Udayavni Special

ಮನಮೋಹಕ ಸುಮಂಗಲಾ ಭರತನಾಟ್ಯ

Team Udayavani, Oct 11, 2019, 4:30 AM IST

u-3

ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ ದರ್ಬೆ ಪುತ್ತೂರು ಇಲ್ಲಿಯ ನೃತ್ಯಾಂತರಂಗ ವೇದಿಕೆಯ 75ನೇ ಸಂಚಿಕೆಯಲ್ಲಿ ವಿ| ಸುಮಂಗಲಾ ಗಿರೀಶ್‌ರವರು ನೃತ್ಯ ಪ್ರದರ್ಶಿಸಿದರು.

ಭರತನಾಟ್ಯದ ಮಾರ್ಗ ಪದ್ಧತಿಯಂತೆ ಪುಷ್ಪಾಂಜಲಿ ಯೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ಕುಮಾರ ವ್ಯಾಸನ ಗದುಗಿನ ಭಾರತದಿಂದ ಆಯ್ದ ಶ್ಲೋಕಕ್ಕೆ ಹಂಸಧ್ವನಿ ರಾಗ, ಆದಿ ತಾಳದಲ್ಲಿ ವಿಳಂಬ ಕಾಲದಲ್ಲಿ ರಚನೆಯಾದ ನೃತ್ಯ ಸುಂದರವಾಗಿ ಹಾಗೂ ಮನಸ್ಸು ಶಾಂತವಾಗುವ ರೀತಿಯಲ್ಲಿ ಆರಂಭ ನೀಡಿತು.

ಮುಂದಿನ ಪದ ವರ್ಣ ಬಾಲಕೃಷ್ಣನ ಕುರಿತಾದ ತೆಲುಗು ಸಾಹಿತ್ಯದಿಂದ ಕೂಡಿದ ನೃತ್ಯವಾಗಿತ್ತು. ಕೃಷ್ಣ ಎಂದೊಡನೆ ನಮ್ಮ ಗ್ರಹಿಕೆಗೆ ಸಿಗುವಂತಹ ಶೃಂಗಾರ, ರಾಧೆಯ ಜೊತೆಗಿನ ಸರಸ ಇತ್ಯಾದಿಗಳಿಂದ ಸ್ವಲ್ಪ ಭಿನ್ನವಾಗಿ ಬಾಲಕೃಷ್ಣನ ವಾತ್ಸಲ್ಯ, ಆತನ ತುಂಟತನ, ತಾಯಿಗೆ ಆತ ನೀಡಿದ ಕಾಟಗಳು ಇತ್ಯಾದಿಗಳನ್ನು ವರ್ಣದ ಸಂಚಾರಿಯಲ್ಲಿ ಕಲಾವಿದೆ ಅಮೋಘವಾಗಿ ಪ್ರದರ್ಶಿಸಿದ್ದಲ್ಲದೆ ಜತಿಗಳನ್ನು ಸಹ ಸುಂದರವಾಗಿ ಪ್ರಸ್ತುತ ಪಡಿಸಿದರು. ಬಾಲ್ಯದಲ್ಲಿಯೇ ಕೃಷ್ಣನ ಲೀಲೆಗಳಾದ ಪೂತನಿ ವಧೆ, ಕಂಸ ವಧೆಗಳಲ್ಲಿ ವೀರ ರಸವೂ ಪ್ರಕಟವಾಗಿ, ಕುಚೇಲನ ಪ್ರಸಂಗ ಮತ್ತು ಪಾರ್ಥ ಸಾರಥಿಯ ತನಕವೂ ಸಂಯೋಜಿಸಲ್ಪಟ್ಟಿದ್ದು, ಸಂಯೋಜಕರಾದ ವಿ| ದೀಪಕ್‌ ಕುಮಾರ್‌ರವರ ಸೃಜನಶೀಲತೆಯನ್ನು ಬಿಂಬಿಸಿತು.

