ಹೃದಯಸ್ಪರ್ಶಿ ಅನುಭವ ನೀಡಿದ ಹೀರಾ ಮೋತಿ

ಕಿನ್ನರ ಮೇಳದ ಪ್ರಸ್ತುತಿ

Team Udayavani, Nov 22, 2019, 4:07 AM IST

pp-6

ಕೃಷಿ ಪ್ರಧಾನ ಗ್ರಾಮೀಣ ಸಮಾಜದಲ್ಲಿ ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವೆ ಇರುವ ವಿಶೇಷ
ಬಾಂಧವ್ಯದ ಆಯಾಮಗಳನ್ನು ನಾಟಕ ಅತ್ಯಂತ ಹೃದಯಸ್ಪರ್ಶಿಯಾಗಿ ಪ್ರಸ್ತುತಪಡಿಸಿತು.

ನಾಲ್ಕೂವರೆ ದಶಕಗಳಿಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಲಾವಣ್ಯ ಬೈಂದೂರು ಹಾಗೂ ರೋಟರಿ ಬೈಂದೂರು ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಕಿನ್ನರ ಮೇಳ, ತುಮರಿ ಇವರು ನಡೆಸಿಕೊಟ್ಟ ಹೀರಾ ಮೋತಿ ನಾಟಕ ಮೂಕ ಪ್ರಾಣಿಗಳ ಕುರಿತು ಅಂತಃಕರಣ ಜಾಗೃತವಾಗುವಂತೆ ಮಾಡಿತು. ಹಿಂದಿಯ ಸಾಹಿತಿ ಪ್ರೇಮಚಂದ್‌ ರಚಿಸಿದ ಹಾಗೂ ಶಾ ಬಾಲೂ ರಾವ್‌ ಕನ್ನಡಕ್ಕೆ ಅನುವಾದಿಸಿದ ನಾಟಕದಲ್ಲಿ ಹೀರಾ ಮೋತಿ ಎನ್ನುವ ಜೋಡೆತ್ತುಗಳು ತಮ್ಮ ದುಃಖಭರಿತ ಬದುಕಿನ ವೃತ್ತಾಂತವನ್ನು ಎಳೆ ಎಳೆಯಾಗಿ ತೆರೆದಿಡುತ್ತವೆ. ನಿರ್ದೇಶಿಸಿದವರು ಕೆ. ಜಿ. ಕೃಷ್ಣಮೂರ್ತಿ.

ಕೃಷಿ ಪ್ರಧಾನ ಗ್ರಾಮೀಣ ಸಮಾಜದಲ್ಲಿ ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವೆ ಇರುವ ವಿಶೇಷ ಬಾಂಧವ್ಯದ ಆಯಾಮಗಳನ್ನು ನಾಟಕ ಅತ್ಯಂತ ಹೃದಯಸ್ಪರ್ಶಿಯಾಗಿ ಪ್ರಸ್ತುತಪಡಿಸಿತು. ಯಜಮಾನನ ಪ್ರೀತಿಪಾತ್ರರಾಗಿ ಉತ್ತಮ ಆರೈಕೆಯೊಂದಿಗೆ ಸಂತೋಷದಿಂದಿದ್ದ ಕಟ್ಟುಮಸ್ತಾದ ಎತ್ತುಗಳು ಮನೆಯೊಡತಿಯ ತವರಿನವರ ಜತೆ ಒಲ್ಲದ ಮನಸ್ಸಿನಿಂದ ತೆರಳಬೇಕಾಗುತ್ತದೆ. ಅಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯ ಮತ್ತು ಅಮಾನವೀಯ ವರ್ತನೆಯಿಂದ ಬೇಸತ್ತು ಮತ್ತೆ ಯಜಮಾನನಲ್ಲಿಗೆ ಮರಳುತ್ತವೆ. ದುರುಳರ ಸ್ವಾಮಿತ್ವದಿಂದ ತಪ್ಪಿಸಿಕೊಂಡು ಬಂದ ಎತ್ತುಗಳು ಹಟ್ಟಿಯನ್ನು ಕಂಡು ಸಂಭ್ರಮಿಸುವ, ಯಜಮಾನನ ಸ್ಪರ್ಶದಿಂದ ಆನಂದ ತುಂದಿಲರಾಗುವ ಅಭಿನಯ ಮನಕಲಕುತ್ತದೆ.

