Udayavni Special

ಮರುಭೂಮಿಯಲ್ಲಿ ಗಜೇಂದ್ರ ಮೋಕ್ಷ


Team Udayavani, Feb 28, 2020, 3:45 AM IST

ego-63

ಹವ್ಯಾಸಿ ಸಂಘವೊಂದು ದುಬಾಯಿಯಲ್ಲಿ ವೃತ್ತಿ ಪರ ಕಲಾವಿದರಿಗೆ ಸರಿಸಾಟಿಯಾಗಿ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿತು.

ಯಕ್ಷಗುರು ರಾಕೇಶ್‌ ರೈ ಅಡ್ಕರವರ ನೇತೃತ್ವದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಯಕ್ಷಾಂಬುಧಿ ಉಡುಪಿ ಹವ್ಯಾಸಿ ತೆಂಕುತಿಟ್ಟು ಯಕ್ಷಗಾನ ಬಳಗದಿಂದ ದುಬಾಯಿಯಲ್ಲಿ ಗಜೇಂದ್ರ ಮೋಕ್ಷ ಎಂಬ ತೆಂಕುತಿಟ್ಟು ಯಕ್ಷಗಾನ ಕಥಾನಕವನ್ನು ಜ.24ರಂದು ಆಡಿ ತೋರಿಸಲಾಯಿತು.

ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆ, ಪ್ರಶಾಂತ್‌ ಶೆಟ್ಟಿ ವಗೆನಾಡು ಇವರ ಮದ್ದಳೆಯೊಂದಿಗೆ ಚೆಂಡೆಯ ಮಾಂತ್ರಿಕ ಮುರಾರಿ ಕಡಂಬಳಿತ್ತಾಯರ ಹಾಗೂ ಕೃಷ್ಣ ಪ್ರಸಾದ ರಾಯರ ಚಕ್ರತಾಳದ ಹಿಮ್ಮೇಳವಿತ್ತು.

ವಿಶೇಷ ಪಾತ್ರದಲ್ಲಿ ಪರಂಪರೆಯ ಇಂದ್ರದ್ಯುಮ್ನನ ಒಡ್ಡೋಲಗದಿಂದ ರಾಕೇಶ್‌ ರೈಯವರು ಶಿಷ್ಯರಾದ ಮಿಲನ್‌(ದೃಷ್ಟದ್ಯುಮ್ನು) ಮತ್ತು ಶರತ್‌ ಶೆಟ್ಟಿಯವರ (ಚಂದ್ರದ್ಯುಮ್ನ) ಜತೆ ಪ್ರವೇಶಿಸಿದರು. ಶಿಷ್ಯರೊಂದಿಗೆ ನಡೆಸಿದ ತೆರೆ ಪಾರ್ಪಾಟು ಸುಂದರವಾಗಿತ್ತು. ಯವನಾಶ್ವನಾಗಿ ಕಾಣಿಸಿಕೊಂಡ ಅಶ್ವತ್‌ ಸರಳಾಯ ಪ್ರಬುದ್ಧ ಅಭಿನಯದೊಂದಿಗೆ ಹೆಜ್ಜೆಗಾರಿಕೆ ಹಾಗೂ ಮಾತುಗಾರಿಕೆಯಲ್ಲಿ ಮನಸೆಳೆದರು.

ಇವರಿಗೆ ಸಮರ್ಥವಾಗಿ ಬಲಗಳಾಗಿ ರಂಜಿಸಿದ ಮಾ| ಸುಧನ್ವ ಮುಂಡ್ಕೂರ್‌ (ಕಾಲ ಜಂಘ) ಮತ್ತು ಮಾ| ಸುಮನ್ಯು ಮುಂಡ್ಕೂರ್‌ (ನಾಡಿ ಜಂಘ) ಏಕಕಾಲದ ಪ್ರವೇಶ ಮತ್ತು ಹೊಂದಾಣಿಕೆಯ ಸಮಯೋಚಿತ ಚಲನೆಗಳು ಮನಮೋಹಕವಾಗಿತ್ತು. ಪ್ರಬುದ್ಧ ಅಭಿನಯ, ಸ್ಪಷ್ಟ, ನಿರರ್ಗಳ ಮಾತುಗಾರಿಕೆ, ಮೋಹಕ ಕುಣಿತದಲ್ಲಿ ಈ ಮಕ್ಕಳ ಕ್ರಿಯಾಶೀಲತೆ ವ್ಯಕ್ತಗೊಂಡಿತು.

