Udayavni Special

ಯಕ್ಷರಂಗದ ಕೃಷ್ಣ ಪಡ್ರೆ ಚಂದು ಶತಮಾನೋತ್ಸವ 


Team Udayavani, Feb 22, 2019, 12:30 AM IST

9.jpg

ಯಕ್ಷರಂಗದ ಕೃಷ್ಣ ಎಂದೇ ಹೆಸರು ಗಳಿಸಿದ್ದ ದಿ.ಪಡ್ರೆ ಚಂದು ಅವರ ಶಿಷ್ಯರಾದ ಸಬ್ಬಣಕೋಡಿ ರಾಮ ಭಟ್‌ರ ನೇತೃತ್ವದಲ್ಲಿ ಪೆರ್ಲದಲ್ಲಿ ಪಡ್ರೆ ಚಂದು ಶತಮಾನೋತ್ಸವ ಸಮಾರಂಭ ಜರಗುತ್ತಿದೆ . 

ಯಕ್ಷ ಗುರುವಾಗಿ , ವೇಷಧಾರಿಯಾಗಿ , ನಿರ್ದೇಶಕರಾಗಿ ಗುರುತಿಸಿದ ಪಡ್ರೆ ಚಂದು ಯಕ್ಷರಂಗದ ಮಹಾನ್‌ ಸಾಧಕರು. ಬಣ್ಣದ ವೇಷಧಾರಿ ಪಡ್ರೆ ಚಂದ ಪಾಟಾಳಿಯವರಲ್ಲಿ ಹಾಗೂ ಕಾವು ಕಣ್ಣರಲ್ಲಿ ಹೆಜ್ಜೆಗಾರಿಕೆ ಕಲಿತವರು. ಬಲಿಪ ನಾರಾಯಣ ಭಾಗವತರಲ್ಲಿ ಯಕ್ಷಗಾನದ ನಡೆಯ ಅನುಭವ ಗಳಿಸಿದರು .ಸ್ತ್ರೀ ಪಾತ್ರಧಾರಿ ಗಣಪತಿ ಭಟ್ಟರಲ್ಲಿ ಹೆಚ್ಚಿನ ಹೆಜ್ಜೆ ಕಲಿತರು . ಚೊಕ್ಕಾಡಿ ಮೇಳ ಸೇರಿದಾಗ ಚಂದುರವರ ವಯಸ್ಸು ಕೇವಲ 12 .ಮುಂದೆ ಕೊರಕ್ಕಾಡು , ಪಡ್ರೆ , ಕೂಡ್ಲು ಮೇಳದಲ್ಲಿ ತಿರುಗಾಟ ನಡೆಸಿ 1936 ರಲ್ಲಿ ಕಟೀಲು ಮೇಳ ಸೇರಿದರು . ಅನಂತರ ಧರ್ಮಸ್ಥಳ ಮೇಳ ಸೇರಿ , ಪುನಃ ಕಟೀಲು ಮೇಳಕ್ಕೆ ಬಂದು 50 ವರ್ಷ‌ ತಿರುಗಾಟ ನಡೆಸಿದರು . ಕುರಿಯ ವಿಠಲ ಶಾಸ್ತ್ರಿಗಳ ವಿಶ್ಚಾಮಿತ್ರನಿಗೆ ಮೇನಕೆ , ಅಳಿಕೆ ರಾಮಯ್ಯ ರೈಗಳ ಶ್ರೀರಾಮನಿಗೆ ಲಕ್ಷ್ಮಣನಾಗಿ , ಶಶಿಪ್ರಭೆಯ ಎದುರು ಭೃಮರಕುಂತಳೆಯಾಗಿಯೂ ಮಿಂಚಿದರು . ಅಚ್ಚುಕಟ್ಟಾದ ನಾಟ್ಯ , ಹಿತಮಿತವಾದ ಸಂಭಾಷಣೆ ಮೂಲಕ ಪ್ರಸಿದ್ಧಿಯಾದರು . ಶ್ರೀಕೃಷ್ಣ ಲೀಲೆಯ ಕೃಷ್ಣನ ಪಾತ್ರವಂತೂ ಜನಮಾನಸದಲ್ಲಿ ಅಚ್ಚೊತ್ತಿ ಕೃಷ್ಣ ಚಂದಣ್ಣ ಎಂಬ ಹೆಸರು ಪಡೆಯಲು ಕಾರಣವಾಯಿತು . ದಮಯಂತಿ , ಚಂದ್ರಮತಿ , ದ್ರೌಪದಿ , ಮಂಡೋದರಿ , ಹರಿಶ್ಚಂದ್ರ , ಶ್ರೀಕೃಷ್ಣ , ವಿಷ್ಣು , ಶ್ರೀರಾಮ , ಮಧು , ನಳ , ಜಾಬಾಲಿ , ಈಶ್ವರ ಮುಂತಾದ ಪಾತ್ರಗಳಲ್ಲಿ ಅಪೂರ್ವವಾದ ಸಿದ್ಧಿ ಗಳಿಸಿದ್ದರು . ಪರಂಪರೆಯ ಹನುಮಂತನ ತೆರೆ ಕುಣಿತ , ಶ್ರೀಕೃಷ್ಣನ ಪರಂಪರೆಯ ಒಡ್ಡೋಲಗ , ದೇವೇಂದ್ರ ಸಭಾಕ್ಲಾಸ್‌ ಮುಂತಾದ ನಾಟ್ಯ ಬಲ್ಲ ವಿರಳ ಕಲಾವಿದರಲ್ಲಿ ಪಡ್ರೆ ಚಂದುರವರೂ ಓರ್ವರು . 