ಮೂರನೇ ನೃತ್ಯಅಭಿನಯ ಪ್ರಧಾನವಾದ ಪದಮ್‌ನಲ್ಲಿ ಕಲಾವಿದೆ ಪಾತ್ರಕ್ಕೆ ನಿಜವಾದ ಜೀವ ತುಂಬಿದಂತಿತ್ತು. ಶಹನ ರಾಗ ಮಿಶ್ರಚಾಪು ತಾಳದಲ್ಲಿ ರಚಿಸಲ್ಪಟ್ಟ ನೃತ್ಯಕ್ಕೆ ಕಲಾವಿದೆ ನೈಜ ಮನೋಧರ್ಮದಿಂದ ಅಭಿನಯಿಸಿ ವೀಕ್ಷಕರೂ ಸಹ ಪಾತ್ರದೊಳಗೆ ಸೇರುವಂತೆ ಮಾಡಿದರು. ಮಾರ್ಗ ಪದ್ಧತಿಯಂತೆ ಕೊನೆಯದಾಗಿ ದರ್ಬಾರಿ ಕಾನದ ರಾಗ ಹಾಗೂ ಆದಿ ತಾಳದಲ್ಲಿ ಲಾಲ್ಗುಡಿ ಜಯರಾಮನ್‌ರವರಿಂದ ಸುಬ್ರಹ್ಮಣ್ಯ ದೇವರ ಕುರಿತಾಗಿ ರಚಿಸಲ್ಪಟ್ಟ ಸಾಹಿತ್ಯಕ್ಕೆ ಕಲಾವಿದೆ ನೀಡಿದ ತಿಲ್ಲಾನ ಪ್ರದರ್ಶನ ಅದ್ಭುತ ಮಂಗಳದಂತಿತ್ತು. ವಿ|ರಾಜನ್‌ ಪಯ್ಯನ್ನೂರುರವರು ಒಟ್ಟು ನೃತ್ಯವನ್ನು ಸುಂದರವಾಗಿಸುವಲ್ಲಿ ಮಧುರ ಮತ್ತು ಜತಿಗಳಲ್ಲಿ ಸಮಯೋಚಿತವಾಗಿ ಮೃದಂಗ ನುಡಿಸಿ ದರು. ಕೊಳಲಿನಲ್ಲಿ ವಿ|ರಾಜಗೋಪಾಲ್‌ ಕಾಂಞಂಗಾಡ್‌ ಇಂಪಾಗಿ ಮೋಹಕವಾಗಿಸಿದರು. ಹಾಡುಗಾರಿಕೆಯಲ್ಲಿ ಕಲಾಶಾಲೆಯ ಸಂಗೀತ ಗುರುಗಳಾದ ವಿ| ಪ್ರೀತಿಕಲಾ ಇವರ ಮಧುರ ಧ್ವನಿ ಒಟ್ಟು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ನಟುವಾಂಗದಲ್ಲಿ ವಿ| ದೀಪಕ್‌ ಕುಮಾರ್‌ರವರು ಸಹಕರಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಯೋಜನಕ್ಕೆ ಬಾರದ ಕೇಂದ್ರದ ಪ್ಯಾಕೇಜ್‌: ಖರ್ಗೆ

