ಭಕ್ತಿ ಪರವಶವಾಗಿಸಿದ ಭಕ್ತಿ ಭಾವ ಗಾಯನ

Team Udayavani, May 24, 2019, 5:50 AM IST

ಹಂಗಾರಕಟ್ಟೆಯ ಶ್ರೀ ಮಠ ಬಾಳೆಕುದ್ರು ಇದರ ಸಾಂಸ್ಕೃತಿಕ ಸಂಜೆಯ ಕಾರ್ಯಕ್ರಮದ ಅಂಗವಾಗಿ ಸಾಧನ ಕಲಾ ಸಂಗಮ(ರಿ.) ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು “ಭಕ್ತಿ ಭಾವ ಗಾಯನ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೊದಲಿಗೆ “ನೀ ಸುಖಕಾರಕ ವಿಘ್ನ ನಿವಾರಕ …’ ಎನ್ನುವ ಗಣೇಶ ಸ್ತುತಿ ಹಾಡಿನ ಮೂಲಕ ಮಾ| ಶುಭಾಂಗ್‌ ಐತಾಳ್‌ ಕಾರ್ಯಕ್ರಮಕ್ಕೆ ಸೊಗಸಾದ ಮುನ್ನುಡಿ ಬರೆದರು. ನಂತರ ಗುರುವಂದನೆಯಾಗಿ “ಗುರುವಿನ ಗುಲಾಮನಾಗುವ ತನಕ …’ ವನ್ನು ಕು| ವರ್ಷಾ ಹಾಡಿದರೆ, ಸಮೂಹ ಗಾಯನದಲ್ಲಿ “ಆಂಜನೇಯ ಸ್ತೋತ್ರ’ವನ್ನು ಹಾಡಿರುವುದು ಶ್ರೋತೃಗಳನ್ನು ಭಕ್ತಿ ಪರವಶರಾಗುವಂತೆ ಮಾಡಿತು. ಅನಂತರ ಮಾ| ಭಾರ್ಗವ “ಇದು ಭಾಗ್ಯವಿದು ಭಾಗ್ಯ…’ ಮತ್ತು ವಿಜಯ ವಿಠಲ ದಾಸರ “ಸದಾ ಎನ್ನ ಹೃದಯದಲ್ಲಿ…’ ಹಾಡನ್ನು ಕು| ಶರಣ್ಯಾ ಇವರುಗಳು ಹಾಡಿ ಗಮನ ಸೆಳೆದರು. ಅಪೂರ್ವಾ ಅವರ ಸೊಗಸಾದ ಕಂಠಸಿರಿಯಲ್ಲಿ “ಸೌರಾಷ್ಟ್ರ ದೇಶದಲಿ…’ ಈಶ್ವರ ಭಕ್ತಿಯ ಹಾಡು ಮೂಡಿ ಬಂದರೆ, ಸಮೂಹ ಗಾಯನದಲ್ಲಿ ಆದಿ ಶಂಕರಾಚಾರ್ಯರ “ಶಿವ ಮಾನಸ ಸ್ತೋತ್ರ’ ತಲ್ಲೀನರಾಗುವಂತೆ ಮಾಡಿತು. ಮುಂದೆ ಪುರಂದರ ದಾಸರ “ತಾರಕ್ಕ ಬಿಂದಿಗೆ…’ಯನ್ನು ಮಾ| ಶುಭಾಂಗ್‌ ಐತಾಳ್‌, ನರೇಂದ್ರ ಶರ್ಮರ “ಭಾಜೆ ಮುರಳೀಯ…’ವನ್ನು ಕು| ವರ್ಷಾ, ಪುರಂದರ ದಾಸರ “ಪವಮಾನ…’ವನ್ನು ಮತ್ತು “ಬಂದಾನೋ ಗೋವಿಂದ…..” ಹಾಗೂ “”ನೋಡಿದ್ಯಾ ಸೀತಮ್ಮ…’ವನ್ನು ಮಾ| ಭಾರ್ಗವ್‌ ಹಾಗೂ ಅಪೂರ್ವಾ ಮತ್ತು ಕು| ಶರಣ್ಯಾ ಇವರುಗಳು ಹಾಡಿರುವುದು ಖುಷಿ ನೀಡಿತು. ನಂತರ ಮೀರಾ ಭಜನ್‌ನ “ಪಾಯೋಜೆ ಮೈನೆ…’ ಇದನ್ನು ಸಮೂಹವಾಗಿ ಹಾಡಿರುವುದು ಚೇತೋಹಾರಿಯಾಗಿತ್ತು. ಮುಂದೆ “ಕವನ ಸುಖ ಪಾಯೋ…’ವನ್ನು ಹಿರಿಯರಾದ ಡಾ| ಎಚ್‌. ಆರ್‌. ಹೆಬ್ಟಾರ್‌ ಮತ್ತು ಮೀರಾ ಭಜನ್‌ನ “ಮೇ ಗಿರಿದಾರಿ …’ಯನ್ನು ಕು| ವರ್ಷಾ ಹಾಡಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಕೊನೆಯಲ್ಲಿ ಸಮೂಹವಾಗಿ “ಮಂತ್ರ ಪುಷ್ಪ’ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಮಂಗಳವನ್ನಿತ್ತರು. ತಬಲಾದಲ್ಲಿ ರಾಘವೇಂದ್ರ ಹೆಗಡೆ ಭಟ್ಕಳ್‌ ಮತ್ತು ಪೂರ್ಣಾನಂದ ಬಸ್ರೂರ್‌, ಕೀ ಬೋರ್ಡ್‌ನಲ್ಲಿ ಭಾಸ್ಕರ್‌ ಆಚಾರ್‌ ಬಸ್ರೂರು, ಕೊಳಲಿನಲ್ಲಿ ಕಿರಣ್‌ ಹೊಳ್ಳ ವಡ್ಡರ್ಸೆ ಸಹಕರಿಸಿದ್ದರು.

– ಕೆ. ದಿನಮಣಿ ಶಾಸ್ತ್ರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