1972 ರಲ್ಲಿ ಧರ್ಮಸ್ಥಳದಲ್ಲಿ ಯಕ್ಷಗಾನ ಕೇಂದ್ರ ಆರಂಭವಾದಾಗ ಪ್ರಥಮ ಗುರುಗಳಾಗಿ ಕಾರ್ಯ ನಿರ್ವಹಿಸಿದರು. 1983ರವರೆಗೂ ಸೇವೆ ಸಲ್ಲಿಸಿ 800ರಷ್ಟು ಶಿಷ್ಯರನ್ನು ತಯಾರಿಸಿದ್ದಾರೆ. ಯಕ್ಷರಂಗದಲ್ಲಿ ಇಂದಿಗೂ ದುಡಿಯುತ್ತಿರುವ ಹಿರಿಯ ಕಲಾವಿದರಲ್ಲಿ ಹೆಚ್ಚಿನವರು ಚಂದುರವರ ಶಿಷ್ಯರೇ ಎಂಬುದು ಗಮನಾರ್ಹ .ಚಂದುರವರು 21.3.1999 ರಲ್ಲಿ ಇಹಲೋಕ ತ್ಯಜಿಸಿದರು . ಚಂದುರವರ ಹೆಸರನ್ನು ಚಿರಸ್ಥಾಯಿಯಾಗಿಸಲು ಪ್ರಯತ್ನಿಸಿದವರು ಸಬ್ಬಣಕೋಡಿ ರಾಮ ಭಟ್ಟರು . 2005ರಲ್ಲಿ ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ( ರಿ. ) ಸ್ಥಾಪಿಸಿ ಪರಂಪರೆಯ ಯಕ್ಷಗಾನ ನಾಟ್ಯವನ್ನು ಕಲಿಸುತ್ತಿದ್ದಾರೆ . ಪಡ್ರೆ ಚಂದು ಪ್ರಶಸ್ತಿ ಹಾಗೂ ಅಡ್ಕಸ್ಥಳ ಪ್ರಶಸ್ತಿ ನೀಡುತ್ತಿದ್ದಾರೆ . ಈ ಸಾಲಿನ ಪಡ್ರೆ ಚಂದು ಶತಮಾನೋತ್ಸವ ಪ್ರಶಸ್ತಿಯನ್ನು ಫೆ.23ರಂದು ಪದ್ಯಾಣ ಗಣಪತಿ ಭಟ್ಟರಿಗೂ ಅಡ್ಕಸ್ಥಳ ಪ್ರಶಸ್ತಿ ಉಬರಡ್ಕ ಉಮೇಶ ಶೆಟ್ಟರಿಗೂ ನೀಡಲಿದ್ದಾರೆ .

ಟಾಪ್ ನ್ಯೂಸ್

giyuytrewq

ಕನ್ನಡ ರಾಜ್ಯೋತ್ಸವ ; ಪರಭಾಷಿಕರು 100 ಕನ್ನಡ ಪದ ಬಳಸುವಂತೆ ಸುನಿಲ್ ಕುಮಾರ್ ಮನವಿ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

d-k-shi

ಮೋದಿ ಹೆಬ್ಬೆಟ್ಟ್ ಗಿರಾಕಿ ಎಂದ ಕಾಂಗ್ರೆಸ್ ಟ್ವೀಟ್ ಗೆ ಡಿಕೆ ಶಿವಕುಮಾರ್ ವಿಷಾದ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

10

ನೂತನ ಶಿಕ್ಷಣ ನೀತಿಯಿಂದ ನೈಪುಣ್ಯತೆ: ಹಿರೇಮಠ

giyuytrewq

ಕನ್ನಡ ರಾಜ್ಯೋತ್ಸವ ; ಪರಭಾಷಿಕರು 100 ಕನ್ನಡ ಪದ ಬಳಸುವಂತೆ ಸುನಿಲ್ ಕುಮಾರ್ ಮನವಿ

9

ಗ್ರಾಪಂ ಗ್ರಂಥಾಲಯಕ್ಕೆ ನವರೂಪ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

8

ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವಕ್ಕೆ ಸಕಲ ಸಿದ್ದತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.