ಪ್ರಯೋಜನಕ್ಕೆ ಬಾರದ ಕೇಂದ್ರದ ಪ್ಯಾಕೇಜ್‌: ಖರ್ಗೆ

ಬೆಳಗಾವಿ: 14 ಸೋಂಕಿತರು ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

ಬೆಳಗಾವಿ: 14 ಸೋಂಕಿತರು ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

ಅಡ್ಡದಾರಿಯಲ್ಲಿ ಬಂದು ಅರ್ಧದಾರಿಯಲ್ಲೇ ಉಳಿದ್ರು

ಅಡ್ಡದಾರಿಯಲ್ಲಿ ಬಂದು ಅರ್ಧದಾರಿಯಲ್ಲೇ ಉಳಿದ್ರು

ರಾಜ್ಯದಲ್ಲಿ ಮುಂದಿನ ಒಂದು ವಾರ ವಾಡಿಕೆಗಿಂತ ಹೆಚ್ಚು ಮಳೆ

ರಾಜ್ಯದಲ್ಲಿ ಮುಂದಿನ ಒಂದು ವಾರ ವಾಡಿಕೆಗಿಂತ ಹೆಚ್ಚು ಮಳೆ

ಚೆಕ್‌ಪೋಸ್ಟ್‌ ಪೋಲೀಸರಿಗೆ ಮೊಬೈಲ್‌ ವಿಶ್ರಾಂತಿ ಕೊಠಡಿ: ಬೊಮ್ಮಾಯಿ

ಚೆಕ್‌ಪೋಸ್ಟ್‌ ಪೋಲೀಸರಿಗೆ ಮೊಬೈಲ್‌ ವಿಶ್ರಾಂತಿ ಕೊಠಡಿ: ಬೊಮ್ಮಾಯಿ

ಪಾರಿವಾಳ ಬಳಸಿ ಪಾಕಿಸ್ತಾನದಿಂದ ಬೇಹುಗಾರಿಕೆ?

ಪಾರಿವಾಳ ಬಳಸಿ ಪಾಕಿಸ್ತಾನದಿಂದ ಬೇಹುಗಾರಿಕೆ?

ಕೋವಿಡ್-19 ನಿಯಂತ್ರಣದಲ್ಲಿ ಬೆಂಗಳೂರು ಯಶಸ್ಸು ಕಂಡಿದೆ: ಡಿವಿಎಸ್‌

ಕೋವಿಡ್-19 ನಿಯಂತ್ರಣದಲ್ಲಿ ಬೆಂಗಳೂರು ಯಶಸ್ಸು ಕಂಡಿದೆ: ಡಿವಿಎಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಪ್ರಯೋಜನಕ್ಕೆ ಬಾರದ ಕೇಂದ್ರದ ಪ್ಯಾಕೇಜ್‌: ಖರ್ಗೆ

ಪ್ರಯೋಜನಕ್ಕೆ ಬಾರದ ಕೇಂದ್ರದ ಪ್ಯಾಕೇಜ್‌: ಖರ್ಗೆ

ನವ ವಿವಾಹಿತೆ ಆತ್ಮಹತ್ಯೆ ; ಮಗಳ ಸಾವಿನ ಕುರಿತಾಗಿ ಹೆತ್ತವರಿಗೆ ಸಂಶಯ

ನವ ವಿವಾಹಿತೆ ಆತ್ಮಹತ್ಯೆ ; ಮಗಳ ಸಾವಿನ ಕುರಿತಾಗಿ ಹೆತ್ತವರಿಗೆ ಸಂಶಯ

ಬೆಳಗಾವಿ: 14 ಸೋಂಕಿತರು ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

ಬೆಳಗಾವಿ: 14 ಸೋಂಕಿತರು ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

ಅಡ್ಡದಾರಿಯಲ್ಲಿ ಬಂದು ಅರ್ಧದಾರಿಯಲ್ಲೇ ಉಳಿದ್ರು

ಅಡ್ಡದಾರಿಯಲ್ಲಿ ಬಂದು ಅರ್ಧದಾರಿಯಲ್ಲೇ ಉಳಿದ್ರು

ರಾಜ್ಯದಲ್ಲಿ ಮುಂದಿನ ಒಂದು ವಾರ ವಾಡಿಕೆಗಿಂತ ಹೆಚ್ಚು ಮಳೆ

ರಾಜ್ಯದಲ್ಲಿ ಮುಂದಿನ ಒಂದು ವಾರ ವಾಡಿಕೆಗಿಂತ ಹೆಚ್ಚು ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.