿದ ಪ್ರವೇಶದ ವೈಖರಿ ರೋಮಾಂಚನವಾಗಿತ್ತು. ದೇವೆಂದ್ರ ಹಾಗೂ ದೇವತೆಗಳು, ಬಿಡಲಾಸುರ, ಭಿಕ್ಷುರಾಸುರ, ಶಂಖಾಸುರ, ದುರ್ಗಾಸುರ, ಪಾತ್ರಗಳನ್ನು ಎಳೆಯ ಬಾಲಕರೇ ನಿರ್ವಹಿಸಿದರು. ದೇವಿಯ ಪಾತ್ರದ ಮಾಡಿದ 6ನೇ ಕ್ಲಾಸಿನ ವಿದ್ಯಾರ್ಥಿನಿ ಕು| ಸಮೀಕ್ಷಾ ಶ್ರುತಿ ಬದ್ಧವಾದ ಗಾಂಭೀರ್ಯದ ಮಾತುಗಳು, ಹಿತಮಿತವಾದ ಕುಣಿತಗಳಿಂದ ವಿಜೃಂಬಿಸಿದರು. 3ನೇ ಕ್ಲಾಸಿನ ಪ್ರಣದ್‌ನ ಸುಪಾರ್ಶ್ವಕ ಮುನಿಯ ಪಾತ್ರ, ಸಿಂಹದ ಪಾತ್ರ ಕೂಡಾ ನೆನಪಿನಲ್ಲಿರಿಸಿಕೊಳ್ಳುವಂತಿತ್ತು. ಕೇಂದ್ರದ ಗುರುಗಳಾದ ಬಡಾನಿಡಿಯೂರು ಕೇಶವರಾವ್‌, ಜೊತೆಗೆ ತೋನ್ಸೆ ಜಯಂತ್‌ ಕುಮಾರ್‌ ಹಾಗೂ ಯಡ್ತಾಡಿ ಕರುಣಾಕರ್‌ ಶೆಟ್ಟಿ ಅಮೋಘ ಕಂಠ ಸಿರಿಯ ಮೂಲಕ ಪ್ರಸಂಗದ ಯಶಸ್ವಿಗೆ ಕಾರಣರಾದರು. ಮದ್ದಳೆಯಲ್ಲಿ ಜಗದೀಶ್‌ ಆಚಾರ್ಯ ಕುತ್ಪಾಡಿ ಹಾಗೂ ಚೆಂಡೆಯಲ್ಲಿ ಸುರೇಶ್‌ ಕುಮಾರ್‌ ಹೇರೂರು ಸಹಕರಿಸಿದರು.

-ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.