ದೇಶಭಕ್ತಿಯ ಸಂದೇಶ ಸಾರುವ ಯೋಧ ಧರ್ಮೋ ವರಂ ಕರ್ಮ

ಧಿಗಿಣ ದಿವಿಜ ಪ್ರಸ್ತುತಿ

Team Udayavani, Nov 15, 2019, 5:00 AM IST

ಕಥಾನಾಯಕಿ ಅಂಬಿಕೆ ಪಾತ್ರವನ್ನು ಸ್ವತಃ ರಕ್ಷಿತ್‌ ಶೆಟ್ಟಿ ನಿರ್ವಹಿಸಿ ಉತ್ತಮ ನಾಟ್ಯ , ಲಾಸ್ಯ , ಭಾವಾಭಿನಯದ ಮೂಲಕ ಪಾತ್ರದ ಘನತೆ ಹೆಚ್ಚಿಸಿದರು . ಶೃಂಗಾರ ,ಕರುಣ ರಸಗಳು ಉತ್ತಮವಾಗಿ ಪ್ರಸ್ತುತಗೊಂಡವು . ಕಥಾನಾಯಕನಾಗಿ ಕು| ಶಿವಾನಿ ಸುರತ್ಕಲ್‌ ಅವರ ನಿರ್ವಹಣೆ ಗಮನ ಸೆಳೆಯಿತು.

ಮೂಡಬಿದಿರೆಯ ಯಕ್ಷಗಾನ ಕಲಿಕಾ ಕೇಂದ್ರ ಧಿಗಿಣ ದಿವಿಜ ಇದರ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಸ್ತುತಗೊಂಡ ಪ್ರಸಾದ್‌ ಮೊಗೆಬೆಟ್ಟುರವರಿಂದ ರಚಿಸಲ್ಪಟ್ಟ “ಯೋಧ ಧರ್ಮೋ ವರಂ ಕರ್ಮ’ ಯಕ್ಷಗಾನ ನೃತ್ಯ ರೂಪಕದ ಪ್ರಥಮ ಪ್ರಯೋಗ ಯಶಸ್ವಿಯಾಯಿತು . ರಕ್ಷಿತ್‌ ಶೆಟ್ಟ ಪಡ್ರೆ ಪ್ರಧಾನ ಭೂಮಿಕೆಯಲ್ಲಿ ,ಸುಮಾರು 30ರಷ್ಟು ಶಿಷ್ಯರ ಸಾಂಗತ್ಯದ ಈ ಪ್ರಸ್ತುತಿ ಜನಮನ ಗೆಲ್ಲುವಲ್ಲಿ ಸಫ‌ಲವಾಯಿತು .

ಗಡಿಯಲ್ಲಿ ಕರ್ತವ್ಯ ನಿರತನಾಗಿರುವ ಅಮರನಾಥ ಎಂಬ ಯೋಧನು ರಜಾಕಾಲದಲ್ಲಿ ಕುದುರೆಯೇರಿ ಊರಿಗೆ ಬರುವಾಗ ಅಂಬಿಕೆ ಎಂಬ ಹುಡುಗಿಯಲ್ಲಿ ಅನುರಕ್ತನಾಗಿ ವಿವಾಹವಾಗುತ್ತಾನೆ . ತನ್ನ ಮಡದಿಯು ತುಂಬು ಗರ್ಭಿಣಿಯಾಗಿದ್ದು ಹೆರಿಗೆ ಸಮೀಪಿಸುವ ಸಂದರ್ಭದಲ್ಲಿಯೇ ಭಾರತಕ್ಕೆ ವೈರಿಗಳ ಆಕ್ರಮಣವಾಗಿ ಅಮರನಾಥನಿಗೆ ಸೈನ್ಯದಿಂದ ಕರೆ ಬರುತ್ತದೆ . ಅಮರನಾಥನಿಗೆ ಮಗುವನ್ನು ನೋಡಿಯೇ ಹೋಗಬೇಕೆಂಬ ಆಸೆಯಿದ್ದರೂ , ಅಂಬಿಕೆಯೇ ಸ್ವತಃ ಪತಿಗೆ ಖಡ್ಗವನ್ನು ನೀಡಿ , ಯೋಧರಿಗೆ ದೇಶ ಸೇವೆಯೇ ಪ್ರಥಮ ಕರ್ತವ್ಯ ಎಂದು ತಿಳಿ ಹೇಳಿ ಯುದ್ಧಕ್ಕೆ ಕಳಿಸುತ್ತಾಳೆ . ಇತರ ಸೈನಿಕರೊಂದಿಗೆ ಅಮರನಾಥನು ವೈರಿಗಳನ್ನು ಚೆಂಡಾಡುತ್ತಾನೆ . ಸೋತ ವೈರಿಗಳು ಹಿಂದಿನಿಂದ ಬಂದು ಅಮರನಾಥನನ್ನು ಇರಿದು ಕೊಲ್ಲುತ್ತಾರೆ .

