ಪ್ರಗತಿಯ ಧಾವಂತದ ಸಾದ್ಯಂತ ಚಿತ್ರಣ ಸೇತುಬಂಧನ


Team Udayavani, Feb 15, 2019, 12:30 AM IST

12.jpg

ಸಾವಿರಾರು ವರ್ಷಗಳಿಂದ ಗಾಢ ಪ್ರಭಾವ ಹೊಂದಿರುವ ರಾಮಾಯಣ ಮತ್ತು ಮಹಾಭಾರತದಂತಹ ಮಹಾ ಕಾವ್ಯಗಳು ಭಾರತೀಯ ಸಾಹಿತ್ಯ,ನಾಟ್ಯ, ಸಂಗೀತ ಮೊದಲಾದ ಕಲಾ ಪ್ರಕಾರಗಳನ್ನು ಸಮೃದ್ಧಗೊಳಿಸಿದೆ. ಕಲಾವಿದರು, ಸಾಹಿತ್ಯಕಾರರು ವಿವಿಧ ದೃಷ್ಟಿಕೋಣದಲ್ಲಿ ಈ ಮಹಾಕಾವ್ಯವನ್ನು ಮತ್ತೆ ಮತ್ತೆ ಅನ್ವೇಷಿಸುವ, ಹೊಸತನವನ್ನು ಹುಡುಕುವ ಯತ್ನ ನಡೆಸುತ್ತಲೇ ಬಂದಿದ್ದಾರೆ. 

ಇತ್ತೀಚೆಗೆ ವಿಧಿವಶರಾದ ಹಿರಿಯ ರಂಗಕರ್ಮಿ ಕೂರಾಡಿ ಸೀತಾರಾಮ ಶೆಟ್ಟಿ ಅವರ ಸ್ಮರಣಾರ್ಥ ಜನವರಿ 15-16 ರಂದು ಲಾವಣ್ಯ (ರಿ.) ಬೈಂದೂರು ಏರ್ಪಡಿಸಿದ ಎರಡು ದಿನದ ನಾಟಕೋತ್ಸವದಲ್ಲಿ ಅಕ್ಷರ ಕೆ. ವಿ. ರಚನೆ ಮತ್ತು ನಿರ್ದೇಶನದ ನೀನಾಸಂ ತಂಡದ “ಸೇತುಬಂಧನ’ ಅಭಿವೃದ್ಧಿಯ ನಾಗಾಲೋಟದಿಂದಾಗಿ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ನಮ್ಮ ಸುತ್ತಮುತ್ತಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ಚಡಪಡಿಸುವ ಹಳ್ಳಿಗರ ಮಾನಸಿಕ ತಳಮಳದ ಸುಂದರ ವಾಸ್ತವಿಕ ಚಿತ್ರಣ ನೀಡಿತು. ಕೂಲಿ ಕಾರ್ಮಿಕ ಹಸಲರ ತಿಮ್ಮ, ತಿಮ್ಮ ನಾಯ್ಕನಾಗಿ ಗಣಿಗಾರಿಕೆಯ ಸಂಕಯ್ಯ ಶೆಟ್ಟಿಯ ಖಾಸಾ ವ್ಯಕ್ತಿಯಾಗಿ ಮೆರೆಯುವುದು, ಕೂಲಿ ಕಾರ್ಮಿಕರು ಮರಳು ಗಣಿಯತ್ತ ಕಾಲುಕಿತ್ತಿದ್ದರಿಂದ ಅಡಿಕೆ ತೋಟಗಳು ನಷ್ಟವಾಗಿದ್ದಕ್ಕೆಲ್ಲಾ ಕಾರಣ ತಮ್ಮ ಹಳ್ಳಿಗೊಂದು ಸೇತುವೆಯೇ ಕಾರಣ ಎಂದು ಹಳಿಯುತ್ತಾ ಕುಡಿತದ ದಾಸನಾದ ಜೋಯಿಸರ ಸೋದರಳಿಯ ಕಿಟ್ಟು ಬದಲಾವಣೆಯ ವಿರೋಧಿ ಜಗದ ಮನಸ್ಥಿತಿಯನ್ನು ಪ್ರತಿನಿಧಿಸುತ್ತಾನೆ. ಅಚಾನಕ್‌ ಬದಲಾದ ಕಿಟ್ಟುವಿನ ನಡೆನುಡಿಗೆ ಉದ್ರಿಕ್ತಳಾಗುವ ಮಗಳು ಭಾಮೆ, ಊರಿನಲ್ಲೇ ನೆಲೆಸಲು ಬಂದ ಮೊಮ್ಮಗ ಮದನನಿಗೆ ಬದಲಾವಣೆ ಜಗದ ನಿಯಮ ಎಂದೊಪ್ಪಿಸಲು ಹಾಗೂ ಪರಿವರ್ತನೆಗೆ ಸಜ್ಜುಗೊಳಿಸಲು ಜೋಯಿಸರು ಆಡಿಸುವ ನಾಟಕದೊಳಗಿನ ನಾಟಕಗಳು ಕುತೂಹಲವನ್ನು ಹೆಚ್ಚಿಸುತ್ತದೆ. ಊರಿನ ಅಭಿವೃದ್ಧಿ ಹೇಗಿರಬೇಕು ಎಂದು ಚರ್ಚಿಸಲು ಜೋಯಿಸರು ಕರೆದ ಸಭೆಯಲ್ಲಿ ಗಣಿಗಾರಿಕೆಯ ಸಂಕಯ್ಯ ಶೆಟ್ಟಿಯ ಅಟಾಟೋಪಗಳು, ಧರ್ಮದರ್ಶಿಯ ಆಷಾಡಭೂತಿತನದ ಮಾತುಗಳು, ಕಿಟ್ಟುವಿನ ಬಡಪಾಯಿ ಕೋಪ, ಪಂಚಾಯ್ತಿ ಅಧ್ಯಕ್ಷರ ಅಸಹಾಯಕತೆ ಮನಮುಟ್ಟುವಂತಿತ್ತು. 

