Udayavni Special

ಕಳಚಿದ ಮಲೆನಾಡ ಯಕ್ಷಗಾನದ ಕೊಂಡಿ ಗೋಪಾಲಕೃಷ್ಣಯ್ಯ


Team Udayavani, Aug 23, 2019, 5:00 AM IST

9

ಮಲೆನಾಡಿನ ಭಾಗಗಳಲ್ಲಿ ಮದ್ದಳೆಯ ನಾದವನ್ನು ಪಸರಿಸಿದ ಬಡಗುತಿಟ್ಟಿನ ಶ್ರೇಷ್ಠ ಮದ್ದಳೆಗಾರ, ನಾದ ಗಾರುಡಿಗ ಹೊನ್ನೆಕುಡಿಗೆ ಗೋಪಾಲಕೃಷ್ಣ ಮದ್ದಳೆಗಾರರು ಇನ್ನಿಲ್ಲ.ಇವರ ನಿಧನದಿಂದ ಮಲೆನಾಡ ಭಾಗದ ಯಕ್ಷಗಾನದ ಹಿರಿಯ ಕೊಂಡಿಯೊಂದು ಕಳಚಿದೆ.

ಶೃಂಗೇರಿ ಸಮೀಪ ಕಿಗ್ಗದ ಹೊನ್ನೆಕುಡಿಗೆಯ ಗೋಪಾಲಕೃಷ್ಣಯ್ಯನವರು ಅಜ್ಜ ಸುಬ್ಬಣ್ಣಯ್ಯನವರಿಂದ ಬಾಲ್ಯದಲ್ಲಿಯೇ ಮದ್ದಳೆ ಅಭ್ಯಾಸ ಮಾಡಿ ತಾಳಮದ್ದಳೆ ಕೂಟಗಳಲ್ಲಿ ಮದ್ದಳೆಗಾರರಾಗಿ ಗುರುತಿಸಿಕೊಂಡರು.ಬಳಿಕ ಕಿಗ್ಗ ಮೇಳದಲ್ಲಿ ಬಾಲಗೋಪಾಲರಾಗಿ ಸೇರಿಕೊಂಡ ಇವರಿಗೆ ಹಿಮ್ಮೇಳದ ಆಸಕ್ತಿಯೇ ಪ್ರಧಾನವಾಗಿ ಮದ್ದಳೆವಾದನವನ್ನುಕರಗತಮಾಡಿಕೊಂಡರು.ಕಿಗ್ಗ,ರಂಜದಕಟ್ಟೆ,ಮೇಗರವಳ್ಳಿ ಬಾಳೆಹೊಳೆ,ಹೆಗ್ಗೊàಡು,ಕಮಲಶಿಲೆ,ಗೋಳಿಗರಡಿ, ಪೆರ್ಡೂರು,ಮಾರಣಕಟ್ಟೆ,ಅಮೃತೇಶ್ವರಿ,ಮಡಾಮಕ್ಕಿ,ಹಾಲಾಡಿ,ಮಂದರ್ತಿ,ಸೀತೂರು ಮುಂತಾದ ಮೇಳಗಳಲ್ಲಿ ಸುದೀರ್ಘ‌ 50 ವರ್ಷ ತಿರುಗಾಟ ಮಾಡಿದರು.

ಮಾರ್ವಿ ಹೆಬ್ಟಾರ್‌,ನೆಲ್ಲೂರು ಮರಿಯಪ್ಪ ಅಚಾರ್‌,ಗುಂಡ್ಮಿ ರಾಮಚಂದ್ರ ನಾವಡ ಮರವಂತೆ ದಾಸದ್ವಯರು,ಉಪ್ಪೂರರು, ಕಾಳಿಂಗ ನಾವಡರಂಥ ಘಟಾನುಘಟಿ ಭಾಗವತರಿಗೆ ಚಂಡೆ-ಮದ್ದಳೆ ವಾದಕರಾಗಿ ಕಾಣಿಸಿಕೊಂಡು ಮನ್ನಣೆಗೆ ಪಾತ್ರರಾಗಿದ್ದರು.ಪ್ರಸಿದ್ಧ ಮದ್ದಳೆಗಾರ ತಿಮ್ಮಪ್ಪ ನಾಯ್ಕರು ನಿಧನ ಹೊಂದಿದಾಗ ಅಮೃತೇಶ್ವರಿ ಮೇಳದಲ್ಲಿ ಗುರು ನಾರ್ಣಪ್ಪ ಉಪ್ಪೂರರಿಗೆ ಸಮರ್ಥ ಮದ್ದಳೆಗಾರರಾಗಿ ಅವರ ರಂಗತಂತ್ರ,ಪಾತ್ರಧಾರಿಯ ಸಾಮರ್ಥ್ಯವರಿತು ಬಾರಿಸುವ ವಿದ್ಯೆ, ಉಪ್ಪೂರರಿಂದ ಕರಗತವಾಯಿತು.ಮರವಂತೆ ಶೀನ ದಾಸ ಮತ್ತು ವಡ್ಡರ್ಸೆ ನರಸಿಂಹ ಆಚಾರ್ಯರ ಮಾರ್ಗದರ್ಶನವು ಅವರಿಗೆ ಮಂದಾರ್ತಿ ಮೇಳದಲ್ಲಿ ಆಗಿತ್ತು.ಬಾಲ್ಯದಿಂದಲೇ ಗೆಳೆಯರಾದ ಮರಿಯಪ್ಪ ಆಚಾರ್ಯರ ಭಾಗವತಿಕೆಗೆ ಇವರ ಮದ್ದಳೆವಾದನ ಹೊಸ ಕ್ರಾಂತಿಯನ್ನೇ ಮಾಡಿತ್ತು.ಮರಿಯಪ್ಪಾಚಾರರಿಂದ ನಾನು ಮದ್ದಳೆಗಾರನಾದೆ ಎಂದು ಹೆಮ್ಮೆಯಿಂದ ಹೇಳುತಿದ್ದರು.ನಿಜಜೀವನದಲ್ಲೂ ಉತ್ತಮ ಗೆಳೆಯರಾದ ಇವರಿಬ್ಬರ ಒಟ್ಟು ಸಾಧನೆ ಬಡಗುತಿಟ್ಟಿನ ಕುಂಜಾಲು ಶೈಲಿಗೆ ಬಹುದೊಡ್ಡ ಕೊಡುಗೆ.