ಅಂಬಿಕೆಯು ಗಂಡು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲೇ ಅಮರನಾಥನ ವೀರಮಣದ ವಾರ್ತೆ ಬರಸಿಡಿಲಿನಂತೆ ಎರಗುತ್ತದೆ .ಅಂಬಿಕೆಯು ಪತಿವಿಯೋಗದಿಂದ ತೀವ್ರ ದುಃಖ ಪಟ್ಟು ಸಹಗಮನಕ್ಕೆ ಸಿದ್ಧಳಾದರೂ ದೇಶಪ್ರಜ್ಞೆ ಜಾಗ್ರತೆಗೊಳ್ಳುತ್ತದೆ . ತನ್ನ ನವಜಾತ ಶಿಶುವನ್ನು ಸಖೀಯರ ಬಳಿ ನೀಡಿ , ಆತನನ್ನು ಬೆಳೆಸಿ , ಮುಂದೆ ಭಾರತದ ಸೈನ್ಯಕ್ಕೆ ಸೇರಿಸಬೇಕು ಎಂದು ಹೇಳಿ ಚಿತೆಯನ್ನು ಪ್ರವೇಶಿಸಿ ದೇಹತ್ಯಾಗ ಮಾಡುತ್ತಾಳೆ . ಇವಿಷ್ಟು ಕಥಾನಕ ಹೊಂದಿರುವ ಯೋಧ ಧರ್ಮೋ ವರಂ ಕರ್ಮ ದೇಶಭಕ್ತಿಯ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು .

ಕಥಾನಾಯಕಿ ಅಂಬಿಕೆ ಪಾತ್ರವನ್ನು ಸ್ವತಃ ರಕ್ಷಿತ್‌ ಶೆಟ್ಟಿ ನಿರ್ವಹಿಸಿ ಉತ್ತಮ ನಾಟ್ಯ , ಲಾಸ್ಯ , ಭಾವಾಭಿನಯದ ಮೂಲಕ ಪಾತ್ರದ ಘನತೆ ಹೆಚ್ಚಿಸಿದರು . ಶೃಂಗಾರ ,ಕರುಣ ರಸಗಳು ಉತ್ತಮವಾಗಿ ಪ್ರಸ್ತುತಗೊಂಡವು . ಕಥಾನಾಯಕನಾಗಿ ಕು| ಶಿವಾನಿ ಸುರತ್ಕಲ್‌ ಅವರ ನಿರ್ವಹಣೆ ಗಮನ ಸೆಳೆಯಿತು .

ಸಖೀಯರಾಗಿ ಅಶ್ವಥ್‌ ಆಚಾರ್ಯ ಕೈಕಂಬ ಹಾಗೂ ಶ್ರವಣ ಆಚಾರ್ಯ ಸುರತ್ಕಲ್‌ರವರ ನಿರ್ವಹಣೆ ಉತ್ತಮವಾಗಿತ್ತು .ಮಂದಾರ ಮೂಡಬಿದಿರೆ ಸೇರಿದಂತೆ ಉಳಿದ ಕಲಾವಿದರ ಸಾಂ ಕ ಶ್ರಮವೂ ಪ್ರದರ್ಶನದ ಯಶಸ್ಸಿಗೆ ಪೂರಕವಾಯಿತು . ಹಿಮ್ಮೇಳದಲ್ಲಿ ತೆಂಕು – ಬಡಗು ತಿಟ್ಟುಗಳ ಕಲಾವಿದರ ಸಮನ್ವಯತೆಯನ್ನು ಚೆನ್ನಾಗಿ ಬಳಸಿದ್ದು ಕಂಡು ಬಂತು .ತೆಂಕಿನ ಭಾಗವತರಾಗಿ ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ಗಿರೀಶ್‌ ರೈ ಕಕ್ಕೆಪದವುರವರು ಸುಶ್ರಾವ್ಯವಾದ ಕಂಠದಿಂದ ಎದ್ದು ಕಂಡರು . ಮದ್ದಲೆಯಲ್ಲಿ ಶ್ರೀಧರ್‌ ವಿಟ್ಲ ಸಹಕರಿಸಿದರು. ಪದ್ಮನಾಭ ಉಪಾಧ್ಯಾಯರು ಅದ್ಭುತ ಕೈ ಚಳಕದಿಂದ ಕೊನೆಯವರೆಗೂ ಏಳು ಚೆಂಡುಗಳನ್ನು ನುಡಿಸಿ ಮೋಡಿ ಮಾಡಿದರು . ಬಡಗಿನ ಭಾಗವತಿಕೆಯಲ್ಲಿ ಯಕ್ಷಗಾನ ಪ್ರಸಾದ್‌ ಮೊಗೆಬೆಟ್ಟುರವರ ನಿರ್ವಹಣೆ ಮೆಚ್ಚುಗೆ ಮೂಡಿಸಿತು . ಮದ್ದಲೆಯಲ್ಲಿ ಶಶಿಕುಮಾರ್‌ ಆಚಾರ್ಯರು ವಿವಿಧ ಶ್ರುತಿಗಳ ಏಳು ಮದ್ದಲೆಗಳ ವಾದನದಿಂದ ಚಪ್ಪಾಳೆ ಗಿಟ್ಟಿಸಿದರು .ಚಕ್ರತಾಳದಲ್ಲಿ ರಾಜೇಂದ್ರಕೃಷ್ಣರು ಸಹಕರಿಸಿದರು .