ಭರಪೂರ ಸಂಗೀತ ನೃತ್ಯಗಳ ಎರಡೂವರೆ ಘಂಟೆಗಳ ಸುದೀರ್ಘ‌ ನಾಟಕ ಮನಗೆದ್ದಿತು. ಪಾತ್ರಗಳ ಪರಿಪಕ್ವ ಅಭಿನಯ ವೀಕ್ಷಕರನ್ನು ಕದಲದಂತೆ ಕಟ್ಟಿ ಹಾಕಿತು. ಮಂಜು ಕೊಡಗು ಅವರ ವಿನ್ಯಾಸ ಮತ್ತು ಸಹನಿರ್ದೇಶನದ ನಾಟಕಕ್ಕೆ ಶಿಶಿರ ಕೆ. ವಿ. ಅವರ ಸಂಗೀತ ಮತ್ತು ಧ್ವನಿ ವಿನ್ಯಾಸವಿತ್ತು. ಆಧುನಿಕ ನಾಟ್ಯ ಸಂವೇದನೆಯ “ಆಶ್ಚರ್ಯ ಚೂಡಾಮಣಿ’ ಸಾವಿರಾರು ವರ್ಷಗಳಿಂದ ಜನಮಾನಸದ ಮೇಲೆ ಗಾಢ ಪ್ರಭಾವ ಹೊಂದಿರುವ ರಾಮಾಯಣ ಮತ್ತು ಮಹಾಭಾರತದಂತಹ ಮಹಾ ಕಾವ್ಯಗಳು ಭಾರತೀಯ ಸಾಹಿತ್ಯ,ನಾಟ್ಯ,ಸಂಗೀತ ಮೊದಲಾದ ಕಲಾ ಪ್ರಕಾರಗಳನ್ನು ಸಮೃದ್ಧಗೊಳಿಸಿದೆ. ಕಲಾವಿದರು, ಸಾಹಿತ್ಯಕಾರರು ವಿವಿಧ ದೃಷ್ಟಿಕೋಣದಲ್ಲಿ ಈ ಮಹಾಕಾವ್ಯವನ್ನು ಮತ್ತೆ ಮತ್ತೆ ಅನ್ವೇಷಿಸುವ, ಹೊಸತನವನ್ನು ಹುಡುಕುವ ಯತ್ನ ನಡೆಸುತ್ತಲೇ ಬಂದಿ¨ªಾರೆ. ಕ್ರಿ. ಶ. 8-9 ಶತಮಾನದ ಸುಮಾರಿಗೆ ಶಕ್ತಿ ಭದ್ರನಿಂದ ರಚಿತವಾದ ಸಂಸ್ಕೃತ ನಾಟಕ “ಆಶ್ಚರ್ಯ ಚೂಡಾಮಣಿ’ ಕೂಡಾ ರಾಮಾಯಣವನ್ನು ಹೊಸ ದೃಷ್ಟಿಕೋನದಿಂದ ಪುನರೂಪಿತಗೊಂಡ ಕಥಾ ನಾಟಕ. ಎರಡನೇ ದಿನದ ಕಾರ್ಯಕ್ರಮದಲ್ಲಿ ನೀನಾಸಂ ತಂಡದಿಂದ ಪ್ರದರ್ಶಿತಗೊಂಡ ಅದ್ಭುತ ನಾಟ್ಯ, ಸಂಗೀತ, ಸಂಕೇತಗಳ ಸಮಾಗಮವೆನಿಸಿದ ಈ ನಾಟಕವನ್ನು ಕನ್ನಡಕ್ಕೆ ಬಿ. ಆರ್‌. ವೆಂಕಟರಮಣ ಐತಾಳರು ಅನುವಾದಿಸಿದ್ದಾರೆ. 

