ಹೊಸತನದ ಸ್ಪರ್ಷವಿರುವ ಕರ್ಣ -ವೃಷಾಲಿ

Team Udayavani, Aug 2, 2019, 5:19 AM IST

ಸಾಂದರ್ಭಿಕ ಚಿತ್ರ

ಯಕ್ಷಗಾನದ ಗುಣಮಟ್ಟದ ಇಳಿತ ಮತ್ತು ಪ್ರೇಕ್ಷಕರ ಕೊರತೆಗಳಿಗೆ ಸಿನಿಮಾ, ಮೊಬೈಲ್‌ ಮತ್ತು ಸಮಕಾಲೀನ ಮನಸ್ಥಿತಿಗಳು ಕಾರಣ ಎಂಬ ನೆಪಗಳನ್ನು ಹುಡುಕಿ ಅದೇ ಸತ್ಯ ಎಂದು ಬಿಂಬಿಸಲಾಯಿತು. ಇದು ಯಕ್ಷಗಾನದ ಅನಾಥತೆಗೆ ಕಾರಣವಾಯಿತು. ಎಲ್ಲಿಯವರೆಗೆ ಅಂದರೆ ಸುಮಾರು 35 ಜನರಿರುವ ತಿಟ್ಟೊಂದರ ಪ್ರಧಾನ ಕಲಾವಿದರೇ ಕೂಡಿರುವ ಮೇಳವೊಂದರ ಪ್ರದರ್ಶನಕ್ಕೆ ಕೇವಲ 8 ಜನರೇ ಪ್ರೇಕ್ಷಕರು ಬರುವವರೆಗೆ.

ಪ್ರೇಕ್ಷಕ ಮತ್ತು ಕಲಾವಿದರ ನಡುವಿನ ಈ ಅನುಪಾತ ಕಲೆಯ ವ್ಯಾಪಕತೆಯನ್ನು ಸೂಚಿಸುತ್ತಿದೆ. ಆದರೇನು ಮಾಡುವುದು? ಕಾಲವುರುಳಿದೆ. ಮರಳಿ ಬಾರದ ಸ್ಥಿತಿಗೆ ಯಕ್ಷಗಾನ ಹೊರಳಿದೆ. ಆದರೂ ಅಲ್ಲಲ್ಲಿ ಕೆಲವೊಂದು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿವೆ. ಆ ಮಾಲಿಕೆಯಲ್ಲಿ ಇತ್ತೀಚೆಗೆ ಜೀವ-ಭಾವಗಳ ಸಂಘರ್ಷಗಳ ಸಮ್ಮಿಲನದ ಕಥಾ ಹಂದರ “ಕರ್ಣ ವೃಷಾಲಿ’ ಎನ್ನುವ ಪ್ರಸಂಗ. ಯುವ ಪ್ರಸಂಗಕರ್ತೆ ದಿವ್ಯಾ ಶ್ರೀಧರ ರಾವ್‌ ಅವರು ದ್ರೌಪದಿ ಸ್ವಯಂವರದಲ್ಲಿನ ಘಟನೆಗಳನ್ನು ಪ್ರಧಾನವಾಗಿಟ್ಟುಕೊಂಡು ಪೌರಾಣಿಕ ಪ್ರಸಂಗಕ್ಕೆ ಹೊಸತನವನ್ನು ನೀಡಿ ಆಕರ್ಷಣೆ ನೀಡುವ ಒಂದು ಉತ್ತಮ ಪ್ರಯತ್ನವನ್ನು ಈ ಪ್ರಸಂಗದಲ್ಲಿ ಮಾಡಿದ್ದಾರೆ.

ಯಕ್ಷಗಾನದಲ್ಲಿ ಕರ್ಣನ ಪಾತ್ರ ಪ್ರಧಾನವಾಗಿದ್ದ ಬಹಳಷ್ಟು ಪ್ರಸಂಗಗಳು ಇವೆ. ಆದರೆ ಆತನಿಗೆ “ವೃಷಾಲಿ’ ಎಂಬ ಪತ್ನಿ ಮತ್ತು “ಸುಧಾಮ’ ಎನ್ನುವ ಮಗನಿದ್ದ ಎನ್ನುವ ಮಾಹಿತಿ ಬಹಳಷ್ಟು ಜನರಿಗಿಲ್ಲ. ಪಾತ್ರಗಳ ಹೆಸರು ಕೇಳಿದಾಕ್ಷಣ ಇದು ಕಾಲ್ಪನಿಕ ಪಾತ್ರವೇನೊ ಎನ್ನುವ ಸಂಶಯ ಮೂಡಬಹುದು. ಅದು ಕಾಲ್ಪನಿಕವಲ್ಲ ಪುರಾಣಗಳಲ್ಲಿ ಬಂದ ಪಾತ್ರಗಳು. ಈ ಹಿಂದಿನ ಪ್ರಸಂಗಗಳಲ್ಲಿ ಅದಕ್ಕೆ ಪ್ರಾಧಾನ್ಯತೆ ನೀಡದ ಕಾರಣ ಅದು ಜನಮಾನಸದಲ್ಲಿ ನೆಲೆಸಿರಲಿಲ್ಲ.

