ಪ್ರೌಢಿಮೆ ಅನಾವರಣಗೊಳಿಸಿದ ಸಂಗೀತ ಕಛೇರಿ

Team Udayavani, Jun 15, 2018, 6:00 AM IST

bb-11.jpg

ವಿಟ್ಲ ಸನಿಹದ ಅಳಿಕೆಯ ಶ್ರೀ ಆದಿ ಧನ್ವಂತರಿ ಕ್ಷೇತ್ರ ಪದ್ಮಗಿರಿ, ಜೆಡ್ಡು ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಧನ್ವಂತರಿ ಕ್ಷೇತ್ರದ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಕೀರ್ತಿಶೇಷ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಶಿಷ್ಯೆ ಸಂಗೀತ ವಿದುಷಿ ಶಕುಂತಳಾ ಕೃಷ್ಣ ಭಟ್‌ ಕುಂಚಿನಡ್ಕ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. 

 ಅಭೋಗಿ ರಾಗದ ವರ್ಣ “ಎವರಿಬೋದ’ದೊಂದಿಗೆ ಕಛೇರಿ ಆರಂಭವಾಯಿತು. ಮಲಹರಿ ರಾಗದ ಚಿಕ್ಕ ಆಲಾಪನೆಯ ನಂತರ “ಪಂಚ ಮಾತಂಗ’ ಕೃತಿ ಸ್ವರ ಪ್ರಸ್ತಾರದೊಂದಿಗೆ ಮನಸೆಳೆಯಿತು. ಅನಂತರ ಕಲ್ಯಾಣ ವಸಂತರಾಗದ ಆಲಾಪನೆಯೊಂದಿಗೆ ನಾರಾಯಣ ಶಾಸ್ತ್ರಿಗಳ ಕೃತಿ “ಭಜಮನಸಾ ಶ್ರೀ’ ಇಂಪಾಗಿ ಮೂಡಿ ಬಂತು. ಪ್ರತಿ ಮಾಧ್ಯಮ ರಾಗವಾದ ಪೂರ್ವಿ ಕಲ್ಯಾಣಿಯ “ಜ್ಞಾನಮು ನಗರಾದ’ ಕೃತಿ ಆಲಾಪನೆ, ನೆರವಲ್‌, ಸ್ವರ ಪ್ರಸ್ತಾರದೊಂದಿಗೆ ಮನಮುದಗೊಳಿಸಿತು.

ಈ ಧನ್ವಂತರಿ ಕ್ಷೇತ್ರದ ಕುರಿತು ತಾವೇ ರಚಿಸಿದ “ಪದ್ಮಗಿರಿ ವಾಸಶ್ರೀ ಧನ್ವಂತರಿ ಶಂಕ ಚಕ್ರ ಅಮೃತಧಾರಿ’ ಎಂಬ ರಾಗಂ ತಾನಂ ಪಲ್ಲವಿಯ ತೋಡಿ ರಾಗದಲ್ಲಿ ಆಲಾಪನೆ, ತಾನ, ನೆರವಲ್‌, ರಾಗ ಬೇಧದೊಡನೆ ಸ್ವರ ಪ್ರಸ್ತಾರದೊಂದಿಗೆ ಪ್ರೌಢ ರೀತಿಯಲ್ಲಿ ಮೂಡಿ ಬಂದು ಮಂತ್ರ ಮುಗ್ಧಗೊಳಿಸಿತು. ಪುರಂದರ ದಾಸರ ದೇವರ ನಾಮ “ಭಿನ್ನಹಕೆ ಬಾಯಿಲ್ಲವಯ್ಯ’ ರಾಗ ಮಾಲಿಕೆಯಲ್ಲಿ ತೇಲಿಬಂತು. ಭೈರವಿ ರಾಗದಲ್ಲಿ ಅಗ್ರೇಪಶ್ಯಾಮಿ ತೇಜೋ… ಶ್ಲೋಕದೊಂದಿಗೆ ಪುರಂದರದಾಸರಪದ ” ಓಡಿ ಬಾರೈಯ’ ಮನ ತಟ್ಟಿತು. ಸಿಂಧು ಭೈರವಿ ರಾಗದಲ್ಲಿ ಅಣುವಿಗೆ ಅಣುವಾಗಿ ಉಗಾಭೋಗದೊಂದಿಗೆ “ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ’ ದೇವರನಾಮ ಈ ಕ್ಷೇತ್ರದಲ್ಲಿ ಅರ್ಥವತ್ತಾಗಿ ಮೂಡಿಬಂತು. ಕನಕದಾಸರ “ಹಸಿವರಿತು ತಾಯಿ ನನ್ನ’ ಉಗಾಬೋಗ ಮಧ್ಯಮಾವತಿ ರಾಗದಲ್ಲಿ ನಿರೂಪಿತವಾಯಿತು. 

ಸಾಂಪ್ರದಾಯಿಕ “ಪವಮಾನ’ ಮಂಗಳ ದೊಂದಿಗೆ ಸಂಗೀತ ಕಛೇರಿ ಕೊನೆಗೊಂಡಿತು. ಇದು ಹಿರಿಯ ತಲೆಮಾರಿನ ಶಕುಂತಲಾ ಕೃಷ್ಣ ಭಟ್‌ ತಮ್ಮ ಗಾಢ ಸಂಗೀತ ಜ್ಞಾನವನ್ನು ಪೂರ್ಣವಾಗಿ ಅನಾವರಣಗೊಳಿಸಿದ ಕಛೇರಿ ಎನಿಸಿತು. ಸುಮಾರು 2 ಗಂಟೆಗಳ ಕಾಲ ಮೂಡಿಬಂದ ಕಛೇರಿಗೆ ಪಕ್ಕವಾದ್ಯದಲ್ಲಿ ವಯಲಿನ್‌ ವಾದ್ಯದಲ್ಲಿನ ವಿ| ವೇಣುಗೋಪಾಲ ಶ್ಯಾನುಭಾಗ್‌, ಮೃದಂಗದಲ್ಲಿ ವಿ| ಬಾಲಕೃಷ್ಣ ಹೊಸಮನೆ, ಮೋರ್ಸಿಂಗ್‌ನಲ್ಲಿ ಅಮೃತ ನಾರಾಯಣ ಹೊಸಮನೆ ಸಹಕರಿಸಿದರು. 

ಗೀತಾ ಸಾರಡ್ಕ 

ಟಾಪ್ ನ್ಯೂಸ್

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Param-Bir-Singh

ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.