ಗಂಧರ್ವನಾಗಿ ಪ್ರವೇಶಿಸಿದ ಕು| ವಿಂಧ್ಯಾ ಆಚಾರ್ಯ ಸೊಗಸಾಗಿ ಪಾತ್ರ ನಿರ್ವ ಹಿಸಿದರು. ಸುಂದರ ಮುಖವರ್ಣಿಕೆಗೆ ಪೂರಕವಾಗಿದ್ದ ಮುಖಾಭಿನಯ, ಏರಿಳಿತ ಸಹಿತವಾದ ಸ್ಪಷ್ಟ ಮಾತುಗಾರಿಕೆ, ವೈವಿಧ್ಯತೆಯಿಂದ ತುಂಬಿದ್ದ ಯಕ್ಷನೃತ್ಯ, ವನಸಂಚಾರ ಹಾಗೂ ಜಲಕ್ರೀಡೆ ನಯನ ಮನೋಹರವಾಗಿತ್ತು. ಪೂರಕವಾಗಿ ಸ್ಪಂದಿಸಿದ ಕು| ವನ್ಯಶ್ರೀಯವರ (ಗಂಧರ್ವ ಪತ್ನಿ) ನಾಟ್ಯ, ಒನಪು ವಯ್ನಾರ, ಬಳುಕುಗಳಿಂದ ತುಂಬಿತ್ತು. ಕ್ರೋಧದಿಂದ ಶಪಿಸುವ ಮುನಿಗಳಾಗಿ ರೌದ್ರ ರಸವನ್ನು ಸಮರ್ಥವಾಗಿ ನಿರ್ವಹಿಸಿದ ರವಿನಂದನ ಭಟ್‌(ಅಗಸ್ತ್ಯ ಮುನಿ) ಹಾಗೂ ಶರತ್‌ ಶೆಟ್ಟಿ (ದೇವಳ ಮುನಿ) ಪೋಷಕ ಪಾತ್ರಗಳಿಗೆ ಜೀವ ತುಂಬಿದರು.

ಗಜೇಂದ್ರನಾಗಿ ಡಾ| ಸುನೀಲ್‌ ಸಿ. ಮುಂಡ್ಕೂರ್‌ರವರು ಮದಗಜದ ಸ್ಪಷ್ಟ ಚಿತ್ರಣ ನೀಡುವಲ್ಲಿ ಸಫ‌ಲರಾದರು. ಗತ್ತಿನ ಲಯಬದ್ಧ ಹೆಜ್ಜೆಗಾರಿಕೆ, ಶ್ರುತಿಬದ್ಧವಾದ ಮಾತುಗಾರಿಕೆ, ಹಿತಮಿತವಾದ ಅಭಿನಯ, ಅಮೋಘ ಮುಖವರ್ಣಿಕೆ ಹಾಗೂ ಪಾತ್ರೋಚಿತವಾದ ಶರೀರ ಗಜೇಂದ್ರನ ಪಾತ್ರಕ್ಕೆ ಜೀವ ತುಂಬಿತು. ಅದಕ್ಕೆ ಪೂರಕವಾಗಿ ಮಕರನಾಗಿ ಸಂದೀಪ್‌ ಶೆಟ್ಟಿಗಾರ್‌ ಸುಂದರ ಮುಖವರ್ಣಿಕೆ, ಪರಿಣಾಮಕಾರಿ ಅಭಿನಯ, ನೇರವಾದ ನುಡಿಗಳು ಹಾಗೂ ಸಮರ್ಪಕ ರಂಗ ನಡೆಯಿಂದ ತಾನು ಯಾವುದೇ ವೃತ್ತಿ ಕಲಾವಿದನಿಗೆ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟರು. ಮಹಾವಿಷ್ಣು (ಮಿಲನ್‌) ತನ್ನ ಅಮೋಘ ಗಿರಕಿಗಳಿಂದ ರಂಜಿಸಿದರು.

ಒಟ್ಟಿನಲ್ಲಿ ಪರಂಪರೆಯ ಚೌಕಟ್ಟಿಗೆ ಮೀರದಂತೆ, ನವರಸಗಳನ್ನು ಪ್ರದರ್ಶಿಸಿ, ನೃತ್ಯ ವೈವಿಧ್ಯ, ಪಾತ್ರ ವೈವಿಧ್ಯ, ಅಭಿನಯ ಪ್ರಾವೀಣ್ಯ, ಮಾತುಗಾರಿಕೆ, ಹೆಜ್ಜೆಗಾರಿಕೆಯಿಂದ ಪ್ರೇಕ್ಷಕರನ್ನು ಮೂರು ತಾಸುಗಳ ಕಾಲ ಹಿಡಿದಿಟ್ಟುಕೊಳ್ಳುವಲ್ಲಿ ಸಫ‌ಲವಾಯಿತು.

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.