ಬಿಡುಗಡೆಯ ಸಂದರ್ಭದಲ್ಲಿ ಸ್ಥಳೀಯ ಹವ್ಯಾಸಿ ಕಲಾವಿದರು ತಾಳಮದ್ದಳೆ ರೂಪದಲ್ಲಿ ಪ್ರಸಂಗವನ್ನು ಪ್ರದರ್ಶಿಸಿದರು. ಎಂ.ಕೆ. ರಮೇಶ್‌ ಆಚಾರ್ಯ ಅವರು ಪೌರಾಣಿಕ ಸಾಹಿತ್ಯಗಳಿಗೆ ಯಾವ ಕೊರತೆಯಾಗದಂತೆ ಪದ್ಯಗಳನ್ನು ರಚಿಸಿದ್ದರು. ದ್ರುಪದನ ಆಸ್ಥಾನದಲ್ಲಿ ಕೌರವನ ಹತಾಶೆ, ದ್ರುಪದನ ದ್ವಂದ್ವ, ದ್ರೌಪದಿಯ ದುಗುಡತನ, ಕರ್ಣನ ಪರಾಕ್ರಮ, ವೃಷಾಲಿಯ ಭಾವಸ್ಪಂದನ, ಸುಧಾಮನ ತ್ಯಾಗ ಸೊಗಸಾಗಿ ಅಭಿವ್ಯಕ್ತಗೊಂಡಿತು. ಅಲ್ಲಲ್ಲಿ ಪ್ರಸಂಗದ ಸ್ವಾರಸ್ಯವನ್ನು ಉಳಿಸುವ ಉದ್ದೇಶದಿಂದ ಹಾಸ್ಯ ಪಾತ್ರಗಳನ್ನು ಸೃಷ್ಟಿಸಿಕೊಂಡು ಕೊನೆಯ ವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಕಲ ಜಾಣ್ಮೆಯನ್ನು ದಿವ್ಯಾ ಪ್ರದರ್ಶಿಸಿದ್ದಾರೆ. ಪೌರಾಣಿಕ ನೆಲೆಗಟ್ಟಿನಲ್ಲೇ ಇಂತಹ ಆಯ್ಕೆಗಳಿರುವಾಗ ಪ್ರಸಂಗಕರ್ತರಲ್ಲಿ ಹೊಸತನ್ನು ಹುಡುಕುವ ಹವಣಿಕೆ ಏಕೆ ಎನ್ನುವ ಪ್ರಶ್ನೆ ಮನದಲ್ಲಿ ಮೂಡಿತು.

ಮುಸ್ತಾಕ್‌ ಹೆನ್ನಾಬೈಲು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಡಗುತಿಟ್ಟಿನ ಯಕ್ಷ ರಂಗದಲ್ಲಿ ಬಹುತೇಕ ಪ್ರಸಿದ್ಧ ಸ್ತ್ರೀವೇಷ ಕಲಾವಿದರು ನೇಪಥ್ಯಕ್ಕೆ ಸಂದ ಕಾಲದಲ್ಲಿ ಯಕ್ಷ ರಂಗಕ್ಕೆ ಬಂದವರು ಸ್ತ್ರೀ ವೇಷಧಾರಿ ನೀಲಕೋಡು...

  • ನೂರಾರು ವರ್ಷಗಳ ಹಿಂದೆ ನಾಟ್ಯಲೋಕದ ಅನಭಿಷಕ್ತ ಸಾಮ್ರಾಜ್ಞಯರಾಗಿ ಇತಿಹಾಸದಲ್ಲಿ ಹೆಸರನ್ನು ದಾಖಲಿಸಿ ಕಾಲಚಕ್ರದಲ್ಲಿ ಲೀನರಾದರೂ ತಮ್ಮ ಕಲಾಸಾಧನೆಯಿಂದಾಗಿ...

  • ಯಕ್ಷಬಳಗ ಹೊಸಂಗಡಿ ಸಂಘದ ವತಿಯಿಂದ ಈ ಬಾರಿಯ ವಾರ್ಷಿಕ ಸಮ್ಮಾನ ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಪೂಜಾರಿ ಬೆಜ್ಜಂಗಳ ಅವರಿಗೆ ಸಲ್ಲಲಿದೆ. ನಾರಾಯಾಣ ಪೂಜಾರಿ ಬೆಜ್ಜಂಗಳ...

  • ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಆಗಸ್ಟ್‌ ತಿಂಗಳ ತಾಳಮದ್ದಳೆಗೆ ಡಾ| ಕೋಳ್ಯೂರು ರಾಮಚಂದ್ರ ವಿಶೇಷ ಆಮಂತ್ರಿತರು. ಪ್ರಧಾನವಾಗಿ ಅವರು ಸ್ತ್ರೀ ಪಾತ್ರ...

  • ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಯೋಗದೊಂದಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ವೀರ ಬರ್ಭರೀಕ ಎನ್ನುವ...

ಹೊಸ ಸೇರ್ಪಡೆ