ತನ್ನ ಸುದೀರ್ಘ‌ ಯಕ್ಷ ತಿರುಗಾಟದಲ್ಲಿ ಗುರು ವೀರಭದ್ರ ನಾಯಕ್‌,ಪೆರ್ಡೂರು ರಾಮ ಸೇರೆಗಾರ್‌,ವಂಡಾರು ಬಸವ,ಕೋಟ ವೈಕುಂಠ,ಅರಾಟೆ ಮಂಜುನಾಥ,ಎಂ.ಎ. ನಾಯ್ಕ, ನಗರ ಜಗನ್ನಾಥ ಶೆಟ್ಟಿ,ಚಿಟ್ಟಾಣಿ ,ಗೋಡೆ ನಾರಾಯಣ ಹೆಗಡೆ,ಹಾರಾಡಿ ಕಲಾವಿದರಂಥ ಘಟಾನುಘಟಿ ಕಲಾವಿದರನ್ನು ಸುಮಾರು ಐದು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ತಮ್ಮ ಮದ್ದಳೆಯ ಪೆಟ್ಟುಗಳಿಂದ ಕುಣಿಸಿದ್ದಾರೆ. ಮಲೆನಾಡಿನಲ್ಲಿ ಯಕ್ಷಗಾನ ಪಸರಿಸಲು ಇವರ ಕೊಡುಗೆ ಅಪಾರ.ಹರಿಹರಪುರದಲ್ಲಿ ಯಕ್ಷಗಾನ ಹಿಮ್ಮೇಳ ತರಗತಿ ಆರಂಬಿಸಿ ಹಿರಿಯ ಭಾಗವತ ಗೋರ್ಪಾಡಿ ವಿಠಲಯ್ಯನವರನ್ನು ಗುರುಗಳಾಗಿ ನೇಮಿಸಿ ತಾನು ಸ್ವತಹ ಮದ್ದಳೆಗಾರರಾಗಿ ದುಡಿದು ಅನೇಕ ಹಿಮ್ಮೇಳ ಕಲಾವಿದರನ್ನು ರೂಪಿಸಿದರು.

ಮೇಳದ ತಿರುಗಾಟದಲ್ಲಿ ಶಿಸ್ತಿನ ಸಿಪಾಯಿಯಾದ ಇವರು ತಮ್ಮಂದಿರಾದ ಶೇಷಗಿರಿಯಯ್ಯ ಮತ್ತು ಗಣೇಶ ಹಾಗೂ ಪುತ್ರನಾದ ರಘುವನ್ನು ಉತ್ತಮ ಮದ್ದಳೆಗಾರರಾಗಿ ರೂಪಿಸಿದ್ದಾರೆ.

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

101

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಟಾಸ್ ಗೆದ್ದ ಧೋನಿ ಪಡೆ ಬ್ಯಾಟಿಂಗ್ ಆಯ್ಕೆ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು…

ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆ : ಪೊಲೀಸರಿಂದ ಓರ್ವನ ಬಂಧನ, ಗಾಂಜಾ ಬೆಳೆ ವಶ!

ಉತ್ತರ ಕರ್ನಾಟಕ ಜನ ಪ್ರವಾಹದಿಂದ ನರಳುತ್ತಿದ್ದರೆ ಸರಕಾರಕ್ಕೆ ಚಿಂತೆಯೇ ಇಲ್ಲ

ಪ್ರವಾಹದಿಂದ ಉತ್ತರ ಕರ್ನಾಟಕ ಜನ ನರಳುತ್ತಿದ್ದರೆ ಸರಕಾರಕ್ಕೆ ಚಿಂತೆಯೇ ಇಲ್ಲ : ತಂಗಡಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavaniಹೊಸ ಸೇರ್ಪಡೆ

MallaKhamba

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ; ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಕಾಲದ ಇತಿಹಾಸ

news-tdy-01

ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

speed

ಗೆಲ್ಲಲು ಕಲಿಯುವ ಮೊದಲು ಸೋಲಲೇಬೇಕು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.