ಕೃಷಿ ಕಾರ್ಯಕ್ಕೆ ಹೀರಾ ಮೋತಿಯ ಅಗತ್ಯವಿದೆ ಎಂದು ಪೀಡಿಸುವ ತವರಿನವರ ಒತ್ತಾಯಕ್ಕೆ ಮಣಿದ ಮನೆಯೊಡೆಯ ಪುನಃ ಅವರೊಂದಿಗೆ ತೆರಳುವಂತೆ ಜೋಡೆತ್ತಿನ ಮನವೊಲಿಸುತ್ತಾನೆ. ಮತ್ತೂಮ್ಮೆ ದುಷ್ಟರ ಕೈಯ್ಯಲ್ಲಿ ಸಿಲುಕಿದ ಹೀರಾ ಮೋತಿ ತವರಿನಲ್ಲಿನ ರಾಕ್ಷಸಿ ದೌರ್ಜನ್ಯಕ್ಕೆ ಹೈರಾಣಾಗುತ್ತವೆ. ಅನ್ಯಾಯದ ವಿರುದ್ಧ ಬಂಡಾಯವೇಳುವ ಕೆಚ್ಚು ಅವುಗಳಲ್ಲಿ ಪುಟಿದೇಳುತ್ತದೆ. ವೇದನೆ,ದುಗುಡ-ದುಮ್ಮಾನ,ಉಚಿತ-ಅನುಚಿತ,ನ್ಯಾಯ-ಅನ್ಯಾಯದ ಕುರಿತಾದ ಅವುಗಳ ಸಂಭಾಷಣೆ ಪ್ರಭಾವಶಾಲಿಯಾಗಿತ್ತು. ಆಕ್ರಮಣಕಾರಿ ಕಾಡು ಪ್ರಾಣಿಯೊಂದಿಗೆ ಕೆಚ್ಚಿನಿಂದ ಸೆಣಸುವ, ಜತೆಗಾರರಿಗಾಗಿ ತ್ಯಾಗ ಪ್ರದರ್ಶಿಸುವ, ಮಿತ್ರತ್ವದ ಮಹತ್ವ ಸಾರುವ ಮಹಾನ್‌ ಉದಾಹರಣೆ ಪ್ರಸ್ತುತ ಪಡಿಸುವ ಹೀರಾ ಮೋತಿಯ ಬತ್ತದ ಜೀವನ ಪ್ರೀತಿ ಅನುಕರಣೀಯ. ಬದುಕಿನ ಕಷ್ಟಕಾರ್ಪಣ್ಯಗಳನ್ನು ದಿಟ್ಟವಾಗಿ ಎದುರಿಸಿ ಮತ್ತೂಮ್ಮೆ ಮನೆಯೊಡೆಯನನ್ನು ಸೇರುವ ಹೀರಾ ಮೋತಿ ವಿಶೇಷ ಸಂದೇಶ ನೀಡುತ್ತದೆ.

ಪ್ರಾಣಿಗಳಿಗೂ ಮನು ಷ್ಯರಂತೆ ಭಾವನೆಗಳಿವೆ ಎನ್ನುವ ನಾಟಕ ಕರ್ತರ ಸಂದೇಶವನ್ನು ಹೀರಾ ಮೋತಿ ಜೋಡಿ ಎತ್ತುಗಳಾಗಿ ಅಭಿನಯಿಸಿದ ಕಲಾವಿದರು ಮನೋಜ್ಞವಾಗಿ ನೀಡುತ್ತಾರೆ. ಪ್ರಾಣಿಗಳ ಹಾವಭಾವಗಳನ್ನು, ಜತೆ ಎತ್ತನ್ನು ನಾಲಿಗೆ ಹೊರಚಾಚಿ ನೆಕ್ಕುವ ಮೂಲಕ ವ್ಯಕ್ತಪಡಿಸುವ ಪ್ರೀತಿಯನ್ನು, ಯಜಮಾನನ್ನು ಕಂಡಾಗ ತೋರ್ಪಡಿಸುವ ಆನಂದಾತಿರೇಕವನ್ನು, ಹುಟ್ಟೂರಿನ ಸೆಳೆತ, ಹಸಿವು, ನೀರಡಿಕೆ, ಆಯಾಸದ ಹತಾಶೆ, ಕರುಣೆ ತೋರಿದವರ ಕುರಿತು ಕಾಳಜಿ, ಅನ್ಯಾಯ ಎಸಗಿದವರ ಕುರಿತು ತೋರಿಸುವ ಅಪಾರ ರೋಶವೇ ಮೊದಲಾದವುಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಶ್ರಮಿಸಿದ ಕಲಾವಿದರ ಅಭಿನಯ ಕೌಶಲಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಪ್ರಾಣಿಗಳ ಮಾನಸಿಕ ತುಮುಲ-ತುಡಿತಗಳ ಅಮೂರ್ತತೆಯನ್ನು ಸತ್ವಯುತ ಸಂಭಾಷಣೆಯ ಮೂಲಕ ಮೂರ್ತರೂಪ ಕೊಟ್ಟ ನಾಟಕ ಕದಲದಂತೆ ಕಟ್ಟಿ ಹಾಕಿತು.ಸ್ವಾತಂತ್ರ್ಯಪೂರ್ವ ಕಾಲದ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ್ದ ಪ್ರೇಮಚಂದರ ರಚನೆ ಇಂದಿಗೂ ಪ್ರಾಸಂಗಿಕವೆನಿಸುವ ಮೌಲ್ಯಗಳನ್ನೊಳಗೊಂಡಿದೆ.

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

14

UV Fusion: ಅವನೊಂದಿಗೆ ನಡೆವಾಸೆ

13-fusion

UV Fusion: ಏರಿಯಾ 51

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.