ಪ್ರಾರಂಭದಲ್ಲೇ ಭಾರತ ಮಾತೆಯೊಂದಿಗೆ ವೀರ ಸೈನಿಕರು ಜಯಹೇ ಜಯಹೇ ಭಾರತ ಭಾಗ್ಯವತಿ ಯೋಧರ ಪುಣ್ಯಕ್ಷಿತಿ ಹಾಡನ್ನು ಕಕ್ಕೆಪದವುರವರು ಹಾಡಿದಾಗ ದೇಶಭಕ್ತಿಯ ಅನುಭವ ಮೂಡಿತು . ವಿರೋಧಿ ಸೈನಿಕರನ್ನು ಯಕ್ಷಗಾನದ ಪರಂಪರೆಯ ಐದು ಬಣ್ಣದ ವೇಷಗಳ ಮೂಲಕ ರಂಗಕ್ಕೆ ಬಳಸಿದ್ದುದು ಮೆಚ್ಚುಗೆ ಮೂಡಿಸಿತು . ಅಂಬಿಕೆಯ ನವಜಾತ ಶಿಶುವಾಗಿ ನೈಜ ಶಿಶುವನ್ನೇ ತಂದು ಎತ್ತಿ ಮು¨ªಾಡಿಸಿದ ನಾಟ್ಯವೂ ಮನ ಗೆದ್ದಿತು .

ಶೀರ್ಷಿಕೆ ಪದ್ಯವಾದ ಜಯಹೇ ಜಯಹೇ ಭಾರತ ಭಾಗ್ಯವತಿ , ವಂದೇ ಮಾತರಂ ಪದ್ಯಗಳು ಹೃದ್ಯವಾಗಿತ್ತು . ಅಡಿಯೆ ಮುಂದಿಡೆ ಸ್ವರ್ಗ , ಯೋಧನ ರಮಣಿ ಹಡೆದರೆ ಸ್ವರ್ಗ ಯೋಧನು ರಣದಿ ಮಡಿದರೆ ಸ್ವರ್ಗ , ಗೆಜ್ಜೆ ನಾದ ಹೆಜ್ಜೆ ಮೋದ ಮುಂತಾದ ಪದ್ಯಗಳು ಸನ್ನಿವೇಶಕ್ಕನುಗುಣವಾಗಿ ಹೆಣೆಯಲಾಗಿದೆ .

ಎಂ .ಶಾಂತರಾಮ ಕುಡ್ವ


ಈ ವಿಭಾಗದಿಂದ ಇನ್ನಷ್ಟು

  • ಸಾಲಿಗ್ರಾಮ ಮೇಳ ಈ ಸಾಲಿನ ತಿರುಗಾಟದ ದೇವದಾಸ ಈಶ್ವರಮಂಗಲ ವಿರಚಿತ "ಚಂದ್ರಮುಖೀ ಸೂರ್ಯಸಖೀ' ಆಖ್ಯಾನ ಜಯಭೇರಿ ಕಾಣುವ ಎಲ್ಲಾ ಲಕ್ಷಣವನ್ನು ಹೊಂದಿದೆ. ಚಲನಚಿತ್ರಗಳ...

  • ಈ ಈರ್ವರು ಕಲಾವಿದೆಯರ ನೃತ್ಯ ಸಾಂಗತ್ಯವು ವೇಣುನಾದ ಎಂಬ ನವೀನ ಹಿನ್ನೆಲೆ ಸಂಗೀತ, ಬರೀ ಕೊಳಲಿನ ನಾದ ಮಾತ್ರ, ಗಾಯನ ಇಲ್ಲದೆ ನೃತ್ಯಕ್ಕೆ ಹೆಚ್ಚು ಒತ್ತುಕೊಟ್ಟು...

  • ಮೂಕಾಂಬಿಕ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗದ 80ನೇ ಸರಣಿ ಕಾರ್ಯಕ್ರಮದಲ್ಲಿ ಅಂತರಾಷ್ಟೀಯ ಖ್ಯಾತಿಯ ನೃತ್ಯ ಗುರು ರಮಾ ವೈದ್ಯನಾಥನ್‌ ಮತ್ತು ಸನಾತನ ನಾಟ್ಯಾಲಯದ...

  • ಚುಮು ಚುಮು ಚಳಿ. ಸುತ್ತಲೂ ಹಿಮದ ರಾಶಿ. ಬೆಳೆದು ನಿಂತಿರುವ ಬೆಟ್ಟಗಳ ಸಾಲು. ಅದೇ ಹಿಮಾಚಲ ಪ್ರದೇಶದ ಸುಂದರ ತಾಣ ಮನಾಲಿಯಾಗಿತ್ತು. ಎಂದೂ ಕಂಡಿರದ ಆ ದೃಶ್ಯವನ್ನು...

  • ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ...

ಹೊಸ ಸೇರ್ಪಡೆ