    ಮೂಲ ರಾಮಾಯಣದಿಂದ ಕೊಂಚ ಭಿನ್ನವಾದ ಪ್ರಸ್ತುತ ನಾಟಕದಲ್ಲಿ ಸೀತಾ ಮಾತೆಯನ್ನು ಶ್ರೀ ರಾಮಚಂದ್ರನ ರೂಪಧರಿಸಿ ಅಪಹರಿಸುವ ರಾವಣ ಜಟಾಯುವಿನೊಂದಿಗೆ ಸೆಣಸುವ ಅದ್ಭುತ ತಂತ್ರಗಾರಿಕೆಯ ಭೀಷಣ ಯುದ್ಧ ಮೈ ನವಿರೇಳಿಸುತ್ತದೆ. ಶೂರ್ಪನಖೀಯ ಹಾವಭಾವ, ಶ್ರೀ ರಾಮಚಂದ್ರ ಮತ್ತು ಲಕ್ಷ್ಮಣನ ಆಂಗಿಕ ಅಭಿವ್ಯಕ್ತಿ, ಹನುಮಂತನ ಮಲ್ಲಕಂಬದ ಮೇಲಿನ ದೈಹಿಕ ಕಸರತ್ತು ಮುದ ನೀಡುತ್ತದೆ. ಅನಸೂಯಾ ದೇವಿಯ ವರ ಪಡೆದ ಸದಾ ಸೌಂದರ್ಯವತಿಯಾಗಿ ಕಾಣುವ ತನ್ನನ್ನು ಶಂಕಿಸಿದ್ದಕ್ಕಾಗಿ ಭೂ ತಾಯಿಯ ಶರಣಾಗ ಬಯಸುವ ಸೀತಾ ಮಾತೆಯನ್ನು ಭೂದೇವಿ ಹರಸಿ ಆದರಪೂರ್ವಕವಾಗಿ ತನ್ನ ಮಡಿಲಿಗೆ ಸೇರಿಸಿಕೊಳ್ಳುವ ದೃಶ್ಯ ಅವಿಸ್ಮರಣೀಯ ಅನುಭವ ನೀಡಿತು. ಮಂಜು ಕೊಡಗು ವಿನ್ಯಾಸದ ನಾಟಕಕ್ಕೆ ಜೋಸೆಫ್ ಜಾನ್‌ ನಿರ್ದೇಶನವಿತ್ತು. ಮೂಲ ರಾಮಾಯಣದಲ್ಲಿ ಬದಲಾವಣೆ ಒಪ್ಪಿಕೊಳ್ಳದ ಆಸ್ತಿಕರಿಗೆ ಹಲವೆಡೆ ಮುಜುಗರದ ಅನುಭವವಾದರೂ ರಂಗಭೂಮಿಯ ದೃಷ್ಟಿಯಿಂದ ನಾಟಕ ಯಶಸ್ವಿ ಪ್ರಯೋಗ ಎನ್ನಬಹುದು.

 ಬೈಂದೂರು ಚಂದ್ರಶೇಖರ ನಾವಡ 

ಟಾಪ್ ನ್ಯೂಸ್

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.